For Quick Alerts
ALLOW NOTIFICATIONS  
For Daily Alerts

ಮಹಿಳೆಯರೆ ಆರೋಗ್ಯಕ್ಕಾಗಿ ಗುಟ್ಟೊಂದು ಹೇಳುವೆ, ಕೇಳುವಿರಾ?

|

ಮದುವೆಗೆ ಮೊದಲು ತಮ್ಮ ಶರೀರದ ಬಗ್ಗೆ ತುಂಬಾ ಗಮನ ನೀಡುವ ಹೆಣ್ಮಕ್ಕಳು ಮದುವೆಯಾದ ತಕ್ಷಣ ತಮ್ಮ ಆರೋಗ್ಯದ ಕಡೆ ಗಮನ ನೀಡುವುದನ್ನು ಕಡಿಮೆ ಮಾಡುತ್ತಾರೆ. ಮಗುವಾದ ಬಳಿಕ ಮಗು, ಗಂಡ, ಮನೆಯವರ ಆರೈಕೆಯಲ್ಲಿ ತಮ್ಮನ್ನು ಸಂಪೂರ್ಣ ಮರೆತು ಬಿಡುತ್ತಾರೆ, ಮಹಿಳೆ ಉದ್ಯೋಗಸ್ಥೆಯಾಗಿದ್ದರೆ ಮನೆಯನ್ನೂ ನಿಭಾಯಿಸಬೇಕು, ಆಫೀಸ್‌ನಲ್ಲಿ ತನಗೊಪ್ಪಿಸಿದ ಕಾರ್ಯವನ್ನೂ ಮಾಡಿ ಮುಗಿಸಬೇಕು. ಇನ್ನು ಹೌಸ್‌ ವೈಫ್‌ ಆದರೆ ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೂ ಕೆಲಸ ಮಾಡಿದರೂ ಕೆಲಸ ಮುಗಿಯಲ್ಲ. ಹೀಗಾಗಿ ತಮಗೋಸ್ಕರ ಸಮಯವೇ ಸಿಗದೆ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಾರೆ.

ನಾವಿಲ್ಲಿ ತಜ್ಞರು ನೀಡಿರುವ ಕೆಲವೊಂದು ಸರಳವಾದ ಹಾಗ ಅದ್ಭುತವಾದ ಆರೋಗ್ಯ ಸಲಹೆಗಳನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ ಅದನ್ನು ಪಾಲಿಸಿದರೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ:

1. ಎಲ್ಲಾ ಕೆಲಸ ಒಟ್ಟಿಗೆ ಮಾಡಬೇಡಿ

1. ಎಲ್ಲಾ ಕೆಲಸ ಒಟ್ಟಿಗೆ ಮಾಡಬೇಡಿ

ಮನೆಯಲ್ಲಿ ಅಡುಗೆ, ಒರೆಸುವುದು, ತೊಳೆಯುವುದು ಅಂತ ನೂರೆಂಟು ಕೆಲಸ ಇರುತ್ತದೆ. ಅವುಗಳೆನ್ನೆಲ್ಲಾ ಒಟ್ಟಿಗೆ ಮಾಡಿ ಮುಗಿಸಿ ಬಿಡಬೇಕೆಂದು ನಿಮಗೆ ಅನಿಸುತ್ತದೆ, ಆದರೆ ಜೊತೆಗೆ ಮಾಡಬೇಡಿ ಹಾಗೇ ಮಾಡಿದರೆ ತುಂಬಾನೇ ಸುಸ್ತಾಗುವಿರಿ. ಸ್ವಲ್ಪ ಕೆಲಸ ಮಾಡಿ ಒಂದು ಅರ್ಧ ತಾಸು ವಿಶ್ರಾಂತಿ ತೆಗೆದು ನಂತರ ಮತ್ತೆ ಕೆಲಸ ಮುಂದುವರೆಸಿ.

2. ವಿಶ್ರಾಂತಿ ತೆಗೆಯುವುದು ಪಾಪವಲ್ಲ

2. ವಿಶ್ರಾಂತಿ ತೆಗೆಯುವುದು ಪಾಪವಲ್ಲ

ನಾನು ಕೆಲಸ ಮಾಡದೆ ಕೂತರೆ ಬೇರೆಯವರು ನನ್ನ ತಪ್ಪು ತಿಳಿಯುತ್ತಾರೆ ಎಂಬ ಆತಂಕ ಬೇಡ. ನಿಮಗೆ ವಿಶ್ರಾಂತಿ ಬೇಕು ಅನಿಸಿದಾಗ ಆರಾಮವಾಗಿ ಕೂತು ಇಷ್ಟವಾಗಿದ್ದನ್ನು ತಿಂದು ನಂತರ ಕೆಲಸ ಮಾಡಲು ಪ್ರಾರಂಭಿಸಿ. ಸರಿಯಾದ ಸಮಯಕ್ಕೆ ಊಟ ಮಾಡಿ, ಸಾಕಷ್ಟು ನೀರು ಕುಡಿಯಿರಿ.

3. ಸ್ವಲ್ಪ ಹೊತ್ತು ನಿದ್ದೆ ಮಾಡಿ

3. ಸ್ವಲ್ಪ ಹೊತ್ತು ನಿದ್ದೆ ಮಾಡಿ

ತುಂಬಾ ತಲೆ ನೋವಾಗುತ್ತಿದೆಯೇ ಅದು ವಿಪರೀತ ಒತ್ತಡದಿಂದಾಗಿ ಉಂಟಾಗಿರುತ್ತದೆ, ಆಗ ಸ್ವಲ್ಪ ಹೊತ್ತು ನಿದ್ರಿಸಿ. ನಿಮ್ಮ ಕೆಲಸದಿಂದ ಒಂದು ದಿನ ಬಿಡುವು ತೆಗೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ದಿನದಲ್ಲಿ ಸ್ವಲ್ಪ ಹೊತ್ತು ನಿದ್ದೆ ಮಾಡಿ.

4. ನಿದ್ದೆ ಮಾತ್ರೆ ತೆಗೆದುಕೊಳ್ಳಬೇಡಿ

4. ನಿದ್ದೆ ಮಾತ್ರೆ ತೆಗೆದುಕೊಳ್ಳಬೇಡಿ

ನಿದ್ದೆ ಬರುತ್ತಿಲ್ಲ ಎಂದು ನಿದ್ದೆ ಮಾತ್ರೆ ತೆಗೆದುಕೊಳ್ಳಬೇಡಿ, ಇದು ನಿಮ್ಮ ಮೆದುಳನ್ನು ಮತ್ತಷ್ಟು ಹಾಳು ಮಾಡುವುದು. ನೀವು ಕಹಿ ಘಟನೆಯನ್ನು ಮರೆಯಲು ಪ್ರಯತ್ನಿಸಬೇಕು, ಹೆಚ್ಚು ಚಿಂತೆ ಮಾಡಬೇಡಿ, ನಿಮ್ಮ ಸ್ನೇಹಿತರ ಜೊತೆಗೆ ಮಾತನಾಡಿ, ನಗು-ನಗುತ್ತಾ ಇರಲು ಪ್ರಯತ್ನಿಸಿ, ಇದರಿಂದ ಮನಸ್ಸು ರಿಲ್ಯಾಕ್ಸ್ ಆಗಿರುತ್ತದೆ.

5. ಧ್ಯಾನ ಮಾಡಿ

5. ಧ್ಯಾನ ಮಾಡಿ

ಬೆಳಗ್ಗೆ ಅಥವಾ ಸಂಜೆ ಒಂದು 15 ನಿಮಿಷ ಧ್ಯಾನಕ್ಕಾಗಿ ಅಥವಾ ಪ್ರಾರ್ಥನೆಗಾಗಿ ನಿಮ್ಮ ಸಮಯ ಮೀಸಲಿಡಿ. ಇದರಿಂದ ತುಂಬಾ ರಿಲ್ಯಾಕ್ಸ್ ಅನಿಸುವುದು.

6. ನಿಮ್ಮ ಬಿಂಬ ನೀವು ನೋಡಿಕೊಳ್ಳಿ

6. ನಿಮ್ಮ ಬಿಂಬ ನೀವು ನೋಡಿಕೊಳ್ಳಿ

ಕನ್ನಡಿ ಮುಂದೆ ನಿಂತು ನಿಮ್ಮ ಬಿಂಬ ನೀವು ನೋಡಿಕೊಳ್ಳಿ. ನಿಮ್ಮನ್ನು ನೋಡಿ ಕಿರು ನಗೆ ಬೀರಿ, ಇದು ನಿಮ್ಮಲ್ಲಿರುವ ಧನಾತ್ಮಕ ಶಕ್ತಿ ಹಾಗೂ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ.

7. ನಿಮ್ಮ ಸಂಗಾತಿ ನಿಮಗಾಗಿ ಮಾಡಿದ್ದರೆ ಏನಂತೆ ನೀವು ಮಾಡಿ

7. ನಿಮ್ಮ ಸಂಗಾತಿ ನಿಮಗಾಗಿ ಮಾಡಿದ್ದರೆ ಏನಂತೆ ನೀವು ಮಾಡಿ

ನೀವು ನನ್ನ ಇಷ್ಟವನ್ನು ನನ್ನ ಸಂಗಾತಿ ಗಮನಿಸುತ್ತಿಲ್ಲ ಎಂದು ಕೊರಗುವುದರಿಂದ ನಿಮ್ಮ ಮನಸ್ಸಿನ ನೆಮ್ಮದಿ ಹಾಳಾಗುವುದೇ ಹೊರತು ಮತ್ತೇನು ಪ್ರಯೋಜನವಿಲ್ಲ. ಅವರು ನಿಮಗೆ ಬೇಕಾಗಿರುವುದನ್ನು ಅರಿತು ಮಾಡಲಿ ಎಂದು ನಿರೀಕ್ಷೆ ಮಾಡಲು ಹೋಗಬೇಡಿ. ನಿಮಗೆ ಇಷ್ಟವಾದ ಡ್ರೆಸ್‌ ನೀವು ಕೊಳ್ಳಿ, ನಿಮಗೆ ಏನು ಬೇಕೆಂದು ಗಂಡನ ಬಳಿ ಹೇಳಿ.

8. ನಿಮ್ಮ ಕೆಲಸ ಸುಲಭವಾಗಲು ಉಪಾಯವನ್ನು ಕಂಡು ಕೊಳ್ಳಿ

8. ನಿಮ್ಮ ಕೆಲಸ ಸುಲಭವಾಗಲು ಉಪಾಯವನ್ನು ಕಂಡು ಕೊಳ್ಳಿ

ಮಾನಸಿಕ ಒತ್ತಡ ಎನ್ನುವುದು ಸೈಲೆಂಟ್ ಕಿಲ್ಲರ್ ಆಗಿದೆ. ಆದ್ದರಿಂದ ತುಂಬಾ ಒತ್ತಡಕ್ಕೆ ಒಳಗಾಗುವುದನ್ನು ಕಡಿಮೆ ಮಾಡಿ. ಕೆಲಸವನ್ನು ಸುಲಭವಾಗಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ. ಉದಾಹರಣೆಗೆ ದಿನಾ ರುಬ್ಬಿ ಅಡುಗೆ ಮಾಡಲು ಬದಲು ಪೌಡರ್ ಮಾತ್ರ ಬಳಸಿ ರುಚಿಕರವಾಗಿ ಅಡುಗೆ ಮಾಡುವುದು ಹೇಗೆ ಎಂಬುವುದನ್ನೂ ತಿಳಿದುಕೊಳ್ಳಿ. ಎಲ್ಲಾ ಕೆಲಸ ನೀವೊಬ್ಬರೇ ಮಾಡಿ ಕಷ್ಟ ಪಡುವುದಕ್ಕಿಂತ ಮನೆಯಲ್ಲಿ ಗಂಡ ಅಥವಾ ಮಕ್ಕಳ ಚಿಕ್ಕ-ಪುಟ್ಟ ಸಹಾಯ ಕೇಳಿ.

9. ನಿಮ್ಮ ಆರೋಗ್ಯವನ್ನು ಗಮನಿಸಿ

9. ನಿಮ್ಮ ಆರೋಗ್ಯವನ್ನು ಗಮನಿಸಿ

ಹೆಚ್ಚಿನ ಮಹಿಳೆಯರು ಚಿಕ್ಕ-ಪುಟ್ಟ ಆರೋಗ್ಯ ಸಮಸ್ಯೆ ಇರುವಾಗ ತುಂಬಾ ನಿರ್ಲಕ್ಷ್ಯ ಮಾಡುತ್ತಾರೆ... ಆ ಸಮಸ್ಯೆಯೇ ಮುಂದೆ ದೊಡ್ಡದಾಗುತ್ತದೆ. ಹಾಗೇ ಮಾಡಲು ಹೋಗಬೇಡಿ, ನಿಮ್ಮ ಆರೋಗ್ಯಕ್ಕೆ ಮೊದಲ ಪ್ರಾಮುಖ್ಯತೆ ನೀಡಿ. ಸುಸ್ತಾಯ್ತೋ ರೆಸ್ಟ್ ಮಾಡಿ.. ಬೇಸರವಾಯ್ತೋ ಮನಸ್ಸಿಗೆ ಖುಷಿ ನೀಡುವ ಸಿನಿಮಾ ನೋಡಿ.

10. ನಿಮ್ಮ ಬಿಪಿ, ಶುಗರ್ ನಿಯಂತ್ರಣದಲ್ಲಿಡಿ

10. ನಿಮ್ಮ ಬಿಪಿ, ಶುಗರ್ ನಿಯಂತ್ರಣದಲ್ಲಿಡಿ

ನಿಮಗೆ ಕಾಯಿಲೆ ಬಂದ ಚಿಕಿತ್ಸೆ ಪಡೆಯುವುದಕ್ಕಿಂತ ಮೊದಲು ಮುನ್ನೆಚ್ಚರಿಕೆವಹಿಸುವುದು ಒಳ್ಳೆಯದು. ಬಿಪಿ, ಶುಗರ್‌ ಸರಿಯಾಗಿದೆಯೇ ಎಂದು ಆರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿ. ಸ್ತನ ಕ್ಯಾನ್ಸರ್ ಬಗ್ಗೆ ಎಚ್ಚರವಹಿಸಿ.

English summary

Health Tips Every Woman Should Know In Kannada

Health tips every woman should know in kannada, read on...
Story first published: Wednesday, May 12, 2021, 11:55 [IST]
X