For Quick Alerts
ALLOW NOTIFICATIONS  
For Daily Alerts

ಹಸಿ ಮೆಣಸಿನಕಾಯಿ ಅಥವಾ ಕೆಂಪು ಮೆಣಸಿನಕಾಯಿ ಯಾವುದು ಆರೋಗ್ಯಕರ?

|

ನಾವು ಭಾರತೀಯರು ಖಾರ ಮತ್ತು ಮಸಾಲೆಯುಕ್ತ ಆಹಾರ ಪದಾರ್ಥಗಳಿಗೆ ಮನಸೋಲುತ್ತೇವೆ. ಇವು ಇಲ್ಲದೆ ನಮಗೆ ಊಟ ಒಳಗೆ ಇಳಿಯುವುದಿಲ್ಲ ಎಂದು ಹೇಳಬಹುದು. ಮೆಣಸಿನ ಕಾಯಿ ಇಲ್ಲದಿದ್ದರೆ ನಮ್ಮ ಅಡುಗೆ ಮನೆಯ ಪದಾರ್ಥಗಳು ಪರಿಪೂರ್ಣವೇ ಆಗುವುದಿಲ್ಲ.

ನಮ್ಮ ದೇಶದಲ್ಲಿ ಹಲವಾರು ಬಗೆಯ ಮೆಣಸಿನ ಕಾಯಿಗಳು ಲಭ್ಯವಿವೆ. ಆದರೆ ಅದರಲ್ಲಿ ಆರೋಗ್ಯಕರವಾದುದು ಯಾವುದು ಎಂಬುದನ್ನು ತಿಳಿದುಕೊಳ್ಳಲು ತುಂಬಾ ಜನ ಕಷ್ಟಪಡುತ್ತಾರೆ. ಹಸಿ ಮೆಣಸಿನಕಾಯಿ ಅಥವಾ ಕೆಂಪು ಮೆಣಸಿನ ಕಾಯಿ ಇದರಲ್ಲಿ ಯಾವುದು ಆರೋಗ್ಯಕರ ಎಂಬ ಪ್ರಶ್ನೆಯಂತೂ ತುಂಬಾ ಜನರನ್ನು ಕಾಡುತ್ತದೆ. ಬನ್ನಿ ಆ ಕುರಿತಾಗಿ ನೀವು ಏಕೆ ತಲೆ ಕೆಡಿಸಿಕೊಳ್ಳುತ್ತೀರಿ. ನಾವು ಇದರ ಕುರಿತಾಗಿ ತಿಳಿಸುತ್ತೇವೆ. ನಿಮ್ಮ ಆಹಾರದಲ್ಲಿ ಯಾವ ಮೆಣಸಿನ ಕಾಯಿ ಇರಬೇಕು ಎಂಬುದನ್ನು ನಿರ್ಧರಿಸಲು ಈ ಲೇಖನ ಓದಿ!

ಕೆಂಪು ಮೆಣಸಿನ ಕಾಯಿ ಎಂಬುದು ಬಲಿತ ಹಸಿ ಮೆಣಸಿನ ಕಾಯಿ

ಕೆಂಪು ಮೆಣಸಿನ ಕಾಯಿ ಎಂಬುದು ಬಲಿತ ಹಸಿ ಮೆಣಸಿನ ಕಾಯಿ

ಕೆಂಪು ಮೆಣಸಿನ ಕಾಯಿ ಎಂದರೆ ಸ್ವಲ್ಬಲಿತ ಹಸಿ ಮೆಣಸಿನಕಾಯಿ ಅಥವಾ ಒಣಗಿದ ಹಸಿ ಮೆಣಸಿನ ಕಾಯಿ ಎಂದು ಎಲ್ಲರಿಗೂ ತಿಳಿದಿರುವ ವಿಚಾರವೇ. ನೀವು ಫ್ರಿಡ್ಜ್‌ನಲ್ಲಿ ಹಸಿ ಮೆಣಸಿನ ಕಾಯಿಯನ್ನು ಇಟ್ಟರೂ ಸಹ ಕೆಲವು ದಿನಗಳ ನಂತರ ಅದು ತನ್ನಲ್ಲಿರುವ ನೀರಿನಂಶವನ್ನು ಕಳೆದುಕೊಳ್ಳುತ್ತದೆ ಹಾಗೂ ಹಸಿರು ಬಣ್ಣವನ್ನು ಸಹ ಕಳೆದುಕೊಳ್ಳುತ್ತದೆ. ಇಷ್ಟೇ ಅಲ್ಲ ಹಸಿ ಮೆಣಸಿನಕಾಯಿ ಕೆಂಪು ಮೆಣಸಿನಕಾಯಿ ಆದಾಗ ತನ್ನಲ್ಲಿರುವ ಹಲವಾರು ಅವಶ್ಯಕ ಪೋಷಕಾಂಶಗಳನ್ನು ಅದು ಕಳೆದುಕೊಳ್ಳುತ್ತದೆ. ಹೀಗೆ ಕೊನೆಗೆ ನಿಮಗೆ ಖಾರವಾಗಿರುವ ಮೆಣಸಿನಕಾಯಿ ಸಿಗುತ್ತದೆಯೇ ಹೊರತು, ಅದರಲ್ಲಿರುವ ನೀರಿನಂಶ ಅಥವಾ ಪೋಷಕಾಂಶ ಸಿಗುವುದಿಲ್ಲ.

ಒಣಗಿದ ಮೆಣಸಿನಕಾಯಿ ಪುಡಿ ಎಲ್ಲವೂ ಪರಿಶುದ್ಧವಲ್ಲ

ಒಣಗಿದ ಮೆಣಸಿನಕಾಯಿ ಪುಡಿ ಎಲ್ಲವೂ ಪರಿಶುದ್ಧವಲ್ಲ

ಯಾವುದೇ ಪದಾರ್ಥವು ಮೂಲ ರೂಪದಲ್ಲಿದ್ದಷ್ಟು ಬೇರೆ ರೂಪದಲ್ಲಿ ಪರಿಶುದ್ಧವಾಗಿರುವುದಿಲ್ಲ ಎಂಬುದನ್ನು ನಾವು ಬಹಳಷ್ಟು ಬಾರಿ ಅರಿತುಕೊಂಡಿರುತ್ತೇವೆ. ಇದೇ ನಿಯಮ ಮೆಣಸಿನಕಾಯಿ ಪುಡಿಗೂ ಸಹ ಅನ್ವಯಿಸುತ್ತದೆ. ಮೆಣಸಿನಕಾಯಿಯನ್ನು ಪುಡಿ ರೂಪದಲ್ಲಿ ಬಹುತೇಕ ಬಾರಿ ನಾವು ಸೇವಿಸುತ್ತೇವೆ. ಬಹುತೇಕ ಬಾರಿ ನೀವು ನಕಲಿ ಉತ್ಪನ್ನವನ್ನು ಸೇವಿಸುವ ಸಾಧ್ಯವಿರುತ್ತದೆ. ಒಂದು ವೇಳೆ ನೀವು ಅಂಗಡಿಯಿಂದ ಖಾರದ ಪುಡಿಯನ್ನು ತಂದರೆ, ಅದರಲ್ಲಿ ಪ್ರಿಸರ್ವೇಟಿವ್‌ಗಳನ್ನು ಸೇರಿಸಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಹಸಿ ಮೆಣಸಿನಕಾಯಿಗೆ ಹೋಲಿಸಿದರೆ ಒಣಗಿದ ಮೆಣಸಿನ ಕಾಯಿಯ ಪುಡಿಯು ಒಳ್ಳೆಯ ಆಯ್ಕೆಯಾಗಿರುವುದಿಲ್ಲ.

ಹಸಿರು ಮೆಣಸಿನಕಾಯಿಯಲ್ಲಿ ನೀರಿನಂಶ ಹೆಚ್ಚಾಗಿರುತ್ತದೆ

ಹಸಿರು ಮೆಣಸಿನಕಾಯಿಯಲ್ಲಿ ನೀರಿನಂಶ ಹೆಚ್ಚಾಗಿರುತ್ತದೆ

ಆರೋಗ್ಯದ ದೃಷ್ಟಿಯಿಂದ ಹಸಿ ಮೆಣಸಿನ ಕಾಯಿಯನ್ನು ಸೇವಿಸಲು ಶಿಫಾರಸು ಮಾಡುತ್ತೇವೆ. ಏಕೆಂದರೆ ಇದರಲ್ಲಿ ಪೋಷಕಾಂಶಗಳು ಹೆಚ್ಚಿನ ಮಟ್ಟದಲ್ಲಿ ಇರುತ್ತವೆ. ಇದಕ್ಕೂ ಮಿಗಿಲಾಗಿ, ನೀರಿನಂಶ ಇದರಲ್ಲಿ ಹೆಚ್ಚಿಗೆ ಇರುತ್ತದೆ. ಕೆಂಪು ಅಥವಾ ಒಣಗಿದ ಮೆಣಸಿನಕಾಯಿಯಲ್ಲಿರುವ ನೀರಿನ ಸಾಂದ್ರತೆಗೆ ಹೋಲಿಸಿದಾಗ ಹಸಿ ಮೆಣಸಿನ ಕಾಯಿಯೇ ಉತ್ತಮ ಎಂದು ಹೇಳಬಹುದು. ಎಣ್ಣೆಯಂಶ ಇರುವ, ಜಿಡ್ಡಿನಿಂದ ಕೂಡಿದ ಆಹಾರಗಳನ್ನು ಸೇವಿಸುವಾಗ ನೀರಿನಂಶವು ಪ್ರಧಾನ ಪಾತ್ರವನ್ನು ನಿರ್ವಹಿಸುತ್ತದೆ. ಜೊತೆಗೆ ಇದರಲ್ಲಿ ಬಹುತೇಕ ಜೀರೋ ಕ್ಯಾಲೋರಿ ಇರುತ್ತದೆ. ಹೀಗಾಗಿ ನೀವು ತೂಕ ಇಳಿಸಿಕೊಳ್ಳಲು ಮನಸ್ಸು ಮಾಡುತ್ತಿದ್ದರೆ, ಹಸಿ ಮೆಣಸಿನಕಾಯಿ ಸೇವಿಸಲು ಆಧ್ಯತೆ ನೀಡಿ!

ಒಣಗಿದ ಮೆಣಸಿನಕಾಯಿ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ

ಒಣಗಿದ ಮೆಣಸಿನಕಾಯಿ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ

ಕೆಂಪು ಅಥವಾ ಒಣಗಿದ ಮೆಣಸಿನಕಾಯಿಯನ್ನು ಸೇವಿಸಿದ ಕೂಡಲೇ ನಿಮಗೆ ಏನಾದರೂ ಕಿರಿಕಿರಿಯಾಗುವಂತಹ ಅನುಭವಗಳಾಗಿವೆಯೇ? ನಿಮಗೆ ಮಸಾಲೆ ಪದಾರ್ಥ ಇಷ್ಟವಾದರೂ ಸಹ, ಕೆಂಪು ಮೆಣಸಿನಕಾಯಿಯು ಉದರದಲ್ಲಿ ಆಂತರಿಕ ಉರಿಯೂತಗಳನ್ನು ಉಂಟು ಮಾಡುತ್ತದೆ ಎಂಬುದನ್ನು ಮರೆಯಬೇಡಿ. ಹೊಟ್ಟೆ ಉರಿ ಉಂಟು ಮಾಡುವುದು ಇದರ ಸಾಮಾನ್ಯ ಸಮಸ್ಯೆಯಾಗಿರುತ್ತದೆ. ಆದರೆ ಹೆಚ್ಚಿಗೆ ತಿಂದರೆ, ಅಲ್ಸರ್ ಮತ್ತು ಹೊಟ್ಟೆಯ ಕ್ಯಾನ್ಸರ್ ಸಹ ಬರುವ ಸಾಧ್ಯತೆ ಇರುತ್ತದೆ ಎಂಬುದನ್ನು ಮರೆಯಬೇಡಿ.

ಉಪಸಂಹಾರ

ಉಪಸಂಹಾರ

ಮೆಣಸಿನ ಕಾಯಿಗಳು ಕಡಿಮೆ ಬೆಲೆಗೆ ದೊರೆಯುವ ತರಕಾರಿಗಳಾಗಿವೆ. ಹೀಗಾಗಿ ನಮ್ಮ ದೇಶದಲ್ಲಿ ಬಹುತೇಕ ಜನರು ಹಸಿ ಮತ್ತು ಒಣಗಿದ ಮೆಣಸಿನ ಕಾಯಿ ಎರಡನ್ನೂ ಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಆರೋಗ್ಯ ದೃಷ್ಟಿಯಿಂದ ಖರೀದಿಸಲು ಮುಂದಾದರೆ ತಪ್ಪದೆ, ಹಸಿ ಮೆಣಸಿನ ಕಾಯಿಯನ್ನು ಖರೀದಿಸಿ ಎಂದು ಹೇಳುತ್ತೇವೆ. ಇದರಲ್ಲಿ ನೀರಿನಂಶ ಹೆಚ್ಚಾಗಿದ್ದು, ಕ್ಯಾಲೊರಿ ಕಡಿಮೆ ಇರುತ್ತದೆ.

ಜೊತೆಗೆ ಹಸಿ ಮೆಣಸಿನಕಾಯಿಗಳಲ್ಲಿ ಪೋಷಕಾಂಶಗಳಾದ ಬೀಟಾಕೆರೊಟಿನ್‌ಗಳು, ಆ್ಯಂಟಿ ಆಕ್ಸಿಡೆಂಟ್‌ಗಳು ಮತ್ತು ಎಂಡೊರ್ಫಿನ್‌ಗಳು ಹೆಚ್ಚಾಗಿ ಇರುತ್ತೇವೆ. ಕೃತಕ ಬಣ್ಣಗಳು, ಡೈಗಳು, ಪ್ರಿಸರ್ವೇಟಿವ್‌ಗಳನ್ನು ಸೇವಿಸುವುದು ಬೇಡ ಎಂದು ನಿಮಗೆ ಅನಿಸಿದರೆ ಹಸಿ ಮೆಣಸಿನ ಕಾಯಿಯನ್ನು ಮಾತ್ರ ಸೇವಿಸಿ, ಆರೋಗ್ಯವಾಗಿರಿ!

English summary

Green Chilli Or Red Chilli: Which One Is Healthier Option?

Do You have confuse on green chilli or red chilli, which one is healthier option, Read this article.
X
Desktop Bottom Promotion