For Quick Alerts
ALLOW NOTIFICATIONS  
For Daily Alerts

ಇದು ಪುರುಷರಿಗೆ ಮಾತ್ರ: ನಿಮ್ಮ ಆಟದಲ್ಲಿ ಮೇಲುಗೈ ಸಾಧಿಸಲು ಇರುವ ಮಾರ್ಗಗಳು

|

ಗಂಡ ತನ್ನ ಹೆಂಡತಿಯ ಜೊತೆ ಮಾತನಾಡಬೇಕಾದರೆ ಒಂದು ಭಾಷೆ ಅವಶ್ಯಕತೆ ಇದೆ. ಅದುವೇ ರೋಮ್ಯಾಂಟಿಕ್ ಭಾಷೆ. ಸಂಸಾರದಲ್ಲಿ ಸಂಗಾತಿಗಳ ಮಧ್ಯೆ ರೋಮ್ಯಾನ್ಸ್ ಇದ್ದರೆ ಜೀವನ ಸುಂದರವಾಗಿರುತ್ತದೆ ಎನ್ನುವುದು ಸಂಶೋಧನೆಗಳಿಂದ ತಿಳಿದು ಬರುವ ಸತ್ಯ. ನಿಜವಾದ ಗಂಡ-ಹೆಂಡತಿ ಯಾರು ಎನ್ನುವ ಪ್ರಶ್ನೆಗೆ ದುಡ್ಡು ಅಥವಾ ಆಸ್ತಿಪಾಸ್ತಿ ಜೋರಾಗಿರುವವರು ಎಂದು ಯಾರೂ ಹೇಳುವುದಿಲ್ಲ. ಬಡವರಾದರೂ ಅಥವಾ ಮಧ್ಯಮ ವರ್ಗದವರೇ ಆದರೂ ಇಬ್ಬರ ಮಧ್ಯೆ ಪ್ರೀತಿ ಇರಬೇಕು. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಮತ್ತು ಗೌರವಿಸುವ ಸ್ವಭಾವ ಮೈಗೂಡಬೇಕು. ಗಂಡ ಹೆಂಡತಿ ಇಬ್ಬರಲ್ಲಿ ಗಂಡ ಹೆಚ್ಚು ಹೆಂಡತಿ ಕಡಿಮೆ ಎನ್ನುವ ಭಾವನೆ ಏನಿಲ್ಲ. ಒಂದು ಸಂಸಾರದಲ್ಲಿ ಗಂಡನಾದವನು ಎಂತಹ ಅಭ್ಯಾಸಗಳನ್ನು ಹೊಂದಿದ್ದರೆ ಜೀವನ ಸುಖಮಯವಾಗಿರುತ್ತದೆ ಎನ್ನುವುದಕ್ಕೆ ಈ ಲೇಖನದಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ.

ಸಣ್ಣ ನಗುವಿನಿಂದ ಇಂಪ್ರೆಸ್ ಮಾಡಿ : -

ಸಣ್ಣ ನಗುವಿನಿಂದ ಇಂಪ್ರೆಸ್ ಮಾಡಿ : -

ಮನುಷ್ಯನ ಗುಣ ಹೇಗೆಂದರೆ ಒಬ್ಬ ವ್ಯಕ್ತಿಯನ್ನು ಇನ್ನೊಬ್ಬ ವ್ಯಕ್ತಿ ನೋಡಿದ ಮೊದಲ ಮೂರು ಸೆಕೆಂಡ್ಗಳಲ್ಲಿ ಅರ್ಥಮಾಡಿಕೊಳ್ಳಬಹುದಂತೆ. ಹಾಗಾಗಿ ನಿಮ್ಮ ಸಂಗಾತಿಯ ಜೊತೆ ರೋಮಾಂಚಕ ರಾತ್ರಿಯನ್ನು ಕಳೆಯುವ ಮುಂಚೆ ಆಕೆಯ ಮುಂದೆ ಹೋದ ಸಂದರ್ಭದಲ್ಲಿ ಸಣ್ಣದಾಗಿ ಸ್ಮೈಲ್ ಮಾಡಿ. ಇದರಿಂದ ಆಕೆಗೂ ನಿಮ್ಮನ್ನು ನೋಡಿ ಖುಷಿಯಾಗುತ್ತದೆ. ಮನಸ್ಸಿನಲ್ಲಿ ಒಳ್ಳೆಯ ಭಾವನೆ ಮೂಡುತ್ತದೆ. ನಿಮ್ಮ ಮಾನಸಿಕ ಒತ್ತಡ ಕಡಿಮೆ ಆಗುವುದರ ಜೊತೆಗೆ ನಿಮ್ಮ ರಕ್ತದ ಒತ್ತಡ ನಿಯಂತ್ರಣವಾಗಿ ನಿಮ್ಮ ಸಂಗಾತಿಗೆ ಬೇಕಾದಂತೆ ನೀವಿರಲು ಸಹಾಯವಾಗುತ್ತದೆ.

ನಿಮ್ಮ ಮುಖ ಉತ್ಸಾಹದಿಂದ ಕೂಡಿರಲಿ : -

ನಿಮ್ಮ ಮುಖ ಉತ್ಸಾಹದಿಂದ ಕೂಡಿರಲಿ : -

ನಾವು ಯಾವುದೇ ಕೆಲಸವನ್ನು ಮಾಡಿದಾಗಲೂ ಅದನ್ನು ಇಷ್ಟ ಪಟ್ಟು ಮಾಡಬೇಕೇ ವಿನಃ ಭಾರವಾದ ಮನಸ್ಸಿನಿಂದ ಪ್ರಯತ್ನಿಸಬಾರದು. ರೋಮ್ಯಾನ್ಸ್ ಮಾಡುವ ವಿಷಯ ಬಂದಾಗಲೂ ಅಷ್ಟೇ. ನಿಮ್ಮ ಮನಸ್ಸಿನಲ್ಲಿ ನಿಮ್ಮ ಸಂಗಾತಿಯನ್ನು ಇಷ್ಟಪಡುತ್ತಿರುವ ಹಾಗೆ ನಿಮಗನ್ನಿಸಬೇಕು. ಇದರಿಂದ ನಿಮ್ಮಿಬ್ಬರ ಮಧ್ಯೆ ಪ್ರೀತಿ ಹೆಚ್ಚಾಗುತ್ತದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಒಬ್ಬರಿಗೊಬ್ಬರು ಹತ್ತಿರವಾಗಲು ಇದು ಸಹಾಯವಾಗುತ್ತದೆ.

ಸಕಾರಾತ್ಮಕತೆ ಕಡೆಗೆ ಹೆಚ್ಚು ಒಲವು ತೋರಿ : -

ಸಕಾರಾತ್ಮಕತೆ ಕಡೆಗೆ ಹೆಚ್ಚು ಒಲವು ತೋರಿ : -

ಒಂದೇ ಮನೆಯಲ್ಲಿ ನೀವು ಮತ್ತು ನಿಮ್ಮ ಸಂಗಾತಿ ವಾಸ ಮಾಡುವುದರಿಂದ ಹಲವು ಬಾರಿ ನಿಮ್ಮಿಬ್ಬರ ಮಧ್ಯೆ ವಿರಸಗಳು ಉಂಟಾಗಿರಬಹುದು. ಆದರೆ ಇದರ ಮಧ್ಯೆ ಪ್ರೀತಿ ಇರುತ್ತದೆ ಎಂಬುದು ಮಾತ್ರ ನೀವು ಯಾವತ್ತೂ ಮರೆಯುವಂತಿಲ್ಲ. ಎಲ್ಲಿ ಪ್ರೀತಿ ಹೆಚ್ಚಾಗಿರುತ್ತದೆ ಅಲ್ಲಿ ಜಗಳವೂ ಇರುತ್ತದೆ ಎಂಬುದು ನಿಮ್ಮ ಜ್ಞಾಪಕದಲ್ಲಿರಲಿ. ಹಾಗಾಗಿ ನಿಮ್ಮಿಬ್ಬರ ಮಧ್ಯೆ ಎಷ್ಟೇ ಬಾರಿ ಜಗಳ ಆಗಿದ್ದರೂ ಕೂಡ ಅದರಲ್ಲಿ ಒಳ್ಳೆಯದನ್ನು ಮಾತ್ರ ಹುಡುಕಿ ಮತ್ತು ಅಂತಹ ವಿಚಾರಗಳಿಗೆ ಮಾತ್ರ ಮೌಲ್ಯ ಕೊಡಿ. ಇದು ಕೇವಲ ನಿಮ್ಮ ಒಬ್ಬರಿಗೆ ಅನ್ವಯವಾಗುವುದಿಲ್ಲ. ನಿಮ್ಮ ಸಂಗಾತಿ ಕೂಡ ಇದೇ ರೀತಿ ನಡೆದುಕೊಳ್ಳುವುದರಿಂದ ನಿಮ್ಮ ಇಬ್ಬರ ನಡುವಿನ ಅಂತರ ಕಡಿಮೆಯಾಗುತ್ತದೆ ಮತ್ತು ವಿರಸದ ಬದಲು ಸರಸ ಹೆಚ್ಚಾಗಲು ನೆರವಾಗುತ್ತದೆ.

ನಿಮ್ಮ ಬಗ್ಗೆ ನೀವು ಗಮನಹರಿಸಿ : -

ನಿಮ್ಮ ಬಗ್ಗೆ ನೀವು ಗಮನಹರಿಸಿ : -

ದಿನ ಬೆಳಗಾದರೆ ಜೀವನದಲ್ಲಿ ದುಡಿಮೆ ಮತ್ತು ಜೀವನದ ಇತರ ಕಿರಿಕಿರಿಗಳು ಇದ್ದೇ ಇರುತ್ತವೆ. ಇಡೀ ದಿನ ಕೇವಲ ಇಂತಹ ವಿಚಾರಗಳಲ್ಲಿ ಸಮಯ ಕಳೆದು ಹೋಗುತ್ತದೆ. ಆದರೆ ಇದರ ಮಧ್ಯೆ ಬಿಡುವು ಮಾಡಿಕೊಂಡು ದಿನದಲ್ಲಿ ಕನಿಷ್ಠ ಅರ್ಧ ಗಂಟೆಗಳ ಕಾಲ ನಿಮ್ಮ ಬಗ್ಗೆ ನಿಮ್ಮ ಆರೋಗ್ಯದ ಬಗ್ಗೆ ಆಲೋಚಿಸಲು ಸಮಯ ಕೊಟ್ಟು ಕೊಳ್ಳಿ. ಇದರಿಂದ ನಿಮ್ಮ ಮೆದುಳಿನ ಚುರುಕುತನ ಹೆಚ್ಚಾಗುತ್ತದೆ, ಮಾನಸಿಕ ಆರೋಗ್ಯ ಅಭಿವೃದ್ಧಿಯಾಗುತ್ತದೆ, ಒಳ್ಳೆಯ ನಿದ್ರೆ ಬರುತ್ತದೆ, ನಿಮ್ಮ ದೇಹದ ತೂಕದ ಮೇಲೆ ನಿಯಂತ್ರಣ ಹೊಂದಿ ನೀವು ಸದೃಢವಾಗಿ ಮತ್ತು ಆರೋಗ್ಯವಾಗಿ ಜೀವಿಸಲು ಸಹಾಯವಾಗುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿದ್ದರೆ ನಿಮ್ಮ ಸಂಗಾತಿಯ ಜೊತೆ ಖುಷಿಯಾಗಿ ಕಾಲ ಕಳೆಯಬಹುದು.

ಒಳ್ಳೆಯ ನಡತೆಯನ್ನು ರೂಡಿ ಮಾಡಿಕೊಳ್ಳಿ : -

ಒಳ್ಳೆಯ ನಡತೆಯನ್ನು ರೂಡಿ ಮಾಡಿಕೊಳ್ಳಿ : -

ಕೆಲವೊಂದು ಕೆಟ್ಟ ಅಭ್ಯಾಸಗಳು ಮನುಷ್ಯನನ್ನು ಯಾವ ಹಂತಕ್ಕೆ ಬೇಕಾದರೂ ತಲುಪಿಸುತ್ತವೆ. ಹಾಗಾಗಿ ನೀವು ಹೊರಗಡೆ ಹೇಗೇ ಇದ್ದರೂ ಮನೆಯಲ್ಲಿ ನಿಮ್ಮ ಸಂಗಾತಿಯ ಜೊತೆ ಇರುವಾಗ ಆಕೆಯ ಮನಸ್ಸಿಗೆ ಬೇಸರವಾಗುವ ಹಾಗೆ ನಡೆದುಕೊಳ್ಳಬೇಡಿ. ನಿಮ್ಮ ಮನೆಗೆ ಸಂಬಂಧಪಟ್ಟ ಯಾವುದೇ ವಿಚಾರದಲ್ಲಿ ಅಥವಾ ನಿಮ್ಮ ಮನೆಗೆ ಒಳ್ಳೆಯ ಗೆಳೆಯರನ್ನು ಕರೆಯುವುದರಿಂದ ಹಿಡಿದು ಊಟ ಮಾಡುವ ಸಮಯದಲ್ಲಿ ಯಾವ ನಿಯಮಗಳನ್ನು ಪಾಲನೆ ಮಾಡಬೇಕು, ಎಲ್ಲವನ್ನೂ ತಿಳಿದುಕೊಳ್ಳಿ. ಸರಿಯಾಗಿ ಚೇರ್ ಮೇಲೆ ಕುಳಿತು ಊಟ ಮಾಡುವುದು, ತುಟಿಗಳನ್ನು ಮುಚ್ಚಿ ಆಹಾರ ಜಿಗಿಯುವುದು, ಸಮಯಕ್ಕೆ ಸರಿಯಾಗಿ ನ್ಯಾಪ್ಕಿನ್ ಬಳಸುವುದು ಊಟ ಮಾಡುವ ಮಧ್ಯೆ ಫೋನ್ ಕಾಲ್ ಬಂದಾಗ ಎಕ್ಸ್ಕ್ಯೂಸ್ ಕೇಳಿ ಎದ್ದು ಹೋಗುವುದು ಇತ್ಯಾದಿ ಒಳ್ಳೆಯ ಅಭ್ಯಾಸಗಳು ನಿಮ್ಮದಾಗಲಿ. ಇದರಿಂದ ನಿಮ್ಮ ಸಂಗಾತಿಗೆ ನಿಮ್ಮ ಮೇಲಿನ ಪ್ರೀತಿಯ ಭಾವನೆ ಮತ್ತಷ್ಟು ಹೆಚ್ಚಾಗುತ್ತದೆ. ನಿಮ್ಮ ರೋಮ್ಯಾಂಟಿಕ್ ಜೀವನ ಶೃಂಗಾರ ಕಾವ್ಯ ಹಾಡುತ್ತದೆ.

ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ : -

ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ : -

ಜೀವನದಲ್ಲಿ ಪ್ರತಿಯೊಬ್ಬರೂ ಆರೋಗ್ಯವಾಗಿ ಮತ್ತು ಖುಷಿಯಾಗಿ ಇರಬೇಕು ಎಂದು ಆಸೆಪಡುತ್ತಾರೆ. ಇದು ನಿಮ್ಮ ಸಂಗಾತಿಯ ಆಸೆ ಕೂಡ. ಹಾಗಾಗಿ ನಿಮ್ಮ ಮನೆಯಲ್ಲಿ ನೀವು ಇರುವ ಸಮಯದಲ್ಲಿ ನಿಮ್ಮ ದೈಹಿಕ ಸ್ವಚ್ಛತೆ ತುಂಬಾ ಮುಖ್ಯವಾಗುತ್ತದೆ. ಉದಾಹರಣೆಗೆ ನೀವು ರೆಸ್ಟ್ ರೂಮ್ ಗೆ ಹೋಗಿ ಬಂದ ನಂತರದಲ್ಲಿ ಸೋಪು ಅಥವಾ ಸ್ಯಾನಿಟೈಸರ್ ಹಾಕಿ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಿ. ನೀವು ಆಹಾರ ತಿನ್ನುವಾಗ ಅಥವಾ ನಿಮ್ಮ ಸಂಗಾತಿಗೆ ಆಹಾರವನ್ನು ತಿನ್ನಿಸಲು ಮುಂದಾದ ಸಮಯದಲ್ಲಿ ಕೈಗಳನ್ನು ಸುಮಾರು 20 ಸೆಕೆಂಡುಗಳ ಕಾಲ ಸೋಪು ಹಾಕಿ ಸ್ವಚ್ಛ ಮಾಡಿಕೊಳ್ಳಿ. ಅದರಲ್ಲೂ ಈಗಿನ ಕೊರೋನಾ ಸಂದರ್ಭದಲ್ಲಿ ಇದು ಅತ್ಯಂತ ಅವಶ್ಯಕ. ನಿಮ್ಮ ಈ ಅಭ್ಯಾಸದಿಂದ ಕೇವಲ ನಿಮ್ಮ ಆರೋಗ್ಯ ಮಾತ್ರ ಚೆನ್ನಾಗಿರುವುದಲ್ಲದೆ ನಿಮ್ಮ ಸಂಗಾತಿಯ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ನಿಮ್ಮ ಇಂತಹ ಸ್ವಚ್ಛತೆಯ ಅಭ್ಯಾಸ ನಿಮ್ಮ ಸಂಗಾತಿಯನ್ನು ಇಂಪ್ರೆಸ್ ಮಾಡದೆ ಇರದು.

 ಸುವಾಸನೆ ಹೊಂದಿದ ಫ್ರಾಗ್ರನ್ಸ್ ಬಳಕೆ ಮಾಡಿ : -

ಸುವಾಸನೆ ಹೊಂದಿದ ಫ್ರಾಗ್ರನ್ಸ್ ಬಳಕೆ ಮಾಡಿ : -

ಮೊದಲೇ ಹೇಳಿದಂತೆ ನೀವು ಸ್ವಚ್ಛತೆಯ ಕಡೆಗೆ ಹೆಚ್ಚು ಆದ್ಯತೆ ನೀಡಿದರೆ ನಿಮ್ಮ ಸಂಗಾತಿಯ ಮನಸ್ಸಿಗೆ ಖುಷಿಯಾಗುತ್ತದೆ. ನನ್ನ ಗಂಡ ಬೇರೆಯವರಿಗಿಂತ ಚೆನ್ನಾಗಿ ಕಾಣಬೇಕು ಎನ್ನುವ ಆಸೆ ಪ್ರತಿಯೊಬ್ಬ ಹೆಂಡತಿಗೂ ಇರುತ್ತದೆ. ಹಾಗಾಗಿ ಪ್ರತಿದಿನ ಸ್ನಾನ ಮಾಡುವ ಅಭ್ಯಾಸದೊಂದಿಗೆ ಸ್ವಚ್ಛವಾದ ಮತ್ತು ನೋಡಲು ಚೆನ್ನಾಗಿ ಕಾಣುವ ಬಟ್ಟೆಗಳನ್ನು ಧರಿಸಿ. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ವ್ಯಾಯಾಮ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಬಾಯಿಯ ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ಕೊಡಿ. ದಂತವೈದ್ಯರು ಹೇಳುವ ಎಲ್ಲಾ ನಿಯಮಗಳನ್ನು ನಿಮ್ಮ ಹಲ್ಲುಗಳ ಸ್ವಚ್ಛತೆಯಲ್ಲಿ ಕಾಪಾಡಿಕೊಳ್ಳಿ. ನೀವು ಬಳಸುವ ಶಾಂಪು ಸೋಪು ಡಿಯೋಡ್ರೆಂಟ್ ಸುಗಂಧಭರಿತವಾಗಿರಲಿ ಕೇವಲ ಸ್ವಲ್ಪ ಪ್ರಮಾಣದಲ್ಲಿ ಬಳಸಿದರೆ ಸಾಕು ನಿಮ್ಮ ಅಂದ ಹೆಚ್ಚುವ ಜೊತೆಗೆ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ರೋಮ್ಯಾಂಟಿಕ್ ಮೂಡ್ ಉಂಟಾಗಲು ಕಾರಣವಾಗುತ್ತದೆ.

ನೀವು ಧರಿಸುವ ಉಡುಪು ನಿಮಗೆ ಸೂಟ್ ಆಗಬೇಕು : -

ನೀವು ಧರಿಸುವ ಉಡುಪು ನಿಮಗೆ ಸೂಟ್ ಆಗಬೇಕು : -

ನಾಲ್ಕು ಜನರ ಮಧ್ಯೆ ನೀವು ಎದ್ದು ಕಾಣಬೇಕು ಎನ್ನುವ ಹಂಬಲ ನಿಮ್ಮ ಪತ್ನಿಗೆ ಇರುವುದರಿಂದ ನಿಮ್ಮ ಬಾಹ್ಯ ಸೌಂದರ್ಯಕ್ಕೆ ನೀವು ಹೆಚ್ಚು ಆದ್ಯತೆ ಕೊಡಬೇಕು. ಪ್ರತಿ ದಿನ ನಿಮಗೆ ಹೊಂದಿಕೊಳ್ಳುವಂತಹ ಬಟ್ಟೆಗಳನ್ನು ಧರಿಸಿ. ಪ್ಯಾಂಟ್ ಮತ್ತು ಶರ್ಟ್ ಮ್ಯಾಚಿಂಗ್ ಬಣ್ಣದಲ್ಲಿ ಇರಲಿ. ಅದೇ ಬಣ್ಣದ ಸಾಕ್ಸ್, ಟೈ, ಪಾಲಿಶ್ ಮಾಡಿದ ಗಾಢವಾದ ಬಣ್ಣವನ್ನು ಹೊಂದಿರುವ ಶೂಗಳನ್ನು ಧರಿಸಿ. ನಿಮ್ಮ ತಲೆ ಕೂದಲನ್ನು ಟ್ರಿಮ್ ಮಾಡಿ ಉಗುರುಗಳನ್ನು ಕತ್ತರಿಸಿ. ಕೈನಲ್ಲಿ ಒಂದು ಅಥವಾ ಎರಡು ಬೆರಳಿಗೆ ಮಾತ್ರ ಉಂಗುರಗಳನ್ನು ಧರಿಸಿ. ನಿಮ್ಮ ಸಂಗಾತಿಗೆ ನಿಮ್ಮ ಸೌಂದರ್ಯ ಮೆಚ್ಚುಗೆಯಾಗಿ ನಿಮ್ಮನ್ನು ಹೆಚ್ಚು ಇಷ್ಟಪಡಲು ಇವೆಲ್ಲವೂ ಸಹಾಯ ಮಾಡುತ್ತವೆ.

ಕೋಮಲ ಹಾಗೂ ಮೃದುತ್ವ ಸ್ವಭಾವ ನಿಮ್ಮದಾಗಿರಲಿ : -

ಕೋಮಲ ಹಾಗೂ ಮೃದುತ್ವ ಸ್ವಭಾವ ನಿಮ್ಮದಾಗಿರಲಿ : -

ಸಾಧಾರಣವಾಗಿ ಮಹಿಳೆಯರಿಗೆ ಹೋಲಿಸಿದರೆ ಪುರುಷರಿಗೆ ಕೋಪ - ತಾಪ ಜಾಸ್ತಿ. ಆದರೆ ನಿಮ್ಮ ಸಂಗಾತಿಯ ವಿಚಾರದಲ್ಲಿ ನೀವು ಇದಕ್ಕೆಲ್ಲ ಕಡಿವಾಣ ಹಾಕಲೇಬೇಕು. ಸದಾ ರೇಗಾಡುವ ಮತ್ತು ಮುಖ ಗಂಟು ಹಾಕಿಕೊಂಡಿರುವ ಗಂಡನನ್ನು ಹೆಂಡತಿ ಇಷ್ಟ ಪಡುವುದಿಲ್ಲ. ಒಂದು ವೇಳೆ ಯಾವುದಾದರೂ ವಿಚಾರಕ್ಕೆ ಕೋಪ ಬಂದರೂ ಕೂಡ ಅದರಲ್ಲೂ ಪ್ರೀತಿಯನ್ನು ತೋರಿಸುವ ತಂತ್ರಗಾರಿಕೆ ನಿಮಗೆ ಕರಗತವಾಗಬೇಕು. ಹೆಚ್ಚು ಗುಣಮಟ್ಟದ ಸಮಯವನ್ನು ನಿಮ್ಮ ಸಂಗಾತಿಯ ಜೊತೆ ನೀವು ಕಳೆಯಲು ಸಮಯ ಹೊಂದಿಸಿಕೊಳ್ಳಬೇಕು. ನಿಮ್ಮ ಸಂಗಾತಿಯ ತವರು ಮನೆಯವರು ಬಂದಾಗಲೂ ಇದೇ ಅಭ್ಯಾಸ ಮುಂದುವರೆದರೆ ನಿಮ್ಮ ಮೇಲಿನ ಪ್ರೀತಿ ನಿಮ್ಮ ಸಂಗಾತಿಗೆ ದುಪ್ಪಟ್ಟಾಗುತ್ತದೆ.

ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡಿ : -

ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡಿ : -

ಒಂದು ವೇಳೆ ನೀವು ನಿಮ್ಮ ಹೆಂಡತಿಯ ಜೊತೆ ಎಂದಾದರೂ ಹೊರಗಡೆ ಸುತ್ತಾಡಿಕೊಂಡು ಬರಲು, ಸಿನಿಮಾ ನೋಡಲು, ಹೋಟೆಲ್ ನಲ್ಲಿ ಊಟ ಮಾಡಲು, ಇಷ್ಟಪಟ್ಟಿದ್ದರೆ, ನಿಮ್ಮ ಎಲ್ಲಾ ಕೆಲಸಗಳನ್ನು ಅಂದಿನ ದಿನ ಬೇಗನೆ ಮುಗಿಸಿಕೊಳ್ಳಿ ಅಥವಾ ಸಾಧ್ಯವಾದರೆ ಇನ್ನೊಂದು ದಿನಕ್ಕೆ ಪೋಸ್ಟ್ಪೋನ್ ಮಾಡಿ. ನಿಮ್ಮ ಸಂಗಾತಿಗೆ ಯಾವುದೇ ಕಾರಣಕ್ಕೂ ಬೇಸರ ಮಾಡಬಾರದು ಎಂಬ ಮನಸ್ಥಿತಿ ನಿಮಗಿರಬೇಕು. ಟ್ರಾಫಿಕ್ ಕಿರಿಕಿರಿಯಿಂದ ಮನೆಗೆ ಬರುವುದು ಸ್ವಲ್ಪ ತಡವಾಗುವ ಹಾಗಿದ್ದರೆ ಆಫೀಸ್ ನಿಂದ ಸ್ವಲ್ಪ ಬೇಗನೆ ಹೊರಡಿ. ಎಲ್ಲೋ ಒಮ್ಮೆ ಸಿಗುವ ಇಂತಹ ಅದ್ಭುತವಾದ ಸಮಯವನ್ನು ಹಾಳುಮಾಡಿಕೊಳ್ಳಬೇಡಿ.

ನಾನು ನಿಮ್ಮ ಸಂಗಾತಿಗೆ ಅರ್ಪಿಸಿಕೊಳ್ಳಿ : -

ನಾನು ನಿಮ್ಮ ಸಂಗಾತಿಗೆ ಅರ್ಪಿಸಿಕೊಳ್ಳಿ : -

ಬಹಳಷ್ಟು ಪುರುಷರಿಗೆ ಇದು ಇಷ್ಟವಾಗುವುದಿಲ್ಲ. ಪುರುಷ ಪ್ರಧಾನವಾದ ಈ ಸಮಾಜದಲ್ಲಿ ಹೆಣ್ಣಿಗಿಂತ ಗಂಡು ಮೇಲು ಎನ್ನುವ ಭಾವನೆ ಈಗಲೂ ಇದೆ ಮತ್ತು ಹಲವು ಗಂಡಂದಿರು ಇದನ್ನು ತಮ್ಮ ಮನೆಗಳಲ್ಲಿ ಪಾಲಿಸುತ್ತಿದ್ದಾರೆ ಕೂಡ. ಆದರೆ ಇದರಿಂದ ಗಂಡ - ಹೆಂಡತಿಯ ಮಧ್ಯೆ ಪ್ರೀತಿ ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ. ಸಂಸಾರದಲ್ಲಿ ಗಂಡ ಹೆಂಡತಿ ಸಮಾನರು ಎನ್ನುವ ಭಾವನೆ ನಿಮ್ಮಲ್ಲಿ ಮೂಡಿ ಬರಬೇಕು. ಮನೆಯಲ್ಲಿದ್ದಾಗ ನಿಮ್ಮ ಸಂಗಾತಿಗೆ ಆಕೆಯ ಕೆಲಸ - ಕಾರ್ಯಗಳಲ್ಲಿ ನೀವು ಜೊತೆಗೂಡಿ ಸಹಾಯ ಮಾಡಿ. ಕಷ್ಟದ ಸಂದರ್ಭ ಬಂದಾಗ ಇಬ್ಬರೂ ಜೊತೆ ನಿಂತು ಚರ್ಚೆ ಮಾಡಿ ಮುಂದುವರೆದಾಗ ಮಾತ್ರ ಜೀವನ ಸುಗಮವಾಗುತ್ತದೆ. ಹಾಗಾಗಿ ನಿಮ್ಮಿಬ್ಬರ ಮಧ್ಯೆ ಪ್ರೀತಿ ಶಾಶ್ವತವಾಗಿ ಉಳಿಯಬೇಕಾದರೆ ನಿಮ್ಮ ಅಹಂ ಭಾವವನ್ನು ಸಂಪೂರ್ಣವಾಗಿ ಕೈ ಬಿಟ್ಟರೆ ಒಳ್ಳೆಯದು.

ಜೋರಾಗಿ ನಗಲು ಪ್ರಯತ್ನ : -

ಜೋರಾಗಿ ನಗಲು ಪ್ರಯತ್ನ : -

ಮನುಷ್ಯ ನಕ್ಕಷ್ಟು ಆರೋಗ್ಯ ಚೆನ್ನಾಗಿರುತ್ತದೆ ಆಯಸ್ಸು ಹೆಚ್ಚಾಗುತ್ತದೆ ಎಂದು ತಿಳಿದವರು ಹೇಳುತ್ತಾರೆ. ಹೌದು, ನಗುವುದರಿಂದ ನಮ್ಮ ದೇಹದಲ್ಲಿ ರಕ್ತಸಂಚಾರ ಸರಾಗವಾಗಿ ಹರಿಯಲು ಪ್ರಾರಂಭ ಮಾಡುತ್ತದೆ. ಇದರಿಂದ ಹೃದಯದ ಕಾಯಿಲೆಗಳು ದೂರವಾಗುತ್ತವೆ. ಕೇವಲ ಮಾನಸಿಕ ಒತ್ತಡ ಹೆಚ್ಚಾದರೆ ದೇಹಕ್ಕೆ ಕಾಯಿಲೆಗಳು ರೋಗರುಜಿನಗಳು ಆವರಿಸಿಕೊಂಡು ಜೀವನದ ನೆಮ್ಮದಿ ಹದಗೆಡುತ್ತದೆ. ಆದ್ದರಿಂದ ಸಮಯ ಸಿಕ್ಕಾಗ ಟಿವಿಯಲ್ಲಿ ಬರುವ ತಮಾಷೆ ಕಾರ್ಯಕ್ರಮಗಳನ್ನು ಇಬ್ಬರು ಕುಳಿತು ನೋಡಿ. ಗೆಳೆಯರ ಜೊತೆ ಖುಷಿಯಾಗಿ ಮಾತನಾಡಿ ಕಾಲ ಕಳೆಯಿರಿ. ಇದರಿಂದ ಮನಸ್ಸಿನ ಭಾರ ಕಡಿಮೆಯಾಗಿ ಆನಂದಮಯ ಜೀವನ ನಿಮ್ಮದಾಗುತ್ತದೆ.

ಮಧ್ಯೆ ಮಧ್ಯೆ ಸಮಯ ತೆಗೆದುಕೊಳ್ಳಿ : -

ಮಧ್ಯೆ ಮಧ್ಯೆ ಸಮಯ ತೆಗೆದುಕೊಳ್ಳಿ : -

ಎಂದಾದರೂ ನಮಗೆ ಬೇಸರವಾದಾಗ ನನ್ನನ್ನು ಒಬ್ಬಂಟಿಯಾಗಿ ಇರಲು ಬಿಡು ಎಂದು ಬೇರೆಯವರಿಗೆ ಕೇಳುತ್ತೇವೆ. ಇದು ತುಂಬಾ ಒಳ್ಳೆಯ ಅಭ್ಯಾಸ. ಸಂಸಾರದಲ್ಲಿ ಸಹ ಬೇಸರವಾದಾಗ, ಜಗಳವಾದಾಗ, ವಿರಸ ಮೂಡಿ ಬಂದಾಗ ನೀವು ಮಾತಿಗೆ ಮಾತು ಬೆಳೆಸಲು ಹೋದರೆ ನಿಮ್ಮ ಜಗಳ ಅಥವಾ ಮುನಿಸು ವಿಪರೀತ ಮಟ್ಟಕ್ಕೆ ಹೋಗಿ ತಲುಪುತ್ತದೆ. ಆದರೆ ಆ ಕ್ಷಣಕ್ಕೆ ಸ್ವಲ್ಪ ಹೊತ್ತು ಸುಮ್ಮನಾಗುವುದರಿಂದ ನೀವು ಮಾಡಿದ ತಪ್ಪಿನ ಬಗ್ಗೆ ಆಲೋಚನೆ ಮಾಡಲು ನಿಮ್ಮಿಬ್ಬರಿಗೂ ಸಮಯ ಸಿಗುತ್ತದೆ. ಮುಂದೆ ಏನು ಮಾಡಬೇಕು ಎಂಬುದು ಅರ್ಥವಾಗುತ್ತದೆ. ನಿಮ್ಮ ಮನಸ್ಸು ಪ್ರಶಾಂತವಾಗುತ್ತದೆ ಮತ್ತು ನೀವು ಮತ್ತು ನಿಮ್ಮ ಸಂಗಾತಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಇದೊಂದು ಒಳ್ಳೆಯ ಸಮಯವಾಗಿ ಬದಲಾಗುತ್ತದೆ. ಹಾಗಾಗಿ ಖುಷಿಯಾಗಿ ಜೀವನ ಮಾಡಲು ಇದೊಂದು ಒಳ್ಳೆಯ ತಂತ್ರ ಎಂದು ನೀವು ಇದನ್ನು ಅನುಸರಿಸಬಹುದು.

ಕೆಟ್ಟ ಅಭ್ಯಾಸಗಳಿಗೆ ತಡೆ ಹಾಕಿ : -

ನಗರ ಪ್ರದೇಶಗಳಲ್ಲಿ ವಾಸ ಮಾಡುವ ಹೈ - ಫೈ ಮಂದಿ ಮದ್ಯಪಾನವನ್ನು ಅಥವಾ ಧೂಮಪಾನವನ್ನು ತಮ್ಮ ಪ್ರತಿ ದಿನದ ಅಭ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಪ್ರಾರಂಭ ಮಾಡಿಕೊಂಡು ನಂತರ ಸೇವನೆ ಮಾಡುವ ಅಭ್ಯಾಸಕ್ಕೆ ಮಿತಿಯೇ ಇಲ್ಲದಂತೆ ಆಗುತ್ತದೆ. ಪ್ರತಿ ದಿನ ಇಂತಹ ಕೆಟ್ಟ ಚಟ ನಿಮ್ಮದಾದರೆ ನಿಮ್ಮ ಆರೋಗ್ಯ ಹಾನಿಯಾಗುವ ಜೊತೆಗೆ ನಿಮ್ಮ ಸಂಸಾರ ಕೂಡ ಹಾಳಾಗುತ್ತದೆ. ಹಾಗಾಗಿ ನಿಮ್ಮ ಕೆಟ್ಟ ಅಭ್ಯಾಸಗಳನ್ನು ದೂರ ಮಾಡಿಕೊಳ್ಳಲು ವೈದ್ಯರ ನೆರವು ಪಡೆದುಕೊಂಡು ನಿಮ್ಮ ಆರೋಗ್ಯ ಮತ್ತು ನಿಮ್ಮ ಸಂಸಾರದ ರಕ್ಷಣೆ ಮಾಡಿಕೊಳ್ಳಿ.

English summary

For Men Only: Ways to Stay On Top of Your Game

For men only, here are ways to top of your game, read on,
Story first published: Saturday, November 14, 2020, 18:10 [IST]
X