Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
Foods for migraine : ಮೈಗ್ರೇನ್ ತಲೆನೋವು ಕಡಿಮೆ ಮಾಡಲು ಈ ಆಹಾರಗಳು ಪರಿಣಾಮಕಾರಿ
ಮೈಗ್ರೇನ್ ತಲೆನೋವನ್ನು ಅನುಭವಿಸಿದವರಿಗೆ ಅದರ ತೀವ್ರತೆ ಅರಿವಾಗುವುದು. ಏಕೆಂದರೆ, ಇದು ಯಾವುದೇ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಲು ಬಿಡದಂತಹ ತೀವ್ರವಾದ ತಲೆನೋವು. ಈ ನೋವನ್ನು ಕಡಿಮೆ ಮಾಡಲು ಮಾತ್ರೆಗಳಿಗೆ ಮೊರೆ ಹೋಗುವುದು ಸಹಜ. ಆದರೆ ಪ್ರತೀ ಸಲ ಮಾತ್ರೆ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದಕ್ಕಾಗಿ ಆಹಾರ ಕ್ರಮದಲ್ಲಿ ಕೆಲವು ಆಹಾರಗಳನ್ನು ಸೇವಿಸಿದರೆ ಅದರಿಂದ ತಲೆನೋವು ನಿವಾರಣೆ ಮಾಡಬಹುದು. ಅಂತಹ ಆಹಾರಗಳ ಬಗ್ಗೆ ನಾವಿಂದು ತಿಳಿಸಿಕೊಡಲಿದ್ದೇವೆ.
ಮೈಗ್ರೇನ್ ಕಡಿಮೆ ಮಾಡುವ ಆಹಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ನೀರಿನಾಂಶ ಅಧಿಕವಾಗಿರುವ ಆಹಾರ:
ಮೈಗ್ರೇನ್ ತಲೆನೋವಿಗೆ ಪ್ರಮುಖ ಕಾರಣವೆಂದರೆ ನಿರ್ಜಲೀಕರಣ. ನೈಸರ್ಗಿಕವಾಗಿ ನೀರಿನಾಂಶವು ಅಧಿಕ ಇರುವಂತಹ ಕೆಲವೊಂದು ಹಣ್ಣುಗಳಲ್ಲಿ ಪ್ರಮುಖ ಖನಿಜಾಂಶಗಳಾಗಿರುವಂತಹ ಮೆಗ್ನಿಶಿಯಂ ಕೂಡ ಇರುವುದು. ಇದು ಇದು ತಲೆನೋವು ತಡೆಯುತ್ತದೆ. ಆದ್ದರಿಂದ ಕಲ್ಲಂಗಡಿ, ಬೆರ್ರಿಗಳು ಮತ್ತು ಟೊಮೆಟೊ ತಲೆನೋವು ನಿವಾರಣೆ ಮಾಡಲು ಸಹಾಯ ಮಾಡುತ್ತವೆ.

ಮೀನನ್ನು ಆಹಾರದ ಭಾಗವಾಗಿಸಿ:
ಮೀನಿನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳೊಂದಿಗೆ ವಿಟಮಿನ್ ಇ ಕೂಡ ಇರುತ್ತದೆ. ಮೈಗ್ರೇನ್ನ ತೀವ್ರ ನೋವನ್ನು ನಿಯಂತ್ರಿಸುವಲ್ಲಿ ಈ ಎರಡೂ ವಸ್ತುಗಳು ಪರಿಣಾಮಕಾರಿ. ಆದ್ದರಿಂದ ಸಾಮಾನ್ಯ ಆಹಾರದಲ್ಲಿ ಮೀನುಗಳನ್ನು ತಿನ್ನಲು ಪ್ರಾರಂಭಿಸಿ, ನೋವಿನ ಸಮಯದಲ್ಲಿ ಅಲ್ಲ.

ಹಾಲು ಕೂಡ ತುಂಬಾ ಪ್ರಯೋಜನಕಾರಿ:
ಮೈಗ್ರೇನ್ ರೋಗಿಗಳಿಗೆ ಕೊಬ್ಬು ಮುಕ್ತ ಹಾಲು ಕುಡಿಯುವುದು ತುಂಬಾ ಪ್ರಯೋಜನಕಾರಿ. ಏಕೆಂದರೆ ವಿಟಮಿನ್ ಬಿ ಇದರಲ್ಲಿದ್ದು, ಇದು ಜೀವಕೋಶಗಳಿಗೆ ಶಕ್ತಿಯನ್ನು ನೀಡುತ್ತದೆ. ಮೆದುಳಿನ ನರಗಳ ನಿಸ್ತೇಜತೆಯಿಂದಾಗಿ, ಮೈಗ್ರೇನ್ ನೋವು ಸಹ ಉದ್ಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವಿಟಮಿನ್ ಬಿ ತುಂಬಾ ಉಪಯುಕ್ತವಾಗಿದೆ.

ರಾಗಿ ಪರಿಹಾರ::
ರಾಗಿ ಮೈಗ್ರೇನ್ ನಿವಾರಣೆ ಮಾಡುವ ಮತ್ತೊಂದು ಒಳ್ಳೆಯ ಧಾನ್ಯವಾಗಿದೆ. ಮೆಗ್ನಿಶಿಯಂ ಮತ್ತು ವಿಟಮಿನ್ ಬಿ ಅಧಿಕವಾಗಿ ಇರುವ ರಾಗಿಯು ಮೈಗ್ರೇನ್ ಹೆಚ್ಚಾಗದಂತೆ ತಡೆಯುತ್ತದೆ.

ಸೇಬು ಪ್ರಯೋಜನಕಾರಿ:
ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಎನ್ನುವ ಮಾತಿದೆ. ಅದೇ ರೀತಿಯಾಗಿ ಸೇಬಿನಲ್ಲಿ ಉನ್ನತ ಮಟ್ಟದ ಫ್ಲಾವನಾಯ್ಡ್ ಗಳಿದ್ದು, ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ ಜೊತೆಗೆ ತಲೆನೋವಿನಂತಹ ಒತ್ತಡದ ಲಕ್ಷಣಗಳನ್ನು ಕಡಿಮೆ ಮಾಡಲು ನೆರವಾಗುವುದು.

ಕಾಫಿ ಕುಡಿಯುವುದು ಸಹಕಾರಿ:
ಸಾಮಾನ್ಯ ತಲೆನೋವಿನಲ್ಲಿ ಕಾಫಿ ಮತ್ತು ಟೀ ಕುಡಿಯುವುದು ಹೇಗೆ ಪ್ರಯೋಜನಕಾರಿಯೋ, ಅದೇ ರೀತಿ ಮೈಗ್ರೇನ್‌ನಲ್ಲಿ ಸಾಕಷ್ಟು ಕುಡಿಯುವುದು ಸಹ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರವನ್ನು ನೀಡುತ್ತದೆ. ಮೈಗ್ರೇನ್ ಅಟ್ಯಾಕ್ ಆದಾಗ ಕಾಫಿ ಕುಡಿಯಿರಿ. ಇದರಲ್ಲಿ ಕೆಫೀನ್ ಇರುವುದರಿಂದ ಸಾಕಷ್ಟು ಆರಾಮ ಸಿಗುವುದು.

ಡ್ರೈ ಫ್ರೂಟ್ಸ್ ಪರಿಹಾರ:
ಮೈಗ್ರೇನ್ ನೋವಿನಿಂದ ನೀವು ಆಗಾಗ್ಗೆ ತೊಂದರೆಗೊಳಗಾಗುತ್ತಿದ್ದರೆ, ನಿಮ್ಮ ಆಹಾರದಲ್ಲಿ ಒಣ ಹಣ್ಣುಗಳನ್ನು ಸೇರಿಸಿ. ಅವು ಮೆಗ್ನೀಸಿಯಮ್ ಮತ್ತು ಇತರ ಅನೇಕ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ, ಅದು ನಿಮ್ಮ ಮೈಗ್ರೇನ್‌ನ ತೀವ್ರವಾದ ನೋವಿನಿಂದ ಪರಿಹಾರವನ್ನು ನೀಡುತ್ತದೆ ಜೊತೆಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಗೋಡಂಬಿ, ಬಾದಾಮಿ, ವಾಲ್್ನಟ್ಸ್ ಮತ್ತು ಕುಂಬಳಕಾಯಿ ಬೀಜಗಳನ್ನು ತಿನ್ನಿರಿ.



Click it and Unblock the Notifications
