For Quick Alerts
ALLOW NOTIFICATIONS  
For Daily Alerts

ಹವಾಯಿ ಚಪ್ಪಲಿ ಆರೋಗ್ಯಕ್ಕೆ ಏಕೆ ಹಾನಿಕರ?

|

ಫ್ಲಿಪ್ ಫ್ಲಾಪ್ ಕಾಲುಗಳಿಗೆ ಆರಾಮ ನೀಡಿದರೂ ಅದರಿಂದ ಕೆಲವೊಂದು ಹಾನಿಗಳು ಇದು. ಅದು ಯಾವುದೆಂದು ತಿಳಿಯಿರಿ. ಫ್ಯಾಶನ್ ದಿನಕ್ಕೊಂದು ಬದಲಾಗುತ್ತಲೇ ಇರುತ್ತದೆ. ಕಾಲಿನಿಂದ ಹಿಡಿದು ತಲೆಯ ತನಕ ಪ್ರತಿಯೊಂದರಲ್ಲೂ ಫ್ಯಾಶನ್.

Do not Wear Flip-Flops: Why Here Are The Reasons

ಪಾದಗಳಿಗೆ ಕೂಡ ವಿವಿಧ ರೀತಿಯ ಚಪ್ಪಲಿ, ಶೂ ಧರಿಸಲಾಗುತ್ತದೆ. ಅದರಲ್ಲೂ ಕೆಲವರು ಒಂದೊಂದು ಬಟ್ಟೆಗೆ ಒಂದೊಂದು ಬಣ್ಣದ ಚಪ್ಪಲಿ ಧರಿಸುವರು. ಇದು ಕೆಲವೊಮ್ಮೆ ಪಾದಗಳಿಗೆ ಹಾನಿ ಕೂಡ ಉಂಟು ಮಾಡುವುದು. ಈ ಲೇಖನದಲ್ಲಿ ನಾವು ನಿಮಗೆ ಫ್ಲಿಪ್ ಫ್ಲಾಪ್ (ಹವಾಯಿ)ಗಳನ್ನು ಯಾಕೆ ಧರಿಸಬಾರದು ಎನ್ನುವ ಬಗ್ಗೆ ತಿಳಿಸಿಕೊಡಲಿದ್ದೇವೆ.

 ಉಳುಕು ಬರಬಹುದು

ಉಳುಕು ಬರಬಹುದು

ಪಾದಗಳ ಆರೋಗ್ಯದ ಕಡೆಗೂ ನಾವು ಗಮನಹರಿಸಬೇಕಾಗಿರುವ ಕಾರಣದಿಂದಾಗಿ ಸಿಕ್ಕಸಿಕ್ಕ ಚಪ್ಪಲಿಗಳನ್ನು ಧರಿಸಬಾರದು. ಅದರಲ್ಲೂ ರಬ್ಬರ್ ಪ್ಲಿಪ್ ಫ್ಲಾಪ್ ಗಳನ್ನು ಧರಿಸುವ ವೇಳೆ ತುಂಬಾ ಎಚ್ಚರ ಅಗತ್ಯ. ನೀವು ಇದನ್ನು ಇಡೀ ದಿನ ಬಳಕೆ ಮಾಡಬಾರದು. ಫ್ಲಿಪ್ ಫ್ಲಾಪ್ ನಲ್ಲಿ ಯಾವುದೇ ಬೆಂಬಲವಿಲ್ಲದೆ ಇರುವ ಕಾರಣದಿಂದಾಗಿ ಪಾದವು ನೇರವಾಗಿರುವ ಬದಲು ದೇಹದ ಮಧ್ಯಭಾಗಕ್ಕೆ ತಿರುಗುವುದು. ಹೀಗಾದರೆ ಆಗ ಖಂಡಿತವಾಗಿಯೂ ಹಿಂಗಾಲುಗಳಿಗೆ ನೋವುಂಟಾಗುವುದು. ಯಾವುದೇ ಬೆಂಬಲವಿಲ್ಲದೆ ಇರುವ ಕಾರಣದಿಂಧಾಗಿ ಇದು ಹಿಂಗಾಲುಗಳನ್ನು ಉಳುಕಿಸುವುದು.

ಉರಿಯೂತ

ಉರಿಯೂತ

ಫ್ಲಿಪ್ ಫ್ಲಾಪ್ ನಿಂದಾಗಿ ಪಾದಗಳಿಗೆ ಯಾವುದೇ ಬೆಂಬಲವಿಲ್ಲದೆ ಇರುವ ಕಾರಣದಿಂದಾಗಿ ನೀವು ಹೆಚ್ಚು ಜಾಗೃತೆ ವಹಿಸುತ್ತೀರಿ ಮತ್ತು ಉಳುಕು ಉಂಟಾಗದಂತೆ ನೋಡಿಕೊಳ್ಳುತ್ತೀರಿ. ಬೆಂಬಲವಿಲ್ಲದೆ ಇರುವ ಕಾರಣದಿಂದಾಗಿ ಪಾದಗಳ ಅಂಗಾಂಶಗಳಲ್ಲಿ ಉರಿಯೂತ ಉಂಟಾಗುವುದು ಮತ್ತು ಇದರಿಂದ ನೋವು ಕಾಣಿಸಬಹುದು. ನೀವು ಹೊರಗಡೆ ನಡೆದಾಡಿದ ವೇಳೆ ಆಗ ಪಾದದಲ್ಲಿ ನೋವು ಕಂಡುಬರುವುದು. ಈ ಉರಿಯೂತ ನಿವಾರಣೆ ಮಾಡಲು ನೀವು ಯಾವುದಾದರೂ ಉರಿಯೂತ ಶಮನಕಾರಿ ಕ್ರೀಮ್ ಅಥವಾ ಔಷಧಿ ಬಳಕೆ ಮಾಡಿ.

 ಪಾದದ ಸಮಸ್ಯೆಯು ತೀವ್ರವಾಗಬಹುದು

ಪಾದದ ಸಮಸ್ಯೆಯು ತೀವ್ರವಾಗಬಹುದು

ಸೆಳೆತ ಕಡಿಮೆ ಮಾಡುವ ಸಲುವಾಗಿ ಪಾದದಲ್ಲಿ ಹೆಚ್ಚುವರಿ ಮೂಳೆಯು ನಿರ್ಮಾನವಾಗಬಹುದು ಮತ್ತು ಇದು ದೇಹದಲ್ಲಿ ಹೆಚ್ಚುವರಿ ಮೂಳೆಯಾಗಿರುವುದು ಮತ್ತು ಪಾದದ ಹಿಂಭಾಗ ಅಥವಾ ಕಳೆಭಾಗದಲ್ಲಿ ಇದು ನಿರ್ಮಾಣವಾಗಬಹುದು. ಇದರಿಂದ ನೋವು ಮತ್ತಷ್ಟು ಉಂಟಾಗಬಹುದು ಮತ್ತು ಸೆಳೆತವು ಹೆಚ್ಚಾಗಬಹುದು. ಇದಕ್ಕೆ ಯಾವುದೇ ಚಿಕಿತ್ಸೆ ಫಲಿಸದೆ ಇದ್ದರೆ ಆಗ ನೀವು ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಬೇಕಾಗಬೇಕಾಗುತ್ತದೆ.

ಹೆಬ್ಬೆರಳು ಮೊಂಡಾಗಬಹುದು

ಹೆಬ್ಬೆರಳು ಮೊಂಡಾಗಬಹುದು

ಫ್ಲಿಪ್ ಫ್ಲಾಪ್ ನಲ್ಲಿ ನಡೆಯುವ ವೇಳೆ ನಾವು ಅದನ್ನು ಜಾರದಂತೆ ತುಂಬಾ ಗಟ್ಟಿಯಾಗಿ ಹಿಡಿದುಕೊಳ್ಳುವುದರಿಂದ ಹೆಬ್ಬೆರಳುಗಳು ಹಾಗೆ ಮೊಂಡಾಗಬಹುದು. ನೀವು ಶೂ ಧರಿಸುವ ಸಮಯದಲ್ಲಿ ಇದು ಮತ್ತೆ ನೇರವಾದರೂ ಶೂ ತೆಗೆದ ಬಳಿಕ ಅದು ಮತ್ತೆ ಮೊದಲಿನ ಸ್ಥಾನಕ್ಕೆ ಬರುವುದು. ಇದು ತುಂಬಾ ವಿಚಿತ್ರವಾಗಿ ಕಾಣುವುದು.

ಬೊಕ್ಕೆಗಳು ಬರಬಹುದು

ಬೊಕ್ಕೆಗಳು ಬರಬಹುದು

ನೀವು ಮೊಂಡಾಗಿರುವಂತಹ ಹೆಬ್ಬೆರಳಿನೊಂದಿಗೆ ಶೂ ಧರಿಸಿದರೆ ಆಗ ಅದು ಶೂನ ಮೇಲ್ಭಾಗಕ್ಕೆ ತಾಗಬಹುದು ಮತ್ತು ಅಲ್ಲಿ ಉಜ್ಜುವಿಕೆ ಉಂಟಾಗುವ ಪರಿಣಾಮವಾಗಿ ಬೊಕ್ಕೆಗಳು ಮೂಡಬಹುದು. ಇದು ತುಂಬಾ ನೋವುಂಟು ಮಾಡುವುದು.

ಪಾದಕ್ಕೆ ನೋವಾಗಬಹುದು

ಪಾದಕ್ಕೆ ನೋವಾಗಬಹುದು

ಶೂ ಧರಿಸುವ ಸಂದರ್ಭದಲ್ಲಿ ಹಿಂಭಾಗದಲ್ಲಿ ಮತ್ತು ಸುತ್ತಲು ಪಾದಗಳಿಗೆ ಹೆಚ್ಚಿನ ಬೆಂಬಲವಿರುವ ಕಾರಣದಿಂದಾಗಿ ಯಾವುದೇ ಸಮಸ್ಯೆಯಾಗದು. ಆದರೆ ಫ್ಲಿಪ್ ಫ್ಲಾಪ್ ಧರಿಸುವ ಸಂದರ್ಭದಲ್ಲಿ ಯಾವುದೇ ಬೆಂಬಲವಿಲ್ಲದೆ ಇರುವ ಕಾರಣದಿಂದಾಗಿ ಪಾದಗಳಿಗೆ ಹೆಚ್ಚು ನೋವಾಗುವುದು. ಹೀಗೆ ನೀವು ದೀರ್ಘಕಾಲ ನಡೆದರೆ ಅದರಿಂದ ಕಿರಿಕಿರಿ ಉಂಟಾಗಬಹುದು. ಪಾದಗಳಲ್ಲಿ ನೋವು ಕಾಣಿಸಬಹುದು ಮತ್ತು ಊತವು ಬರಬಹುದು. ಆದರೆ ನೀವು ಶೂ ಧರಿಸಿದರೆ ಈ ನೋವು ಇರದು.

ಹೆಜ್ಜೆ ಬದಲಾಗಬಹುದು

ಹೆಜ್ಜೆ ಬದಲಾಗಬಹುದು

ಯಾವಾಗಲೂ ಹೀಲ್ ಇರುವಂತಹ ಚಪ್ಪಲಿ ಧರಿಸುವುದು ಕಾಲುಗಳಿಗೆ ಅಭ್ಯಾಸವಾಗಿ ಹೋಗಿದೆ. ಹೀಗಾಗಿ ನೀವು ಫ್ಲಿಪ್ ಫ್ಲಾಪ್ ಧರಿಸುವ ವೇಳೆ ದೇಹವು ನಿಮ್ಮನ್ನು ಸ್ಥಿರವಾಗಿಡಲು ಸಣ್ಣ ಹೆಜ್ಜೆಗಳನ್ನು ಇಡಬಹುದು. ಇದು ತುಂಬಾ ಒತ್ತಡ ಹಾಗೂ ತಟಸ್ಥ ಹೆಜ್ಜೆಯಾಗಿರುವುದು.

English summary

Reasons Why You Should Never Wear Flip Flops in Kannada

Here we are discussing about Dont Wearn Flip-Flops: Here Are The Reasons. Flip-flops are fine for crossing the beach, but you should never make them your go-to summer shoes. Read more.
X
Desktop Bottom Promotion