For Quick Alerts
ALLOW NOTIFICATIONS  
For Daily Alerts

ಮಿಲನ ಕ್ರಿಯೆಯಿಂದ ಆರೋಗ್ಯದ ಜತೆ ಸೌಂದರ್ಯಕ್ಕೂಇದೆ ಸಾಕಷ್ಟು ಲಾಭ

|

ಈ ಜಗತ್ತಿನಲ್ಲಿ ಬೆಲೆ ಕಟ್ಟಲಾಗದ ಅತ್ಯಂತ ಮಧುರ ಭಾವನೆ ಎಂದರೆ ಪ್ರೇಮ. ಪ್ರತಿಯೊಬ್ಬರೂ ಇನ್ನೊಬ್ಬರ ಪ್ರೀತಿಯನ್ನು ಅಪೇಕ್ಷಿಸುತ್ತಾರೆ. ಪ್ರತಿ ಬಾಂಧವ್ಯವೂ ಪ್ರೀತಿಯನ್ನು ಅವಲಂಬಿಸಿದೆ. ಪ್ರೀತಿ ಎಷ್ಟು ಪ್ರಬಲ ಎಂದರೆ ಇದರ ನಿದರ್ಶನಗಳನ್ನು ಸಾವಿರಾರು ಉದಾಹರಣೆಗಳ ಮೂಲಕ ನೀಡಬಹುದು.

ಆದರೆ ಪ್ರೀತಿಯಲ್ಲಿಯೂ ವೈವಿಧ್ಯತೆ ಇದ್ದು ದಂಪತಿಗಳ ನಡುವಣ ಪ್ರೀತಿ ಪರಸ್ಪರರ ದೈಹಿಕ ಅಗತ್ಯತೆಗಳನ್ನು ಪೂರೈಸುವ ಕಾಮನೆಗಳೊಂದಿಗೂ ತಳಕು ಹಾಕಿಕೊಳ್ಳುತ್ತದೆ. ಅನ್ಯೋನ್ಯತೆಗೆ ಪ್ರೀತಿ ಎಷ್ಟು ಮುಖ್ಯವೋ ಅಷ್ಟೇ ದೈಹಿಕ ಸಾಮೀಪ್ಯವೂ ಅಷ್ಟೇ ಮುಖ್ಯ. ಈ ಜಗತ್ತಿನಲ್ಲಿ ಸಂತಾನ ಅಭಿವೃದ್ಧಿಯ ಉದ್ದೇಶದ ಹೊರತಾಗಿ ಮಾನಸಿಕ ತೃಪ್ತಿಗಾಗಿ ಲೈಂಗಿಕ ಕ್ರಿಯೆ ನಡೆಸುವ ಪ್ರಾಣಿ ಎಂದರೆ ಬಹುಷ್ಯಃ ಮಾನವರು ಮಾತ್ರವೇ ಹೌದು.

benefits of sex

ವಿವಾಹ ಬಂಧನಕ್ಕೆ ಒಳಗಾದ ದಂಪತಿಗಳು ಪರಸ್ಪರರಿಗೆ ಬದ್ದರಾಗಿದ್ದು ಪರಸ್ಪರರ ಲೈಂಗಿಕ ಆದ್ಯತೆಗಳನ್ನು ಪೂರೈಸುವ ಮೂಲಕ ಅನ್ಯೋನ್ಯತೆಯನ್ನು ಸಾಧಿಸುತ್ತಾರೆ. ಲೈಂಗಿಕ ಸಮ್ಮಿಲನದಿಂದ ಪ್ರೀತಿ ಹೆಚ್ಚುತ್ತದೆ ಹಾಗೂ ಪರಸ್ಪರರ ಬಗ್ಗೆ ಗೌರವವೂ ಹೆಚ್ಚುತ್ತದೆ. ಲೈಂಗಿಕ ಮಿಲನದಿಂದ ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯವೂ ಉತ್ತಮಗೊಳ್ಳುತ್ತದೆ ಎಂದು ಈಗಾಗಲೇ ಸಾಬೀತುಗೊಳಿಸಲಾಗಿದೆ.

ನಿಯಮಿತವಾದ ಲೈಂಗಿಕ ಮಿಲನ (ವಾರದಲ್ಲಿ ಸುಮಾರು ಎರಡರಿಂದ ಮೂರು ಬಾರಿ) ನಡೆಸುವ ಮೂಲಕ ಹಲ್ಲುಗಳು ಗಟ್ಟಿಯಾಗುತ್ತವೆ ಎಂದು ಒಂದು ಅಧ್ಯಯನ ತಿಳಿಸುತ್ತದೆ. ಮಿಲನಕ್ರಿಯೆಗೂ ಹಲ್ಲಿನ ಆರೋಗ್ಯಕ್ಕೂ ಏನು ಸಂಬಂಧ? ಜನಸಾಮಾನ್ಯರ ಎಣಿಕೆಗೆ ನಿಲುಕಲಾರದ ಕೆಲವು ಅದ್ಭುತ ವಿಷಯಗಳನ್ನು ಸಂಶೋಧನೆಗಳು ಅನಾವರಣಗೊಳಿಸಿವೆ. ಮಿಲನಕ್ರಿಯೆಯಿಂದ ಕೇವಲ ಮನಸ್ಸಿನ ತೃಪ್ತಿ ಮಾತ್ರವಲ್ಲ, ಹಲವಾರು ಇತರ ಪ್ರಯೋಜನಗಳೂ ಇವೆ ಎಂದು ಹಲವಾರು ಸಂಶೋಧನೆಗಳಿಂದ ಕಂಡುಬಂದಿದೆ. ಈ ಪ್ರಯೋಜನಗಳು ಯಾವುವು? ಬನ್ನಿ ನೋಡೋಣ:

1. ಮಿಲನ ದೇಹವನ್ನು ಆರೋಗ್ಯಕರ ಮತ್ತು ಯೌವ್ವನದಿಂದ ತುಳುಕುವಂತೆ ಮಾಡುತ್ತದೆ

1. ಮಿಲನ ದೇಹವನ್ನು ಆರೋಗ್ಯಕರ ಮತ್ತು ಯೌವ್ವನದಿಂದ ತುಳುಕುವಂತೆ ಮಾಡುತ್ತದೆ

ಲೈಂಗಿಕ ಕ್ರಿಯೆಯ ಸಮಯದಲ್ಲಿ ರಕ್ತ ಪರಿಚಲನೆ ಹೆಚ್ಚುತ್ತದೆ. ತನ್ಮೂಲಕ ದೇಹದ ಎಲ್ಲಾ ಭಾಗಗಳಿಗೆ ಮತ್ತು ವಿಶೇಷವಾಗಿ ತ್ವಚೆಯ ಅಡಿಯ ಭಾಗದಲ್ಲಿ ಹೆಚ್ಚಿನ ರಕ್ತಪರಿಚಲನೆ ಕಾಣಿಸಿಕೊಳ್ಳುತ್ತದೆ. ಲೈಂಗಿಕ ಕ್ರಿಯೆಯ ಬಳಿಕ ತೃಪ್ತವಾಗಿರುವ ಶರೀರ ಕಂಪಗಾಗಿರುವುದಕ್ಕೆ ಇದೇ ಕಾರಣ. ನಿಯಮಿತ ಮಿಲನಕ್ರಿಯೆಯಿಂದ ದೇಹದ ಎಲ್ಲಾ ಭಾಗಗಳಿಗೆ ಉತ್ತಮ ರಕ್ತಪರಿಚಲನೆ ದೊರಕುವ ಮೂಲಕ ಉತ್ತಮ ಆರೋಗ್ಯ ಮತ್ತು ದೇಹ ಸೌಂದರ್ಯ ಲಭಿಸುತ್ತದೆ. ಮಿಲನಕ್ರಿಯೆಯಿಂದ ಚರ್ಮದಲ್ಲಿ ಕೊಲೆಜಿನ್‌ ಅಂಶದ ಉತ್ಪತ್ತಿ ಹೆಚ್ಚುತ್ತದೆ. ಇವು ವೃದ್ದಾಪ್ಯದ ಲಕ್ಷಣಗಳನ್ನು ಅಳಿಸಿ ಚರ್ಮ ಜೋತುಬೀಳುವುದನ್ನು ತಡವಾಗಿಸುತ್ತದೆ. ಅಂದರೆ, ಹಾಸಿಗೆಯಲ್ಲಿ ಹೆಚ್ಚು ನೆರಿಗೆಗಳು ಬಿದ್ದಷ್ಟೂ ಚರ್ಮದಲ್ಲಿ ನೆರಿಗೆ ಬೀಳುವುದು ಕಡಿಮೆಯಾಗುತ್ತದೆ.

2. ಮಿಲನಕ್ರಿಯೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

2. ಮಿಲನಕ್ರಿಯೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ನಮ್ಮ ದೇಹಕ್ಕೆ ಸತತವಾಗಿ ಎರಗುವ ಸೂಕ್ಷ್ಮ ಕ್ರಿಮಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ದೇಹದ ರೋಗ ನಿರೋಧಕ ಶಕ್ತಿ ಸತತವಾಗಿ ಕಾರ್ಯನಿರ್ವಹಿಸುತ್ತಲೇ ಇರಬೇಕು. ಇದರಲ್ಲಿ ವಿಟಮಿನ್ ಸಿ ಮುಖ್ಯ ಪಾತ್ರ ವಹಿಸುತ್ತದೆ. ವಿಟಮಿನ್ ಸಿ ಮತ್ತು ಇತರ ಪ್ರಮುಖ ಪೋಷಕಾಂಶಗಳು ನಮಗೆ ಆಹಾರದ ಮೂಲಕ ಲಭಿಸುತ್ತದೆ. ಆದರೆ ಇದಕ್ಕೂ ಮಿಗಿಲಾಗಿ ಕೆಲವು ಜೀವಿಗಳಿಗೆ ಪ್ರತಿಜೀವಕವಾಗಿರುವ ಇಮ್ಯುನೋಗ್ಲೋಬಿನ್ ಎ ಎಂಬ ಪೋಷಕಾಂಶವನ್ನು ಮಾತ್ರ ದೇಹ ತಾನೇ ಉತ್ಪತ್ತಿ ಮಾಡಿಕೊಳ್ಳಬೇಕಾಗುತ್ತದೆ. ಸಾಮಾನ್ಯ ಆರೋಗ್ಯದಲ್ಲಿ ಸಾಮಾನ್ಯ ಪ್ರಮಾಣದಲ್ಲಿ ಉತ್ಪತ್ತಿಯಾಗುವ ಈ ಪ್ರತಿಜೀವಕ ಲೈಂಗಿಕ ಕ್ರಿಯೆಯ ಬಳಿಕ ಹೆಚ್ಚು ಉತ್ಪತ್ತಿಯಾಗುವುದನ್ನು ಸಂಶೋಧನೆಗಳು ಕಂಡುಹಿಡಿದಿವೆ. ಅಂದರೆ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಿಲನಕ್ರಿಯೆ ನಡೆಸುವ ದಂಪತಿಗಳಲ್ಲಿ ಈ ಅಂಶದ ಮಟ್ಟ ಉತ್ತಮವಾಗಿರುತ್ತದೆ. ಹಾಗಾಗಿ ರೋಗ ನಿರೋಧಕ ಶಕ್ತಿ ಉತ್ತಮವಾಗಿರಬೇಕೆಂದರೆ ರಜಾದಿನಗಳನ್ನು 'ಲೈಂಗಿಕ ದಿನ'ಗಳನ್ನಾಗಿ ಬಳಸಿಕೊಳ್ಳುವುದರಲ್ಲಿಯೇ ಜಾಣತನವಿದೆ.

3. ಲೈಂಗಿಕ ಕ್ರೀಡೆ ಕೂದಲ ಹೊಳಪನ್ನು ಹೆಚ್ಚಿಸುತ್ತದೆ

3. ಲೈಂಗಿಕ ಕ್ರೀಡೆ ಕೂದಲ ಹೊಳಪನ್ನು ಹೆಚ್ಚಿಸುತ್ತದೆ

ಕೂದಲ ಹೊಳಪು, ಉದ್ದ, ದೃಢತೆ ಮೊದಲಾದವುಗಳನ್ನು ರಸದೂತಗಳು ನಿರ್ಣಯಿಸುತ್ತವೆ. ಕೆಲವು ಅಧ್ಯಯನಗಳ ಮೂಲಕ ಲೈಂಗಿಕವಾಗಿ ತೃಪ್ತವಾಗಿರುವ ದೇಹದ ಕೂದಲುಗಳು ಆರೋಗ್ಯಕರ, ಸೊಂಪು ಮತ್ತು ಕಾಂತಿಯುಕ್ತವಾಗಿರುತ್ತವೆ. ಇದಕ್ಕೆ ರಸದೂತಗಳು ಉತ್ತಮ ಮಟ್ಟದಲ್ಲಿ ಸ್ರವಿಸುರುವುದೇ ಕಾರಣವಾಗಿದ್ದು ಅಗತ್ಯ ಪೋಷಕಾಂಶಗಳನ್ನು ಪಡೆಯಲು ಮತ್ತು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಲೈಂಗಿಕವಾಗಿ ಸಕ್ರಿಯ ದಂಪತಿಗಳ ಸೊಂಪಾದ ಕೂದಲ ರಹಸ್ಯವೇ ಇದು.

4. ಹೆಚ್ಚಿನ ಲೈಂಗಿಕ ಕ್ರಿಯೆಯಿಂದ ಪುರುಷರ ವೀರ್ಯಾಣು ಹೆಚ್ಚು ಆರೋಗ್ಯಕರವಾಗುತ್ತವೆ

4. ಹೆಚ್ಚಿನ ಲೈಂಗಿಕ ಕ್ರಿಯೆಯಿಂದ ಪುರುಷರ ವೀರ್ಯಾಣು ಹೆಚ್ಚು ಆರೋಗ್ಯಕರವಾಗುತ್ತವೆ

ಈ ನಿಸರ್ಗದ ವಿಚಿತ್ರಕ್ಕೇನೆನ್ನೋಣ? ಒಂದು ಅಂಡಾಣು ಫಲಗೊಳ್ಳಲು ಕೇವಲ ಒಂದೇ ಒಂದು ವೀರ್ಯಾಣುವಿನ ಅಗತ್ಯವಿದ್ದರೂ ಪುರುಷರ ವೃಷಣಗಳಲ್ಲಿ ನಿತ್ಯವೂ ಮಿಲಿಯಾಂತರ ವೀರ್ಯಾಣುಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಈ ಕ್ರಿಯೆಗೆ ದೇಹಕ್ಕಿಂದ ಕೊಂಚ ಕಡಿಮೆ ತಾಪಮಾನದ ಅಗತ್ಯವಿರುವ ಕಾರಣ ಇವು ದೇಹದಿಂದ ಹೊರಗೆ ಚರ್ಮದ ಚೀಲದಲ್ಲಿರುತ್ತವೆ. ಉತ್ಪತ್ತಿಯಾದ ವೀರ್ಯಾಣುಗಳು ಮಿಲನಕ್ರಿಯೆಯಿಂದ ಸ್ಖಲಿಸದೇ ಹೋದರೆ ವೀರ್ಯಾಣುವಿನ ಚೀಲ ತುಂಬಿ ಮೂತ್ರದ ಮೂಲಕ ಹಾಗೇ ಹೊರಹೋಗುತ್ತದೆ. ಅಂದರೆ ವೀರ್ಯಾಣುಗಳ ಚೀಲ ಸದಾ ತುಂಬಿಯೇ ಇದ್ದು ಆರೋಗ್ಯಕರ ವೀರ್ಯಾಣುಗಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ನಿಯಮಿತ ಮಿಲನಕ್ರಿಯೆಯಿಂದ ಈ ಚೀಲ ಆಗಾಗ ಬರಿದಾಗುವುದರಿಂದ ಮುಂದೆ ಹುಟ್ಟುವ ವೀರ್ಯಾಣುಗಳು ಹೆಚ್ಚು ಆರೋಗ್ಯಕರವಾಗಿರುತ್ತವೆ. ವೀರ್ಯಾಣುಗಳು ಆರೋಗ್ಯಕರವಾಗಿದ್ದಷ್ಟೂ ಫಲವತ್ತತೆ ಹೆಚ್ಚುವ, ಆರೋಗ್ಯಕರ ಸಂತಾನ ಮತ್ತು ಸುಖಕರ ಹೆರಿಗೆಯಾಗಲು ನೆರವಾಗುತ್ತದೆ. ವೀರ್ಯಾಣುಗಳ ಧಾವಿಸುವಿಕೆಯಿಂದ ಮಹಿಳೆಯರಲ್ಲಿ ಖಿನ್ನತೆ ಇಲ್ಲವಾಗುವುದು, ಶಕ್ತಿಯಲ್ಲಿ ಹೆಚ್ಚಳ ಹಾಗೂ ಧನ್ಯತೆಯ ಭಾವನೆ ಹೆಚ್ಚುವುದನ್ನೂ ಸಂಶೋಧನೆಗಳು ಸಾಬೀತುಗೊಳಿಸಿವೆ.

5. ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ

5. ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ

ಈ ಜಗತ್ತಿನಲ್ಲಿ ಮಾನಸಿಕ ಒತ್ತಡ ಇಲ್ಲದ ವ್ಯಕ್ತಿಗಳೇ ಇಲ್ಲ ಎನ್ನಬಹುದು. ಕೆಲವರಿಗೆ ಹೆಚ್ಚಿದ್ದರೆ ಕೆಲವರಿಗೆ ಕಡಿಮೆ. ಈ ಒತ್ತಡವನ್ನು ಶಾಂತ ಮನಸ್ಸಿನಿಂದ ಎದುರಿಸಿ ಕ್ರಮ ಕೈಗೊಂಡರೆ ಈ ಒತ್ತಡವೂ ತಾನಾಗಿಯೇ ಇಲ್ಲವಾಗುತ್ತದೆ. ಮಾನಸಿಕ ಒತ್ತಡವನ್ನು ನಿವಾರಿಸಲು ಒಂಟಿಜೀವಿಗಳಿಗೆ ಕೆಲವಾರು ವಿಧಾನಗಳಿವೆ. ಮುಂಜಾನೆಯ ಧ್ಯಾನ, ಯೋಗಾಭ್ಯಾಸ, ಸಂಗೀತ ಮೊದಲಾದವು. ಆದರೆ ದಂಪತಿಗಳಿಗೆ ಇದಕ್ಕಿಂತಲೂ ಉತ್ತಮವಾದ ಮಾರ್ಗವಿದೆ. ಮಿಲನಕ್ರಿಯೆಯಲ್ಲಿ ಮೆದುಳಿಗೆ ಹರಿಯುವ ರಕ್ತಪರಿಚಲನೆ ಮತ್ತು ರಸದೂತಗಳು ಮನಸ್ಸಿನ ದುಗುಡವನ್ನು ಇಲ್ಲವಾಗಿಸಿ ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ. ಅಲ್ಲದೇ ರಕ್ತದ ಒತ್ತಡವೂ ಉತ್ತಮ ಮಟ್ಟದಲ್ಲಿ ಇರಲು ಸಾಧ್ಯವಾಗುತ್ತದೆ.

6. ಉಗುರುಗಳು ದೃಢವಾಗುತ್ತದೆ

6. ಉಗುರುಗಳು ದೃಢವಾಗುತ್ತದೆ

ಉಗುರುಗಳ ಬೆಳವಣಿಗೆಗೂ ರಸದೂತಗಳು ಅಗತ್ಯವಾಗಿವೆ. ಮಿಲನಕ್ರಿಯೆಯಲ್ಲಿ ಬಿಡುಗಡೆಯಾಗುವ ರಸದೂತಗಳು ಚರ್ಮದ ಕಾಂತಿಯನ್ನು ಹೆಚ್ಚಿಸುವಂತೆಯೇ ಉಗುರುಗಳ ಕಾಂತಿ ಮತ್ತು ದೃಢತೆಯನ್ನೂ ಹೆಚ್ಚಿಸುವ ಮೂಲಕ ಉಗುರುಗಳ ಆರೋಗ್ಯವನ್ನು ಉತ್ತಮಗೊಳುಸುತ್ತವೆ. ತನ್ಮೂಲಕ ಉಗುರುಗಳು ಬಣ್ಣಗೆಡುವುದು, ಸೀಳುವುದು, ಪರೆ ಏಳುವುದು, ಸುಲಭವಾಗಿ ತುಂಡಾಗುವುದು ಮೊದಲಾದ ಅಪಾಯಗಳಿಂದ ರಕ್ಷಣೆ ಪಡೆಯುತ್ತವೆ.

7. ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ

7. ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ

ಸಾವುಗಳಿಗೆ ಪ್ರಮುಖ ಕಾರಣ ಹೃದಯಾಘಾತ. ಹೃದಯದ ಪ್ರಮುಖ ನಾಳಗಳಲ್ಲಿ ತಡೆಯುಂಟಾಗಿ ರಕ್ತದ ಹರಿವು ನಿಂತರೆ ಸಾವು ಖಚಿತ. ಹೀಗಾಗಬಾರದೆಂದರೆ ಹೃದಯ ಸತತವಾಗಿ ಆರೋಗ್ಯಕರ ಮಟ್ಟಗಳಲ್ಲಿ ಮಿಡಿಯುತ್ತಿರಬೇಕು. ಅಂದರೆ ಕೆಲವೊಮ್ಮೆ ಹೆಚ್ಚು ವೇಗದಿಂದ ಮಿಡಿಯಬೇಕು. ಕ್ರೀಡೆಯಿಂದ ಮತ್ತು ವ್ಯಾಯಾಮದಿಂದ ಇದು ಸಾಧ್ಯವಾಗುತ್ತದಾದರೂ ಇವುಗಳ ಅಗತ್ಯತೆ ಸಾಮಾನ್ಯವಾಗಿ ಸ್ನಾಯುಗಳಿಗೆ ಮಾತ್ರವೇ ಮೀಸಲಾಗುತ್ತದೆ. ಆದರೆ ಲೈಂಗಿಕ ಕ್ರಿಯೆಯ ಸಮಯದಲ್ಲಿ ಏರುವ ಹೃದಯದ ಮಿಡಿತದಿಂದ ದೇಹದ ಪ್ರತಿ ಅಂಗಕ್ಕೂ ರಕ್ತವನ್ನು ಹೆಚ್ಚಾಗಿ ಒದಗಿಸುವ ಮೂಲಕ ದೇಹದ ಆರೋಗ್ಯ ವೃದ್ಧಿಸುತ್ತದೆ ಹಾಗೂ ವಿಶೇಷವಾಗಿ ಹೃದಯದ ಆರೋಗ್ಯವೂ ಉತ್ತಮಗೊಳ್ಳುತ್ತದೆ.

8. ಮೊಡವೆಗಳು ಇಲ್ಲವಾಗುತ್ತವೆ

8. ಮೊಡವೆಗಳು ಇಲ್ಲವಾಗುತ್ತವೆ

ಮೊಡವೆಗಳಿಗೂ ರಸದೂತಗಳಿಗೂ ನಿಕಟ ಸಂಬಂಧವಿದೆ. ನಿಯಮಿತ ಲೈಂಗಿಕ ಕ್ರೀಡೆಯಿಂದ ರಸದೂತಗಳ ಮಟ್ಟ ಸಮತೋಲನದಲ್ಲಿರುವ ಮೂಲಕ ಮೊಡವೆಗಳು ಮೂಡಲು ಅಗತ್ಯವಾದ ಪ್ರಚೋದನೆ ದೊರಕದೇ ಹೋಗುತ್ತದೆ. ತನ್ಮೂಲಕ ಲೈಂಗಿಕ ತೃಪ್ತ ದಂಪತಿಗಳ ತ್ವಚೆಯಲ್ಲಿ ಮೊಡವೆಗಳು ಅಪರೂಪವಾಗುತ್ತದೆ.

9. ತ್ವಚೆಗೆ ಅಗತ್ಯವಾದ ಆರ್ದ್ರತೆ ಒದಗಿಸುತ್ತದೆ

9. ತ್ವಚೆಗೆ ಅಗತ್ಯವಾದ ಆರ್ದ್ರತೆ ಒದಗಿಸುತ್ತದೆ

ಲೈಂಗಿಕ ಕ್ರಿಯೆಯ ಸಮಯದಲ್ಲಿ ರಕ್ತಪರಿಚಲನೆ ಹೆಚ್ಚುವುದರಿಂದ ತ್ವಚೆಗೆ ಲಭಿಸುವ ಆರ್ದ್ರತೆಯ ಅಂಶವೂ ಹೆಚ್ಚುತ್ತದೆ. ಈ ಮೂಲಕ ತ್ವಚೆ ಒಣಗದಂತೆ ತಡೆಯುತ್ತದೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ದೇಹದಿಂದ ಧಾರಾಕಾರವಾಗಿ ಹರಿಯುವ ಬೆವರು ತ್ವಚೆಯ ಕಲ್ಮಶಗಳನ್ನು ತೊಡೆಯುವ ಮೂಲಕ ಚರ್ಮದ ಅಡಿಭಾಗವನ್ನು ಸ್ವಚ್ಛಗೊಳಿಸಿ ಆರೋಗ್ಯಕರವಾಗಿಸುತ್ತದೆ.

10. ನೈಸರ್ಗಿಕ ನೋವು ನಿವಾರಕ

10. ನೈಸರ್ಗಿಕ ನೋವು ನಿವಾರಕ

ಮೆದುಳಿನ ಕಾರ್ಯನಿರ್ವಹಣೆಗೆ ಕೆಲವಾರು ರಸದೂತಗಳು ಕಾರಣವಾಗಿದ್ದು ಇದರಲ್ಲಿ ಮಾನಸಿಕ ನಿರಾಳತೆಗೆ ಆಕ್ಸಿಟೋಸಿನ್ ಎಂಬ ರಸದೂತ ಮುಖ್ಯವಾಗಿ ಕಾರಣವಾಗಿದೆ. ಈ ರಸದೂತ ಮೆದುಳಿನಲ್ಲಿ ಸ್ರವಿಸಿದಾಗ ಎಂಡಾರ್ಫಿನ್ ಎಂಬ ಕಣಗಳು ಬಿಡುಗಡೆ ಪಡೆಯುತ್ತವೆ ಹಾಗೂ ಇವು ನೋವನ್ನು ಇಲ್ಲವಾಗಿಸುತ್ತವೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ಈ ಆಕ್ಸಿಟೋಸಿನ್ ಉತ್ತಮ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಇದು ತಲೆನೋವು ಮತ್ತು ಇತರ ದೇಹದ ನೋವುಗಳನ್ನು ಶೀಘ್ರವೇ ಇಲ್ಲವಾಗಿಸುತ್ತದೆ. ಅಷ್ಟೇ ಅಲ್ಲ, ಮಧುಮೇಹಿಗಳ ಗಾಯಗಳು ಶೀಘ್ರವಾಗಿ ಒಣಗದಿದ್ದರೆ ಈ ರಸದೂತ ಶೀಘ್ರವಾಗಿ ಒಣಗುವಂತೆ ಮಾಡುತ್ತದೆ. ಮುಂದಿನ ಬಾರಿ ತಲೆನೋವು ಬಂದಾಗ ಸಂಗಾತಿಯಿಂದ ಏನು ಪಡೆಯಬೇಕು ಎಂದು ಈಗ ನಿಮಗೆ ಗೊತ್ತು.

11. ತೂಕ ಇಳಿಕೆಗೆ ನೆರವಾಗುತ್ತದೆ

11. ತೂಕ ಇಳಿಕೆಗೆ ನೆರವಾಗುತ್ತದೆ

ತೂಕ ಇಳಿಕೆಗೆ ಇಷ್ಟ ಆದರೆ ವ್ಯಾಯಾಮ ಕಷ್ಟ ಎಂಬ ಮನಃಸ್ಥಿತಿ ಇದ್ದರೆ ಇದು ಕೇವಲ ನಿಮ್ಮದು ಮಾತ್ರವಲ್ಲ, ಜಗತ್ತಿನ ಹೆಚ್ಚಿನ ಸ್ಥೂಲದೇಹಿಗಳದ್ದೂ ಹೌದು. ಲೈಂಗಿಕ ಕ್ರಿಯೆ ಉತ್ತಮ ವ್ಯಾಯಾಮವೂ ಹೌದು. ಸುಮಾರು ಒಂದು ಘಂಟೆಯ ಸಕ್ರಿಯ ಲೈಂಗಿಕ ಕ್ರೀಡೆಯಿಂದ ಸುಮಾರು ನೂರಾ ಎಪ್ಪತ್ತು ಕ್ಯಾಲೋರಿಗಳು ದಹಿಸಲ್ಪಡುತ್ತವೆ ಎಂದು ಅಧ್ಯಯನಗಳು ತಿಳಿಸಿವೆ. ಇಷ್ಟೇ ಕ್ಯಾಲೋರಿಗಳನ್ನು ದಹಿಸಲು ಸುಮಾರು ಮುಕ್ಕಾಲು ಘಂಟೆ ಸತತ ನರ್ತನ ಮಾಡಬೇಕಾಗುತ್ತದೆ. ನರ್ತನ ಬರುವವರಿಗೇನೋ ಸರಿ, ಇತರರಿಗೆ ಇದೇ ಅತ್ಯಂತ ಇಷ್ಟವಾಗುವ ವ್ಯಾಯಾಮವಾಗಿದೆ.

12. ಕ್ಯಾನ್ಸರ್ ಆವರಿಸುವ ಸಾಧ್ಯತೆ ತಗ್ಗಿಸುತ್ತದೆ

12. ಕ್ಯಾನ್ಸರ್ ಆವರಿಸುವ ಸಾಧ್ಯತೆ ತಗ್ಗಿಸುತ್ತದೆ

ವೀರ್ಯಾಣುಗಳು ವೃಷಣದಲ್ಲಿ ಉತ್ಪತ್ತಿಯಾದರೂ ಇದನ್ನು ಸ್ಖಲಿಸಲು ಪ್ರಾಸ್ಟೇಟ್ ಗ್ರಂಥಿ ಅಗತ್ಯವಾಗಿದೆ. ಈ ಗ್ರಂಥಿಗೆ ಕೆಲಸ ಕೊಡದೇ ಇದ್ದರೆ ಇದು ಶಿಥಿಲಗೊಳ್ಳುತ್ತಾ ಕ್ಯಾನ್ಸರ್ ಗೆ ಸುಲಭವಾಗಿ ತುತ್ತಾಗುವ ಸಾಧ್ಯತೆ ಇದೆ. ವಾರದಲ್ಲಿ ಸುಮಾರು ಐದು ಬಾರಿ ಸ್ಖಲಿಸುವ ಪುರುಷರಲ್ಲಿ ತಿಂಗಳಿಗೆ ಇಪ್ಪತ್ತೊಂದು ಬಾರಿ ಸ್ಖಲಿಸುವ ಪುರುಷರಿಗಿಂತಲೂ ಕ್ಯಾನ್ಸರ್ ಆವರಿಸುವ ಸಾಧ್ಯತೆ ಮೂರನೆಯ ಒಂದರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ.

13. ದಂತಕುಳಿಗಳಿಂದ ರಕ್ಷಿಸುತ್ತದೆ

13. ದಂತಕುಳಿಗಳಿಂದ ರಕ್ಷಿಸುತ್ತದೆ

ಗೋಕುಲಾಷ್ಟಮಿಗೂ ಇಮಾಂಸಾಬಿಗೂ ಏನು ಸಂಬಂಧ ಎಂಬ ಕನ್ನಡದ ಗಾದೆ ಇಲ್ಲಿ ಅತಿ ಸೂಕ್ತವಾಗಿ ಅನ್ವಯಿಸುತ್ತದೆ. ದಂತಕುಳಿಗೂ ಮಿಲನಕ್ರಿಯೆಗೂ ಏನು ಸಂಬಂಧ? ವಾಸ್ತವವಾಗಿ ಇದು ನೇರವಾಗಿ ಸಂಬಂಧಿಸಿಲ್ಲದಿದ್ದರೂ ಪರೋಕ್ಷವಾಗಿ ಸಂಬಂಧ ಹೊಂದಿದೆ. ವೀರ್ಯಾಣುಗಳನ್ನು ಉತ್ಪತ್ತಿ ಮಾಡುವಾಗ ದೇಹ ಹೆಚ್ಚಿನ ಪ್ರಮಾಣದಲ್ಲಿ ಸತು, ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳನ್ನು ಬಳಸಿಕೊಳ್ಳಬೇಕು. ಇವೆಲ್ಲವೂ ದಂತಗಳಿಗೆ ಅಗತ್ಯವಾದ ಪೋಷಕಾಂಶಗಳೇ ಹೌದು. ಹೆಚ್ಚು ಹೆಚ್ಚು ವೀರ್ಯಾಣುಗಳನ್ನು ಉತ್ಪಾದಿಸಲು ದೇಹ ಈ ಅಂಶಗಳನ್ನು ಹೆಚ್ಚು ಹೆಚ್ಚಾಗಿ ಹೀರಿಕೊಳ್ಳಬೇಕಾಗುತ್ತದೆ. ಆದರೆ ಅಷ್ಟೂ ಪ್ರಮಾಣವನ್ನು ಕೇವಲ ವೀರ್ಯಾಣುಗಳಿಗಾಗಿಯೇ ಬಳಸಿಕೊಳ್ಳದೇ ಮೂಳೆ ಮತ್ತು ಹಲ್ಲುಗಳಿಗೂ ಬಳಸಿಕೊಳ್ಳುತ್ತದೆ. ಆ ಪ್ರಕಾರ ಹೆಚ್ಚಿನ ಮಿಲನಕ್ರಿಯೆ ಅಂದರೆ ಹೆಚ್ಚಿನ ವೀರ್ಯಾಣುಗಳ ಉತ್ಪಾದನೆ, ತನ್ಮೂಲಕ ಹಲ್ಲುಗಳಿಗೆ ಹೆಚ್ಚಿನ ಕ್ಯಾಲ್ಸಿಯಂ ಪೂರೈಕೆ.

14. ಸುಖನಿದ್ದೆಗೆ ನೆರವು

14. ಸುಖನಿದ್ದೆಗೆ ನೆರವು

ಸಾಮಾನ್ಯವಾಗಿ ಸ್ಖಲನದ ಬಳಿಕ ಪುರುಷರು ನಿದ್ದೆಗೆ ಜಾರುವುದರ ಹಿಂದಿನ ರಹಸ್ಯ ಗೊತ್ತೇ? ಮಿಲನದ ಬಳಿಕವೂ ಆಪ್ತ ಬೆಸುಗೆಯನ್ನು ಮಹಿಳೆಯರು ಬಯಸಿದರೆ ಪುರುಷರು ಈ ಬಗ್ಗೆ ಹೆಚ್ಚಿನ ಒಲವು ತೋರದೇ ಇರಲು ಇವರ ಮೆದುಳಿನಲ್ಲಿ ಸ್ರವಿಸಿರುವ ಆಕ್ಸಿಟೋಸಿನ್ ಎಂಬ ರಸದೂತವೇ ಕಾರಣ. ಇದು ಕಾಮಪರಾಕಾಷ್ಠೆಯ ಸಮಯದಲ್ಲಿ ಮೆದುಳಿಗೆ ಬಿಡುಗಡೆಯಾಗುವ ರಸದೂತವಾಗಿದ್ದು ಮೆದುಳಿಗೆ ಹೆಚ್ಚಿನ ಆರಾಮ ಮತ್ತು ನಿದ್ದೆಯನ್ನು ಪ್ರಚೋದಿಸುತ್ತದೆ. ಹಾಗಾಗಿ ಇನ್ನು ಮುಂದೆ ನಿದ್ದೆ ಬರದೇ ಇದ್ದರೆ ನಿದ್ದೆ ಗುಳಿಗೆ ಸೇವಿಸುವ ಬದಲು ಏನು ಮಾಡಬೇಕು ಎಂದು ಈಗ ನಿಮಗೆ ಗೊತ್ತಿದೆ.

15. ಪ್ರೀತಿಯ ಉಳಿವಿಗೆ ಮಿಲನಕ್ರಿಯೆ ನೆರವು

15. ಪ್ರೀತಿಯ ಉಳಿವಿಗೆ ಮಿಲನಕ್ರಿಯೆ ನೆರವು

ಕಾಮವೆನ್ನುವುದು ಪ್ರತಿಯೊಬ್ಬರ ವೈಯಕ್ತಿಕ ಅಗತ್ಯವಾಗಿದ್ದು ಇದನ್ನು ಪೂರೈಸಿಕೊಳ್ಳಲು ಪ್ರೀತಿಗಿಂತ ಮಿಗಿಲಾದ ಮಾರ್ಗ ಇನ್ನೊಂದಿಲ್ಲ. ಕಾಮಕ್ರಿಯೆಯಲ್ಲಿ ಬಿಡುಗಡೆಯಾಗುವ ಆಕ್ಸಿಟೋಸಿನ್ ಅನ್ನು ತಜ್ಞರು 'ಪ್ರೀತಿಯ ರಸದೂತ" ಎಂದೂ ಕರೆಯುತ್ತಾರೆ. ಏಕೆಂದರೆ, ಸಂಗಾತಿಗಳು ಹೆಚ್ಚು ಹೆಚ್ಚು ಕಾಮಕ್ರಿಯೆಯಲ್ಲಿ ಒಳಗೊಂಡಷ್ಟೂ ಇವರ ಮೆದುಳುಗಳಲ್ಲಿ ಹೆಚ್ಚು ಹೆಚ್ಚು ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ ಹಾಗೂ ಪರಸ್ಪರರತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಾರೆ. ಪರಸ್ಪರರಿಗೆ ನೀಡುವ ಗೌರವ ಮತ್ತು ಅನ್ಯೋನ್ಯತೆ ಹೆಚ್ಚುತ್ತದೆ. ಯಾವಾಗ ವ್ಯಕ್ತಿಯೊಬ್ಬರಲ್ಲಿ ಗೌರವ ಮೂಡುತ್ತದೆಯೋ ಆಗ ಆ ವ್ಯಕ್ತಿಯ ಬಗ್ಗೆ ಸದ್ಭಾವನೆಗಳು ಹೆಚ್ಚುತ್ತವೆ ಹಾಗೂ ಜೀವನ ಹೆಚ್ಚು ಹೆಚ್ಚು ಸುಖಕರವಾಗುತ್ತದೆ.

16. ಕಾಮಕ್ರೀಡೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ

16. ಕಾಮಕ್ರೀಡೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ

ಕಾಮಕ್ರಿಯಯ ಮೂಲಕ ಪರಸ್ಪರರು ತಮ್ಮ ಸಂಗಾತಿಯ ಲೈಂಗಿಕ ಅಪೇಕ್ಷೆಯನ್ನು ನೆರವೇರಿಸಿದ ತೃಪ್ತಿ ಪಡೆಯುವ ಜೊತೆಗೇ ಈ ಅವಶ್ಯಕತೆಯನ್ನು ಪೂರೈಸಲು ತಮ್ಮಿಂದ ಸಾಧ್ಯವಾಗಿದೆ ಎಂಬ ಭಾವನೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅಲ್ಲದೇ ಇನ್ನೂ ಉತ್ತಮವಾಗಿ ನಿರ್ವಹಿಸಲು ಸಂಗಾತಿಯಿಂದ ದೊರಕುವ ಪ್ರೇರಣೆ ಮತ್ತು ಬೆಂಬಲ ಈ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುತ್ತವೆ. ದಾಂಪತ್ಯದಲ್ಲಿ ಮಿಲನಕ್ರಿಯೆ ಊಟದಲ್ಲಿರುವ ಉಪ್ಪಿನಕಾಯಿಯಷ್ಟೇ ಇದ್ದರೂ ಸರಿ, ಇದು ದಾಂಪತ್ಯದ ಸಾರವನ್ನು ಅತ್ಯಂತ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ.

English summary

Biggest Health And Beauty Benefits Of Having Sex

That's right. Sure, sex feels good and deepens those lovey feelings, but it is proven that sex is good for you physically. An active sex regimen, (2-3 times per week), has fascinating and evidenced-based benefits. So if sex hasn't been a priority in your life, you MIGHT want to put it at the top of your "to do" list because your sexcapades could actually save your life (and strengthen your teeth). Behold, the health and beauty benefits we reap from having sex:
Story first published: Saturday, February 1, 2020, 14:42 [IST]
X
Desktop Bottom Promotion