For Quick Alerts
ALLOW NOTIFICATIONS  
For Daily Alerts

ಹಲ್ಲುಗಳ ಆರೋಗ್ಯಕ್ಕೆ ಯಾವ ಆಹಾರ ಒಳ್ಳೆಯದು, ಯಾವುದು ಕೆಟ್ಟದ್ದು?

|

ಪ್ರತಿಯೊಬ್ಬರಿಗೂ ಬಾಯಿಯ ಸ್ವಚ್ಛತೆ ಕಾಯ್ದುಕೊಳ್ಳುವುದರ ಜೊತೆಗೆ ನಮ್ಮ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಇದಕ್ಕಾಗಿ ಸಾಧ್ಯವಾದಷ್ಟು ನೈಸರ್ಗಿಕ ವಿಧಾನಗಳಲ್ಲಿ ನಮ್ಮ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳುವ ಬಗ್ಗೆ ನಾವು ಆಲೋಚನೆ ಮಾಡಬೇಕು. ಇದರಿಂದ ನಮ್ಮ ಹಲ್ಲುಗಳು ದೀರ್ಘಕಾಲದವರೆಗೂ ಗಟ್ಟಿಯಾಗಿರುತ್ತವೆ. ಇದಕ್ಕೆ ಸಂಬಂಧ ಪಟ್ಟಂತೆ ಯಾವೆಲ್ಲ ಆಹಾರಗಳನ್ನು ಸೇವನೆ ಮಾಡಬೇಕು ಮತ್ತು ಬೇರೆ ಯಾವ ಆಹಾರಗಳಿಗೆ ಗುಡ್ ಬೈ ಹೇಳಬೇಕು ಎಂಬುದರ ಬಗ್ಗೆ ಇಲ್ಲಿ ಹೇಳಲಾಗಿದೆ.

ದೀರ್ಘಕಾಲ ಆರೋಗ್ಯಕರವಾದ ಹಲ್ಲುಗಳನ್ನು ಹೊಂದಲು ಈ ಆಹಾರಗಳನ್ನು ಸೇವಿಸಿ:

ಹಸಿ ಟೊಮೇಟೊ ಮತ್ತು ಸೌತೆಕಾಯಿ:

ಹಸಿ ಟೊಮೇಟೊ ಮತ್ತು ಸೌತೆಕಾಯಿ:

​ದಂತ ವೈದ್ಯರು ಹೇಳುವ ಪ್ರಕಾರ ಸೌತೆಕಾಯಿ ಮತ್ತು ಟೊಮೇಟೊ ಹಣ್ಣುಗಳನ್ನು ಹಸಿಯಾಗಿ ತಿನ್ನುವುದರಿಂದ ಹಲ್ಲುಗಳು ಹಾಗೂ ವಸಡುಗಳು ದೀರ್ಘ ಕಾಲ ಆರೋಗ್ಯಕರವಾಗಿ ಮತ್ತು ಭದ್ರವಾಗಿ ಇರುವಂತೆ ಅನುಕೂಲವಾಗುವ ನಾರಿನ ಅಂಶ ನೈಸರ್ಗಿಕ ರೂಪದಲ್ಲಿ ಸಿಗುವುದ. ಯಾವ ಆಹಾರಗಳಲ್ಲಿ ನಾರಿನಂಶ ಹೆಚ್ಚಾಗಿ ಸಿಗಲಿದೆ ಅಂತಹ ಆಹಾರ ಪದಾರ್ಥಗಳು ಹಲ್ಲುಗಳನ್ನು ಸ್ವಚ್ಛ ಮಾಡುವುದು ಮಾತ್ರವಲ್ಲದೆ ಹಲ್ಲು ಹುಳ ಹಿಡಿಯುವ ಸಮಸ್ಯೆಯನ್ನು ದೂರಮಾಡುತ್ತದೆ. ಇದರ ಜೊತೆಗೆ ಹಸಿ ತರಕಾರಿಗಳು ಹಲ್ಲುಗಳ ಆಯಸ್ಸನ್ನು ಹೆಚ್ಚು ಮಾಡುತ್ತವೆ ಎಂದು ಹೇಳುತ್ತಾರೆ.

ಹಣ್ಣುಗಳು ಸೇವನೆ:

ಹಣ್ಣುಗಳು ಸೇವನೆ:

ಹಣ್ಣುಗಳನ್ನು ಜಗಿದು ತಿನ್ನುವುದರಿಂದ ಅದರಲ್ಲಿರುವ ಅಗತ್ಯವಾದ ವಿಟಮಿನ್ ಅಂಶಗಳು ಮತ್ತು ಪೌಷ್ಟಿಕ ಸತ್ವಗಳು ನೇರವಾಗಿ ಹಲ್ಲು ಹಾಗೂ ವಸಡುಗಳ ಜಾಗಕ್ಕೆ ತಲುಪುತ್ತವೆ. ಇದರ ಜೊತೆಗೆ ಊಟ ಆದ ಮೇಲೆ ಹಣ್ಣುಗಳನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳುವುದರಿಂದ ನೀವು ಆಹಾರ ಸೇವನೆ ಮಾಡಿದ ನಂತರ ಹಲ್ಲುಗಳ ಸಂದುಗಳಲ್ಲಿ ಉಳಿದುಕೊಳ್ಳುವ ಆಹಾರದ ಪಳೆಯುಳಿಕೆಗಳನ್ನು ತೆಗೆದು ಹಾಕಲು ಅನುಕೂಲವಾಗುತ್ತದೆ. ಇದರಿಂದ ಹೆಚ್ಚು ಕಾಲ ನಿಮ್ಮ ಹಲ್ಲುಗಳು ಬಾಳಿಕೆ ಬರುತ್ತವೆ.

ಡೈರಿ ಉತ್ಪನ್ನಗಳು:

ಡೈರಿ ಉತ್ಪನ್ನಗಳು:

ನಾವು ಆಹಾರ ಸೇವಿಸುವಾಗ ದೇಹದ ಮೂಳೆಗಳು ಹಾಗೂ ಹಲ್ಲುಗಳ ಸದೃಢತೆಗೆ ಅಗತ್ಯವಾದ ಕ್ಯಾಲ್ಸಿಯಂ ಇರುವ ಆಹಾರವನ್ನೂ ಸೇವಿಸಬೇಕು. ಹಲ್ಲುಗಳ ಎನಾಮೆಲ್ ಭಾಗದ ರಕ್ಷಣೆಗೆ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುವ ಆಹಾರಗಳ ಅಗತ್ಯತೆ ಅತ್ಯಂತ ಅವಶ್ಯಕವಾಗಿರುತ್ತದೆ. ಹಾಗಾಗಿ ಡೈರಿ ಪದಾರ್ಥಗಳು ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಸೇರಿದರೆ ಅಚ್ಚುಕಟ್ಟಾದ ಮತ್ತು ಸದೃಢವಾದ ಹಲ್ಲುಗಳನ್ನು ದೀರ್ಘಕಾಲ ಹೊಂದಬಹುದು.

​ಸೋಂಪು ಕಾಳುಗಳು:

​ಸೋಂಪು ಕಾಳುಗಳು:

ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿ ನಿಭಾಯಿಸುವ ಶಕ್ತಿ ಜೀರಿಗೆ ಹಾಗೂ ಸೋಂಪು ಕಾಳುಗಳಿಗಿದೆ. ಇದರ ಜೊತೆಗೆ ಹಲ್ಲುಗಳ ಸ್ವಚ್ಛತೆಯಲ್ಲಿ ಸಹ ಇವುಗಳು ಕೆಲಸ ಮಾಡುತ್ತವೆ. ನಾವು ಸೇವಿಸುವ ಆಹಾರದಲ್ಲಿ ಕಂಡು ಬರುವ ಕಾರ್ಬೋಹೈಡ್ರೇಟ್ ಅಂಶಗಳು ಹಲ್ಲುಗಳ ಸಂದುಗಳಲ್ಲಿ ಉಳಿದುಕೊಂಡರೆ ಅದರಿಂದ ಮುಂಬರುವ ದಿನಗಳಲ್ಲಿ ವಸಡುಗಳಿಗೆ ತೊಂದರೆ ಉಂಟಾಗುವುದು. ಹಲ್ಲುಗಳ ಹುಳುಕು ಕೂಡ ಕೆಲವೊಮ್ಮೆ ಇದೇ ಕಾರಣದಿಂದ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಊಟ ಆದಮೇಲೆ ಅರ್ಧ ಟೀ ಚಮಚ ಸೋಂಪು ಕಾಳುಗಳನ್ನು ಬಾಯಿಯಲ್ಲಿ ಹಾಕಿಕೊಂಡು ಜಿಗಿಯುವ ಅಭ್ಯಾಸ ಮಾಡಿಕೊಳ್ಳಿ.

ನಾಲಗೆ ಬೇಕೆಂದರೂ ಹಲ್ಲುಗಳಿಗೆ ಬೇಡವಾದ ಆಹಾರಗಳು:

ನಾಲಗೆ ಬೇಕೆಂದರೂ ಹಲ್ಲುಗಳಿಗೆ ಬೇಡವಾದ ಆಹಾರಗಳು:

​ಸಕ್ಕರೆ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಯಾವಾಗಲೂ ತಿನ್ನುತ್ತಾ ಹೋದರೆ, ಅದರಿಂದ ಹುಳುಕು ಹಲ್ಲುಗಳು ಉಂಟಾಗುವುದರ ಜೊತೆಗೆ ವಯಸ್ಸಾಗುವ ಮುಂಚೆಯೇ ಹಲ್ಲುಗಳು ಬಿದ್ದು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೆಳಗಿನ ಸಮಯದಲ್ಲಿ ಹಾಗೂ ದಿನದಲ್ಲಿ ಆಗಾಗ ಕಾಫಿ ಮತ್ತು ಟೀ ಕುಡಿಯುವ ಅಭ್ಯಾಸವನ್ನು ಕಡಿಮೆ ಮಾಡಿಕೊಳ್ಳಬೇಕು. ಇದರ ಜೊತೆಗೆ

​ಬೇಕರಿ ಪದಾರ್ಥಗಳಾದ ಬ್ರೆಡ್ಡು ಬಿಸ್ಕೆಟ್ ಮತ್ತು ಕೇಕು, ​ತಂಪು ಪಾನೀಯಗಳಿಗೆ ಬ್ರೇಕ್ ಹಾಕುವುದು ಉತ್ತಮ.

English summary

Best Foods for Your Teeth in Kannada

Here we talking about Best Foods for Your Teeth in Kannada, read on
Story first published: Saturday, June 12, 2021, 18:08 [IST]
X
Desktop Bottom Promotion