For Quick Alerts
ALLOW NOTIFICATIONS  
For Daily Alerts

ಬೇವು ಹೆಚ್ಚು ತಿಂದರೆ ಅಪಾಯ ತಪ್ಪಿದಲ್ಲ

|

ಸದಾ ಹಚ್ಚ ಹಸಿರಾಗಿ ಭಾರತದ ಉಪ ಖಂಡಗಳಲ್ಲಿ ಕಂಡು ಬರುವ ಸಸ್ಯ ರಾಶಿಗಳಲ್ಲಿ ಬೇವು ಕೂಡ ಒಂದು. ತನ್ನ ವಿಶೇಷವಾದ ಔಷಧೀಯ ಗುಣಗಳಿಂದ ಪ್ರಾಚೀನ ಆಯುರ್ವೇದ ಪದ್ಧತಿಯಿಂದ ಇಂದಿನವರೆಗೂ ಅನೇಕ ರೋಗ ರುಜಿನಗಳಿಗೆ, ಚರ್ಮದ ಸಮಸ್ಯೆಗಳಿಗೆ ಒಳ್ಳೆಯ ಔಷಧಿಯಾಗಿ ಬಳಸಲ್ಪಡುತ್ತಿದೆ. ಆದರೆ ನಿಮಗೆ ತಿಳಿದಿರುವುದಿಲ್ಲ ಎನಿಸುತ್ತಿದೆ, ಬೇವಿನ ವಿಪರೀತ ಬಳಕೆ ಕೆಲವೊಂದು ಅಡ್ಡ ಪರಿಣಾಮಗಳಿಗೆ ಕೂಡ ದಾರಿ ಮಾಡಿಕೊಡುತ್ತದೆ. ಕೆಲವೊಂದು ಅಡ್ಡಪರಿಣಾಮಗಳು ಮಾರಕವಾಗಿ ಬದಲಾಗುತ್ತವೆ. ಈ ಲೇಖನದಲ್ಲಿ ಬೇವಿನ ಸೊಪ್ಪಿನಿಂದ ಉಂಟಾಗುವ ಅಡ್ಡ ಪರಿಣಾಮಗಳು ಮತ್ತು ಬಳಕೆಗೆ ಸೂಕ್ತವಾದ ಸರಿಯಾದ ಪ್ರಮಾಣವನ್ನು ಚರ್ಚಿಸಲಾಗಿದೆ.

1. ಅಲರ್ಜಿಗೆ ಕಾರಣವಾಗಬಹುದು

1. ಅಲರ್ಜಿಗೆ ಕಾರಣವಾಗಬಹುದು

ಒಂದು ಅಧ್ಯಯನದ ಪ್ರಕಾರ ಹೇಳುವುದಾದರೆ ಬೇವಿನ ಎಲೆಗಳನ್ನು ಪ್ರತಿ ದಿನ ಮೂರು ವಾರಗಳ ತನಕ ಬಿಡದೇ ಸೇವನೆ ಮಾಡಿದರೆ, ಬಾಯಿಯ ಉರಿಯೂತದ ಸಮಸ್ಯೆ ಕಂಡು ಬರುತ್ತದೆ. ಬೇವಿನ ಎಲೆಗಳನ್ನು ಅಲರ್ಜಿ, ಗುಳ್ಳೆಗಳು ಮೊಡವೆಗಳು ಇತ್ಯಾದಿ ಸಮಸ್ಯೆಗಳಿಗೆ ಉಪಯೋಗಿಸಿದರೂ ಕೂಡ ಇದರ ಹೆಚ್ಚಾದ ಬಳಕೆ, ಸಮಸ್ಯೆಗಳನ್ನು ಹೋಗಲಾಡಿಸುವ ಬದಲು ಇನ್ನಷ್ಟು ಜಾಸ್ತಿ ಮಾಡುತ್ತದೆ. ಬೇವಿನ ಸೊಪ್ಪಿನ ಬಳಕೆಯ ಈ ವಿಷಯದಲ್ಲಿ ಇನ್ನೂ ಹೆಚ್ಚಿನ ವಿಷಯದ ಗ್ರಹಿಕೆಗೆ ಇನ್ನಷ್ಟು ಸಂಶೋಧನೆಯ ಅಗತ್ಯತೆ ಇದೆ ಎಂದು ಸಂಶೋಧಕರು ಹೇಳಿದ್ದಾರೆ.

2. ಫಲವತ್ತತೆ ಕುಂಠಿತಗೊಳ್ಳಬಹುದು

2. ಫಲವತ್ತತೆ ಕುಂಠಿತಗೊಳ್ಳಬಹುದು

ಯಾವುದೇ ವಿಷಯದಲ್ಲಿ ವಿಜ್ಞಾನಿಗಳು ಅಥವಾ ಸಂಶೋಧಕರು ಅಧ್ಯಯನ ಕೈಗೊಳ್ಳಬೇಕಾದರೆ ಮೊದಲು ಪ್ರಯೋಗ ಮಾಡುವುದು ಇಲಿಗಳ ಮೇಲೆ. ಫಲವತ್ತತೆಯ ವಿಷಯದಲ್ಲಿ ಸಂಶೋಧಕರು ಬೇವಿನ ಹೂಗಳ ಸಾರವನ್ನು ಬಳಸಿ ಇಲಿಗಳ ಮೇಲೆ ಪ್ರಯೋಗ ನಡೆಸಿದಾಗ ಅವುಗಳಲ್ಲಿ ಅಂಡೋತ್ಪತ್ತಿಯು ಭಾಗಶಃ ನಿರ್ಬಂಧವಾಗಿರುವುದು ಕಂಡು ಬಂದಿತು. ಅಗತ್ಯವಿರುವಾಗ ಬೇವನ್ನು ಬಳಸಿದರೆ, ಅಂಡೋತ್ಪತ್ತಿಯ ಸಮಸ್ಯೆ ಉತ್ತಮಗೊಳ್ಳುತ್ತದೆ. ಆದರೆ ಅವಶ್ಯಕತೆ ಇಲ್ಲದಿರುವ ಸಮಯದಲ್ಲಿ ಬೇವಿನ ಉಪಯೋಗ ಮಾಡಿದರೆ ವಿರುದ್ಧ ರೀತಿಯಲ್ಲಿ ಪರಿಣಾಮ ಎದುರಾಗುತ್ತದೆ.ಇಲಿಗಳು, ಮೊಲಗಳು ಮತ್ತು ಗಿನೀ ಪಿಗ್ ಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಬೇವು ಗಂಡು ಪ್ರಾಣಿಗಳ ಫಲವತ್ತತೆಯನ್ನು ಕಡಿಮೆ ಮಾಡಿರುವುದು ಕಂಡು ಬಂದಿದೆ. ಗಂಡು ಇಲಿಗಳಲ್ಲಿ ಕೇವಲ ಆರು ವಾರಗಳಲ್ಲಿ ಶೇಕಡ 67% ರಷ್ಟು ಫಲವತ್ತತೆಯ ಕೊರತೆ ಕಾಣಿಸಿದೆ. ಆದರೂ ಬೇವು ಇವುಗಳಲ್ಲಿ ವೀರ್ಯದ ಉತ್ಪತ್ತಿಯನ್ನು ನಿಲ್ಲಿಸದೇ ಇರುವುದು ಗಮನಾರ್ಹ ಸಂಗತಿ.

ಬೇವು ಆರು ವಾರಗಳಲ್ಲಿ ಶೇಕಡ 90 % ರಷ್ಟು ಮೊಲಗಳ ಸಾವಿಗೆ ಕಾರಣವಾಗಿರುವುದು ಕಂಡು ಬಂದಿದೆ. ಕೆಲವು ತಜ್ಞರ ಪ್ರಕಾರ ರೈತರು ಕೀಟಗಳ ವಿನಾಶಕ್ಕೆ ಬೇವಿನ ಅಂಶವುಳ್ಳ ಕೀಟನಾಶಕಗಳನ್ನು ಬಳಸುತ್ತಾರೆ. ಏಕೆಂದರೆ ಅವರ ಪ್ರಕಾರ ಬೇವಿನ ಸಿಂಪಡಣೆಯಿಂದ ಕೀಟಗಳ ಸಂತಾನೋತ್ಪತ್ತಿಯನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು. ಬೇವಿನ ಬಳಕೆಯಿಂದ ವೀರ್ಯದ ಉತ್ಪತ್ತಿಯಲ್ಲಿ ದಿಕ್ಕು ಬದಲಿಸುವುದರಿಂದ ಹಿಡಿದು ರೋಗ ನಿರೋಧಕ ಶಕ್ತಿ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಆದರೆ ಈ ವಿಷಯದಲ್ಲಿ ಇನ್ನಷ್ಟು ಸಂಶೋಧನೆಯ ಅವಶ್ಯಕತೆ ಇದೆ.

3. ಗರ್ಭಪಾತಕ್ಕೆ ಕಾರಣವಾಗಬಹುದು

3. ಗರ್ಭಪಾತಕ್ಕೆ ಕಾರಣವಾಗಬಹುದು

ಪ್ರಾಣಿಗಳ ಅಧ್ಯಯನಗಳಲ್ಲಿ ಬೇವಿನ ಸಾರ ಗರ್ಭಧಾರಣೆಯನ್ನು ಪ್ರೇರೇಪಿಸುತ್ತದೆ. ರೋಡೆಂಟ್ ಗಳು ಮತ್ತು ಮಂಗಗಳಲ್ಲಿ ಬೇವಿನ ಸಾರ ಗರ್ಭಾವಸ್ಥೆಯನ್ನು ಸ್ಥಗಿತಗೊಳಿಸುವುದು ಕಂಡು ಬಂದಿದೆ. ಆದ್ದರಿಂದ ಈ ಗೊಂದಲಮಯ ವಾತಾವರಣ ಮಕ್ಕಳನ್ನು ಪಡೆಯಬೇಕೆನ್ನುವವರಿಗೆ ಮತ್ತು ಮಕ್ಕಳು ಬೇಡ ಎನ್ನುವವರಿಗೆ ತಲೆ ನೋವು ತಂದು ಕೊಟ್ಟಿದೆ. ಈ ಎರಡು ಪ್ರಕರಣಗಳಲ್ಲಿ ಬೇವಿನ ಉಪಯೋಗ ಬೇಡ ಎಂದು ವಿಜ್ಞಾನಿಗಳು ವಾದಿಸಿದ್ದಾರೆ.

ಕೆಲವೊಂದು ಸಿದ್ಧಾಂತಗಳು ಹೇಳುವ ಪ್ರಕಾರ ಬೇವಿಗೆ ಅತಿಯಾದ ಒಡ್ಡಿಕೊಳ್ಳುವಿಕೆ ಮನುಷ್ಯನ ರೋಗ ನಿರೋಧಕ ವ್ಯವಸ್ಥೆಯನ್ನು ಹೈಪರ್ ಆಕ್ಟಿವ್ ಮಾಡುತ್ತದೆ. ಈ ಕಾರಣದಿಂದ ದೇಹವು ವೀರ್ಯ ಕೋಶಗಳನ್ನು ತಡೆದು ಕಲ್ಪಿತ ಭ್ರೂಣಗಳಿಂದ ಅವುಗಳನ್ನು ಹೊರ ಹಾಕುತ್ತದೆ. ಆದರೆ ಈ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ.

4. ಮೂತ್ರ ಪಿಂಡಗಳಿಗೆ ಹಾನಿ ಮಾಡಬಹುದು

4. ಮೂತ್ರ ಪಿಂಡಗಳಿಗೆ ಹಾನಿ ಮಾಡಬಹುದು

ಒಂದು ಅಧ್ಯಯನ ತಿಳಿಸಿ ಹೇಳಿರುವ ಪ್ರಕಾರ ಒಬ್ಬ ವ್ಯಕ್ತಿಯಲ್ಲಿ ಚೀನೀ ಗಿಡಮೂಲಿಕೆಗಳನ್ನು ಸೇವಿಸಿದ ನಂತರ ತೀವ್ರ ತರದ ಮೂತ್ರ ಪಿಂಡ ವೈಫಲ್ಯ ಕಂಡು ಬಂದಿರುವುದು ಬೆಳಕಿಗೆ ಬಂದಿದೆ. ಆ ಗಿಡಮೂಲಿಕೆಯ ಔಷಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೇವು ಇದ್ದದ್ದು ವರದಿಯ ಬಳಿಕ ತಡವಾಗಿ ತಿಳಿದು ಬಂದಿದೆ.

ಬೇವಿನ ಸೇವನೆಗೂ ಕಿಡ್ನಿ ವೈಫಲ್ಯಕ್ಕೂ ನೇರವಾದ ಸಂಬಂಧ ಇಲ್ಲದಿದ್ದರೂ, ಜಾಗರೂಕತೆಯಿಂದ ಇರುವುದು ಬಹಳ ಒಳ್ಳೆಯದು. ಗಿಡಮೂಲಿಕೆ ಔಷಧಿಗಳಿಗೆ ಸಂಬಂಧಿಸಿದಂತೆ ವಿಷಕಾರಿ ಮೂತ್ರ ಪಿಂಡದ ಗಾಯಗಳ ಪ್ರವೃತ್ತಿ ಮುಂದುವರಿಯುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಆದ್ದರಿಂದ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರುವುದು ಒಳ್ಳೆಯದು.

ಬೇವಿನ ಅತಿಯಾದ ಸೇವನೆ ಲಿವರ್ ಗೆ ಸಹ ಹಾನಿಯನ್ನು ಉಂಟು ಮಾಡುತ್ತದೆ ಎಂದು ಕೆಲವರು ನಂಬಿದ್ದಾರೆ. ಆದರೆ ಇದರ ಬಗ್ಗೆ ಇದುವರೆಗೂ ಯಾವುದೇ ಸಂಶೋಧನೆ ನಡೆದಿಲ್ಲ. ಆದ್ದರಿಂದ ಸುರಕ್ಷತೆಯ ದಾರಿಯಲ್ಲಿ ಯೋಚಿಸುವುದಾದರೆ ಲಿವರ್ ಸಮಸ್ಯೆ ಹೊಂದಿರುವವರು ಬೇವಿನ ಸೇವನೆಗೆ ಮುಂಚೆ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವುದು ಉತ್ತಮ.

5. ಬ್ಲಡ್ ಶುಗರ್ ಮಟ್ಟವನ್ನು ತೀರಾ ಕಡಿಮೆ ಮಾಡಬಹುದು

5. ಬ್ಲಡ್ ಶುಗರ್ ಮಟ್ಟವನ್ನು ತೀರಾ ಕಡಿಮೆ ಮಾಡಬಹುದು

ಬೇವು ಮತ್ತು ಚೀನಾದಲ್ಲಿ ಕಂಡು ಬರುವ ಒಂದು ಬಗೆಯ ಪಾಲಕ್ ಸೊಪ್ಪಿನ ಸಂಯೋಜನೆ ಮನುಷ್ಯನ ದೇಹದಲ್ಲಿ ಹೈಪೋಟೆನ್ಸಿವ್ ಗುಣ ಲಕ್ಷಣಗಳನ್ನು ತೋರಿಸುತ್ತದೆ ಎಂದು ಒಂದು ಸಂಶೋಧನೆ ಹೇಳುತ್ತದೆ. ಬೇವಿನಲ್ಲಿ ಇಂತಹ ಗುಣವಿದೆಯೆಂದು ಗೊತ್ತಿರುವುದರಿಂದ ನೀವು ನಿಮ್ಮ ಮಧುಮೇಹದ ಮಟ್ಟವನ್ನು ತಗ್ಗಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಬೇವಿನ ಸೇವನೆಯ ಬಗ್ಗೆ ವೈದ್ಯರಲ್ಲಿ ಕೇಳಿ ಸಲಹೆ ಪಡೆದುಕೊಳ್ಳಿ. ವೈದ್ಯರು ಮಧುಮೇಹ ರೋಗಿಗಳಿಗೆ ಸಕ್ಕರೆ ಅಂಶದ ನಿಯಂತ್ರಣಕ್ಕೆ ಸಣ್ಣ ಪ್ರಮಾಣದ ಬೇವಿನ ಎಣ್ಣೆಯನ್ನು ಸೇವಿಸಲು ಹೇಳಿರುತ್ತಾರೆ. ಅವರ ಸಲಹೆ ಮೀರಿ ಅವರು ಸೂಚಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಬೇವಿನ ಎಣ್ಣೆಯನ್ನು ಸೇವಿಸಿದರೆ ನಿಮ್ಮ ದೇಹದ ರಕ್ತದಲ್ಲಿರುವ ಸಕ್ಕರೆ ಅಂಶದ ಪ್ರಮಾಣ ತೀರಾ ತಳಹದಿಗೆ ಹೋಗಿಬಿಡುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಹೈಪೊಗ್ಲಿಸಿಮಿಯಾ ಎಂದು ಕರೆಯುತ್ತಾರೆ. ಆಯಾಸ ಮತ್ತು ತಲೆ ಸುತ್ತು ಇದರ ಸಾಮಾನ್ಯ ಗುಣ ಲಕ್ಷಣಗಳು.

6. ಶಿಶುಗಳ ಮಾರಣ ಹೋಮಕ್ಕೆ ಕಾರಣವಾಗಬಹುದು

6. ಶಿಶುಗಳ ಮಾರಣ ಹೋಮಕ್ಕೆ ಕಾರಣವಾಗಬಹುದು

ಬೇವು ಪುಟ್ಟ ಕಂದಮ್ಮಗಳಿಗೆ ವಿಷಕಾರಿ, ಹಲವಾರು ಅಧ್ಯಯನಗಳು ಈ ವಿಷಯದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿವೆ. ಕೇವಲ 5 ml ನಷ್ಟು ಬೇವಿನ ಎಣ್ಣೆ ಹಸುಗೂಸುಗಳ ಸಾವಿಗೆ ಕಾರಣವಾಗಿರುವುದು ಕಂಡು ಬಂದಿದೆ. ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಬೇವಿನ ಎಣ್ಣೆಯ ವಿಷ ಪ್ರತಿ ಕಿಲೋ ಗ್ರಾಂ ಗೆ 12 ರಿಂದ 24 ಎಂಎಲ್ ನ ಪ್ರಮಾಣದಲ್ಲಿರುತ್ತದೆ ಎಂದು ಸೂಚಿಸಲಾಗಿದೆ. ಬೇವಿನ ಎಣ್ಣೆಯಲ್ಲದೆ ಅದರಲ್ಲಿರುವ ಮಾಲಿನ್ಯಕಾರಕ ಅಂಶಗಳು ಈ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಕೂಡ ತಿಳಿಸಲಾಗಿದೆ. ಆದರೂ ಈ ವಿಷಯದಲ್ಲಿ ಹೆಚ್ಚಿನ ಮಟ್ಟದ ಸಂಶೋಧನೆ ಅಗತ್ಯವಿದೆ.

ಬೇವಿನ ಎಲೆಗಳು ಅಥವಾ ಅದರ ಸಾರವನ್ನು ತುಂಬಾ ದಿನಗಳ ಕಾಲ ಸೇವಿಸಬಾರದು. ಕೆಲವೊಂದು ವರದಿಗಳು ಸಾಬೀತು ಪಡಿಸಿರುವ ಪ್ರಕಾರ ಮಲೇರಿಯಾ ಜ್ವರಕ್ಕೆ ಚಿಕಿತ್ಸೆಗೆ ಎಂದು ಬಹಳ ದಿನಗಳ ಕಾಲ ಸೇವಿಸಿದ ಬೇವಿನ ಎಲೆಗಳು ರೋಗಿಗಳಲ್ಲಿ ಮೂತ್ರ ಪಿಂಡದ ಸಮಸ್ಯೆಗಳನ್ನು ಉಂಟು ಮಾಡಿದೆ. ಬೇವಿನಲ್ಲಿ ಇರುವ ಕೆಲವು ವಸ್ತುಗಳು ಪುಟ್ಟ ಮಕ್ಕಳಲ್ಲಿ ಬೇವಿನ ಎಣ್ಣೆಯ ಹೆಚ್ಚಾದ ಉಪಯೋಗದಿಂದ ರೆಯೇ'ಸ್ ಸಿಂಡ್ರೋಮ್ ಸಮಸ್ಯೆಯನ್ನು ಉಂಟು ಮಾಡುತ್ತವೆ. ಆದ್ದರಿಂದ ಪುಟ್ಟ ಕಂದಮ್ಮಗಳಿಗೆ ಬೇವಿನ ಎಣ್ಣೆಯ ಸ್ವಲ್ಪ ಭಾಗ ಸೇವನೆಯಾದರೂ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಬೇವಿನ ವಿಷಯದಲ್ಲಿ ಮಕ್ಕಳ ಬಗ್ಗೆ ಹೆಚ್ಚಿನ ಜಾಗರೂಕತೆ ಇರಲಿ.

7. ಹೊಟ್ಟೆಯಲ್ಲಿ ಕಿರಿಕಿರಿ ಉಂಟು ಮಾಡಬಹುದು

7. ಹೊಟ್ಟೆಯಲ್ಲಿ ಕಿರಿಕಿರಿ ಉಂಟು ಮಾಡಬಹುದು

ವಿಪರೀತ ಬೇವಿನ ಸೇವನೆ ಹೊಟ್ಟೆಯಲ್ಲಿ ಅಜೀರ್ಣತೆ ಮತ್ತು ಹೊಟ್ಟೆ ತೊಳೆಸಿದಂತಹ ಕಿರಿಕಿರಿಯ ಅನುಭವವನ್ನು ಉಂಟು ಮಾಡಬಹುದು. ಈ ಬಗ್ಗೆ ಅರ್ಥಮಾಡಿಕೊಳ್ಳಬೇಕಾದರೆ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.

8. ರೋಗ ನಿರೋಧಕ ಶಕ್ತಿಯ ವ್ಯವಸ್ಥೆಯನ್ನು ಮತ್ತಷ್ಟು ಪ್ರಚೋದಿಸಬಹುದು

8. ರೋಗ ನಿರೋಧಕ ಶಕ್ತಿಯ ವ್ಯವಸ್ಥೆಯನ್ನು ಮತ್ತಷ್ಟು ಪ್ರಚೋದಿಸಬಹುದು

ಬೇವು ಅಥವಾ ಬೇವು - ಯುಕ್ತ ಉತ್ಪನ್ನಗಳನ್ನು ಸೇವಿಸುವುದರಿಂದ ಮನುಷ್ಯನ ರೋಗ ನಿರೋಧಕ ಶಕ್ತಿಯ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಆದರೆ ಕೆಲವು ತಜ್ಞರು ಹೇಳುವ ಪ್ರಕಾರ ಬೇವಿನ ವಿಪರೀತ ಸೇವನೆ, ಮನುಷ್ಯನ ರೋಗ ನಿರೋಧಕ ಶಕ್ತಿಯ ವ್ಯವಸ್ಥೆಯನ್ನು ಬಹಳಷ್ಟು ಪ್ರಚೋದನೆಗೊಳಿಸಿ ಸಾಕಷ್ಟು ತೊಂದರೆಗಳನ್ನು ಉಂಟು ಮಾಡುತ್ತದೆ. ಇನ್ನು ಅಂಗಾಂಗ ಕಸಿ ಮಾಡಿಕೊಂಡ ರೋಗಿಗಳು ಬೇವಿನಿಂದ ಆದಷ್ಟು ದೂರವಿದ್ದರೆ ಒಳ್ಳೆಯದು. ಏಕೆಂದರೆ ಬೇವಿನ ಎಲೆಗಳು ಶಸ್ತ್ರಚಿಕಿತ್ಸೆ ಮಾಡುವಾಗ ಇಮ್ಮುನೊ ಸಪ್ರೆಸಂಟ್ ಔಷಧಿಗಳ ಜೊತೆ ಬೆರೆತು ಮುಂಬರುವ ದಿನಗಳಲ್ಲಿ ರೋಗಿಗಳಿಗೆ ತೊಂದರೆಯನ್ನು ತಂದೊಡ್ಡುತ್ತವೆ.

ಎಚ್ಚರ

ಎಚ್ಚರ

ಆಯುರ್ವೇದ ಔಷಧಿ ಪದ್ಧತಿಯಲ್ಲಿ ಬೇವು ಬಹು ಮುಖ್ಯವಾಗಿ ಉಪಯೋಗಿಸಲ್ಪಡುವ ಒಂದು ಸಸ್ಯ. ಇದರ ಅನೇಕ ಉಪಯೋಗಗಳು ಈಗಾಗಲೇ ಸಾಬೀತಾಗಿವೆ. ಆದಾಗ್ಯೂ ಇದರ ವಿಪರೀತ ಸೇವನೆ ಅನಿರೀಕ್ಷಿತ ಪರಿಣಾಮಗಳನ್ನು ಉಂಟು ಮಾಡುತ್ತದೆ. ವಿಶೇಷವಾಗಿ ಹಸುಗೂಸುಗಳ ಮತ್ತು ಮಕ್ಕಳ ವಿಷಯದಲ್ಲಿ ಇದು ಸತ್ಯ.

ಬೇವಿನ ಬಳಕೆಯ ಪ್ರಮಾಣದ ಬಗ್ಗೆ ಇನ್ನೂ ಕೂಡ ಸರಿಯಾದ ಮಾಹಿತಿ ಇಲ್ಲ. ಒಂದು ಮೂಲದ ಪ್ರಕಾರ ಒಂದು ದಿನಕ್ಕೆ ಕೇವಲ ಒಂದು ಅಥವಾ ಎರಡು ಬೇವಿನ ಎಲೆಗಳು ಮಾತ್ರ ಸೇವನೆಗೆ ಅರ್ಹ. ಆದರೂ ಬೇವನ್ನು ಸೇವಿಸುವ ಮುಂಚೆ ವೈದ್ಯರನ್ನು ಒಮ್ಮೆ ಭೇಟಿಯಾಗಿ ಸಲಹೆ ಮತ್ತು ಸೂಚನೆಗಳನ್ನು ಪಡೆದುಕೊಳ್ಳುವುದು ಉತ್ತಮ.

English summary

Be Aware About Side Effects Of Neem

Here we are discussing about be aware about side effects of neem. Neem is an evergreen tree native to the Indian subcontinent. It has been used extensively in ancient Ayurvedic medicine. However, excess use of its leaves has been linked to side effects. Some of these adverse effects could be fatal. In this post, we have discussed the possible side effects of neem leaves and the possible right dosage. Read more.
X