For Quick Alerts
ALLOW NOTIFICATIONS  
For Daily Alerts

ದುಃಖ ಮತ್ತು ಖಿನ್ನತೆಯ ನಡುವಿನ ಪ್ರಮುಖ ವ್ಯತ್ಯಾಸ ತಿಳಿಯುವುದು ಹೇಗೆ?

|

ಸಾಮಾನ್ಯವಾಗಿ ದುಃಖ ಮತ್ತು ಖಿನ್ನತೆ ಎರಡೂ ಒಂದೇ ಎಂದು ಹೆಚ್ಚಿನವರು ಭಾವಿಸಿದರೂ ಎರಡಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳು ಸೂಕ್ಷ್ಮವಾಗಿದ್ದು ಹೊರನೋಟಕ್ಕೆ ಎರಡೂ ಒಂದೇ ಎಂದು ಅನ್ನಿಸುತ್ತವೆ. ಇವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮೂಲಕ ಈ ಸ್ಥಿತಿಗೆ ಒಳಗಾಗಿರುವ ವ್ಯಕ್ತಿಗಳು ಈ ಭಾವದಿಂದ ಶೀಘ್ರವೇ ಹೊರಬರಲು ಸಾಧ್ಯವಾಗುತ್ತದೆ.

Difference Between Sadness And Depression

ದುಃಖದಲ್ಲಿರುವ ವ್ಯಕ್ತಿಗಳು ಸಾಮಾನ್ಯವಾಗಿ ತಾವು ಖಿನ್ನತೆಗೆ ಒಳಗಾಗಿದ್ದೇವೆ ಎಂದು ಭಾವಿಸುತ್ತಾರೆ ಮತ್ತು ಖಿನ್ನತೆಯಿಂದ ಬಳಲುತ್ತಿರುವ ಜನರು ತಮ್ಮ ರೋಗಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ ಮತ್ತು ಅವರು ಕೇವಲ ದುಃಖಿತರೆಂದು ಭಾವಿಸುತ್ತಾರೆ. ಆದರೂ, ದುಃಖವು ಖಿನ್ನತೆಯ ಪ್ರಮುಖ ಭಾಗವಾಗಬಹುದು ಆದರೆ ಇದಕ್ಕೆ ವಿರುದ್ದವಾಗಿರುವುದು ಅಷ್ಟೊಂದು ಗಣನೀಯವಲ್ಲ! ದುಃಖ ಮತ್ತು ಖಿನ್ನತೆಯ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಇಂದಿನ ಲೇಖನವನ್ನು ಪೂರ್ತಿಯಾಗಿ ಓದಿ.
ಖಿನ್ನತೆ ಎಂದರೇನು?

ಖಿನ್ನತೆ ಎಂದರೇನು?

ಖಿನ್ನತೆಯು ಒಂದು ರೀತಿಯ ಮಾನಸಿಕ ಅಸ್ವಸ್ಥತೆಯಾಗಿದೆ, ಇದು ದುಃಖಕ್ಕಿಂತ ಭಿನ್ನವಾದ ಭಾವನೆಯಾಗಿದೆ. ದುಃಖದ ಭಾವನೆಯು ತಮ್ಮನ್ನು ಸಂಪೂರ್ಣವಾಗಿ ಆವರಿಸುವವರೆಗೂ ಅನೇಕ ಜನರು ತಮ್ಮ ಖಿನ್ನತೆಯನ್ನು ಅರಿತುಕೊಳ್ಳುವುದಿಲ್ಲ.

ಖಿನ್ನತೆಯು ದೀರ್ಘಕಾಲದವರೆಗೆ ಇರುತ್ತದೆ ಮತ್ತು ವ್ಯಕ್ತಿಯ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಖಿನ್ನತೆಯು ನಿರಂತರ ದುಃಖದಿಂದ ಮಾತ್ರವಲ್ಲದೆ ಪ್ರೇರಣೆಯ ಕೊರತೆ, ಆಹಾರ ಪದ್ಧತಿಯಲ್ಲಿ ಬದಲಾವಣೆ, ನಿದ್ರೆಯ ತೊಂದರೆಗಳು, ಉದ್ವೇಗ, ಕಿರಿಕಿರಿ, ತೂಕದಲ್ಲಿ ಇಳಿಕೆ, ನಿರ್ಧಾರ ತೆಗೆದುಕೊಳ್ಳುವಲ್ಲಿ ತೊಂದರೆ, ಉತ್ಸಾಹ ಕಳೆದುಕೊಳ್ಳುವುದು, ಆಸಕ್ತಿ ಕಳೆದುಕೊಳ್ಳುವುದು ಮುಂತಾದ ಇತರ ಚಿಹ್ನೆಗಳೊಂದಿಗೆ ಪ್ರಕಟಗೊಳ್ಳುತ್ತದೆ.

ತೀವ್ರ ತಲೆನೋವು ಮತ್ತು ಆಯಾಸ, ನಿಷ್ಪ್ರಯೋಜಕತೆಯ ಭಾವನೆ, ಏಕಾಗ್ರತೆಯ ತೊಂದರೆಗಳು ಮತ್ತು ನಿರಂತರ ಆತ್ಮಹತ್ಯಾ ಆಲೋಚನೆಗಳೂ ಖಿನ್ನತೆಯ ಪರಿಣಾಮದಿಂದಲೇ ಎದುರಾಗುತ್ತವೆ.

ಖಿನ್ನತೆಗೆ ಕಾರಣವೇನು?

ಖಿನ್ನತೆಗೆ ಕಾರಣವೇನು?

ಖಿನ್ನತೆಯ ಸ್ಥಿತಿ ಪ್ರೀತಿಪಾತ್ರರ ಸಾವು, ಆರ್ಥಿಕ ಬಿಕ್ಕಟ್ಟು ಅಥವಾ ಸಂಬಂಧದ ಸಮಸ್ಯೆಗಳಂತಹ ಅಪಾರ ದುಃಖದ ಕ್ಷಣಗಳೊಂದಿಗೂ ಎದುರಾಗಬಹುದು, ಆದರೆ ಇದು ಆ ವ್ಯಕ್ತಿಯೊಂದಿಗೆ ಸಾರ್ವಕಾಲಿಕ ಮತ್ತು ಪ್ರತಿಯೊಂದು ಪರಿಸ್ಥಿತಿಯಲ್ಲೂ ಇರುತ್ತದೆ.

ಅಲ್ಲದೆ, ಖಿನ್ನತೆಯಿಂದ ಬಳಲುತ್ತಿರುವ ಜನರು ಆಗಾಗ್ಗೆ ತಮ್ಮ ಭಾವನೆ ಮತ್ತು ಭಾವನೆಗಳ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ, ಮತ್ತು ಪ್ರೀತಿಪಾತ್ರರ ಜೊತೆ ಅಳುವುದು ಮತ್ತು ಮಾತನಾಡಿದ ನಂತರವೂ ಅವರು ತಮ್ಮ ಸಾಮಾನ್ಯ ಜೀವನಕ್ಕೆ ಮರಳಲು ಹೆಣಗಾಡುತ್ತಾರೆ.

ಖಿನ್ನತೆ ಪತ್ತೆ ಹೇಗೆ?

ಖಿನ್ನತೆ ಪತ್ತೆ ಹೇಗೆ?

ಖಿನ್ನತೆಯನ್ನು ಡಯಾಗ್ನೋಸ್ಟಿಕ್ ಮತ್ತು ಸ್ಟ್ಯಾಟಿಸ್ಟಿಕಲ್ ಮ್ಯಾನ್ಯುಯಲ್ ಆಫ್ ಮೆಂಟಲ್ ಡಿಸಾರ್ಡರ್ಸ್ Diagnostic and Statistical Manual of Mental Disorders (DSM-IV) ಎಂಬ ಗುಂಪು ಪತ್ತೆ ಮಾಡುತ್ತದೆ, ಇದು ಮಾನಸಿಕ ಅಸ್ವಸ್ಥತೆಯನ್ನು ಪತ್ತೆಹಚ್ಚಲು ವೈದ್ಯಕೀಯ ವೃತ್ತಿಪರರು ಬಳಸುವ ಮಾನದಂಡಗಳ ಪ್ರಮಾಣಿತ ಗುಂಪಾಗಿದೆ. ತ

ಜ್ಞರ ಪ್ರಕಾರ, ಒಬ್ಬ ವ್ಯಕ್ತಿಯು ಎರಡು ವಾರಗಳಿಗಿಂತ ಹೆಚ್ಚು ಕಾಲ ದುಃಖಿತನಾಗಿದ್ದರೆ, ಇದು ಖಿನ್ನತೆಯ ಅಸ್ವಸ್ಥತೆಯ ಸಂಕೇತವಾಗಿದೆ ಮತ್ತು ನೇರಸಂವಾದ ಅಥವಾ ಔಷಧಿಗಳಿಗಾಗಿ ವ್ಯಕ್ತಿಯು ಶೀಘ್ರದಲ್ಲೇ ವೈದ್ಯಕೀಯ ತಜ್ಞರನ್ನು ಸಂಪರ್ಕಿಸಬೇಕು.

ಅಂತಿಮ ತೀರ್ಮಾನ:

ಅಂತಿಮ ತೀರ್ಮಾನ:

ದುಃಖವು ಒಂದು ಅಮೂರ್ತ ಭಾವನೆಯಾಗಿದ್ದು, ಖಿನ್ನತೆಯು ಅದರ ತೀವ್ರತೆಯಿಂದಾಗಿ ವ್ಯಕ್ತಿನಿಷ್ಠವಾಗಿರುತ್ತದೆ. ನೀವು ಯಾವುದಾದರ ಬಗ್ಗೆ ದುಃಖಿಸುತ್ತಿದ್ದರೆ ಪರವಾಗಿಲ್ಲ ಆದರೆ ಖಿನ್ನತೆಯ ಚಿಹ್ನೆಗಳಲ್ಲಿ ಯಾವೊಂದು ಲಕ್ಷಣವೂ ಕಂಡುಬಂದರೆ ಇದನ್ನು ನಿರ್ಲಕ್ಷಿಸಬೇಡಿ.

ಆರಂಭಿಕ ಚಿಕಿತ್ಸೆಯು ನಿಮ್ಮ ಸಮಸ್ಯೆಯಿಂದ ಶೀಘ್ರದಲ್ಲೇ ಹೊರಬರಲು ಮತ್ತು ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

English summary

Are You Sad Or Depressed? Know The Important Difference

Sadness and depression are often confused as both are considered the same but are not. There's a thin line that differentiates the two and understanding this difference may help process both in a healthier way.
X
Desktop Bottom Promotion