For Quick Alerts
ALLOW NOTIFICATIONS  
For Daily Alerts

ಕೋವಿಡ್‌ 19ಗೆ ಆ್ಯಂಟಿಬಯೋಟಿಕ್ ಸೇವಿಸಿದರೆ ಜನನೇಂದ್ರೀಯ ಸೋಂಕು ಉಂಟಾಗುವುದೇಕೆ? ಪರಿಹಾರವೇನು?

|

ಕೊರೊನಾ ನಮ್ಮ ಬದುಕಿನಿಂದ ದೂರವಾಯ್ತು, ಇನ್ನು ಈ ಮಹಾಮಾರಿ ಆತಂಕವಿಲ್ಲ ಎಂದು ಅಂದುಕೊಳ್ಖುವಷ್ಟರಲ್ಲಿ ಒಮಿಕ್ರಾನ್ ಬಂದು ಬಿಡ್ತು, ಇದೀಗ ಸೋಂಕಿತರ ಸಂಖ್ಯೆ ದಿನೇ ದಿನ ಹೆಚ್ಚಾಗುತ್ತಿದೆ. ಆದರೆ ಸಮಧಾನದ ವಿಷಯವೆಂದರೆ ಒಮಿಕ್ರಾನ್‌ ಡೆಲ್ಟಾದಷ್ಟು ಮಾರಾಣಾಂತಿಕವಲ್ಲ, ಜ್ವರ, ಮೈ, ಕೈ ನೋವು ಇಂಥ ಲಕ್ಷಣಗಳು ಕಂಡು ಬರುತ್ತಿದ್ದು ವಾರದೊಳಗೆ ಹೆಚ್ಚಿನವರು ಚೇತರಿಸಿಕೊಳ್ಳುತ್ತಿದ್ದಾರೆ.

ತಲೆನೋವು, ಗಂಟಲು ನೋವು, ಮೈಕೈ ನೋವು, ಅತ್ಯಧಿಕ ಜ್ವರ ಇವೆಲ್ಲಾ ಒಮಿಕ್ರಾನ್‌ನ ಸಾಮಾನ್ಯ ಲಕ್ಷಣಗಳಾಗಿವೆ. ಆದರೆ ಈ ಲಕ್ಷಣಗಳು ಕಡಿಮೆಯಾಗಬೇಕೆಂದರೆ ಆ್ಯಂಟಿಬಯೋಟಿಕ್‌ ತೆಗೆದುಕೊಳ್ಳಲೇಬೇಕು. ಈ ಆ್ಯಂಟಿಬಯೋಟಿಕ್‌ಗಳು ದೇಹವನ್ನು ಮತ್ತಷ್ಟು ಸುಸ್ತಾಗಿಸುವುದು ಜೊತೆಗೆ ಮಹಿಳೆಯರಲ್ಲಿ ಜನನೇಂದ್ರೀಯಗಳಲ್ಲಿ ಸೋಂಕು ಉಂಟಾಗುವುದು.

ಕೋವಿಡ್ 19 ಚೇತರಿಸಿಕೊಳ್ಳುತ್ತಿರುವವರು ಅನೇಕರು ಈ ಸಮಸ್ಯೆಯ ಕುರಿತು ಹೇಳುತ್ತಿದ್ದಾರೆ. ಯೀಸ್ಟ್‌ ಸೋಂಕಿನಿಂದಾಗಿ ಹೆಚ್ಚಿನವರಲ್ಲಿ ತುರಿಕೆ, ನೋವು ಈ ರೀತಿಯ ಲಕ್ಷಣಗಳು ಕಂಡು ಬರುತ್ತಿವೆ. ಏಕೆ ಈ ರೀತಿ ಉಂಟಾಗುತ್ತಿದೆ, ಮೂತ್ರ ಸೋಂಕಿನ ಲಕ್ಷಣಗಳೇನು, ಮೂತ್ರ ಸೋಂಕು ಕಡಿಮೆ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಒಮಿಕ್ರಾನ್‌ ಮೈಲ್ಡ್‌ ಎನ್ನುತ್ತಿದ್ದರೂ ಕಂಡು ಬರುತ್ತಿದೆ ತುಂಬಾ ಸುಸ್ತು

ಒಮಿಕ್ರಾನ್‌ ಮೈಲ್ಡ್‌ ಎನ್ನುತ್ತಿದ್ದರೂ ಕಂಡು ಬರುತ್ತಿದೆ ತುಂಬಾ ಸುಸ್ತು

ಒಮಿಕ್ರಾನ್‌ ತುಂಬಾ ಮೈಲ್ಡ್ ಎಂದು ಹೇಳುತ್ತಿದ್ದರೂ ಒಮಿಕ್ರಾನ್‌ ಬಂದವರಲ್ಲಿ ತುಂಬಾ ಸುಸ್ತು, ಜ್ವರದ ಜೊತೆಗೆ ತುಂಬಾ ಮೈಕೈ ನೋವು, ತಲೆಸುತ್ತು ಕಂಡು ಬರುತ್ತಿದೆ. ಈ ಲಕ್ಷಣಗಳು ಕಡಿಮೆಯಾಗಬೇಕೆಂದರೆ ಆ್ಯಂಟಿಬಯೋಟಿಕ್‌ ತೆಗೆದುಕೊಳ್ಳಲೇಬೇಕು. ಆದರೆ ಹೀಗೆ ಆ್ಯಂಟಿಬಯೋಟಿಕ್ ತೆಗೆದುಕೊಂಡಾಗ ಕೋವಿಡ್ 19 ಲಕ್ಷಣಗಳು ಕಡಿಮೆಯಾದರು ಜನನೇಂದ್ರೀಯದ ಸೋಂಕು ಕಂಡು ಬರುತ್ತಿದೆ.

ಆ್ಯಂಟಿಬಯೋಟಿಕ್ ತೆಗೆದುಕೊಂಡಾಗ ಜನನೇಂದ್ರೀಯದ ಸೋಂಕು ಉಂಟಾಗುತ್ತಿರುವುದು ಏಕೆ?

ಆ್ಯಂಟಿಬಯೋಟಿಕ್ ತೆಗೆದುಕೊಂಡಾಗ ಜನನೇಂದ್ರೀಯದ ಸೋಂಕು ಉಂಟಾಗುತ್ತಿರುವುದು ಏಕೆ?

ಆ್ಯಂಟಿಬಯೋಟಿಕ್ ತೆಗೆದುಕೊಂಡಾಗ ಅದರ ಅಡ್ಡಪರಿಣಾಮ ಇದ್ದೇ ಇರುತ್ತದೆ. ಕರುಳಿನಲ್ಲಿರುವ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ. ಹೀಗೆ ಆ್ಯಂಟಿಬಯೋಟಿಕ್ ಬ್ಯಾಕ್ಟಿರಿಯಾಗಳನ್ನು ಕೊಲ್ಲುವಾಗ ಕೆಟ್ಟ ಬ್ಯಾಕ್ಟಿರಿಯಾ ಜೊತೆಗೆ ಒಳ್ಳೆಯ ಬ್ಯಾಕ್ಟಿರಿಯಾಗಳನ್ನೂ ಕೊಲ್ಲುತ್ತದೆ. ಇದರಿಂದ ವಾಂತಿ, ತಲೆಸುತ್ತು ಈ ರೀತಿಯ ಅಡ್ಡಪರಿಣಾಮಗಳು ಕಂಡು ಬರುವುದು. ಅಲ್ಲದೆ ರೋಗ ನಿರೋಧಕ ಶಕ್ತಿಯನ್ನೂ ಕಡಿಮೆ ಮಾಡುತ್ತದೆ.

ಆ್ಯಂಟಿಬಯೋಟಿಕ್ ಜನನೇಂದ್ರೀಯದಲ್ಲಿರುವ ಕೆಟ್ಟ ಹಾಗೂ ಒಳ್ಳೆಯ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ, ಇದರಿಂದಾಗಿ ಜನನೇಂದ್ರೀಯದಲ್ಲಿ ಸೋಂಕು ಉಂಟಾಗುವುದು. ಆ್ಯಂಟಿಬಯೋಟಿಕ್ ಜನನೇಂದ್ರೀಯದ pH ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ಜನನೇಂದ್ರೀಯದ ಸೋಂಕು ಉಂಟಾಗುವುದು.

ಜನನೇಂದ್ರೀಯದ ಸೋಂಕಿನ ಲಕ್ಷಣಗಳು

ಜನನೇಂದ್ರೀಯದ ಸೋಂಕಿನ ಲಕ್ಷಣಗಳು

* ಜನನೇಂದ್ರೀಯದ ಸುತ್ತ ಉರಿ ಕಂಡು ಬರುವುದು

* ಬಿಳಿ ಮತ್ತು ವಾಸನೆ ರಹಿತ ಬಿಳುಪು ಹೋಗುವುದು

* ಸೆಕ್ಸ್ ಸಮಯದಲ್ಲಿ ನೋವುಂಟಾಗುವುದು

* ಮೂತ್ರವಿಸರ್ಜನೆ ಸಮಯದಲ್ಲಿ ನೋವುಂಟಾಗುವುದು

* ಬಿಳುಪು ಹೋಗುವುದು ಹೆಚ್ಚುವುದು.

ಜನನೇಂದ್ರೀಯದ ಸೋಂಕು ಕಂಡು ಬಂದಾಗ ಏನು ಮಾಡಬೇಕು?

ಜನನೇಂದ್ರೀಯದ ಸೋಂಕು ಕಂಡು ಬಂದಾಗ ಏನು ಮಾಡಬೇಕು?

* ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಿರಿ

* ಜೀರಿಗೆ ನೀರು ಮಾಡಿ ಕುಡಿಯಿರಿ

* ಎಳನೀರು ಕುಡಿಯಿರಿ

* ಗಂಜಿ ನೀರು ಕೂಡ ಒಳ್ಳೆಯದು

English summary

Antibiotics Overdose During Covid-19 Cause Vaginal Infection, Here is How To Avoid in Kannada

Antibiotics overdose during covid-19 cause vaginal infection, here is how to avoid in Kannada,
Story first published: Wednesday, January 19, 2022, 16:13 [IST]
X
Desktop Bottom Promotion