Just In
- 6 hrs ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 8 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
- 10 hrs ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 12 hrs ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
Don't Miss
- News
ಆಟಿಕೆ ಬಂದೂಕು ತೋರಿಸಿ ಮುಖ್ಯಮಂತ್ರಿ ಅಣ್ಣನನ್ನೇ ಅಪಹರಿಸಿದ ಐನಾತಿಗಳು
- Finance
ಫಾಸ್ಟ್ಟ್ಯಾಗ್ ಡೆಡ್ಲೈನ್ಗೆ ಸ್ವಲ್ಪ ವಿನಾಯಿತಿ
- Sports
ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ
- Technology
ಲಿಂಕ್ಸ್ ಗಳನ್ನು ಕ್ಯೂಆರ್ ಕೋಡ್ ಬಳಸಿ ಹಂಚಿಕೊಳ್ಳುವುದು ಹೇಗೆ?
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Movies
ಜಯಲಲಿತಾ ಸಿನಿಮಾ ಬಳಿಕ ಮತ್ತೊಬ್ಬ ಸಿಎಂ ಬಯೋಪಿಕ್ ಸಾಧ್ಯತೆ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಬೆನ್ನಿನ ಬೊಜ್ಜು ಕರಗಿಸಲು ಕೆಲವು ವ್ಯಾಯಾಮಗಳು
ಹೆಚ್ಚಿನ ಜನರು ತಮ್ಮ ಹೊಟ್ಟೆಯ ಬೊಜ್ಜು ಅಥವಾ ತೊಡೆಗಳಲ್ಲಿನ ಬೊಜ್ಜಿನ ಬಗ್ಗೆ ಮಾತನಾಡುವರು. ಆದರೆ ನೀವು ಯಾವತ್ತಾದರೂ ಬೆನ್ನ ಹಿಂದೆ ಇರುವಂತಹ ಬೊಜ್ಜಿನ ಬಗ್ಗೆ ತಿಳಿದುಕೊಂಡಿದ್ದೀರಾ? ನಮಗೆ ಬೆನ್ನು ಕಾಣಿಸದೆ ಇರುವ ಕಾರಣದಿಂದಾಗಿ ಬೊಜ್ಜು ಕೂಡ ಅದೇ ರೀತಿಯಲ್ಲಿ ಇರುವುದು. ಆದರೆ ನಾವು ಬೆನ್ನಿನಲ್ಲಿ ಇರುವಂತಹ ಕೊಬ್ಬನ್ನು ಕಡೆಗಣಿಸಬಾರದು. ಯಾಕೆಂದರೆ ಇದು ಮಧುಮೇಹ, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್(ಪಿಸಿಒಎಸ್) ಮತ್ತು ಬಂಜೆತನ ಕಾಣಿಸಿಕೊಳ್ಳಬಹುದು. ಬೆನ್ನಿನಲ್ಲಿ ಇರುವಂತಹ ಬೊಜ್ಜನ್ನು ಕರಗಿಸಲು ಇರುವಂತ ಎರಡು ವಿಧಾನಗಳೆಂದರೆ ಅದು ಆರೋಗ್ಯಕಾರಿ ಆಹಾರ ಕ್ರಮ ಮತ್ತು ತೀವ್ರ ವ್ಯಾಯಾಮ ಮಾಡುವುದು.
ಬೆನ್ನಿನಲ್ಲಿ ಇರುವಂತಹ ಸ್ನಾಯುಗಳು ನಮ್ಮ ದೈನಂದಿನ ಚಟುವಟಿಕೆಗಳಿಗೆ ಬಲ ನೀಡುವುದು ಮತ್ತು ಭುಜ, ಎದೆ ಮತ್ತು ಇತರ ಅಂಗಗಳ ಚಲನಶೀಲತೆಗೆ ನೆರವು ನೀಡುವುದು. ಬೆನ್ನಿನ ಸ್ನಾಯುಗಳು ನಮ್ಮ ಭಂಗಿ ಸುಧಾರಣೆ ಮಾಡುವುದು. ದೇಹದ ಯಾವುದೇ ಒಂದು ಅಂಗದ ಮೇಲೆ ಗಮನಹರಿಸುವುದು ತುಂಬಾ ಕಠಿಣ ಕೆಲಸ. ಆದರೆ ವ್ಯಾಯಾಮವು ಈ ಪರಿಸ್ಥಿತಿ ನಿವಾರಣೆ ಮಾಡಲು ನೆರವಾಗುವುದು.
ಬೆನ್ನಿನ ಕೊಬ್ಬು ಕರಗಿಸಲು ಇರುವಂತಹ ಕೆಲವೊಂದು ವ್ಯಾಯಾಮಗಳು
*ಯಾವುದೇ ವ್ಯಾಯಾಮ ಮಾಡುವ ಮೊದಲು ದೇಹವನ್ನು ಅದಕ್ಕೆ ಬೇಕಾದಂತೆ ಹೊಂದಿಕೊಳ್ಳಲು ವಾರ್ಮ್ ಅಪ್ ಮಾಡುವುದು ಅತೀ ಅಗತ್ಯವಾಗಿ ಇರುವುದು. ಇದರಲ್ಲಿ ಕೆಲವೊಂದು ವಾರ್ಮ್ ಅಪ್ ವ್ಯಾಯಾಮಗಳು ಈ ರೀತಿಯಾಗಿ ಇದೆ.
*ತಲೆ ತಿರುಗಿಸುವುದು, ಕುತ್ತಿಗೆ ಆಚೀಚೆ ತಿರುಗಿಸುವುದು, ಕೈಗಳನ್ನು ತಿರುಗಿಸುವುದು, ಭುಜಗಳನ್ನು ವೃತ್ತಾಕಾರದಲ್ಲಿ ತಿರುಗಿಸುವುದು, *ಮೊಣಿಕಟ್ಟನ್ನು ವೃತ್ತಾಕಾರದಲ್ಲಿ ತಿರುಗಿಸುವುದು, ಆಚೀಚೆ ಬಾಗುವುದು, ಮುಂದಕ್ಕೆ ಹಿಂದಕ್ಕೆ ಬಾಗುವುದು, ಹಿಂಗಾಲುಗಳನ್ನು ತಿರುಗಿಸುವುದು, ಸ್ವಲ್ಪ ಜಿಗಿಯುವುದು, ಅಲ್ಲೇ ಜಾಗಿಂಗ್ ರೀತಿ ಮಾಡುವುದು ಮತ್ತು ತುದಿಬೆರಳಿನಲ್ಲಿ ಹಾಗೆ ನಿಲ್ಲುವುದು. ಈಗ ತಯಾರಾಗಿದ್ದೀರಿ ಎಂದು ನಿಮಗೆ ಅನಿಸುವುದು.
ಒಂದು ಕೈಯ ಡಂಬ್ಬೆಲ್
*ಬಲದ ಕೈಯನ್ನು ನೀವು ನೆಲದ ಮೇಲೆ ಇಟ್ಟುಕೊಳ್ಳಿ ಅಥವಾ ಒಂದು ಕುರ್ಚಿ ಮೇಲೆ ಇಡಿ. ಅಂಗೈ, ಬೆನ್ನು ಮತ್ತು ಸೊಂಟದ ಭಾಗವು ಒಂದೇ ರೀತಿಯಲ್ಲಿ ಇರಲಿ. ಬಲದ ಮೊಣಕೈ ಭುಜಕ್ಕಿಂತ ಮೇಲೆ ಬರುವಂತೆ ಇರಲಿ ಮತ್ತು ಎಡದ ಮೊಣಕೈಯನ್ನು ಹಾಗೆ ಬಾಗಿಸಿ.
*ಎಡದ ಕೈಯಲ್ಲಿ ಡಂಬ್ಬೆಲ್ ನ್ನು ತೆಗೆದುಕೊಳ್ಳಿ ಮತ್ತು ಎಡದ ಕೈಯನ್ನು ತುಂಬಾ ಕೆಳಗೆ ಬಿಡಿ ಮತ್ತು ಈಗ ಮೇಲಕ್ಕೆ ಕುತ್ತಿಗೆ ತನಕ ಎತ್ತಿಕೊಳ್ಳಿ. ಮತ್ತೆ ಭುಜಗಳನ್ನು ಹಾಗೆ ಬಿಡಿ, ಕೆಳಗಡೆ ನೋಡಿ ಮತ್ತು ಇದು ಆರಂಭಿಕ ಭಂಗಿಯಾಗಿದೆ.
*ಮೊಣಕೈಯನ್ನು ಬಾಗಿಸಿಕೊಂಡು ಡಂಬ್ಬೆಲ್ ನ್ನು ನೀವು ಕಂಕುಳಿನ ತನಕ ತನ್ನಿ.
*ಈಗ ಮೊದಲಿನ ಸ್ಥಾನಕ್ಕೆ ನಿಧಾನವಾಗಿ ಕೈಯನ್ನು ತನ್ನಿ.
*ಒಂದು ಸಲ ಇದನ್ನು ಮಾಡಿದ ಬಳಿಕ ಬಲದ ಕೈಯಿಂದ ಮಾಡಿಕೊಳ್ಳಿ.
*ಲ್ಯಾಟ್ಸ್, ರೋಂಬಾಯ್ಡ್ ಗಳು, ಎರೆಕ್ಟರ್ ಸ್ಪಿನೆ, ಭುಜದ ಬ್ಲೇಡ್ ಗಳು, ಬಾಗುಗಳು, ಮತ್ತು ಕೋರ್ ಗೆ ಇದು ನೆರವಾಗುವುದು.
ರಿವರ್ಸ್ ಫ್ಲೈ
*ಎರಡು ಕೈಗಳಲ್ಲಿ ಡಂಬ್ಬೆಲ್ ಗಳನ್ನು ತೆಗೆದುಕೊಂಡು ಅದನ್ನು ಬಗ್ಗಿಕೊಂಡು ಮೇಲಕ್ಕೆ ಎತ್ತಿಕೊಳ್ಳಿ.
*ಎರಡು ಕೈಗಳನ್ನು ಚಲಿಸುವಂತೆ ಮಾಡಿ ಮತ್ತು ಇದು ಭುಜದ ಮಟ್ಟಕ್ಕೆ ತಲುಪಲಿ. ಈಗ ನೀವು ಭುಜದ ಗಟ್ಟಿಯಾದ ಮೂಳೆಯನ್ನು ನಿಧಾನವಾಗಿ ಒತ್ತಿಕೊಳ್ಳಿ.
*ಈಗ ಮೊದಲಿನ ಸ್ಥಾನಕ್ಕೆ ಬರಲು ಕೈಗಳನ್ನು ಕೆಳಗೆ ಬಿಡಿ.
*ಆರಂಭದಲ್ಲಿ ನೀವು ಮೂರು ಸೆಟ್ ನ 15 ರೆಪ್ಸ್ ಮಾಡಬಹುದು.
*ಲ್ಯಾಟ್ಸ್, ರೋಂಬಾಯ್ಡ್ ಗಳು, ಎರೆಕ್ಟರ್ ಸ್ಪಿನೆ, ಭುಜದ ಬ್ಲೇಡ್ ಗಳು, ಬಾಗುಗಳು, ಮತ್ತು ಕೋರ್ ಗೆ ಇದು ನೆರವಾಗುವುದು.
ಬರ್ಡ್ ಡಾಗ್ ಕ್ರಂಚ್
*ನಿಮ್ಮ ಕೈಗಳು ಹಾಗೂ ಮೊಣಕಾಲುಗಳನ್ನು ನಾಯಿಯ ಭಂಗಿಯಲ್ಲಿ ಇಟ್ಟುಬಿಡಿ.
*ಬಲದ ಕೈಗಳನ್ನು ಈಗ ಹೊರಗೆ ತೆಗೆಯಿರಿ ಮತ್ತು ಎಡದ ಕಾಲುಗಳನ್ನು ನಿಮ್ಮ ಹಿಂದೆ ಇಟ್ಟುಕೊಳ್ಳಿ.
*ಮೊಣಕೈ ಮತ್ತು ಮೊಣಕಾಲುಗಳು ಒಂದಕ್ಕೊಂದು ತಾಗುವಂತೆ ನೀವು ಕ್ರಂಚ್ ಮಾಡಿ.
*ಮೊದಲಿನ ಸ್ಥಾನಕ್ಕೆ ಬನ್ನಿ ಮತ್ತು ಇನ್ನೊಂದು ಬದಿಯಿಂದ ಹೀಗೆ ಮಾಡಿ.
*ನೀವು ಆರಂಭದಲ್ಲಿ 2 ಸೆಕ್ಸ್ ಮತ್ತು 15 ರೆಪ್ಸ್ ಮಾಡಬಹುದು. ಈ ರೆಪ್ಸ್ ನ್ನು ಇದರ ಹಿಂಭಾಗದ ವಿಸ್ತರಣೆಗಳು, ಎರೆಕ್ಟರ್ ಸ್ಪಿನೆ, ಹಿಂಭಾಗದ *ಡೆಲ್ಟೋಯಿಡ್ಸ್, ಎಬಿಎಸ್ ಮತ್ತು ಗ್ಲೂಟ್ಸ್ ಗೆ ಇದು ನೆರವಾಗುವುದು.
ಸೂಪರ್ ಮೆನ್ ಪೋಸ್
*ಚಾಪೆ ಹಾಕಿಕೊಂಡು ಅದರ ಮೇಲೆ ಹೊಟ್ಟೆಯಲ್ಲಿ ಮಲಗಿ ಮತ್ತು ಕಾಲುಗಳು ಮತ್ತು ಕೈಗಳನ್ನು ಅಗಲವಾಗಿಡಿ.
*ಬಲದ ಕೈಯನ್ನು ನೀವು ಮೇಲಕ್ಕೆ ಎತ್ತಿ ಮತ್ತು ಇದರ ಬಳಿಕ ಎಡದ ಕಾಲನ್ನು. ಇದೇ ವೇಳೆ ತಲೆಯನ್ನು ಮೂರು ಇಂಚಿನಷ್ಟು ಮೇಲಕ್ಕೆತ್ತಿ. ಹೊಟ್ಟೆಯ ಭಾಗವು ನೆಲಕ್ಕೆ ಹಾಗೆ ಅಂಟಿಕೊಂಡಿರಲಿ.
*ಹೀಗೆ ನೀವು ಮೂರು ಸೆಕೆಂಡುಗಳ ಕಾಲ ಇರಿ. ತಲೆ, ಕೈಗಳು ಮತ್ತು ಕಾಲುಗಳನ್ನು ಕೆಳಗೆ ಬಿಟ್ಟು ಮೊದಲಿನ ಸ್ಥಿತಿಗೆ ಬನ್ನಿ.
*ಇನ್ನೊಂದು ಬದಿಗೆ ನೀವು ಇದನ್ನು ಬದಲಾಯಿಸಿಕೊಳ್ಳಿ. ತಲೆ, ಕೈಗಳು ಮತ್ತು ಕಾಲನ್ನು ಮೇಲಕೆತ್ತಿ.
*2 ಸೆಟ್ ಗಳ 15 ರೆಪ್ಸ್ ಮಾಡಿ.
*ಬೆನ್ನು, ಕಿಬ್ಬೊಟ್ಟೆ ಮತ್ತು ಬೆನ್ನಿನ ಸ್ನಾಯುಗಳಿಗೆ ನೆರವಾಗುವುದು.