For Quick Alerts
ALLOW NOTIFICATIONS  
For Daily Alerts

ದೇಹದ ಲಿವರ್‌ನ ಆರೋಗ್ಯಕ್ಕೆ ಪವರ್‌ಫುಲ್ ಜ್ಯೂಸ್‌ಗಳು

|

ಲಿವರ್ ಅಥವಾ ಪಿತ್ತಜನಕಾಂಗ ಮನುಷ್ಯನ ದೇಹದ ಅತ್ಯಂತ ಪ್ರಮುಖ ಅಂಗವಾಗಿದೆ. ಲಿವರ್ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರ ಹಾಕಿ ದಿನನಿತ್ಯದ ಚಟುವಟಿಕೆಗೆ ಬೇಕಾಗುವ ಶಕ್ತಿಯನ್ನು ಸಂಗ್ರಹಿಸುತ್ತದೆ. ಪಿತ್ತರಸವನ್ನು ಉತ್ಪಾದಿಸಿ ಉಂಡ ಆಹಾರ ಜೀರ್ಣವಾಗಲು ಇದು ಕೆಲಸ ಮಾಡುತ್ತದೆ. ಹೀಗೆ ನಮ್ಮ ದೇಹವನ್ನು ಚೈತನ್ಯದಾಯಕವಾಗಿ ಮಾಡುವ ಲಿವರ್‌ನ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಅಗತ್ಯ. ಹಣ್ಣು ಹಾಗೂ ತರಕಾರಿಗಳ ತಾಜಾ ರಸದ ಸೇವನೆಯಿಂದ ಲಿವರ್‌ಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸಿ ಲಿವರ್ ಆರೋಗ್ಯ ಕಾಪಾಡಲು ಸಾಧ್ಯ...

ದೇಹದ ಆರೋಗ್ಯಕ್ಕೆ ನೀರು ಅಗತ್ಯ

ದೇಹದ ಆರೋಗ್ಯಕ್ಕೆ ನೀರು ಅಗತ್ಯ

ತಾಜಾ ಹಣ್ಣು ಹಾಗೂ ತರಕಾರಿಗಳ ರಸದ ಸೇವನೆಯಿಂದ ಅವುಗಳಲ್ಲಿ ಇರುವ ಹೆಚ್ಚಿನ ತೇವಾಂಶದ ಕಾರಣದಿಂದ ದೇಹದ ಕಲ್ಮಶಗಳನ್ನು ಸುಲಭವಾಗಿ ಹೊರಹಾಕಲು ಲಿವರ್‌ಗೆ ಸಾಧ್ಯವಾಗುತ್ತದೆ. ನಾವು ಸೇವಿಸುವ ಕೊಬ್ಬಿನ ಅಂಶವನ್ನು ಜೀರ್ಣಗೊಳಿಸಲು ಲಿವರ್ ನೀರನ್ನು ಉಪಯೋಗಿಸುತ್ತದೆ. ಹೀಗಾಗಿ ನೀರಿನ ಕೊರತೆಯಾದಲ್ಲಿ ಲಿವರ್ ಮೇಲೆ ಒತ್ತಡ ಜಾಸ್ತಿ ಆಗುತ್ತದೆ. ಒಬ್ಬ ವ್ಯಕ್ತಿ ದಿನಕ್ಕೆ ಇಷ್ಟೇ ಪ್ರಮಾಣದ ನೀರು ಕುಡಿಯಬೇಕೆಂದು ಯಾವುದೇ ನಿರ್ದಿಷ್ಟ ಮಾನದಂಡವಿಲ್ಲದಿದ್ದರೂ ತಜ್ಞ ವೈದ್ಯರ ಪ್ರಕಾರ ದಿನಕ್ಕೆ ಆರರಿಂದ ಎಂಟು ಗ್ಲಾಸ್ ನೀರು ಕುಡಿಯುವುದು ಉತ್ತಮ ಎನ್ನಲಾಗಿದೆ. ಬೇಸಿಗೆಯ ಉಷ್ಣ ವಾತಾವರಣ ಇದ್ದಲ್ಲಿ ಅಥವಾ ಅತಿಯಾದ ದೈಹಿಕ ಶ್ರಮದ ಕೆಲಸ ಮಾಡುತ್ತಿದ್ದಲ್ಲಿ ಹೆಚ್ಚು ನೀರು ಸೇವಿಸುವುದು ಸೂಕ್ತ. ಕೆಲವು ಹಣ್ಣು ಹಾಗೂ ತರಕಾರಿಗಳಿಂದ ಮಾಡಿದ ಜ್ಯೂಸ್ ಸೇವನೆಯಿಂದ ಲಿವರ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು. ಪ್ರಮುಖವಾಗಿ ಯಾವ ಹಣ್ಣು ಹಾಗೂ ತರಕಾರಿಯ ರಸ ಲಿವರ್ ಆರೋಗ್ಯಕ್ಕೆ ಉತ್ತಮವಾಗಿದೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ. ಲಿವರ್ ಆರೋಗ್ಯಕ್ಕೆ ಅತ್ಯುತ್ತಮ ನೈಸರ್ಗಿಕ ಪೇಯಗಳು

Most Read: ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!

ತಾಜಾ ಬೀಟ್ರೂಟ್ ರಸ

ತಾಜಾ ಬೀಟ್ರೂಟ್ ರಸ

ತಾಜಾ ಬೀಟ್ರೂಟ್ ರಸ ಸಿಹಿಯಾಗಿದ್ದು ಇದರಲ್ಲಿ ಪಾಲಿಫೆನಾಲ್ಸ್ ಹಾಗೂ ನೈಸರ್ಗಿಕ ಆಂಟಿ ಆಕ್ಸಿಡೆಂಟ್ ಇರುತ್ತವೆ. ದೇಹದಲ್ಲಿನ ಕಶ್ಮಲಗಳಿಂದ ಲಿವರ್‌ನ ಜೀವಕೋಶಗಳಿಗೆ ಹಾನಿಯಾಗದಂತೆ ಇವು ರಕ್ಷಣೆ ನೀಡುತ್ತವೆ. 'ನ್ಯೂಟ್ರಿಷನ್' ಎಂಬ ವೈಜ್ಞಾನಿಕ ನಿಯತಕಾಲಿಕದಲ್ಲಿ 2007 ರಲ್ಲಿ ಪ್ರಕಟವಾದ ವೈಜ್ಞಾನಿಕ ಅಧ್ಯಯನ ವರದಿಯ ಪ್ರಕಾರ, ಬೀಟ್ರೂಟ್‌ನಲ್ಲಿರುವ ಪಾಲಿಫೆನಾಲ್‌ಗಳು ಲಿವರ್‌ನ ಆಂಟಿಆಕ್ಸಿಡೆಂಟ್‌ಗಳ ಕ್ಷಮತೆಯನ್ನು ಹೆಚ್ಚಿಸಿ ಲಿವರ್ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತವೆ ಎಂದು ತಿಳಿಸಲಾಗಿದೆ. ಕೆಲ ಪ್ರಾಣಿಗಳ ಮೇಲೆ ಮಾಡಲಾದ ಈ ಅಧ್ಯಯನವನ್ನು ಮಾನವ ದೇಹದ ಮೇಲೆ ಇನ್ನಷ್ಟೆ ಮಾಡಬೇಕಿದೆ.

ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿರುವ ಬ್ಲ್ಯೂ ಬೆರ್ರಿ ಜ್ಯೂಸ್

ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿರುವ ಬ್ಲ್ಯೂ ಬೆರ್ರಿ ಜ್ಯೂಸ್

ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಬ್ಲ್ಯೂ ಬೆರ್ರಿ ಜ್ಯೂಸ್ ಲಿವರ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆಯಲ್ಲದೆ ಲಿವರ್ ಒಳಗೆ ಗಾಯಗಳಾಗುವ ಸಂಭವಗಳನ್ನು ಕಡಿಮೆ ಮಾಡುತ್ತದೆ. 2013ರಲ್ಲಿ ಕೈಗೊಂಡ ಕೆಲ ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಇಲಿಗಳಿಗೆ ತಾಜಾ ಬ್ಲ್ಯೂ ಬೆರ್ರಿ ಜ್ಯೂಸ್ ಕೂಡಿಸಿದಾಗ ಅವುಗಳ ದೇಹದ ಲಿವರ್ ಮೇಲಿನ ಆಕ್ಸಿಡೇಟಿವ್ ಒತ್ತಡ ಕಡಿಮೆಯಾಗಿ ಲಿವರ್ ಗಾಯದ ಪ್ರಮಾಣ ಕಡಿಮೆಯಾಗಿದ್ದು ಕಂಡುಬಂದಿತು. ಬ್ಲ್ಯೂ ಬೆರ್ರಿ ಜ್ಯೂಸ್‌ನಿಂದ ಮಾನವ ದೇಹದ ಮೇಲಾಗುವ ಪರಿಣಾಮಗಳ ಬಗ್ಗೆ ಸಂಪೂರ್ಣ ಅಧ್ಯಯನಗಳು ಇನ್ನೂ ನಡೆಯಬೇಕಿವೆ.

Most Read: ದೇಹದ ಲಿವರ್​ನ ಆರೋಗ್ಯಕ್ಕೆ ಪವರ್ ಫುಲ್ ಆಹಾರಗಳು

ಕ್ರಾನಬೆರ್ರಿ ಜ್ಯೂಸ್

ಕ್ರಾನಬೆರ್ರಿ ಜ್ಯೂಸ್

ಕಿಡ್ನಿಗಳ ಉತ್ತಮ ಆರೋಗ್ಯಕ್ಕೆ ಸಹಕಾರಿಯಾದ ಕ್ರಾನಬೆರ್ರಿ ಲಿವರ್ ಆರೋಗ್ಯಕ್ಕೂ ಅತ್ಯಂತ ಉಪಯುಕ್ತವಾಗಿದೆ. 'ಜರ್ನಲ್ ಆಫ್ ಮೆಡಿಸಿನಲ್ ಫುಡ್'ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ 2007ರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರಾಣಿಗಳಿಗೆ ನಿಯಮಿತವಾಗಿ ಕ್ರಾನ್ ಬೆರಿ ಜ್ಯೂಸ್ ಕುಡಿಸಿದಾಗ ಅವುಗಳ ದೇಹದಲ್ಲಿನ ಟ್ರೈಗ್ಲಿಸರೀನ್ ಮಟ್ಟವು ಕಡಿಮೆಯಾಗಿರುವುದು ಕಂಡು ಬಂದಿತ್ತು. ಕ್ರಾನಬೆರ್ರಿ ಹಣ್ಣಿನಲ್ಲಿರುವ ನೈಸರ್ಗಿಕವಾದ ಆಂಟಿಆಕ್ಸಿಡೆಂಟ್ ಅಂಶಗಳು ದೇಹದಲ್ಲಿ ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸದೆ ಲಿವರ್‌ನ ಆರೋಗ್ಯವನ್ನು ವೃದ್ಧಿಸುತ್ತವೆ ಎಂಬುದು ತಿಳಿದುಬಂದಿದೆ.

English summary

Delicious Juices to Keep your Liver Healthy

Fresh beet juice is sweet-tasting and contains polyphenols, natural antioxidants that help reduce the risk of cell death and damage as a result of exposure to toxins. “Nutrition” published a study in 2007 in which scientists found that the polyphenols in beets boosted the liver’s natural antioxidant function and reduced the effects of oxidative stress on the liver. While promising, this animal study indicates that further research is required, particularly on humans.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more