For Quick Alerts
ALLOW NOTIFICATIONS  
For Daily Alerts

ಪಿಸ್ತಾ ತಿನ್ನುವುದರಿಂದ ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ...

By Arshad
|

ಒಣಫಲಗಳ ಸೇವನೆಯಿಂದ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ನಾವೆಲ್ಲರೂ ಅರಿತಿದ್ದೇವೆ. ಒಣಫಲಗಳಲ್ಲಿ ಬಾದಾಮಿ ಮತ್ತು ಪಿಸ್ತಾ ಅಗ್ರಸ್ಥಾನವನ್ನು ಪಡೆದಿವೆ. ಇದೇ ಕಾರಣಕ್ಕೆ ಪಿಸ್ತಾ-ಬಾದಾಮಿಯ ಜೋಡಿಯನ್ನು ಒಂದು ವಿಶೇಷಣವಾಗಿ ಉಲ್ಲೇಖಿಸಲಾಗುತ್ತದೆ. ಪಿಸ್ತಾಗಳ ಸೇವನೆಯಿಂದ ದೇಹದ ಬಹುತೇಕ ಎಲ್ಲಾ ಅಂಗಗಳಿಗೆ ಒಂದಲ್ಲಾ ಒಂದು ಪ್ರಯೋಜನವಿದ್ದೇ ಇದೆ.

ನಿತ್ಯವೂ ಸುಮಾರು ಒಂದು ಹಿಡಿಯಷ್ಟು ಪಿಸ್ತಾಗಳನ್ನು ಸೇವಿಸುವ ಮೂಲಕ ಇವುಗಳ ಪರಿಪೂರ್ಣ ಪ್ರಯೋಜನಗಳನ್ನು ಪಡೆಯಬಹುದು. ಇವು ತಿನ್ನಲು ರುಚಿಯಾಗಿರುವುದು ಮಾತ್ರವಲ್ಲ, ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚಿನ ಕರಗುವ ನಾರನ್ನು ಹೊಂದಿರುವ ಮೂಲಕ ಹೃದಯ ಮತ್ತು ರಕ್ತನಾಳಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಅಲ್ಲದೇ ರಕ್ತದಿಂದ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸುತ್ತದೆ ಹಾಗೂ ಈ ಮೂಲಕ ಎದುರಾಗುವ ಹೃದಯಸ್ತಂಭನ ಮತ್ತು ಹೃದಯಾಘಾತದಿಂದಲೂ ರಕ್ಷಿಸುತ್ತದೆ.

ಇವುಗಳ ಸೇವನೆಯಿಂದ ಕಣ್ಣು, ಮೆದುಳಿನ ಜೀವಕೋಶಗಳಿಗೆ ಹೆಚ್ಚಿನ ಪೋಷಣೆ ದೊರಕುತ್ತದೆ ಹಾಗೂ ಈ ಮೂಲಕ ಕಣ್ಣುಗಳ ಸವೆತ (macular degeneration)ದಿಂದ ರಕ್ಷಿಸುತ್ತದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಬಿ6 ಮೆದುಳಿಗೆ ಹರಿಯುವ ರಕ್ತದ ಪ್ರಮಾಣವನ್ನು ಹೆಚ್ಚಿಸಿ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ. ಬನ್ನಿ, ಪಿಸ್ತಾಗಳ ಸೇವನೆಯ ಪ್ರಯೋಜನಗಳು ಏನೇನಿವೆ ಎಂಬುದನ್ನು ನೋಡೋಣ...

ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ

ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ

ಪಿಸ್ತಾಗಳಲ್ಲಿ ಜಿಯಾಕ್ಸಾಂಥಿನ್ ಮತ್ತು ಲ್ಯೂಟಿನ್ ಎಂಬ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿವೆ. ಇವು ದೇಹದಿಂದ ಕಲ್ಮಶಗಳನ್ನು ನಿವಾರಿಸಿ ಕ್ಯಾನ್ಸರ್ ಆವರಿಸುವುದರಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ಕಣ್ಣಿನ ಸವೆತವನ್ನು ಇಲ್ಲವಾಗಿಸಿ ಕಣ್ಣುಗಳ ಆರೋಗ್ಯ ವೃದ್ಧಿಸುತ್ತದೆ ಹಾಗೂ ಕುರುಡುತನದಿಂದ ರಕ್ಷಿಸುತ್ತದೆ.

ಮೆದುಳಿನ ಆರೋಗ್ಯ ಹೆಚ್ಚಿಸುತ್ತದೆ

ಮೆದುಳಿನ ಆರೋಗ್ಯ ಹೆಚ್ಚಿಸುತ್ತದೆ

ಪಿಸ್ತಾಗಳಲ್ಲಿ ವಿಟಮಿನ್ ಬಿ6 ಹೆಚ್ಚಿನ ಪ್ರಮಾಣದಲ್ಲಿವೆ. ಈ ವಿಟಮಿನ್ನುಗಳು ಮೆದುಳಿನ ಕ್ಷಮತೆಗೆ ಅತಿ ಅಗತ್ಯವಾಗಿವೆ. ಪಿಸ್ತಾ ಸೇವನೆಯಿಂದ ಮೆದುಳಿನ ಜೀವಕೋಶಗಳು ನಷ್ಟವಾಗುವುದನ್ನು ತಪ್ಪಿಸಬಹುದು ಹಾಗೂ ಮೆದುಳಿಗೆ ರಕ್ತಪರಿಚಲನೆ ಹೆಚ್ಚುವ ಮೂಲಕ ಸ್ಮರಣಶಕ್ತಿ ಹಾಗೂ ಏಕಾಗ್ರತೆಯೂ ಹೆಚ್ಚುತ್ತದೆ.

ಕೊಲೆಸ್ಟ್ರಾಲ್ ಮಟ್ಟಗಳನ್ನು ಕಡಿಮೆ ಮಾಡುತ್ತದೆ

ಕೊಲೆಸ್ಟ್ರಾಲ್ ಮಟ್ಟಗಳನ್ನು ಕಡಿಮೆ ಮಾಡುತ್ತದೆ

ಪಿಸ್ತಾ ಸೇವನೆಯಿಂದ ರಕ್ತದಲ್ಲಿ ಕೊಲೆಸ್ಟ್ರಾಲ್‌ಗಳ ಮಟ್ಟ ಆರೋಗ್ಯಕರ ಮಿತಿಗಳಲ್ಲಿರಲು ಸಾಧ್ಯವಾಗುತ್ತದೆ. ಈ ಮೂಲಕ ಹೃದಯಾಘಾತ ಹಾಗೂ ಹೃದಯಸ್ತಂಭನದ ಸಾಧ್ಯತೆ ಕಡಿಮೆಯಾಗುತ್ತದೆ. ಅಲ್ಲದೇ ರಕ್ತನಾಳಗಳ ಒಳಗೆ ಸಂಗ್ರಹಗೊಂಡಿದ್ದ ಜಿಡ್ಡು ಸಡಿಲಗೊಂಡು ನಿವಾರಣೆಯಾಗುವ ಮೂಲಕ ರಕ್ತನಾಳಗಳು ಶುದ್ದಿಗೊಂಡು ರಕ್ತಪರಿಚಲನೆ ಸರಾಗವಾಗುತ್ತದೆ ತನ್ಮೂಲಕ ಅಧಿಕ ಹೃದಯದೊತ್ತಡವೂ ಕಡಿಮೆಯಾಗುತ್ತದೆ.

ತಾರುಣ್ಯವನ್ನು ಕಾಪಾಡುತ್ತದೆ

ತಾರುಣ್ಯವನ್ನು ಕಾಪಾಡುತ್ತದೆ

ಪಿಸ್ತಾ ಸೇವನೆಯ ಮೂಲಕ ಜೀವಕೋಶಗಳ ಸವೆತ ತಡೆಯುತ್ತದೆ ಹಾಗೂ ತಾರುಣ್ಯವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಪಿಸ್ತಾಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿರುವ ಫ್ರೀ ರ್‍ಯಾಡಿಕಲ್ ಗಳನ್ನು ನಿವಾರಿಸುವ ಮೂಲಕ ವೃದ್ದಾಪ್ಯ ಆವರಿಸುವುದನ್ನು ತಡವಾಗಿಸುತ್ತದೆ.

ದೇಹಕ್ಕೆ ಶಕ್ತಿ ಒದಗಿಸುತ್ತದೆ

ದೇಹಕ್ಕೆ ಶಕ್ತಿ ಒದಗಿಸುತ್ತದೆ

ಪಿಸ್ತಾಗಳಲ್ಲಿ ಹೆಚ್ಚಿನ ಶಕ್ತಿ ತುಂಬಿದ್ದು ಇವುಗಳ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಚುರುಕುತನ ಲಭಿಸುತ್ತದೆ. ಇವುಗಳಲ್ಲಿ ಹಲವು ಪೋಷಕಾಂಶಗಳು ತುಂಬಿದ್ದು ಜೊತೆಯಲ್ಲಿ ಅವಶ್ಯಕ ಕೊಬ್ಬಿನ ಆಮ್ಲ ಹಾಗೂ ಕರಗುವ ನಾರು ಸಹಾ ಇವೆ. ಇವೆಲ್ಲವೂ ದೇಹಕ್ಕೆ ಹೆಚ್ಚಿನ ಶಕ್ತಿ ಒದಗಿಸುವ ಮೂಲಕ ದಿನವಿಡೀ ಚಟುವಟಿಕೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ಮಧುಮೇಹದಿಂದ ರಕ್ಷಣೆ ಒದಗಿಸುತ್ತದೆ

ಮಧುಮೇಹದಿಂದ ರಕ್ಷಣೆ ಒದಗಿಸುತ್ತದೆ

ಪಿಸ್ತಾಗಳಲ್ಲಿ ಗಂಧಕ ಹೆಚ್ಚಿನ ಪ್ರಮಾಣದಲ್ಲಿದೆ ಹಾಗೂ ಇವು ಆಹಾರದಲ್ಲಿರುವ ಪ್ರೋಟೀನುಗಳನ್ನು ಒದೆದು ಅಮೈನೋ ಆಮ್ಲಗಳನ್ನಾಗಿಸಲು ನೆರವಾಗುತ್ತದೆ. ಈ ಅಮೈನೋ ಆಮ್ಲಗಳು ದೇಹದಲ್ಲಿ ಅಗತ್ಯ ಪ್ರಮಾಣದ ಇನ್ಸುಲಿನ್ ಉತ್ಪತ್ತಿಯಾಗಲು ನೆರವಾಗುತ್ತದೆ. ತನ್ಮೂಲಕ ಮಧುಮೇಹ ಆವರಿಸುವುದನ್ನು ತಡವಾಗಿಸುತ್ತದೆ.

ರಕ್ತಪರಿಚಲನೆ ಉತ್ತಮಗೊಳಿಸುತ್ತದೆ

ರಕ್ತಪರಿಚಲನೆ ಉತ್ತಮಗೊಳಿಸುತ್ತದೆ

ಪಿಸ್ತಾಗಳ ಸೇವನೆಯಿಂದ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ದೇಹದೆಲ್ಲೆಡೆ ಆಮ್ಲಜನಕ ಪೂರೈಕೆಯಾಗಲು ನೆರವಾಗುತ್ತದೆ. ಇದರಿಂದ ಹಲವು ಅಂಗಗಳು ಸವೆತದಿಂದ ರಕ್ಷಣೆ ಪಡೆಯುತ್ತವೆ ಹಾಗೂ ಪೋಷಕಾಂಶಗಳು ಪ್ರತಿ ಜೀವಕೋಶಕ್ಕೂ ತಲುಪಲು ನೆರವಾಗುತ್ತದೆ. ಅಲ್ಲದೇ ಪಿಸ್ತಾಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ರಕ್ತಕಣಗಳ ಸಂಖ್ಯೆಯೂ ವೃದ್ಧಿಸುತ್ತದೆ.

ನರವ್ಯೂಹ ವ್ಯವಸ್ಥೆ

ನರವ್ಯೂಹ ವ್ಯವಸ್ಥೆ

ಪಿಸ್ತಾದಲ್ಲಿರುವ ವಿಟಮಿನ್ B6 ನರವ್ಯೂಹ ವ್ಯವಸ್ಥೆಗು ಭಾರೀ ಪ್ರಯೋಜನವನ್ನುಂಟು ಮಾಡುತ್ತದೆ. ಅಮೈನೊಗಳು ನರವ್ಯೂಹದಲ್ಲಿ ಸಂವಹನದ ಕೆಲಸವನ್ನು ಮಾಡುತ್ತವೆ. ಈ ಅಮೈನೋ ಆಮ್ಲವನ್ನು ಅಧಿಕಗೊಳಿಸಲು ನಮ್ಮದೇಹಕ್ಕೆ ಅಧಿಕ ಪ್ರಮಾಣದಲ್ಲಿ ವಿಟಮಿನ್ B6 ಬೇಕಾಗುತ್ತೆ. ಈ ವಿಟಮಿನ್‍ಗಳು ನರಗಳ ಎಳೆಗಳ ಸುತ್ತ ಮೈಯೆಲಿನ್ ಎಂಬ ಪದರವನ್ನು ನಿರ್ಮಾಣ ಮಾಡುತ್ತವೆ. ಸಂದೇಶಗಳು ಈ ಎಳೆಗಳ ಮೂಲಕ ನರದಿಂದ ನರಕ್ಕೆ ವರ್ಗಾವಣೆಗೊಳ್ಳುತ್ತವೆ. ವಿಟಮಿನ್ B6 ಅಮೈನೊ ಆಮ್ಲವನ್ನು ಹೆಚ್ಚು ಮಾಡಿ ನರಗಳಲ್ಲಿ ಸಂವಹನ ಸರಾಗವಾಗಿ ಸಾಗುವಂತೆ ಮಾಡಲು ನೆರವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ವಿಟಮಿನ್ B6ಗಳು ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಭಾರೀ ಪ್ರಯೋಜನಕಾರಿಯಾಗಿರುತ್ತವೆ. ಇವುಗಳು ರಕ್ತವನ್ನು ಹೆಚ್ಚಿಸುತ್ತವೆ ಮತ್ತು ದೇಹದಲ್ಲಿ ಸರಾಗವಾಗಿ ರಕ್ತ ಪರಿಚಲನೆಯಾಗುವಂತೆ ಮಾಡುತ್ತವೆ.

ಆರೋಗ್ಯಕರ ಮಿದುಳಿಗಾಗಿ

ಆರೋಗ್ಯಕರ ಮಿದುಳಿಗಾಗಿ

ಪಿಸ್ತಾದಲ್ಲಿ ಯಥೇಚ್ಛವಾಗಿ ದೊರೆಯುವ ವಿಟಮಿನ್ B6 ರಕ್ತದಲ್ಲಿ ಹಿಮೋಗ್ಲೋಬಿನ್ ಅನ್ನು ಅಧಿಕಗೊಳಿಸುತ್ತದೆ. ಆಮ್ಲಜನಕವನ್ನು ಸಮೃದ್ಧವಾಗಿ ಹೊಂದಿದ ಈ ರಕ್ತವು ನಮ್ಮ ಮೆದುಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.

ಆರೋಗ್ಯಕಾರಿ ತ್ವಚೆಗಾಗಿ

ಆರೋಗ್ಯಕಾರಿ ತ್ವಚೆಗಾಗಿ

ಪಿಸ್ತಾ ಸೇವಿಸುವುದರಿಂದ ನಮ್ಮ ದೇಹಕ್ಕೆ ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಇ ಅಧಿಕ ಪ್ರಮಾಣದಲ್ಲಿ ದೊರೆಯುತ್ತದೆ. ಇವುಗಳಿಂದ ನಮಗೆ ಆರೋಗ್ಯಕಾರಿ ತ್ವಚೆಯು ದೊರೆಯುತ್ತದೆ. ಈ ವಿಟಮಿನ್ ಚರ್ಮದ ಪೊರೆಯಲ್ಲಿರುವ ಜೀವಕೋಶಗಳ ಪೊರೆ ಮತ್ತು ಮ್ಯೂಕಸ್ ಮೆಂಬ್ರೇನ್‍ಗಳ ಮಧ್ಯೆ ಐಕ್ಯತೆಯನ್ನು ತರುತ್ತದೆ. ಇದು ತ್ವಚೆಯನ್ನು ಅತಿ ನೇರಳೆ ಕಿರಣಗಳಿಂದ ಕಾಪಾಡಿ ಚರ್ಮ ರೋಗಗಳು ಬರದಂತೆ ತಡೆಯುತ್ತದೆ. ಹೀಗೆ ನಮಗೆ ಆರೋಗ್ಯಕಾರಿ ತ್ವಚೆ ಲಭ್ಯವಾಗುತ್ತದೆ.

ವಯಸ್ಸನ್ನು ಮರೆ ಮಾಚಲು

ವಯಸ್ಸನ್ನು ಮರೆ ಮಾಚಲು

ಪಿಸ್ತಾದಲ್ಲಿರುವ ವಿಟಮಿನ್ ಇಯು ತ್ವಚೆಗೆ ವಯಸ್ಸಾಗಿದ್ದನ್ನು ಕಾಣದಂತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ನಿಮ್ಮ ತ್ವಚೆಯು ಸದಾ ಕಳೆಯಿಂದ ಕೂಡಿ, ಯೌವನಭರಿತವಾಗಿರುತ್ತದೆ. ಪಿಸ್ತಾದಲ್ಲಿರುವ ಎಣ್ಣೆಯು ಮೃದುಕಾರಕ ಗುಣಗಳನ್ನು ಹೊಂದಿದ್ದು, ಇದು ತ್ವಚೆಯನ್ನು ಒಣಗಲು ಬಿಡದಂತೆ ಕಾಪಾಡಿ ಮತ್ತಷ್ಟು ಮಾಯಿಶ್ಚರೈಸ್ ಮಾಡುತ್ತದೆ. ಜೊತೆಗೆ ಈ ಎಣ್ಣೆ ಅಂಶವನ್ನು ಆರೋಮಾಗಳಿಗೆ, ಔಷಧೀಯ ಮಸಾಜ್ ಆಯಿಲ್‍ ಇತ್ಯಾದಿಗಳಿಗೆ ಬಳಸಲಾಗುತ್ತದೆ.

English summary

Wonderful Health Benefits of Pistachio

Nuts are well known for their health benefits and among all the nuts, you will find pistachios more useful. It has amazing health benefits as it is good for almost all your body organs. You must have a handful of pistachios daily after understanding the health benefits of these yummy nuts. They are less in calories and high in fibres and this makes it good for your heart and blood vessels. Here, we have summed up for you some important health benefits of pistachios.
X
Desktop Bottom Promotion