Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ಬರೀ 15 ದಿನಗಳಲ್ಲಿಯೇ ಬೊಜ್ಜು ಕರಗಿಸುವ 'ಅದ್ಭುತ ಜ್ಯೂಸ್'
ಡೊಳ್ಳು ಹೊಟ್ಟೆಯ ಬೊಜ್ಜು ಆವರಿಸಿಕೊಂಡ ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಆತನನ್ನು ಹೀಯಾಳಿಸುವವರೇ ಹೆಚ್ಚು. ಇಂತಹ ಪರಿಸ್ಥಿತಿ ನಿಮಗೂ ಬಂದಿದ್ದರೆ ಅದನ್ನು ನಿಭಾಯಿಸುವುದು ತುಂಬಾ ಕಷ್ಟ. ಇದು ನಿಮ್ಮಲ್ಲಿ ತುಂಬಾ ಕ್ರೋಧ ಉಂಟು ಮಾಡಬಹುದು. ಮುಂದೆ ನೀವು ಹೊಟ್ಟೆಯ ಕೊಬ್ಬು, ಬೊಜ್ಜು ಇಳಿಸಲು ಶ್ರಮ ಪಡಬಹುದು. ಆದರೆ ಇದರಲ್ಲಿ ಯಶಸ್ಸು ಸಿಕ್ಕಿರುವುದಿಲ್ಲ.
ಹೊಟ್ಟೆಯ ಕೊಬ್ಬು ಆರೋಗ್ಯಕ್ಕೂ ತುಂಬಾ ಅಪಾಯಕಾರಿ. ಹೊಟ್ಟೆಯ ಕೊಬ್ಬು ಅಷ್ಟು ಸುಲಭದಲ್ಲಿ ಕರಗುವುದಿಲ್ಲ ಮತ್ತು ಇದಕ್ಕೆ ತುಂಬಾ ಶ್ರಮ ಬೇಕಾಗುವುದು. ನೀವು ಕೊಬ್ಬು ಕರಗಿಸುವ ಜ್ಯೂಸ್ ಕುಡಿದರೆ ಕೇವಲ 15 ದಿನಗಳಲ್ಲಿ ಹೊಟ್ಟೆಯ ಕೊಬ್ಬು ಕರಗಿಸಿಕೊಳ್ಳಬಹುದು. ಈ ಜ್ಯೂಸ್ ಕುಡಿಯುವುದರೊಂದಿಗೆ ಆರೋಗ್ಯಕಾರಿ ಜೀವನಶೈಲಿ ಪಾಲಿಸಿಕೊಂಡು ಹೋಗುವುದು ಅತೀ ಅಗತ್ಯ.

ಎಲ್ಲಾ ರೀತಿಯ ಎಣ್ಣೆಯ ಮತ್ತು ಜಂಕ್ ಫುಡ್ ನ್ನು ಕಡೆಗಣಿಸಿ. ನಾರಿನಾಂಶ ಸಮೃದ್ಧವಾಗಿರುವಂತಹ ಓಟ್ಸ್, ಹಣ್ಣುಗಳು, ತರಕಾರಿಗಳು ಇತ್ಯಾದಿಗಳನ್ನು ಸೇವಿಸಿ. ದೈಹಿಕ ಚಟುವಟಿಕೆಯೊಂದಿಗೆ ದಿನಾಲೂ ಒಂದು ಗಂಟೆ ನಡೆಯಿರಿ. ಇದರಿಂದ ಹೊಟ್ಟೆಯ ಕೊಬ್ಬು ಕರಗಲು ನೆರವಾಗುವುದು. ಹೊಟ್ಟೆಯ ಕೊಬ್ಬಿನಿಂದ ಮಧುಮೇಹ, ಅಧಿಕ ರಕ್ತದೊತ್ತಡ ಇತ್ಯಾದಿ ಕಾಯಿಲೆಗಳು ಕಾಣಿಸಿಕೊಳ್ಳಬಹುದು.
ಹೊಟ್ಟೆಯ ಕೊಬ್ಬು ಕರಗಿಸುವ ಜ್ಯೂಸ್ ನ್ನು ನೀವು ಪ್ರತಿನಿತ್ಯ ಉಪಾಹಾರಕ್ಕೆ ಒಂದು ಗಂಟೆ ಮೊದಲು ಸೇವನೆ ಮಾಡಿ..
ಲಿಂಬೆ ಜ್ಯೂಸ್ ಮಾಡಿ ಕುಡಿಯಿರಿ
*ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಪ್ರಥಮವಾಗಿ ಲಿಂಬೆ ಹಣ್ಣಿನ ರಸ ಸೇರಿಸಿದ ನೀರು ಕುಡಿಯಿರಿ.
*ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಕ್ಕದಾದರೆ ಒಂದು, ದೊಡ್ಡದಾದರೆ ಅರ್ಧ ಲಿಂಬೆಯ ರಸವನ್ನು ಸೇರಿಸಿ. ಉಗುರು ಬೆಚ್ಚನೆಯ ನೀರು ಲಭ್ಯವಿಲ್ಲದಿದ್ದರೆ ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಸಹಾ ಬಳಸಬಹುದು. ಆದರೆ ಐಸ್ ಸೇರಿಸಿದ ಅಥವಾ ಫ್ರಿಜ್ಜಿನ ನೀರು ಬೇಡ.
*ನಂತರ ನಿಮ್ಮ ದೈನಂದಿನ ವ್ಯಾಯಾಮಗಳನ್ನು ಮಾಡಿ. ಕನಿಷ್ಟ ಮುಕ್ಕಾಲು ಗಂಟೆಯವರೆಗೆ ಬೇರೇನನ್ನೂ ಸೇವಿಸಬೇಡಿ.
*ಅತ್ಯಂತ ಆಯಾಸ ಅನ್ನಿಸಿದರೆ ಮಾತ್ರ ಅರ್ಧಗಂಟೆಯ ಬಳಿಕ ಕೊಂಚ ನೀರು ಕುಡಿಯಬಹುದು. ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಬಹುದು.
ಸೌತೆ ಜ್ಯೂಸ್ ಮಾಡಿ ಕುಡಿಯಿರಿ
ಒಂದು ಸೌತೆ, ಒಂದು ಲಿಂಬೆಯ ರಸ, ಒಂದು ದೊಡ್ಡಚಮಚ ತುರಿದ ಹಸಿಶುಂಠಿ, ಒಂದು ಹಿಡಿಯಷ್ಟು ಸಿಲಾಂಥ್ರೋ, ಎರಡು ದೊಡ್ಡ ಚಮಚ ಲೋಳೆಸರದ ರಸ ಹಾಗೂ ಒಂದು ಕಪ್ ನೀರನ್ನು ಚೆನ್ನಾಗಿ ಗೊಟಾಯಿಸಿ ದಿನಕ್ಕೆರಡು ಬಾರಿ ಕುಡಿಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
