ಎರಡೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗಿಸುವ ಪಾನೀಯಗಳು

Posted By: Arshad
Subscribe to Boldsky

ಸಪಾಟಾದ ಮತ್ತು ಮುಂದೆ ಬಂದಿರದ ಹೊಟ್ಟೆ ನಮಗೆಲ್ಲರಿಗೂ ಬೇಕು. ಇದು ದೇಹದ ಸೌಷ್ಟವವನ್ನು ಪ್ರದರ್ಶಿಸುವ ಜೊತೆಗೇ ಉತ್ತಮ ಆರೋಗ್ಯವಂತರು ಎಂದೂ ಬಿಂಬಿಸುತ್ತದೆ. ಆದರೆ ಸ್ಥೂಲಕಾಯ ಪ್ರಾರಂಭಾಗುವುದೇ ಹೊಟ್ಟೆ ಮತ್ತು ಸೊಂಟದಿಂದ. ಒಂದು ವೇಳೆ ಈಗಾಗಲೇ ಹೊಟ್ಟೆ ಬಂದಿದ್ದರೆ ಈ ಕೊಬ್ಬನ್ನು ಕರಗಿಸುವುದು ತುಂಬಾ ಕಷ್ಟ. ಏಕೆಂದರೆ ನಮ್ಮ ದೇಹ ಕೊಬ್ಬನ್ನು ಮೊದಲಾಗಿ ಸೊಂಟದ ಹತ್ತಿರ ಸಂಗ್ರಹಿಸುತ್ತದೆ ಹಾಗೂ ಕರಗಿಸಬೇಕಾದ ಸಮಯ ಬಂದಾಗ ಕಟ್ಟ ಕಡೆಯದಾಗಿ ಉಪಯೋಗಿಸುವ ಕಾರಣವೇ ಇದನ್ನು ಕರಗಿಸುವುದು ಭಾರೀ ಕಷ್ಟ. ಆದರೆ ಇದಕ್ಕೊಂದು ಸುಲಭ ಉಪಾಯವಿದೆ. ಕೆಲವು ಪಾನೀಯಗಳನ್ನು ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ಹದಿನೈದೇ ದಿನಗಳಲ್ಲಿ ಹೊಟ್ಟೆಯ ಕೊಬ್ಬನ್ನು ಸಾಕಷ್ಟು ಪ್ರಮಾಣದಲ್ಲಿ ಕರಗಿಸಬಹುದು.

ಆದರೆ ಕೇವಲ ಈ ಪಾನೀಯಗಳನ್ನು ಕುಡಿದರೆ ಸಾಲದು, ಕ್ರಿಕೆಟ್ ಆಟದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಉತ್ತಮವಾಗಿ ಆಡಿದರೆ ಮಾತ್ರವೇ ಜಯ ಸಿಕ್ಕುವಂತೆ ಹೊಟ್ಟೆ ಕರಗಿಸುವಲ್ಲಿ ಇತರ ಪ್ರಯತ್ನಗಳೂ ಅಗತ್ಯ. ನಿತ್ಯದ ಆಹಾರದಲ್ಲಿ ಎಣ್ಣೆ ಆದಷ್ಟು ಕಡಿಮೆ ಇರುವಂತೆ, ಸಿದ್ಧ ಹಾಗೂ ನಾರುರಹಿತ, ಮೈದಾ ಆಧಾರಿತ ಆಹಾರವಿರದಂತೆ ನೋಡಿಕೊಳ್ಳಬೇಕು. ನಾರಿನ ಪ್ರಮಾಣ ಹೆಚ್ಚಿರುವ ಓಟ್ಸ್, ಹಣ್ಣುಗಳು, ಹಸಿಯಾಗಿ ತಿನ್ನಬಹುದಾದ ತರಕಾರಿಗಳು ಮೊದಲಾದವುಗಳನ್ನು ಸೇವಿಸಬೇಕು. ಜೊತೆಗೇ ಸುಮಾರು ಒಂದು ಗಂಟೆಯಷ್ಟಾದರೂ ಬಿರುಸಿನ ನಡಿಗೆ ನಡೆಯಬೇಕು ಹಾಗು ಸಾಧ್ಯವಾದಷ್ಟು ವ್ಯಾಯಾಮಗಳನ್ನೂ ಮಾಡಬೇಕು. ಇವೆಲ್ಲವೂ ಕ್ಯಾಲೋರಿಗಳನ್ನು ಬಳಸಿ ಕೊಬ್ಬನ್ನು ದಹಿಸಲು ನೆರವಾಗುತ್ತವೆ. ವಿಶೇಷವಾಗಿ ಸೊಂಟದ ಕೊಬ್ಬನ್ನು ಬಳಸುವ ಮೂಲಕ ಸಪಾಟಾದ ಹೊಟ್ಟೆಯನ್ನು ಪಡೆಯಲು ಸಾಧ್ಯ.

ಹೊಟ್ಟೆಯ ಕೊಬ್ಬು ಮಧುಮೇಹ, ಅಧಿಕ ರಕ್ತದೊತ್ತಡ ಮೊದಲಾದ ಕಾಯಿಲೆಗಳಿಗೂ ಆಹ್ವಾನ ನೀಡುವುದರಿಂದ ಆದಷ್ಟು ಬೇಗನೇ ಇದರಿಂದ ಮುಕ್ತಿ ಪಡೆಯುವುದೇ ಒಳ್ಳೆಯದು. ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸುವ ಕೆಲವು ಪಾನೀಯಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. ಇದನ್ನು ಕುಡಿದ ಒಂದು ಗಂಟೆಯ ಬಳಿಕ ತಪ್ಪದೇ ಉಪಾಹಾರ ಸೇವಿಸಬೇಕು. ಈ ಮೂಲಕ ಹೊಟ್ಟೆಯ ಕೊಬ್ಬು ಶೀಘ್ರವಾಗಿ ಕಡಿಮೆಯಾಗಲು ತೊಡಗುತ್ತದೆ...

ಪಾನೀಯ-1

ಪಾನೀಯ-1

ಅಗತ್ಯವಿರುವ ಸಾಮಾಗ್ರಿಗಳು:

ಒಂದು ಎಳೆ ಸೌತೆ

ಎರಡು ಲಿಂಬೆಹಣ್ಣು

ಕೆಲವು ಪುದೀನಾ ಎಲೆಗಳು

ಎರಡು ದೊಡ್ಡ ಚಮಚದಷ್ಟು ಚಿಕ್ಕದಾಗಿ ತುರಿದ ಹಸಿಶುಂಠಿ

ನೀರು

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಮೊದಲು ಸೌತೆಕಾಯಿಯನ್ನು ಮಿಕ್ಸಿಯಲ್ಲಿ ಹಾಕಿ ಇದಕ್ಕೆ ಲಿಂಬೆರಸ ಸೇರಿಸಿ ಚೆನ್ನಾಗಿ ಗೊಟಾಯಿಸಿ.

ಬಳಿಕ ಪುದೀನಾ ಮತ್ತು ಶುಂಠಿಗಳನ್ನು ಸೇರಿಸಿ ಇನ್ನಷ್ಟು ಗೊಟಾಯಿಸಿ. ನಿಮಗೆ ಅಗತ್ಯವೆನಿಸಿದಷ್ಟು ನೀರು ಬೆರೆಸಿ.

ಈ ಪಾನೀಯವನ್ನು ನಿತ್ಯವೂ ಬೆಳಗ್ಗಿನ ಪ್ರಥಮ ಆಹಾರವಾಗಿ ಸತತವಾಗಿ ಹದಿನೈದು ದಿನ ಕಾಲ ಸೇವಿಸಿ.

ಪಾನೀಯ 2

ಪಾನೀಯ 2

ಬೆಳ್ಳುಳ್ಳಿ - ಮೂರು ಎಸಳು

ಒಂದು ದೊಡ್ಡ ಚಮಚ ಜೇನು

ಒಂದು ಲಿಂಬೆಹಣ್ಣು

ಉಗುರುಬೆಚ್ಚನೆಯ ನೀರು

ತಯಾರಿಕಾ ವಿಧಾನ

ತಯಾರಿಕಾ ವಿಧಾನ

*ಉಗುರುಬೆಚ್ಚನೆಯ ನೀರಿಗೆ ಲಿಂಬೆರಸ ಮತ್ತು ಜೇನು ಬೆರೆಸಿ. ಬೆಳಗ್ಗಿನ ಹೊತ್ತಿನಲ್ಲಿ ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಿದು ಹಸಿಯಾಗಿ ಜಗಿಯಿರಿ, ಆದರೆ ನುಂಗಬೇಡಿ. *ಬದಲಿಗೆ ಈ ನೀರನ್ನು ಕುಡಿಯುವಾಗ ಜಗಿದಿದ್ದ ಬೆಳ್ಳುಳ್ಳಿಯೂ ಹೊಟ್ಟೆಗೆ ಹೋಗುವಂತೆ ಮಾಡಿ.

*ಒಂದು ವೇಳೆ ನಿಮಗೆ ಬೆಳ್ಳುಳ್ಳಿಯ ರುಚಿ ಹಿಡಿಸದೇ ಇದ್ದರೆ ಇದನ್ನು ಮಿಕ್ಸಿಯಲ್ಲಿ ಈ ನೀರನ್ನು ಹಾಕಿ ಗೊಟಾಯಿಸಿ ಕುಡಿಯಿರಿ.

ಪಾನೀಯ 3

ಪಾನೀಯ 3

ಮೂಲಂಗಿ ನೂರು ಗ್ರಾಂ

ಕೊಂಚ ಹಸಿಶುಂಠಿ

ಮೂರು ಲಿಂಬೆಹಣ್ಣು

ನಾಲ್ಕು ದೊಡ್ಡ ಚಮಚ ಜೇನು

ಎರಡು ಚಿಕ್ಕ ಚಮಚ ದಾಲ್ಚಿನ್ನಿ ಪುಡಿ

ತಯಾರಿಕಾ ವಿಧಾನ

ತಯಾರಿಕಾ ವಿಧಾನ

*ಮೂಲಂಗಿ ಮತ್ತು ಶುಂಠಿಯನ್ನು ನುಣ್ಣಗೆ ರುಬ್ಬಿ.

*ಇದಕ್ಕೆ ಜೇನು, ಲಿಂಬೆರಸ, ದಾಲ್ಚಿನ್ನಿ ಪುಡಿ ಸೇರಿಸಿ ನಿಮಗೆ ಅಗತ್ಯವೆನಿಸಿದಷ್ಟು ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

*ಈ ಪಾನೀಯವನ್ನು ಪ್ರತಿದಿನ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಿ.

ಪಾನೀಯ 4: ಲೋಳೆಸರ+ಜೇನು

ಪಾನೀಯ 4: ಲೋಳೆಸರ+ಜೇನು

*ಹೊಟ್ಟೆಯ ಕೊಬ್ಬು ಕರಗಿಸಲು ಲೋಳೆಸರ ಉತ್ತಮ ಆಯ್ಕೆಯಾಗಿದೆ. ಅಲ್ಲದೇ ಇದು ಕರುಳುಗಳಲ್ಲಿನ ಕಲ್ಮಶಗಳನ್ನು ನಿವಾರಿಸುವ ಮೂಲಕ ಹೊಟ್ಟೆಯುಬ್ಬರಿಕೆಯನ್ನೂ ನಿವಾರಿಸುತ್ತದೆ.

*ಎರಡು ದೊಡ್ಡ ಚಮಚ ಲೋಳೆಸರದ ತಿರುಳನ್ನು ಹಿಂಡಿ ತೆಗೆದ ರಸ, ಒಂದು ದೊಡ್ಡ ಚಮಚ ಜೇನು ಹಾಗೂ ನಿಮಗೆ ಅಗತ್ಯವಿನಿಸಿದಷ್ಟು ನೀರನ್ನು ಬೆರೆಸಿ ಪ್ರತಿದಿನ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಿ, ಒಂದು ಗಂಟೆಯ ಬಳಿಕ ಉಪಾಹಾರ ಸೇವಿಸಿ.

ಪಾನೀಯ 5: ಸೇಬಿನ ಶಿರ್ಕಾ

ಪಾನೀಯ 5: ಸೇಬಿನ ಶಿರ್ಕಾ

ಒಂದು ದೊಡ್ಡ ಲೋಟ ತಣ್ಣೀರಿಗೆ ಎರಡು ದೊಡ್ಡ ಚಮಚ ಸೇಬಿನ ಶಿರ್ಕಾ, ಒಂದು ಮಧ್ಯಮ ಗಾತ್ರದ ಲಿಂಬೆಯ ರಸ, ಚಿಟಿಕೆಯಷ್ಟು ದಾಲ್ಚಿನ್ನಿ ಪುಡಿ ಹಾಗೂ ಕೊಂಚ ಜೇನು ಸೇರಿಸಿ ಮಿಶ್ರಣ ಮಾಡಿ. ಈ ಪಾನೀಯವನ್ನು ಪ್ರತಿದಿನ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಿ, ಒಂದು ಗಂಟೆಯ ಬಳಿಕ ಉಪಾಹಾರ ಸೇವಿಸಿ. ಇದು ತೂಕ ಇಳಿಸಲು ಹಾಗೂ ಹೊಟ್ಟೆಯ ಕೊಬ್ಬು ಕರಗಲು ಉತ್ತಮವಾಗಿದೆ.

English summary

Morning Drinks To Tighten Drooping Belly In two weeks!

We all desire to have a flat and well-toned belly, don't we? This is not only to look attractive but also to reflect that we are in a good state of heath. However, it is very difficult to melt the belly fat once you have gained it. Abdominal fat is the most adamant fat that doesn't melt easily and requires a lot of efforts. However, if you drink some belly-melting juices then it is possible to melt the belly fat faster in a matter of two weeks!