For Quick Alerts
ALLOW NOTIFICATIONS  
For Daily Alerts

ಪುರುಷರಿಗೆ ಶಿಶ್ನದಲ್ಲಿ ಯೀಸ್ಟ್ ಇನ್‌ಫೆಕ್ಷನ್ ಆದರೆ ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

By Hemanth
|

ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವಂತಹ ಯೀಸ್ಟ್ (ಕಿಣ್ವ) ಸೋಂಕು ಪುರುಷರಿಗೂ ಸಮಸ್ಯೆಯುಂಟು ಮಾಡಬಹುದು. ಶಿಶ್ನದ ತಲೆಯಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನು ಬಾಲನಿಟಿಸ್ ಎಂದು ಕರೆಯಲಾಗುವುದು. ಶಿಶ್ನದಲ್ಲಿ ಕಂಡು ಬರುವಂತಹ ಯೀಸ್ಟ್ ಸೋಂಕನ್ನು ಕ್ಯಾಂಡಿಡಲ್ ಬಾಲನಿಟಿಸ್ ಅಥವಾ ಬಾಲನಿಟಿಸ್ ಎಂದು ಕರೆಯಲಾಗುತ್ತದೆ. ಶಿಶ್ನದಲ್ಲಿ ಕಾಣಿಸಿಕೊಳ್ಳುವ ಯೀಸ್ಟ್ ಸೋಂಕಿಗೆ ಕೆಲವೊಂದು ಮನೆಮದ್ದುಗಳು ಯಾವುದು ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ.

home remedies for yeast infection in men

ಮಹಿಳೆಯರಲ್ಲಿ ಯೋನಿಯ ಯೀಸ್ಟ್ ಸೋಂಕು ಇರುವಾಗ ನೀವು ಆಕೆಯ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಗ ನಿಮಗೆ ಶಿಶ್ನದ ಯೀಸ್ಟ್ ಸೋಂಕು ಕಾಣೀಸುವುದು. ಇದಕ್ಕೆ ಸರಿಯಾಗಿ ಚಿಕಿತ್ಸೆ ಮಾಡದೆ ಇದ್ದರೆ ಆಗ ಇದು ರಕ್ತನಾಳಗಳಿಗೆ ಕೂಡ ಹಬ್ಬುವುದು. ಕ್ಯಾಂಡಿಡಲ್ ಬಾಲನಿಟಿಸ್ ಗೆ ಶೇ.30-35ರಷ್ಟು ಕ್ಯಾಂಡಿಡಲ್ ಯೀಸ್ಟ್ ಕಾರಣವೆಂದು ಜರ್ನಲ್ ಕ್ಲಿನಿಕಲ್ ಮೈಕ್ರೋಬಯೋಲಾಜಿ ರಿವಿವ್ಯೂನಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನವು ಹೇಳಿದೆ. ಇತರ ಕೆಲವು ಅಧ್ಯಯನಗಳ ಪ್ರಕಾರ ಶೇ. 16-27ರಷ್ಟು ಪುರುಷರು ಯೀಸ್ಟ್ ಹೊಂದಿರುತ್ತಾರೆ ಮತ್ತು ಶೇ. 37ರಷ್ಟು ಪುರುಷರಲ್ಲಿ ಕ್ಯಾಂಡಿಡಲ್ ನ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಶಿಶ್ನದಲ್ಲಿ ಕಾಣಿಸಿಕೊಳ್ಳುವ ಯೀಸ್ಟ್ ಸೋಂಕಿಗೆ ಹಲವಾರು ರೀತಿಯ ಚಿಕಿತ್ಸೆಗಳು ಲಭ್ಯವಿದೆ. ಇದಲ್ಲಿ ಮನೆಮದ್ದುಗಳು ಕೂಡ ಸೇರಿವೆ.

1.ಟ್ರೀ ಟ್ರೀ ಮರದ ಎಣ್ಣೆ

1.ಟ್ರೀ ಟ್ರೀ ಮರದ ಎಣ್ಣೆ

ಟ್ರೀ ಟ್ರೀ ಮರದ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ, ವೈರಲ್ ವಿರೋಧಿ, ಆಂಟಿಪ್ರೊಟೋಜೋಲ್ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಇದು ಎಲ್ಲಾ ರೀತಿಯ ಯೀಸ್ಟ್ ಮತ್ತು ಶಿಲೀಂಧ್ರ ಸೋಂಕನ್ನು ಕೊಲ್ಲುವಂತಹ ಗುಣ ಹೊಂದಿದೆ ಎಂದು ಅಧ್ಯಯನಗಳು ಹೇಳಿವೆ. ಕೆಲವೊಂದು ಅಧ್ಯಯನಗಳಲ್ಲಿ ಚಾ ಮರದ ಎಣ್ಣೆಯನ್ನು ಸಾಮನ್ಯ ಯೀಸ್ಟ್ ಮೇಲೆ ಪರೀಕ್ಷಿಸಲಾಗಿದೆ. ಇದರಲ್ಲಿ ಇರುವಂತಹ ಶಿಲೀಂಧ್ರ ವಿರೋಧಿ ಗುಣಗಳಿಂದಾಗಿ ಇದು ಯೀಸ್ಟ್ ನ್ನು ಕೊಲ್ಲುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ.

ಬಳಸುವುದು ಹೇಗೆ: 3-5 ಚಮಚ ಚಾ ಮರದ ಎಣ್ಣೆಯನ್ನು ಒಂದು ಹನಿ ಆಲಿವ್ ತೈಲ ಅಥವಾ ತೆಂಗಿನೆಣ್ಣೆಯಂತಹ ಬೇರೆ ಯಾವುದಾದರೂ ತೈಲದೊಂದಿಗೆ ಮಿಶ್ರ ಮಾಡಿಕೊಳ್ಳಿ. ಇದರಲ್ಲಿ ಒಂದು ಹತ್ತಿ ಉಂಡೆಯನ್ನು ಅದ್ದಿಕೊಂಡ ಬಳಿಕ ಅದನ್ನು ಶಿಶ್ನದ ತುದಿಗೆ ಹಚ್ಚಿಕೊಳ್ಳಿ.

2.ಆ್ಯಪಲ್ ಸೀಡರ್ ವಿನೇಗರ್

2.ಆ್ಯಪಲ್ ಸೀಡರ್ ವಿನೇಗರ್

ಶಿಶ್ನದ ಯೀಸ್ಟ್ ಸೋಂಕನ್ನು ನಿವಾರಿಸಲು ಆ್ಯಪಲ್ ಸೀಡರ್ ವಿನೇಗರ್ ಮತ್ತೊಂದು ಮನೆಮದ್ದು. ಇದರಲ್ಲಿ ಇರುವಂತಹ ಶಿಲೀಂಧ್ರ ವಿರೋಧಿ ಗುಣಗಳು ಕ್ಯಾಂಡಿಡ ವಿರುದ್ಧ ಹೋರಾಡುವುದು. ಆ್ಯಪಲ್ ಸೀಡರ್ ವಿನೇಗರ್ ನಲ್ಲಿ ಇರುವಂತಹ ಅಸಿಟಿಕ್ ಆಮ್ಲವು ದೇಹದಲ್ಲಿರುವ ಹೆಚ್ಚುವರಿ ಯೀಸ್ಟ್ ನ್ನು ಕೊಲ್ಲುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ.

ಬಳಸುವುದು ಹೇಗೆ: ಒಂದು ಚಮಚ ಆ್ಯಪಲ್ ಸೀಡರ್ ವಿನೇಗರ್ ಗೆ ಕೆಲವು ಹನಿ ನೀರು ಹಾಕಿಕೊಂಡ ಬಳಿಕ ಅದನ್ನು ಶಿಶ್ನಕ್ಕೆ ಹಚ್ಚಿಕೊಳ್ಳಿ.

3.ಮೊಸರು

3.ಮೊಸರು

ಯಾವುದೇ ಸಿಹಿ ಹಾಗೂ ಸುವಾಸನೆ ಇಲ್ಲವೆ ಇರುವಂತಹ ಮೊಸರಿನಲ್ಲಿ ಪ್ರೋಬಯಾಟಿಕ್ಸ್ ಎನ್ನುವ ಬ್ಯಾಕ್ಟೀರಿಯಾಗಳು ಇವೆ. ಇದು ದೇಹದಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾ ಉಂಟು ಮಾಡುವುದು ಮತ್ತು ಯೀಸ್ಟ್ ನ್ನು ಸಮತೋಲನದಲ್ಲಿ ಇಡುವುದು. 2006ರಲ್ಲಿ ನಡೆದಿರುವ ಅಧ್ಯಯನವೊಂದರ ಪ್ರಕಾರ ಕೆಲವೊಂದು ರೀತಿಯ ಪ್ರೋಬಯಾಟಿಕ್ ಗಳು ಸೋಂಕನ್ನು ಉಂಟು ಮಾಡುಂತಹ ಯೀಸ್ಟ್ ನ ವಿರುದ್ಧ ಹೋರಾಡುವುದು ಎಂದು ಹೇಳಲಾಗಿದೆ.

ಬಳಸುವುದು ಹೇಗೆ: ಆಹಾರ ಕ್ರಮದಲ್ಲಿ ಮೊಸರು ಸೇವನೆ ಮಾಡಿದರೆ ಕ್ಯಾಂಡಿಡವನ್ನು ದೂರವಿಡಬಹುದು ಮತ್ತು ಇದನ್ನು ಶಿಶ್ನದ ಭಾಗಕ್ಕೆ ಹಚ್ಚಿಕೊಂಡರು ಸಮಸ್ಯೆ ಪರಿಹಾರವಾಗುವುದು

4. ತೆಂಗಿನೆಣ್ಣೆ

4. ತೆಂಗಿನೆಣ್ಣೆ

2007ರಲ್ಲಿ ನಡೆಸಿರುವಂತಹ ಅಧ್ಯಯನವೊಂದರ ಪ್ರಕಾರ ತೆಂಗಿನೆಣ್ಣೆಯಲ್ಲಿ ಶಿಲೀಂಧ್ರ ವಿರೋಧಿ ಗುಣಗಳು ಇವೆ ಮತ್ತು ಇದು ಕ್ಯಾಂಡಿಡವನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ. ಶಿಲೀಂಧ್ರ ವಿರೋಧಿ ಔಷಧಿಗಳಿಗಿಂತ ತೆಂಗಿನೆಣ್ಣೆಯು ತುಂಬಾ ಕಡಿಮೆ ಪ್ರಮಾಣದಲ್ಲಿ ಬೇಕಾಗುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ.

ಬಳಸುವುದು ಹೇಗೆ: ತಾಜಾ ತೆಂಗಿನೆಣ್ಣೆಯನ್ನು ಹಚ್ಚಿಕೊಂಡರೆ ಯೀಸ್ಟ್ ಸೋಂಕಿನ ಲಕ್ಷಣಗಳು ಮಾಯವಾಗುವುದು. ತೆಂಗಿನೆಣ್ಣೆಯನ್ನು ಚಾ ಮರದ ಎಣ್ಣೆ ಅಥವಾ ಒರೆಗಾನೊ ತೈಲವನ್ನು ಮಿಶ್ರಣ ಮಾಡಿಕೊಂಡು ಬಳಸಬಹುದು.

5. ಒರೆಗಾನೊ ತೈಲ

5. ಒರೆಗಾನೊ ತೈಲ

ಒರೆಗಾನೊ ತೈಲವನ್ನು ಒರಿಗ್ಯಾನಂ ವಲ್ಗರೆ ಎನ್ನುವುದರಿಂದ ಮಾಡಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಶಿಲೀಂಧ್ರ ವಿರೋಧಿ ಗುಣಗಳಾಗಿರುವ ಥೈಮೊಲ್ ಮತ್ತು ಕಾರ್ವಕ್ರೊಲ್ ಇದೆ. ಇವೆರಡು ಯೀಸ್ಟ್ ಬೆಳೆಯುವುದನ್ನು ತಡೆಯುವುದು ಮತ್ತು ಶಿಶ್ನದ ಯೀಸ್ಟ್ ಸೋಂಕಿಗೆ ಒಳ್ಳೆಯ ಚಿಕಿತ್ಸೆಯಾಗಿದೆ.

ಬಳಸುವುದು ಹೇಗೆ: 3-5 ಚಮಚ ಒರೆಗಾನೊ ತೈಲವನ್ನು 2 ಚಮಚ ಬಾದಾಮಿ ತೈಲದೊಂದಿಗೆ ಸೇರಿಸಿಕೊಂಡು ಬಿಸಿ ಮಾಡಿಕೊಳ್ಳಿ. ಇದನ್ನು ಹತ್ತಿ ಉಂಡೆಯಿಂದ ಹಚ್ಚಿಕೊಳ್ಳಿ. ಫಲಿತಾಂಶ ಸಿಗುವ ತನಕ ನೀವು ಇದನ್ನು ಬಳಸಿ.

6. ಬೆಳ್ಳುಳ್ಳಿ

6. ಬೆಳ್ಳುಳ್ಳಿ

ಒಂದು ವೇಳೆ ಬೆಳ್ಳುಳ್ಳಿಯಲ್ಲಿ ವಾಸನೆ ಇಲ್ಲದೇ ಇದ್ದರೆ ಇದು ಚಿನ್ನದಂತೆ ಮಾರಾಟವಾಗುತ್ತಿತ್ತು ಎಂದು ಈಗಲೂ ಹಳ್ಳಿಗಳಲ್ಲಿ ಹೇಳುತ್ತಿರುತ್ತಾರೆ. ಏಕೆಂದರೆ ಬೆಳ್ಳುಳ್ಳಿಯ ಉತ್ತಮ ಗುಣಗಳು ಆರೋಗ್ಯದ ಮಟ್ಟಿಗೆ ಚಿನ್ನದಂತೆಯೇ ಕೆಲಸ ಮಾಡುತ್ತದೆ. Allium sativum ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಈ ಸಾಂಬಾರ ಪದಾರ್ಥ ಅತ್ಯುತ್ತಮವಾದ ಆಹಾರವಾಗಿದೆ. ಇದನ್ನು ಆಹಾರಕ್ಕಿಂತಲೂ ಹೆಚ್ಚಾಗಿ ಔಷಧದ ರೂಪದಲ್ಲಿ ಆಯುರ್ವೇದ ಬಳಸುತ್ತಾ ಬಂದಿದೆ. ಬೆಳ್ಳುಳ್ಳಿಯನ್ನು ಆಹಾರದ ಮೂಲಕ ಸೇವಿಸುವ ಮೂಲಕ ಆಹಾರದಲ್ಲಿ ರುಚಿಯ ಜೊತೆಗೇ ಆರೋಗ್ಯವೂ ವೃದ್ಧಿಯಾಗುತ್ತದೆ. ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇವೆ. ಇದನ್ನು ಯೀಸ್ಟ್ ಸೋಂಕಿನ ಚಿಕಿತ್ಸೆಗೆ ಬಳಸಬಹುದು. ಥೈಮೆ ಮತ್ತು ಬೆಳ್ಳುಳ್ಳಿಯಿಂದ ಮಾಡಿರುವಂತಹ ಕ್ರೀಮ್ ಯೀಸ್ಟ್ ಸೋಂಕು ನಿವಾರಣೆಗೆ ತುಂಬಾ ಪರಿಣಾಮಕಾರಿ ಎಂದು ಅಧ್ಯಯನಗಳು ಹೇಳಿವೆ. ಥೈಮೆ ಮತ್ತು ಬೆಳ್ಳುಳ್ಳಿ ಕ್ರೀಮ್ ನಲ್ಲಿ ಒಂದೇ ರೀತಿಯ ಶಮನಕಾರಿ ಗುಣಗಳು ಇದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಇದರಿಂದ ಯಾವುದೇ ಅಡ್ಡಪರಿಣಾಮಗಳು ಕೂಡ ಇಲ್ಲ.

ಬಳಸುವುದು ಹೇಗೆ: ಜನನೇಂದ್ರಿಯದಿಂದ ಆಗುವ ವಿಸರ್ಜನೆಯನ್ನು ಒಂದು ಟಿಶ್ಯೂ ಬಳಸಿಕೊಂಡು ಒರೆಸಿಕೊಳ್ಳಿ. ಒಂದು ಎಸಲು ಬೆಳ್ಳುಳ್ಳಿ ತೆಗೆದುಕೊಂಡು ಪೇಸ್ಟ್ ಮಾಡಿ. ಇದನ್ನು ಹಚ್ಚಿಕೊಂಡು ಒಂದು ಗಂಟೆ ಅಥವಾ ರಾತ್ರಿಯಿಡಿ ಹಾಗೆ ಇರಲಿ. ಬಳಿಕ ತೊಳೆಯಿರಿ.

ಮನೆಮದ್ದನ್ನು ಯಾವಾಗ ದೂರವಿಡಬೇಕು?

ಯೀಸ್ಟ್ ಸೋಂಕು ಹೊಂದಿರುವ ಪುರುಷರು ಈ ಮನೆಮದ್ದುಗಳನ್ನು ಬಳಸಬಹುದು. ಯಾಕೆಂದರೆ ಇದು ಸುರಕ್ಷಿತ. ಆದರೆ ಇವುಗಳು ಕೆಲಸ ಮಾಡದೆ ಇದ್ದರೆ ಆಗ ಲೈಂಗಿಕ ರೋಗ ಅಥವಾ ದೀರ್ಘಕಾಲದ ಯೀಸ್ಟ್ ಸೋಂಕಿನಿಂದ ಹೀಗೆ ಆಗಿರಬಹುದು. ಇದಕ್ಕೆ ನೀವು ವೈದ್ಯರ ನೆರವು ಪಡೆಯಬೇಕು. ಲಕ್ಷಣಗಳ ಬಗ್ಗೆ ನಿಮಗೆ ಸರಿಯಾಗಿ ತಿಳಿಯದೆ ಇದ್ದರೆ ಆಗ ನೀವು ಇದನ್ನು ಬಳಸಬಾರದು.

English summary

male yeast infection home remedy

Yeast infections are more common in women, but even men do get a yeast infection which is characterised by the inflammation on the head of the penis known as balanitis. A penile yeast infection is called candidal balanitis or balanitis. This article will discuss the home remedies for penile yeast infection. You may contract the infection when you have sexual intercourse with a female partner who has a vaginal yeast infection. If not treated on time, the infection can spread to your bloodstream.
X
Desktop Bottom Promotion