ಆರೋಗ್ಯ ಟಿಪ್ಸ್: ಟಿಲಾಪಿಯಾ ಮೀನಿನ ಆರೋಗ್ಯ ಲಾಭಗಳು

Posted By: Hemanth Amin
Subscribe to Boldsky

ಉಪ್ಪು ನೀರಿನ ಮೀನು ಮತ್ತು ಸಿಹಿ ನೀರಿನ ಮೀನಿನ ರುಚಿಗೆ ಸಾಕಷ್ಟು ವ್ಯತ್ಯಾಸವಿರುತ್ತದೆ. ಸಿಹಿ ನೀರಿನ ಮೀನನ್ನು ಹೆಚ್ಚಿನವರು ತುಂಬಾ ಇಷ್ಟಪಡುತ್ತಾರೆ. ಇಂತಹ ಒಂದು ಮೀನಿನಲ್ಲಿ ಟಿಲಾಪಿಯಾ ಕೂಡ ಒಂದು. ಕೆರೆ, ನದಿ, ಹಿನ್ನೀರಿನಲ್ಲಿ ವಾಸಿಸುವಂತಹ ಈ ಮೀನು ತುಂಬಾ ರುಚಿ, ಅಗ್ಗದಲ್ಲಿ ಸಿಗುವುದು. ಇದು ತುಂಬಾ ಅಗ್ಗದ ದರದಲ್ಲಿ ಸಿಗುವ ಕಾರಣದಲ್ಲಿ ಭಾರತದಲ್ಲಿ ಹೆಚ್ಚಿನ ಜನರು ಇದನ್ನು ಇಷ್ಟಪಡುವರು. ಆದರೆ ಭಾರತದ ನೆರೆಯ ರಾಷ್ಟ್ರ ಚೀನಾವು ಟಿಲಾಪಿಯಾ ಮೀನನ್ನು ಅತೀ ಹೆಚ್ಚು ಉತ್ಪಾದನೆ ಮಾಡುತ್ತಿದೆ.

ಟಿಲಾಪಿಯಾ ಮೀನು ವಿಶ್ವದ 135 ರಾಷ್ಟ್ರಗಳಲ್ಲಿ ಸಾಕಲ್ಪಡುತ್ತಿದೆ. ಇದು ಮೀನುಗಾರಿಕೆಗೂ ತುಂಬಾ ಯೋಗ್ಯವಾದ ಮೀನು. ಇದರಲ್ಲಿ ನಾಲ್ಕು ವಿಧದ ಮೀನುಗಳಿವೆ. ಒಂದು ಮೊಂಝಂಬಿಕಿ ಟಿಲಾಪಿಯಾ, ಬ್ಲೂ ಟಿಲಾಪಿಯಾ, ರೆಡ್ ಟಿಲಾಪಿಯಾ ಮತ್ತು ನಿಲೆ ಟಿಲಾಪಿಯಾ. ಟಿಲಾಪಿಯಾ ಮೀನಿನಲ್ಲಿ ಪ್ರೋಟೀನ್ ಅಂಶ ಸಮೃದ್ಧವಾಗಿದ್ದು, ಕ್ಯಾಲರಿ ಕಡಿಮೆಯಿದೆ.

ವಿಟಮಿನ್ ಹಾಗೂ ಖನಿಜಾಂಶಗಳು ಉತ್ತಮ ಪ್ರಮಾಣದಲ್ಲಿ. ಟಿಲಾಪಿಯಾ ಮೀನಿನಲ್ಲಿ ಒಮೆಗಾ-3 ಆಮ್ಲ, ಒಮೆಗಾ-6 ಕೊಬ್ಬಿನಾಮ್ಲ, ಕಾರ್ಬ್ರೋಹೈಡ್ರೇಟ್ಸ್, ಕ್ಯಾಲ್ಸಿಯಂ, ಮೆಗ್ನಿಶಿಯಂ, ಪೊಟಾಶಿಯಂ, ಸೆಲೆನಿಯಂ, ವಿಟಮಿನ್ ಇ, ನಿಯಾಸಿನ್, ಫಾಲಟೆ, ವಿಟಮಿನ್ ಬಿ12 ಮತ್ತು ಪ್ಯಾಂತೊಥೇನಿಕ್ ಆಮ್ಲವಿದೆ. ಟಿಲಾಪಿಯಾ ಮೀನಿನ ಕೆಲವೊಂದು ಆರೋಗ್ಯ ಲಾಭಗಳ ಬಗ್ಗೆ ತಿಳಿದುಕೊಳ್ಳುವ....

ಮೂಳೆಗಳಿಗೆ ಒಳ್ಳೆಯದು

ಮೂಳೆಗಳಿಗೆ ಒಳ್ಳೆಯದು

ಟಿಲಾಪಿಯಾ ಮೀನಿನಲ್ಲಿ ಖನಿಜಾಂಶಗಳಾದ ಕ್ಯಾಲ್ಸಿಯಂ, ಪ್ರೋಸ್ಪರಸ್ ಇದ್ದು, ಇವುಗಳು ಮೂಳೆಯ ಬೆಳವಣಿಗೆ ಮತ್ತು ನಿರ್ವಹಣೆಗೆ ಅಗತ್ಯ. ಮೂಳೆಯ ಕೋಶಗಳ ಪುನರುಜ್ಜೀವನಗೊಳಿಸುವಲ್ಲಿ ಈ ಮೀನು ತುಂಬಾ ಪರಿಣಾಮಕಾರಿಯಾಗಿದೆ. ಇದು ಮೂಳೆಗಳಿಗೆ ತುಂಬಾ ಒಳ್ಳೆಯದು.

ಕ್ಯಾನ್ಸರ್ ತಡೆಯುವುದು

ಕ್ಯಾನ್ಸರ್ ತಡೆಯುವುದು

ಟಿಲಾಪಿಯಾ ಮೀನಿನಲ್ಲಿ ಸೆಲೆನಿಯಂ ಮತ್ತು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ಕ್ಯಾನ್ಸರ್ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ವಿರುದ್ಧ ಹೋರಾಡುವುದು. ಸೆಲೆನಿಯಂ ದೇಹದಲ್ಲಿ ಫ್ರೀ ರ್ಯಾಡಿಕಲ್ ಚಟುವಟಿಕೆ ಕುಗ್ಗಿಸುವುದು ಮತ್ತು ಕ್ಯಾನ್ಸರ್ ಕೋಶಗಳ ಬದಲಿಗೆ ಆರೋಗ್ಯಕಾರಿ ಕೋಶಗಳನ್ನು ಸ್ಥಾಪಿಸುವುದು.

ಮೆದುಳಿಗೆ ಒಳ್ಳೆಯದು

ಮೆದುಳಿಗೆ ಒಳ್ಳೆಯದು

ಟಿಲಾಪಿಯಾ ಮೀನು ಸೇವನೆ ಮಾಡುವುದರಿಂದ ಮೆದುಳಿನ ಕಾರ್ಯ ಚಟುವಟಿಕೆಗಳು ಉತ್ತಮವಾಗುವುದು. ಇದರಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ನರಕೋಶಗಳ ಕಾರ್ಯಚಟುವಟಿಕೆ ಹೆಚ್ಚಿಸುವುದು. ಮೀನಿನಲ್ಲಿ ಇರುವಂತಹ ಸೆಲೆನಿಯಂ ಅಲ್ಝೈಮರ್, ಪರ್ಕಿಸನ್ ನಂತಹ ಕಾಯಿಲೆಗಳಿಂದ ಮೆದುಳನ್ನು ರಕ್ಷಿಸುವುದು.

ಹೃದಯದ ರಕ್ಷಣೆ

ಹೃದಯದ ರಕ್ಷಣೆ

ಟಿಲಾಪಿಯಾ ಮೀನಿನ ಸೇವನೆ ಮಾಡಿದರೆ ಹೃದಯದ ವಿವಿಧ ಕಾಯಿಲೆಗಳಿಂದ ಅದು ನಿಮ್ಮನ್ನು ರಕ್ಷಿಸುವುದು. ಟಿಲಾಪಿಯಾ ಮೀನಿನಲ್ಲಿರುವಂತಹ ಒಮೆಗಾ-3 ಕೊಬ್ಬಿನಾಮ್ಲವು ರಕ್ತದೊತ್ತಡ ಕಡಿಮೆ ಮಾಡುವುದು, ಹೃದಯಾಘಾತ, ಪಾರ್ಶ್ವವಾಯು ಬರದಂತೆ ತಡೆಯುವುದು.

ವಯಸ್ಸಾಗುವ ಲಕ್ಷಣ ತಡೆಯುವುದು

ವಯಸ್ಸಾಗುವ ಲಕ್ಷಣ ತಡೆಯುವುದು

ಟಿಲಾಪಿಯಾ ಮೀನಿನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಮತ್ತು ಇ ಯು ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಚರ್ಮದ ಬಣ್ಣವನ್ನು ಸುಧಾರಿಸಿ, ಚರ್ಮ ಹೊಳೆಯುವಂತೆ ಮಾಡುವುದು. ಇದು ಚರ್ಮದ ವಿವಿಧ ರೋಗಗಳಿಂದ ರಕ್ಷಿಸುವುದು. ಚರ್ಮದ ಕೋಶಗಳನ್ನು ಚಟುವಟಿಕೆ ಮತ್ತು ಯೌವನದಿಂದ ಇಡುವುದು.

ತೂಕ ಕಳೆದುಕೊಳ್ಳಲು ಸಹಕಾರಿ

ತೂಕ ಕಳೆದುಕೊಳ್ಳಲು ಸಹಕಾರಿ

ಟಿಲಾಪಿಯಾ ಮೀನು ತೂಕ ಕಳೆದುಕೊಳ್ಳಲು ಸಹಕಾರಿಯಾಗಿರುವುದು. ಇದರಲ್ಲಿ ಇರುವಂತಹ ಉನ್ನತ ಮಟ್ಟದ ಪ್ರೋಟೀನ್ ಮತ್ತು ಕಡಿಮೆ ಮಟ್ಟದ ಕ್ಯಾಲರಿ, ದೇಹಕ್ಕೆ ಪೋಷಕಾಂಶವನ್ನು ಒದಗಿಸಿ ಕ್ಯಾಲರಿ ದಹಿಸುವುದು. ಟಿಲಾಪಿಯಾ ಮೀನು ಬೊಜ್ಜು ಕರಗಿಸಲು ಬಯಸುವವರಿಗೆ ಒಳ್ಳೆಯ ಆಹಾರ.

ಥೈರಾಯ್ಡ್ ರೋಗಿಗಳಿಗೆ

ಥೈರಾಯ್ಡ್ ರೋಗಿಗಳಿಗೆ

ಟಿಲಾಪಿಯಾ ಮೀನಿನಲ್ಲಿ ಸೆಲೆನಿಯಂ ಸಾಕಷ್ಟು ಪ್ರಮಾಣದಲ್ಲಿದೆ. ಇದು ಥೈರಾಯ್ಡ್ ಗ್ರಂಥಿಗಳ ನಿಯಂತ್ರಿಸುವುದು ಮತ್ತು ಹಾರ್ಮೋನು ಚಟುವಟಿಕೆ ಸುಧಾರಿಸುವುದು. ಥೈರಾಯ್ಡ್ ಗ್ರಂಥಿಗಳ ಸರಿಯಾದ ಕಾರ್ಯಚಟುವಟಿಕೆಯಿಂದ ಚಯಾಪಚಾಯ ಕ್ರಿಯೆ ಸುಧಾರಣೆಯಾಗಿ ತೂಕ ಹೆಚ್ಚಳ ಅಥವಾ ಕಡಿಮೆಯಾಗುವುದನ್ನು ತಡೆಯುವುದು.

ಬೆಳವಣಿಗೆ ಮತ್ತು ಅಭಿವೃದ್ಧಿ

ಬೆಳವಣಿಗೆ ಮತ್ತು ಅಭಿವೃದ್ಧಿ

ಟಿಲಾಪಿಯಾ ಮೀನಿನಲ್ಲಿ ಪ್ರೋಟೀನ್ ಅಂಶವು ಹೆಚ್ಚಿನ ಪ್ರಮಾಣದಲ್ಲಿದೆ. ಇದು ದಿನಕ್ಕೆ ದೇಹಕ್ಕೆ ಬೇಕಾಗುವ ಶೇಕಡಾ 15ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಪ್ರೋಟೀನ್ ದೇಹದ ಅಂಗಾಂಶಗಳು, ಕೋಶ, ಸ್ನಾಯುಗಳ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಅತೀ ಅಗತ್ಯ. ಸ್ನಾಯುಗಳ ಸರಿಪಡಿಸುವಿಕೆ ಮತ್ತು ಚಯಾಪಚಯಾ ಕ್ರಿಯೆಯ ಸರಿಯಾಗಿರಲು ಪ್ರೋಟೀನ್ ಅತೀ ಅಗತ್ಯ.

ದೇಹದಾರ್ಢ್ಯ ಪಟುಗಳಿಗೆ ಒಳ್ಳೆಯದು

ದೇಹದಾರ್ಢ್ಯ ಪಟುಗಳಿಗೆ ಒಳ್ಳೆಯದು

ಟಿಲಾಪಿಯಾ ಮೀನಿನಲ್ಲಿ ಪ್ರೋಟೀನ್ ಮತ್ತು ಇತರ ಕೆಲವೊಂದು ಖನಿಜಾಂಶ ಹಾಗೂ ವಿಟಮಿನ್ ಗಳಿವೆ. ಇದು ದೇಹದಾರ್ಢ್ಯ ಪಟುಗಳಿಗೆ ತುಂಬಾ ಒಳ್ಳೆಯದು. ದೇಹದಾರ್ಢ್ಯ ಪಟುಗಳಿಗೆ ತಮ್ಮ ಸ್ನಾಯುಗಳ ಬೆಳೆಸಲು ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಬೇಕಾಗುತ್ತದೆ. ಟಿಲಾಪಿಯಾ ಮೀನಿನ ಸೇವನೆ ಅವರಿಗೆ ಗುರಿಮುಟ್ಟಲು ನೆರವಾಗುವುದು.

ಅರಿವಿನ ಕಾರ್ಯಚಟುವಟಿಕೆಗೆ

ಅರಿವಿನ ಕಾರ್ಯಚಟುವಟಿಕೆಗೆ

ಟಿಲಾಪಿಯಾ ಮೀನಿನಲ್ಲಿ ವಿಟಮಿನ್ ಬಿ12 ಸಮೃದ್ಧವಾಗಿದೆ. ಇದು ಅರಿವಿನ ಕಾರ್ಯಚಟುವಟಿಕೆಗೆ ಬೇಕಾಗಿರುವ ಪ್ರಮುಖ ವಿಟಮಿನ್ ಆಗಿದೆ ಮತ್ತು ಕೆಂಪು ರಕ್ತದ ಕಣಗಳು ಸರಿಯಾಗಿ ಉತ್ಪತ್ತಿಯಾಗಲು ನೆರವಾಗುವುದು. ಇದರಲ್ಲಿ 2.4 ಗ್ರಾಂ ವಿಟಮಿನ್ ಬಿ12 ಇದೆ ಮತ್ತು ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಇಷ್ಟೇ ಪ್ರಮಾಣದ ವಿಟಮಿನ್ ಬಿ12 ಬೇಕಿದೆ.

English summary

Health Benefits Of Tilapia Fish

There are four types of tilapia fish, namely, Mozambique tilapia, blue tilapia, red tilapia and Nile tilapia. Tilapia fish is loaded with protein, is low in calories and a very good source of vitamins and minerals. Tilapia fish contains omega-3 fatty acids, omega-6 fatty acids, carbohydrates, calcium, magnesium, potassium, selenium, vitamin E, niacin, folate, vitamin B12, and pantothenic acid. Now, let us have a look at some of the health benefits of tilapia fish.