For Quick Alerts
ALLOW NOTIFICATIONS  
For Daily Alerts

ಮೊಳಕೆ ಕಟ್ಟಿದ ಹೆಸರು ಕಾಳಿನ ಆರೋಗ್ಯಕಾರಿ ಪ್ರಯೋಜನಗಳು

|

ಮೊಳಕೆ ಭರಿಸಿರುವ ಕಾಳುಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ವಿಚಾರ ಪ್ರತಿಯೊಬ್ಬರಿಗೂ ತಿಳಿದಿರುವುದೇ ಆಗಿದ್ದರೂ ಇದರಲ್ಲಿ ಯಾವ ಧಾನ್ಯಗಳನ್ನು ಮೊಳಕೆ ಭರಿಸಿದರೆ ಅದರಿಂದ ದೇಹಕ್ಕೆ ಹೆಚ್ಚು ಲಾಭವಾಗಲಿದೆ ಎಂದು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಹೆಸರುಬೇಳೆಯನ್ನು ಮೊಳಕೆ ಭರಿಸಿ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಿ.

ಇದರಲ್ಲಿ ಕ್ಯಾಲರಿ ಕಡಿಮೆ ಇದ್ದು, ನಾರಿನಾಂಶ ಮತ್ತು ವಿಟಮಿನ್ ಬಿ ಇದೆ. ಇಷ್ಟು ಮಾತ್ರವಲ್ಲದೆ ವಿಟಮಿನ್ ಸಿ ಹಾಗೂ ಕೆ ಇದೆ. ಆಹಾರ ಕ್ರಮದಲ್ಲಿ ಅಳವಡಿಸಬಹುದಾದ ಅದ್ಭುತ ಆಹಾರ ಇದಾಗಿದೆ. ಪ್ರತೀ ಕಪ್ ಮೊಳಕೆ ಭರಿಸಿರುವ ಹೆಸರುಬೇಳೆಯಲ್ಲಿ 31 ಕ್ಯಾಲರಿ ಇದೆ. ಇದು ತೂಕ ಕಳೆದುಕೊಳ್ಳಲು ಸಹಕಾರಿ. ಇದು ಅಗ್ಗ ಹಾಗೂ ಸುಲಭವಾಗಿ ಲಭ್ಯವಿರುವುದು.

ವಿಟಮಿನ್ ಕೆ ಯ ಆಗರ

ವಿಟಮಿನ್ ಕೆ ಯ ಆಗರ

ವಿಟಮಿನ್ ಕೆ ಯು ರಕ್ತ ಹೆಪ್ಪುಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ಮೂಳೆಯ ಖನಿಜಾಂಶವನ್ನು ನಿಯಂತ್ರಿಸುವುದು ಮತ್ತು ಮೂಳೆ ಸಾಂದ್ರತೆಯನ್ನು ಕಾಪಾಡುವುದು. ಮೊಳೆಕೆಯುಕ್ತ ಹೆಸರುಬೇಳೆಯಲ್ಲಿ ವಿಟಮಿನ್ ಕೆ ಸಮೃದ್ಧವಾಗಿದ್ದು, ಒಂದು ಕಪ್ ನಲ್ಲಿ 34 ಮಿ.ಗ್ರಾಂ.ಇದೆ. ಆರೋಗ್ಯಕರ ದೇಹಕ್ಕೆ ಬೇಕಾಗಿರುವ ದೈನಂದಿನ ಅಗತ್ಯತೆಯ ವಿಟಮಿನ್ ಕೆ ಯನ್ನು ಇದು ಒದಗಿಸುವುದು.

ವಿಟಮನ್ ಸಿ ಸಮೃದ್ಧವಾಗಿದೆ

ವಿಟಮನ್ ಸಿ ಸಮೃದ್ಧವಾಗಿದೆ

ಮೊಳಕೆಯುಕ್ತ ಹೆಸರುಬೇಳೆಯಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದು ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸಿ, ಸೋಂಕು ಹಾಗೂ ಕಾಯಿಲೆಗ ವಿರುದ್ಧ ಹೋರಾಡುವುದು. ಒಂದು ಕಪ್ ಮೊಳಕೆ ಭರಿಸಿದ ಹೆಸರುಬೇಳೆಯಲ್ಲಿ 14 ಮಿ.ಗ್ರಾಂ. ವಿಟಮಿನ್ ಸಿ ಇದೆ. ಆರೋಗ್ಯ ತಜ್ಞರ ಪ್ರಕಾರ ಪ್ರತಿನಿತ್ಯ ಪುರುಷರು 90 ಮಿ.ಗ್ರಾಂ.ನಷ್ಟು ವಿಟಮಿನ್ ಸಿಯನ್ನು ಸೇವಿಸಬೇಕು. ಇದೇ ವೇಳೆ ಮಹಿಳೆಯರು 75 ಮಿ.ಗ್ರಾಂ.ನಷ್ಟು ಸೇವನೆ ಮಾಡಬೇಕು. ವಿಟಮಿನ್ ಸಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಅಂಶವು ಫ್ರೀ ರ್ಯಾಡಿಕಲ್ ನಿಂದ ರಕ್ಷಿಸುವುದು. ಫ್ರೀ ರ್ಯಾಡಿಕಲ್ ನ್ನು ಆ್ಯಂಟಿಆಕ್ಸಿಡೆಂಟ್ ಗಳು ತಟಸ್ಥಗೊಳಿಸದೆ ಇದ್ದರೆ ಆಗ ಅದು ಆರೋಗ್ಯಕರ ಕೋಶಗಳ ಮೇಲೆ ದಾಳಿ ಮಾಡುವುದು. ಇದು ಹಾನಿ ಹಾಗೂ ಉರಿಯೂತ ಉಂಟು ಮಾಡಿ ರೋಗಗಳಿಗೆ ಕಾರಣವಾಗುವುದು. ವಿಟಮಿನ್ ಸಿಯಲ್ಲಿ ಕಾಲಜನ್ ಕೂಡ ಇದ್ದು, ಇದು ಚರ್ಮ, ಅಂಗಾಂಗವನ್ನು ಬಲಗೊಳಿಸುವುದು.

Most Read:ಚಿಕನ್- ಮಟನ್‌ಗಿಂತಲೂ ಇಂತಹ ಸಸ್ಯಾಹಾರಿ ಆಹಾರಗಳು ತುಂಬಾನೇ ಆರೋಗ್ಯಕಾರಿ

ಉನ್ನತ ಮಟ್ಟ ಪ್ರೋಟೀನ್

ಉನ್ನತ ಮಟ್ಟ ಪ್ರೋಟೀನ್

ಗ್ಲೊಬುಲಿನ್ ಮತ್ತು ಅಲ್ಬುಲಿನ್ ಪ್ರೋಟೀನ್ ನ ಪ್ರಮುಖ ಅಂಶವಾಗಿದೆ. ಮೊಳಕೆಯುಕ್ತ ಹೆಸರುಬೇಳೆಯಲ್ಲಿ ಶೇ.85ರಷ್ಟು ಅಮಿನೋ ಆಮ್ಲವನ್ನು ಇದು ಬಳಸಿಕೊಳ್ಳುವುದು. ಕೋಶಗಳನ್ನು ಬೆಳೆಸಲು ಹಾಗೂ ಸರಿಪಡಿಸಲು ಪ್ರೋಟೀನ್ ಅಗತ್ಯವಾಗಿ ಬೇಕು. ಪ್ರೋಟೀನ್ ನಿಂದ ಮೂಳೆಗಳು, ಸ್ನಾಯುಗಳ, ಚರ್ಮ ಬೆಳೆಯುವುದು.

ರಕ್ತಸಂಚಾರ ಸುಗಮಗೊಳಿಸುವುದು

ರಕ್ತಸಂಚಾರ ಸುಗಮಗೊಳಿಸುವುದು

ಮೊಳಕೆಯುಕ್ತ ಹೆಸರುಬೇಳೆ ಕಾಳುಗಳಲ್ಲಿ ಇರುವಂತಹ ಕಬ್ಬಿಣ ಹಾಗೂ ತಾಮ್ರದ ಅಂಶವು ರಕ್ತದಲ್ಲಿನ ಕೆಂಪು ರಕ್ತದ ಕಣಗಳನ್ನು ನಿರ್ವಹಣೆ ಮಾಡಿ ರಕ್ತ ಸಂಚಾರವನ್ನು ಸುಗಮಗೊಳಿಸುವುದು. ಇದರಿಂದ ದೇಹದ ವಿವಿಧ ಅಂಗಾಂಶ ಹಾಗೂ ಕೋಶಗಳಿಗೆ ಆಮ್ಲಜನಕವು ಸರಬರಾಜು ಆಗುವುದು.

Most Read:ಆಯುರ್ವೇದದ ಮೂಲಕ 'ಬಾಡಿ ಹೀಟ್' ಕಡಿಮೆ ಮಾಡಲು ಸರಳ ಟಿಪ್ಸ್

ಜೀರ್ಣಕ್ರಿಯೆಗೆ ನೆರವಾಗುವುದು

ಜೀರ್ಣಕ್ರಿಯೆಗೆ ನೆರವಾಗುವುದು

ಮೊಳಕೆ ಭರಿಸಿದ ಹೆಸರುಬೇಳೆಯಲ್ಲಿ ಉನ್ನತ ಮಟ್ಟದ ಕಿಣ್ವಗಳು ಇರುವುದು. ಈ ಕಿಣ್ವಗಳು ದೇಹದಲ್ಲಿ ಚಯಾಪಚಯ ಕ್ರಿಯೆ ವೃದ್ಧಿಸಿ, ದೇಹದಲ್ಲಿ ರಾಸಾಯನಿಕ ಪ್ರತಿಕ್ರಿಯೆಯನ್ನು ವೃದ್ಧಿಸಿ, ಜೀರ್ಣಕ್ರಿಯೆಗೆ ನೆರವಾಗುವುದು. ಕಿಣ್ವಗಳು ಆಹಾರವನ್ನು ವಿಘಟಿಸುವುದು ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುವುದು. ಇದರಲ್ಲಿ ಇರುವಂತಹ ಆಹಾರದ ನಾರಿನಾಂಶವು ಜೀರ್ಣಕ್ರಿಯೆಯನ್ನು ನಿಯಂತ್ರಿಸುವುದು.

ತೂಕ ಇಳಿಸಲು ಸಹಕಾರಿ

ತೂಕ ಇಳಿಸಲು ಸಹಕಾರಿ

ಮೊಳಕೆ ಭರಿಸಿದ ಹೆಸರುಬೇಳೆ ಕಾಳುಗಳು ತೂಕ ಇಳಿಸಿಕೊಳ್ಳಲು ತುಂಬಾ ಪರಿಣಾಮಕಾರಿ ಆಹಾರ. ಇದರಲ್ಲಿ ಪೋಷಕಾಂಶಗಳು ಉನ್ನತ ಮಟ್ಟದಲ್ಲಿದೆ. ಆದರೆ ಕ್ಯಾಲರಿ ತುಂಬಾ ಕಡಿಮೆಯಿರುವ ಕಾರಣದಿಂದಾಗಿ ತೂಕ ಇಳಿಸಿಕೊಳ್ಳುವ ಆಹಾರ ಕ್ರಮದಲ್ಲಿ ಇದನ್ನು ಚಿಂತೆಯಿಲ್ಲದೆ ಬಳಸಿಕೊಳ್ಳಬಹುದು. ಇದರಲ್ಲಿ ಇರುವಂತಹ ನಾರಿನಾಂಶವು ದೀರ್ಘಕಾಲದ ತನಕ ಹಸಿವಾಗದಂತೆ ನೋಡಿಕೊಳ್ಳುವುದು. ಹೆಚ್ಚು ತಿನ್ನಬೇಕು ಎಂದು ಮೆದುಳಿಗೆ ಹೇಳುವ ಗ್ರೆಲಿನ್ ಹಾರ್ಮೋನು ಬಿಡುಗಡೆಯನ್ನು ಇದು ತಡೆಯುವುದು.

ವಿಟಮಿನ್ ಗಳು ಮತ್ತು ಖನಿಜಾಂಶಗಳ ಆಗರ

ವಿಟಮಿನ್ ಗಳು ಮತ್ತು ಖನಿಜಾಂಶಗಳ ಆಗರ

ಒಂದು ಕಪ್ ಮೊಳಕೆ ಭರಿಸಿದ ಹೆಸರುಬೇಳೆ ಯಲ್ಲಿ ಶೇ.100ರಷ್ಟು ದೈನಂದಿನ ಅಗತ್ಯತೆಗೆ ಬೇಕಾಗಿರುವಂತಹ ಫಾಲಟೆ ಇದೆ. ಫಾಲಟೆಯನ್ನು ವಿಟಮಿನ್ ಬಿ9 ಎಂದು ಕರೆಯಲಾಗುತ್ತದೆ. ಇದು ಡಿಎನ್ ಎ ಸಂಶ್ಲೇಷಣೆ, ಅಂಗಾಂಶ ಮತ್ತು ಕೋಶಗಳ ಬೆಳವಣಿಗೆ, ಹಾರ್ಮೋನು ಸಮತೋಲನ, ನರಗಳ ಕಾರ್ಯ ಮತ್ತು ಸಂತಾನೋತ್ಪತ್ತಿಗೆ ಕೂಡ ಅಗತ್ಯವಿದೆ. ಗರ್ಭಧಾರಣೆ ವೇಳೆ ಫಾಲಟೆ ಸೇವನೆ ಮಾಡುವುದು ಅತೀ ಅಗತ್ಯ. ಯಾಕೆಂದರೆ ಇದರಿಂದ ಅಕಾಲಿಕ ಹೆರಿಗೆ ತಡೆಯಬಹುದು. ವಯಸ್ಕ ಮಹಿಳೆಗೆ ಬೇಕಾಗಿರುವ ಶೇ. 36ರಷ್ಟು ಮೆಗ್ನಿಶಿಯಂ ಅಂಶವನ್ನು ಮೊಳಕೆಯುಕ್ತ ಹೆಸರುಬೇಳೆಯು ಒದಗಿಸುವುದು. ಹೆಚ್ಚಿನ ವಯಸ್ಕ ಮಹಿಳೆಯರಲ್ಲಿ ಮೆಗ್ನಿಶಿಯಂನ ಕೊರತೆಯು ಕಂಡುಬರುವುದು. ಇದು ತುಂಬಾ ದುರಾದೃಷ್ಟ. ಒತ್ತಡದ ಮಟ್ಟ ಮತ್ತು ನೋವನ್ನು ಕಡಿಮೆ ಮಾಡಿಕೊಳ್ಳಲು ಮೆಗ್ನಿಶಿಯಂನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದು ಅತೀ ಅಗತ್ಯ. ಜೀರ್ಣಕ್ರಿಯೆ ಆರೋಗ್ಯ, ಹೃದಯ ಸರಿಯಾಗಿ ಕಾರ್ಯನಿರ್ವಹಿಸಲು, ಸ್ನಾಯುಗಳ ಕೋಶ ಸರಿಪಡಿಸಲು ಮತ್ತು ನರವ್ಯವಸ್ಥೆಗೆ ಇದು ಅಗತ್ಯವಾಗಿ ಬೇಕು.

English summary

health benefits of moong dal sprouts

Sprouts definitely fit the bill quite effectively. It is low in calories, have fiber and Vitamin B, and deliver a boost of vitamins C and K; reasons enough to qualify it as super healthy for our diet. Each cup contains only about 31 calories which also aids in weight loss. These super healthy moong dal sprouts are quite affordable and easily available in the market.
X
Desktop Bottom Promotion