ಒಂದು ಸಣ್ಣ ಚಮಚ ಆಲಿವ್ ಎಣ್ಣೆಯನ್ನು ಖಾಲಿ ಹೊಟ್ಟೆಗೆ ಸೇವಿಸಿದರೆ ಹತ್ತಾರು ಲಾಭ!

Posted By: Arshad Hussain
Subscribe to Boldsky

ಆಲಿವ್ ಎಣ್ಣೆ ಎಂದಾಕ್ಷಣ ನಮ್ಮ ಮನದಲ್ಲಿ ಏನು ಮೂಡುತ್ತದೆ? ಇವುಗಳನ್ನು ಬಳಸಿ ತಯಾರಾಗುವ ಇಟಾಲಿಯನ್ ಆಹಾರಗಳಾದ ಪಿಜ್ಜಾ ಮತ್ತು ಪಾಸ್ತಾ! ಅಲ್ಲವೇ? ಆಲಿವ್ ಎಣ್ಣೆ ಆಲಿವ್ ಹಣ್ಣುಗಳಿಂದ ಹಿಂಡಿ ತೆಗೆಯಲಾದ ಎಣ್ಣೆಯಾಗಿದ್ದು ಇದನ್ನು ಅಡುಗೆಗೆ ಹಾಗೂ ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ. ಈ ಎಣ್ಣೆ ಅತ್ಯಂತ ಆರೋಗ್ಯಕರವಾಗಿರುವ ಕಾರಣದಿಂದ ವೃತ್ತಿಪರ ದೇಹದಾರ್ಢ್ಯ ತರಬೇತುದಾರರು ತಮ್ಮ ವಿದ್ಯಾರ್ಥಿಗಳಿಗೆ ತಮ್ಮ ಹೆಚ್ಚಿನ ಆಹಾರವನ್ನು ಇತರ ಸಂಸ್ಕರಿತ ಎಣ್ಣೆಗಳ ಬದಲಿಗೆ ಆಲಿವ್ ಎಣ್ಣೆಯಲ್ಲಿಯೇ ತಯಾರಿಸುವಂತೆ ಸಲಹೆ ಮಾಡುತ್ತಾರೆ.

ಪ್ರಾಚೀನ ಗ್ರೀಸ್ ಮತ್ತು ರೋಮ್ ದೇಶಗಳಲ್ಲಿ ಆಲಿವ್ ಎಲೆ, ಆಲಿವ್ ಹಣ್ಣು ಮತ್ತು ಆಲಿವ್ ಎಣ್ಣೆಗಳನ್ನು ಇವುಗಳ ಔಷಧೀಯ ಗುಣಗಳಿಂದಾಗಿ ಪವಿತ್ರ ಎಂದು ಭಾವಿಸಲಾಗುತ್ತಿತ್ತು. ಆದರೆ ಸಮಯ ಕಳೆದಂತೆ ಆಧುನಿಕ ಔಷಧಿಗಳು ಇವುಗಳ ಸ್ಥಾನವನ್ನು ಕಸಿದುಕೊಂಡು ಜನಪ್ರಿಯವಾದ ಕಾರಣ ಆಲಿವ್ ಗಳನ್ನು ಔಷಧೀಯ ಉಪಯೋಗಕ್ಕಾಗಿ ಬಳಸುವುದು ಕಡಿಮೆಯಾಗುತ್ತಾ ಹೋದ ಕಾರಣ ಇದರ ಜನಪ್ರಿಯತೆಯೂ ಕುಗ್ಗಿತು. ಆದರೆ ತಡವಾಗಿಯಾದರೂ ಸರಿ, ಇಂದು ಇದರ ಔಷಧೀಯ ಗುಣಗಳಿಗೆ ಮತ್ತೊಮ್ಮೆ ಬೇಡಿಕೆ ಬಂದಿದೆ. ಇದರ ಸೇವನೆಯಿಂದ ಪಡೆಯುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿದೆ. ಬನ್ನಿ, ಆಲಿವ್ ಎಣ್ಣೆಯನ್ನು ಉಪಾಹಾರಕ್ಕೂ ಮುನ್ನ ಕೊಂಚಪ್ರಮಾಣದಲ್ಲಿ ಸೇವಿಸುವ ಮೂಲಕ ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ...

ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ

ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ

ನಮ್ಮ ಪೂರ್ವಾಗ್ರಹ ನಂಬಿಕೆಯ ಪ್ರಕಾರ ಎಲ್ಲಾ ಎಣ್ಣೆಗಳಲ್ಲಿ ಅನಾರೋಗ್ಯಕರ ಕೊಬ್ಬುಗಳಿರುತ್ತವೆ ಹಾಗೂ ಇವು ಹೃದಯಕ್ಕೆ ಕೆಟ್ಟದ್ದು. ಆದರೆ ಆಲಿವ್ ಎಣ್ಣೆಯ ಸಹಿತ ಕೆಲವು ನೈಸರ್ಗಿಕ ಎಣ್ಣೆಗಳಲ್ಲಿ ಆರೋಗ್ಯಕರ ಕೊಬ್ಬು ಇರುತ್ತದೆ ಹಾಗೂ ಇವು ನರಗಳನ್ನು ಸಡಿಲವಾಗಿಸಿ ರಕ್ತಪರಿಚಲನೆ ಸುಲಭವಾಗಿಸಲು ಜಾರುಕದಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ರಕ್ತಪರಿಚಲನೆ ಸುಲಭವಾಗುತ್ತದೆ ಹಾಗೂ ಇದನ್ನು ದೂಡಿಕೊಡಲು ಹೃ಼ದಯಕ್ಕೆ ಹೆಚ್ಚಿನ ಒತ್ತಡ ನೀಡಬೇಕಾಗಿಲ್ಲ. ತನ್ಮೂಲಕ ಆಲಿವ್ ಎಣ್ಣೆ ಹೃದಯ ಕಾಯಿಲೆಗಳು ಎದುರಾಗುವ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ.

ತೂಕ ಇಳಿಕೆಗೂ ನೆರವಾಗುತ್ತದೆ

ತೂಕ ಇಳಿಕೆಗೂ ನೆರವಾಗುತ್ತದೆ

ತೂಕದ ಹೆಚ್ಚಳಕ್ಕೂ ಆಹಾರದಲ್ಲಿರುವ ಎಣ್ಣೆಯೇ ಕಾರಣ ಎಂದು ನಮ್ಮಲ್ಲಿ ಹೆಚ್ಚಿನವರು ತಿಳಿದುಕೊಂಡಿದ್ದಾರೆ. ತೂಕ ಹೆಚ್ಚುತ್ತದೆ ಎಂದು ಯಾವುದೇ ಎಣ್ಣೆಯನ್ನೇ ಸೇವಿಸದಿರುವವರೂ ಇದ್ದಾರೆ. ಆದರೆ ಆಲಿವ್ ಎಣ್ಣೆಯಲ್ಲಿರುವ ಆರೋಗ್ಯಕರ ಕೊಬ್ಬು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ ಹಾಗೂ ಇದಕ್ಕಾಗಿ ಶರೀರದಲ್ಲಿರುವ ಕೊಬ್ಬನ್ನು ಹೆಚ್ಚು ಬಳಸಿಕೊಂಡು ತನ್ಮೂಲಕ ದೇಹದ ತೂಕ ಇಳಿಯಲು ನೆರವಾಗುತ್ತದೆ. ತೂಕ ಇಳಿಕೆಗೆ ಆಲಿವ್ ಎಣ್ಣೆಯನ್ನು ನಿತ್ಯವೂ ಕೊಂಚ ಪ್ರಮಾಣದಲ್ಲಿ ಮಾತ್ರವೇ ಸೇವಿಸುವುದು ಅಗತ್ಯ.

ಒಂದೆರಡು ಚಮಚ ಆಲಿವ್ ಎಣ್ಣೆ-ಇದುವೇ 'ಸೌಂದರ್ಯದ ಗಣಿ'!

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ನಿತ್ಯವೂ ಒಂದು ದೊಡ್ಡ ಚಮಚ ಆಲಿವ್ ಎಣ್ಣೆಯನ್ನು ಕುಡಿಯುವ ಮೂಲಕ ರಕ್ತದಲ್ಲಿ ಕೆಟ್ಟಾ ಕೊಲೆಸ್ಟ್ರಾಲ್ ಸಂಗ್ರಹವಾಗುವುದರಿಂದ ತಡೆಯಬಹುದು. ಜೊತೆಗೇ ಒಟ್ಟಾರೆ ಕೊಲೆಸ್ಟ್ರಾಲ್ ಪ್ರಮಾಣವನ್ನು ಆರೋಗ್ಯಕರ ಮಿತಿಯಲ್ಲಿರಿಸಲು ನೆರವಾಗುವುದರಿಂದ ಅಧಿಕ ಕೊಲೆಸ್ಟ್ರಾಲ್ ತೊಂದರೆ ಇರುವ ವ್ಯಕ್ತಿಗಳಿಗೆ ಉತ್ತಮವಾಗಿದೆ. ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ಈಗಾಗಲೇ ನರಗಳ ಒಳಭಾಗದಲ್ಲಿ ಸಂಗ್ರಹಗೊಂಡಿರುವ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಯಾಗಿ ರಕ್ತನಾಳಗಳ ಒಳಭಾಗದಲ್ಲಿ ಜಾರುಕದಂತೆ ಕಾರ್ಯನಿರ್ವಹಿಸುತ್ತದೆ.

ಸಂಧಿವಾತ ಕಡಿಮೆಯಾಗಿಸುತ್ತದೆ

ಸಂಧಿವಾತ ಕಡಿಮೆಯಾಗಿಸುತ್ತದೆ

ಸಂಧಿವಾತಕ್ಕೆ ಕೆಲವಾರು ಕಾರಣಗಳಿವೆ. ಪ್ರಮುಖವಾಗಿ ಸ್ಥೂಲಕಾಯ, ವೃದ್ದಾಪ್ಯ, ಮೂಳೆಗಳು ಟೊಳ್ಳಾಗುವ ಓಸ್ಟಿಯೋಪೋರೋಸಿಸ್, ಮೂಳೆಗಳ ಸಂಧುಗಳಲ್ಲಿ ಉರಿಯೂತ ಮೊದಲಾದವು. ಮೂಳೆಗಳ ಸಂಧುಗಳಲ್ಲಿರುವ ಅಂಗಾಂಶಗಳಲ್ಲಿ ಉರಿಯೂತ ಎದುರಾದರೆ ಸಂಧುನೋವು ಉಂಟಾಗುತ್ತದೆ. ಆಲಿವ್ ಎಣ್ಣೆ ಒಂದು ನೈಸರ್ಗಿಕ ಜಾರುಕವಾಗಿದ್ದು ಮೂಳೆಗಳ ಸಂಧುಗಳಲ್ಲಿ ಜಾರುಕ ಪರಿಣಾಮವನ್ನು ಬೀರುವ ಮೂಲಕ ಘರ್ಷಣೆಯನ್ನು ಕಡಿಮೆಯಾಗಿಸುತ್ತದೆ. ಅಲ್ಲದೇ ಇದರ ಉರಿಯೂತ ನಿವಾರಕ ಗುಣ ಸಂಧಿವಾತವನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡುತ್ತದೆ.

ಹೃದಯಸ್ತಂಭನದ ಸಾಧ್ಯತೆ ಕಡಿಮೆಯಾಗಿಸುತ್ತದೆ

ಹೃದಯಸ್ತಂಭನದ ಸಾಧ್ಯತೆ ಕಡಿಮೆಯಾಗಿಸುತ್ತದೆ

ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯದ ಮೇಲಿನ ಒತ್ತಡ ಕಡಿಮೆ ಮಾಡುವ ಮೂಲಕ ಕೆಲವಾರು ಕಾಯಿಲೆಗಳಿಂದ ರಕ್ಷಿಸುತ್ತದೆ ಎಂದು ಹಿಂದೆ ಓದಿದೆವು. ನಾವು ತಿಳಿದಿರುವಂತೆ, ಹೃದಯದ ಕಾಯಿಲೆ ಹಾಗೂ ಅಧಿಕ ಕೊಲೆಸ್ಟ್ರಾಲ್ ಪಾರ್ಶ್ವವಾಯುವಿಗೆ ಎರಡು ಪ್ರಮುಖ ಕಾರಣಗಳಾಗಿವೆ. ಇವುಗಳ ಇರುವಿಕೆಯಿಂದ ಆಮ್ಲಜನಕಯುಕ್ತ ರಕ್ತ ಮೆದುಳು ತಲುಪಲು ಅಡ್ಡಿಯುಂಟಾಗುತ್ತದೆ. ಆಲಿವ್ ಎಣ್ಣೆಯ ಸೇವನೆಯಿಂದ ರಕ್ತಸಂಚಾರ ಸುಗಮಗೊಳ್ಳುವ ಕಾರಣ ಈ ತೊಂದರೆಗಳಿಂದ ರಕ್ಷಣೆ ದೊರಕುತ್ತದೆ.

ಅಲ್ಝೀಮರ್ಸ್ ಕಾಯಿಲೆಯಿಂದ ರಕ್ಷಿಸುತ್ತದೆ

ಅಲ್ಝೀಮರ್ಸ್ ಕಾಯಿಲೆಯಿಂದ ರಕ್ಷಿಸುತ್ತದೆ

ಮೆದುಳಿನ ಕ್ಷಮತೆ ಉಡುಗಿ ಕೈ ನಡುಗುವ ಕಾಯಿಲೆಯಾದ ಆಲ್ಝೀಮರ್ಸ್ ಕಾಯಿಲೆ ರೋಗಿಯನ್ನು ಜರ್ಝರಿತಗೊಳಿಸುತ್ತದೆ. ಮೆದುಳಿನ ಜೀವಕೋಶಗಳು ಹೆಚ್ಚು ಹೆಚ್ಚಾಗಿ ಸಾಯುತ್ತಾ ಹೋದಂತೆ ಈ ಕಾಯಿಲೆ ಆವರಿಸುವ ಸಾಧ್ಯತೆಯೂ ಹೆಚ್ಚುತ್ತದೆ. ಪರಿಣಾಮವಾಗಿ ಮರೆವು, ಅರಿವಿನ ಕೊರತೆ, ಅಗತ್ಯ ಚಲನೆಗಳಲ್ಲಿ ತಾಳಮೇಳವಿಲ್ಲದಿರುವುದು, ಸಮಾಜದೊಂದಿಗೆ ಹೊಂದಿಕೊಳ್ಳಲು ಕಷ್ಟವಾಗುವುದು, ಮಾನಸಿಕ ಕಿರಿಕಿರಿ, ಸಿಟ್ಟು, ಖಿನ್ನತೆ ಮೊದಲಾದವು ಎದುರಾಗುತ್ತವೆ. ಆಲಿವ್ ಎಣ್ಣೆಯಲ್ಲಿ ಮೆದುಳಿನ ಜೀವಕೋಶಗಳಿಗೆ ಚೇತನ ನೀಡುವ ಪೋಷಕಾಂಶಗಳಿದ್ದು ಮೆದುಳನ್ನು ಹೆಚ್ಚು ಕಾಲ ಆರೋಗ್ಯಕರವಾಗಿರಿಸುತ್ತದೆ. ಪರಿಣಾಮವಾಗಿ ಆಲ್ಜೀಮರ್ಸ್ ಕಾಯಿಲೆಯಿಂದ ರಕ್ಷಣೆ ಒದಗಿಸುತ್ತದೆ.

ಟೈಪ್ 2 ಮಧುಮೇಹದಿಂದ ರಕ್ಷಿಸುತ್ತದೆ

ಟೈಪ್ 2 ಮಧುಮೇಹದಿಂದ ರಕ್ಷಿಸುತ್ತದೆ

ಈ ವಿಧದ ಮಧುಮೇಹದಲ್ಲಿ ದೇಹದಲ್ಲಿ ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾದರೂ ದೇಹ ಬಳಸಿಕೊಳ್ಳಲು ವಿಫಲವಾಗುವ ಕಾರಣ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿರುತ್ತದೆ. ಕೆಲವು ಅಧ್ಯಯನಗಳಲ್ಲಿ ಕಂಡುಕೊಂಡ ಪ್ರಕಾರ ನಿಯಮಿತವಾಗಿ ಆಲಿವ್ ಎಣ್ಣೆಯನ್ನು ಸೇವಿಸುತ್ತಾ ಬರುವ ಮೂಲಕ ದೇಹ ಸಕ್ಕರೆಯನ್ನು ಬಳಸಿಕೊಳ್ಳುವ ಕ್ಷಮತೆಯನ್ನು ಹೆಚ್ಚಿಸಿಕೊಳ್ಳುತ್ತದೆ. ತನ್ಮೂಲಕ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ

ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ

ಕ್ಯಾನ್ಸರ್ ಒಂದು ಭಯಾನಕವಾದ ಕಾಯಿಲೆಯಾಗಿದ್ದು ಉಲ್ಬಣಗೊಂಡ ಬಳಿಕ ಯಾವ ಚಿಕಿತ್ಸೆಯೂ ಫಲಕಾರಿಯಾಗದೇ ಸಾವು ಎದುರಾಗುವ ಕಾಯಿಲೆಯಾಗಿದೆ. ಒಂದು ಅಂಗದ ಅಂಗಾಂಶದ ಜೀವಕೋಶಗಳು ಅಗತ್ಯಕ್ಕೂ ಹೆಚ್ಚಾಗಿ ಹಾಗೂ ಅನಿಯಂತ್ರಿತವಾಗಿ ಬೆಳೆಯುತ್ತಾ ಹೋದರೆ ಇದು ದುರ್ಮಾಂಸ ಅಥವಾ ಗಡ್ಡೆಯ ರೂಪ ತಳೆಯುತ್ತದೆ ಹಾಗೂ ಈ ಅಂಗವನ್ನೇ ಆವರಿಸುತ್ತದೆ. ಇದೇ ಕ್ಯಾನ್ಸರ್. ಆಲಿವ್ ಎಣ್ಣೆಯಲ್ಲಿರುವ ಕೆಲವು ಪೋಷಕಾಂಶಗಳಿಗೆ ಕ್ಯಾನ್ಸರ್ ತಡೆಯುವ ಶಕ್ತಿ ಇರುವುದನ್ನು ಕೆಲವು ಸಂಶೋಧನೆಗಳು ದೃಢಪಡಿಸಿವೆ. ಆಲಿವ್ ಎಣ್ಣೆಯ ನಿಯಮಿತ ಸೇವನೆಯಿಂದ ಕ್ಯಾನ್ಸರ್ ಪೀಡಿತ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ ಹಾಗೂ ಈ ಮೂಲಕ ಕ್ಯಾನ್ಸರ್ ವಿರುದ್ದ ರಕ್ಷಣೆ ಒದಗಿಸುತ್ತದೆ.

ಹೊಟ್ಟೆಯ ಕರುಳುಗಳನ್ನು ಶಮನಗೊಳಿಸುತ್ತದೆ

ಹೊಟ್ಟೆಯ ಕರುಳುಗಳನ್ನು ಶಮನಗೊಳಿಸುತ್ತದೆ

ಒಂದು ದೊಡ್ಡ ಚಮಚದಷ್ಟು ಆಲಿವ್ ಎಣ್ಣೆಯನ್ನು ನಿತ್ಯವೂ ಮುಂಜಾನೆ ಸೇವಿಸುವ ಮೂಲಕ ಹೊಟ್ಟೆಯ ಒಳಪದರಗಳಲ್ಲಿ ಉಂಟಾಗಿರುವ ಹುಣ್ಣುಗಳನ್ನು ಶಮನಗೊಳಿಸಲು ಹಾಗೂ ಉರಿಯಿಂದ ಪರಿಹಾರ ಒದಗಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಜೀರ್ಣರಸದಲ್ಲಿರುವ ಆಮ್ಲೀಯತೆಯನ್ನು ಕಡಿಮೆಗೊಳಿಸಿ ಹುಣ್ಣುಗಳಾದಂತೆ ರಕ್ಷಿಸುತ್ತದೆ ಹಾಗೂ ಒಂದು ವೇಳೆ ಜಠರದಲ್ಲಿ ಹುಣ್ಣುಗಳು ಎದುರಾಗಿದ್ದರೆ ಈ ಹುಣ್ಣುಗಳನ್ನು ಗುಣಪಡಿಸಲು ನೆರವಾಗುತ್ತದೆ.

ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ

ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ

ಒಂದು ವೇಳೆ ನಿಮಗೆ ಮಲಬದ್ಧತೆಯ ತೊಂದರೆ ಇದ್ದು ಮಲವಿಸರ್ಜನೆ ಕಷ್ಟದಲ್ಲಿ ಆಗುತ್ತಿದ್ದರೆ ನಿತ್ಯವೂ ಒಂದು ದೊಡ್ಡ ಚಮಚ ಆಲಿವ್ ಎಣ್ಣೆಯನ್ನು ಬೆಳಗ್ಗಿನ ಉಪಾಹಾರಕ್ಕೂ ಮುನ್ನ ಸೇವಿಸುದರಿಂದ ಉತ್ತಮ ಪರಿಹಾರ ದೊರಕುತ್ತದೆ. ಆಲಿವ್ ಎಣ್ಣೆ ಕರುಳುಗಳಲ್ಲಿ ಜಾರುಕದಂತೆ ಕಾರ್ಯ ನಿರ್ವಹಿಸುತ್ತದೆ ಹಾಗೂ ಕಲ್ಮಶಗಳನ್ನು ಸಡಿಲಗೊಳಿಸಿ ಇವು ಸುಲಭವಾಗಿ ವಿಸರ್ಜಿಸಲ್ಪಡಲು ಸಾಧ್ಯವಾಗುತ್ತದೆ. ಒಂದು ವೇಳೆ ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಆಪ್ತರು, ಸ್ನೇಹಿತರೊಂದಿಗೆ ಹಂಚಿಕೊಂಡು ಇದರ ಪ್ರಯೋಜನವನ್ನು ಅವರೂ ಪಡೆಯುವಂತಾಗಲು ನೆರವಾಗಿ.

English summary

Health Benefits Of Drinking Olive Oil In The Morning

What comes to most of our minds when we hear of the words olive oil? We usually relate it with yummy Italian foods like pasta and pizza, right?Well, olive oil is a natural oil, extracted from olives, used for cooking and cosmetic purposes. In fact, a number of health and fitness professionals these days are advising people to use only olive oil to cook most of their daily dishes in, instead of using refined oils that people generally use, as olive oil is healthier!