For Quick Alerts
ALLOW NOTIFICATIONS  
For Daily Alerts

ಮೈಯೆಲ್ಲಾ ತುರಿಕೆ ಕಾಣಿಸಿದರೆ ಇದು ಖತರ್ನಾಕ್ ರೋಗದ ಲಕ್ಷಣಗಳಾಗಿರಬಹುದು!

|

ದೇಹದ ಯಾವುದೇ ಭಾಗಕ್ಕೆ ಸೊಳ್ಳೆ ಅಥವಾ ಇರುವೆ ಕಚ್ಚಿದರೆ ಆಗ ನಮಗೆ ನೋವು ಮತ್ತು ತುರಿಕೆ ಉಂಟಾಗುವುದು. ಆಗ ನಾವು ಆ ಭಾಗವನ್ನು ತುಂಬಾ ಜೋರಾಗಿ ಉಜ್ಜಿಕೊಳ್ಳುತ್ತೇವೆ. ಅದೇ ರೀತಿ ಕೆಲವೊಮ್ಮೆ ಏನೂ ಕಚ್ಚದೆ ಕೂಡ ನಮಗೆ ತುರಿಕೆ ಕಾಣಿಸಿಕೊಳ್ಳಬಹುದು. ತುರಿಕೆ ನಮಗೆ ತುಂಬಾ ಕಿರಿಕಿರಿ ಉಂಟು ಮಾಡುವುದು.

ಆದರೆ ಈ ತುರಿಕೆ ಕೆಲವು ರೋಗಗಳ ಲಕ್ಷಣಗಳಾಗಿರಬಹುದು ಎಂದು ನಿಮಗೆ ತಿಳಿದಿದೆಯಾ? ಚರ್ಮದ ತುರಿಕೆಯು ಹಲವಾರು ರೋಗಗಳ ಲಕ್ಷಣಗಳು. ಇರುವೆ ಕಚ್ಚಿದಂತಹ ತುರಿಕೆಯು ಹೆಚ್ಚು ಸಮಯ ಉಳಿಯುವುದಿಲ್ಲ. ಆದರೆ ಅಲರ್ಜಿಯಿಂದ ಉಂಟಾಗಿರುವಂತಹ ತುರಿಕೆಯು ದೀರ್ಘ ಕಾಲ ತನಕ ಇರುವುದು. ಇದು ಹಲವಾರು ದಿನಗಳು, ವಾರಗಳು, ತಿಂಗಳುಗಳ ಕಾಲವೂ ಇರಬಹುದು.

ದೇಹದ ಯಾವುದೇ ಭಾಗದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತಿದ್ದರೆ ಅದು ತುಂಬಾ ಮುಜುಗರ ಉಂಟು ಮಾಡುವಂತಹ ವಿಚಾರವಾಗಿರುವುದು. ನಾಲ್ಕು ಜನರ ಮುಂದೆ ದೇಹವನ್ನು ತುರಿಸಿಕೊಳ್ಳುವುದು ನಮ್ಮ ಮೇಲಿನ ಅಭಿಪ್ರಾಯವನ್ನೇ ಬದಲಾಯಿಸಿ ಬಿಡಬಹುದು. ಕೆಲವೊಂದು ತುರಿಕೆಗಳು ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತದೆ ಎಂದು ಈ ಲೇಖನದ ಮೂಲಕ ತಿಳಿಯಿರಿ....

ಕಿಡ್ನಿ ಕಾಯಿಲೆ

ಕಿಡ್ನಿ ಕಾಯಿಲೆ

ಕಿಡ್ನಿಯು ದೇಹದಲ್ಲಿ ಪ್ರಮುಖ ಪಾತ್ರ ವಹಿಸಿರುವುದು. ಇದರಲ್ಲಿ ದೇಹದಲ್ಲಿರುವಂತಹ ವಿಷಕಾರಿ ಹಾಗೂ ಕಲ್ಮಶವನ್ನು ಹೊರಹಾಕುವುದು. ಸಣ್ಣ ಅಥವಾ ದೊಡ್ಡ ಮಟ್ಟದ ಕಿಡ್ನಿ ಸಮಸ್ಯೆಯಿರುವಂತಹ ಜನರಲ್ಲಿ ತುರಿಕೆ ಕಂಡುಬರುವುದು ಎಂದು ಅಧ್ಯಯನಗಳು ಹೇಳಿವೆ. ಕಿಡ್ನಿ ವೈಫಲ್ಯದಂತಹ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದರೆ ಆಗ ತುರಿಕೆ ನಿರಂತರ ವಾಗಿರುವುದು. ಕಿಡ್ನಿಯು ದೇಹದಲ್ಲಿ ಇರುವಂತಹ ವಿಷ ಹಾಗೂ ಕಲ್ಮಷ ಹೊರಹಾಕದೇ ಇರುವ ಕಾರಣದಿಂದ ಅದು ರಕ್ತದಲ್ಲಿ ಸೇರಿಕೊಂಡು ಚರ್ಮದಲ್ಲಿ ತುರಿಕೆ ಕಾಣಿಸುವುದು. ಒಂದು ವೇಳೆ ಕಿಡ್ನಿ ಸಮಸ್ಯೆ ಎಂದು ಖಚಿತಗೊಂಡರೆ, ಗಾಬರಿ ಪಡಬೇಡಿ ಕೂಡಲೇ ಈ ಮನೆಮದ್ದುಗಳನ್ನು ಪ್ರಯತ್ನಿಸಿ

ತುಳಸಿ ಎಲೆಗಳು

ಸಾಮಾನ್ಯವಾಗಿ ಮೂತ್ರದ ಯಾವುದೇ ತೊಂದರೆಗೆ ತುಳಸಿ ಉತ್ತಮವಾಗಿದೆ. ಶೀತದಿಂದ ಹಿಡಿದು ಜ್ವರ, ಶ್ವಾಸ, ಮೂತ್ರಪಿಂಡಗಳ ಕಲ್ಲಿಗೂ ಉತ್ತಮವಾಗಿದೆ. ತುಳಸಿಯಲ್ಲಿರುವ ಮೂತ್ರವರ್ಧಕ ಗುಣ ಮತ್ತು ಕಲ್ಮಶ ನಿವಾರಕ ಗುಣ ಮೂತ್ರಪಿಂಡಗಳ ಕಲ್ಲುಗಳನ್ನು ಹೊರಹಾಕಲು ಸಮರ್ಥವಾಗಿವೆ. ತುಳಸಿ ಎಲೆಗಳ ರಸದಲ್ಲಿ ಅಸೆಟಿಕ್ ಆಮ್ಲವಿದ್ದು ಈ ಆಮ್ಲದಲ್ಲಿ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ. ಕಲ್ಲುಗಳು ಕರಗುತ್ತಾ ಹೋದಂತೆ ನೋವು ಸಹಾ ಕಡಿಮೆಯಾಗುತ್ತದೆ.

ಬಳಕೆಯ ವಿಧಾನ

ನಾಲ್ಕಾರು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಕೊಂಚ ಜೇನಿನೊಂದಿಗೆ ಬೆರೆಸಿ ಪ್ರತಿದಿನ ಜಗಿದು ತಿನ್ನುವ ಮೂಲಕ ಕಲ್ಲುಗಳು ನಿಧಾನವಾಗಿ ಕರಗುತ್ತಾ ಹೋಗುತ್ತವೆ. ಇನ್ನು ಸಾಕಷ್ಟು ನೀರು ಕುಡಿಯುವುದು ಕಿಡ್ನಿ ಕಲ್ಲುಗಳನ್ನು ಸ್ವಾಭಾವಿಕವಾಗಿ ತಡೆಯುತ್ತದೆ. ಕನಿಷ್ಠ ಪಕ್ಷ 8 ಲೋಟಗಳಷ್ಟಾದರೂ ನೀರನ್ನು ಕುಡಿಯುವುದು ಅತ್ಯವಶ್ಯಕವಾಗಿದೆ. ನೀರಲ್ಲದೆ, ಸಿಟ್ರಸ್ ಅಂಶವುಳ್ಳ ಜ್ಯೂಸ್ ಅನ್ನು ಕೂಡ ನೀವು ಸೇವಿಸಬಹುದು. ಈ ಪಾನೀಯಗಳು ಕಲ್ಲಿನ ರಚನೆಯನ್ನು ನಿರ್ಬಂಧಿಸುವಲ್ಲಿ ಸಹಕಾರಿ.

ಯಕೃತ್ (ಲಿವರ್) ಕಾಯಿಲೆ

ಯಕೃತ್ (ಲಿವರ್) ಕಾಯಿಲೆ

ಕಿಡ್ನಿಯಂತೆ ಯಕೃತ್ ಕೂಡ ನಮ್ಮ ದೇಹದ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಇದು ಜೀರ್ಣಕ್ರಿಯೆ ಮತ್ತು ಆಹಾರದಲ್ಲಿರುವಂತಹ ಪೋಷಕಾಂಶಗಳನ್ನು ವಿಘಟಿಸಿ, ದೇಹಕ್ಕೆ ಶಕ್ತಿ ಒದಗಿಸುವುದು. ಯಾವುದೇ ಕಾರಣವಿಲ್ಲದೆ ದೇಹವಿಡಿ ತುರಿಸಲು ಆರಂಭಿಸಿದರೆ ಆಗ ಇದು ಯಕೃತ್ ಕಾಯಿಲೆಯ ಆರಂಭಿಕ ಲಕ್ಷಣಗಳು. ಅತಿಯಾದ ಪಿತ್ತರಸ ಯಕೃತ್ ನಲ್ಲಿ ಶೇಖರಣೆಗೊಂಡಾಗ ಅದು ಆಮ್ಲೀಯವಾಗಿ ರಕ್ತವನ್ನು ಸೇರುವುದು. ಇದರಿಂದ ಚರ್ಮದಲ್ಲಿ ತುರಿಕೆ ಕಂಡುಬರುವುದು. ಒಂದು ವೇಳೆ ಲಿವರ್ ರೋಗದ ಸಮಸ್ಯೆ ಎಂದು ದೃಢಪಟ್ಟರೆ ಪಪ್ಪಾಯಿ ಹಣ್ಣನ್ನು ಸೇವಿಸಿ ಯಕೃತ್ತಿನ ಕಾಯಿಲೆಗೆ ಅತ್ಯ೦ತ ಸುರಕ್ಷಿತವಾದ ನೈಸರ್ಗಿಕ ಪರಿಹಾರವು ಈ ಪಪ್ಪಾಯಿಯಾಗಿದೆ. ಅರ್ಧ ಟೀ ಚಮಚದಷ್ಟು ಲಿ೦ಬೆ ರಸವನ್ನು ಎರಡು ಟೀಚಮಚದಷ್ಟು ಪಪ್ಪಾಯಿಯ ರಸದೊ೦ದಿಗೆ ಬೆರೆಸಿ ಈ ಮಿಶ್ರಣವನ್ನು ಪ್ರತಿದಿನವೂ ಸೇವಿಸಿರಿ. ಸಮಸ್ಯೆಯ ಸ೦ಪೂರ್ಣ ಪರಿಹಾರಕ್ಕಾಗಿ ಈ ಮಿಶ್ರಣವನ್ನು ಮೂರರಿ೦ದ ನಾಲ್ಕು ವಾರಗಳಷ್ಟು ಕಾಲ ಸೇವಿಸಿರಿ. ಅಷ್ಟೇ ಅಲ್ಲದೆ ವಿಟಮಿನ್ ಸಿ ಯ ಸಮೃದ್ಧ ಮೂಲಗಳಲ್ಲೊ೦ದಾಗಿರುವ ನೆಲ್ಲಿಯು ಯಕೃತ್ತಿನ ಕಾರ್ಯನಿರ್ವಹಣೆಯನ್ನು ಅದರ ಅತ್ಯುತ್ಕೃಷ್ಟ ಮಟ್ಟದಲ್ಲಿ ಸ್ಥಿರವಾಗಿರಿಸಬಲ್ಲದು. ನೆಲ್ಲಿಯು ಯಕೃತ್ತಿನ ರಕ್ಷಣೆಗೆ ಸ೦ಬ೦ಧಿಸಿದ೦ತೆ ವಿವಿಧ ರೀತಿಯಲ್ಲಿ ಕಾರ್ಯವೆಸಗುತ್ತದೆ ಎ೦ದು ಅಧ್ಯಯನಗಳು ಸಾಬೀತುಪಡಿಸಿವೆ. ನೀವು ದಿನಕ್ಕೆ ನಾಲ್ಕರಿ೦ದ ಐದು ಕಚ್ಚಾ ನೆಲ್ಲಿಕಾಯಿಗಳನ್ನು ಹಾಗೆಯೇ ಸೇವಿಸಬಹುದು. ಇದಕ್ಕೆ ಬದಲಾಗಿ ನೀವು ನೆಲ್ಲಿಯನ್ನು ಸಲಾಡ್ ನಲ್ಲಿಯೂ ಬಳಸಿಕೊಳ್ಳಬಹುದು ಅಥವಾ ಅದನ್ನು ಚೂರುಚೂರಾಗಿ ಕತ್ತರಿಸಿ ಮೊಸರು ಮತ್ತು ಉಪ್ಪಿನೊ೦ದಿಗೆ ಸೇರಿಸಿ ಸೇವಿಸಬಹುದು.

ಬೆನ್ನುಹುರಿಯ ಕಾಯಿಲೆ

ಬೆನ್ನುಹುರಿಯ ಕಾಯಿಲೆ

ನಿಮಗೆ ಬೆನ್ನು ಮತ್ತು ಬೆನ್ನಿನ ಮಧ್ಯಭಾಗದಲ್ಲಿ ಯಾವುದೇ ಕೆಂಪು ಕಲೆಗಳು ಇಲ್ಲದೆ ಇದ್ದರೂ ತುರಿಕೆ ಕಂಡುಬಂದಿದ್ದರೆ ಇದು ಬೆನ್ನುಹುರಿಯ ಕಾಯಿಲೆ ಲಕ್ಷಣ. ಬೆನ್ನುಹುರಿಗೆ ಗಾಯ ಅಥವಾ ಉರಿಯೂತದಿಂದ ಬೆನ್ನುಹುರಿಯ ಸಮಸ್ಯೆಯು ಕಾಣಿಸುವುದು. ಬೆನ್ನುಹುರಿಯ ಸುತ್ತಲಿನ ನರಗಳಿಗೆ ಹಾನಿ ಅಥವಾ ಉರಿಯೂತ ಉಂಟಾದಾಗ ಅದಕ್ಕೆ ಚಿವುಟಿದಂತೆ ಆಗಿ ಕುಳಿತುಕೊಳ್ಳುವಾಗ ಮತ್ತು ನಡೆಯುವಾಗ ಬೆನ್ನಿನ ಭಾಗದಲ್ಲಿ ತುರಿಕೆ ಉಂಟಾಗುವುದು.

ಸೆಲಿಯಾಕ್(ಉದರದ) ರೋಗ

ಸೆಲಿಯಾಕ್(ಉದರದ) ರೋಗ

ಮೊಣಕಾಲು, ಮಣಿಗಂಟು, ಪೃಷ್ಠ ಮತ್ತು ಕೂದಲು ಇತ್ಯಾದಿ ಭಾಗಗಳಲ್ಲಿ ನಿಮಗೆ ಕೆಂಪು ಗುಳ್ಳೆಗಳ ಜತೆಗೆ ತುರಿಕೆ ಕಾಣಿಸಿಕೊಂಡರೆ ಇದು ಡೆರ್ಮಾಟಿಟಿಸ್ ಹರ್ಪೆಟಫಾರ್ಮಿಸ್. ಇದು ಚರ್ಮಕ್ಕೆ ಪ್ರಭಾವ ಬೀರುವ ಸೆಲಿಯಾಕ್ ರೋಗದ ಒಂದು ವಿಧ. ಗ್ಲುಟೆನ್ ಅಧಿಕವಾಗಿರುವಂತಹ ಆಹಾರ ಸೇವನೆ ಮಾಡಿದಾಗ ಇಂತಹ ಸಮಸ್ಯೆ ಕಂಡುಬರುವುದು. ಗ್ಲುಟೆನ್ ಇಲ್ಲದೆ ಇರುವ ಆಹಾರ ಮತ್ತು ಔಷಧಿ ಸೇವನೆ ಮಾಡಿದರೆ ಇದನ್ನು ಕಡಿಮೆ ಮಾಡಬಹುದು.

ಲಿಂಫೋಮಾ

ಲಿಂಫೋಮಾ

ಲಿಂಫೋಮಾ ಎನ್ನುವುದು ರಕ್ತದ ಕ್ಯಾನ್ಸರ್ ನ ಒಂದು ವಿಧ. ಇದು ದೇಹದ ದುಗ್ಧರಸ ಗ್ರಂಥಿಗಳ ಮೇಲೆ ಪರಿಣಾಮ ಬೀರುವುದು. ಈ ಕ್ಯಾನ್ಸರ್ ಗೆ ಚಿಕಿತ್ಸೆ ನೀಡುವುದು ತುಂಬಾ ಕಠಿಣ ಮತ್ತು ಇದು ಬೇಗನೆ ತೀವ್ರ ಸ್ವರೂಪಕ್ಕೆ ತಲುಪುವುದು. ಈ ರೋಗದಿಂದ ಬಳಲುವಂತಹ ಜನರಲ್ಲಿ ದೇಹವಿಡಿ ತುರಿಕೆ ಕಂಡುಬರುವುದು. ಸೈಟೊಕಿನ್ಸ್ ನಿಂದಾಗಿ ಇದು ಬರುವುದು. ಇದು ಚರ್ಮದ ಕೋಶಗಳಲ್ಲಿ ಉರಿಯೂತ ಉಂಟು ಮಾಡುವುದು.

ಥೈರಾಯ್ಡ್ ಕಾಯಿಲೆ

ಥೈರಾಯ್ಡ್ ಕಾಯಿಲೆ

ಥೈರಾಯ್ಡ್ ನಲ್ಲಿ ಎರಡು ವಿಧಗಳು ಇವೆ. ಒಂದು ಹೈಪೊಥೈರೋಡಿಸಮ್. ಇದು ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇರುವಾಗ ಬರುವುದು. ಎರಡನೇಯದ್ದನ್ನು ಹೈಪರ್ ಥೈರೊಡಿಸಮ್ ಎಂದು ಕರೆಯುವುದು. ಇದು ಥೈರಾಯ್ಡ್ ಗ್ರಂಥಿಗಳು ಅತಿಯಾಗಿ ಕಾರ್ಯನಿರ್ವಹಿಸಿದಾಗ ಬರುವುದು. ದೇಹದಲ್ಲಿ ಥೈರಾಯ್ಡ್ ನಿಂದ ಉಂಟಾಗುವಂತಹ ಹಾರ್ಮೋನು ವೈಪರಿತ್ಯದಿಂದಾಗಿ ಕೆಲವು ರೋಗಿಗಳಲ್ಲಿ ತುರಿಕೆ ಕಂಡುಬರುವುದು. ಇನ್ನು ಥೈರಾಯ್ಡ್ ಇರುವವರು

ಐಯೋಡಿನ್ ಯುಕ್ತ ಆಹಾರವನ್ನು ತಿನ್ನಬೇಕು. ಸ್ಟ್ರಾಬೆರಿಯಲ್ಲಿ ಐಯೋಡಿನ್ ಅಂಶವಿರುವುದರಿಂದ ಥೈರಾಯ್ಡ್ ಇರುವವರು ಇದನ್ನು ತಿನ್ನುವುದು ಒಳ್ಳೆಯದು.

ಋತುಬಂಧ

ಋತುಬಂಧ

ಋತುಬಂಧವೆನ್ನುವುದು ಯಾವುದೇ ರೀತಿಯ ಕಾಯಿಲೆಯಲ್ಲದೆ ಇದ್ದರೂ ಇದು ಮಹಿಳೆಯ ದೇಹದ ಮೇಲೆ ಹಲವಾರು ರೀತಿಯ ಅಡ್ಡಪರಿಣಾಮಗಳನ್ನು ಉಂಟು ಮಾಡುವುದು. ಋತುಬಂಧವು ನೈಸರ್ಗಿಕ ಪ್ರಕ್ರಿಯೆ. 45ರ ಗಡಿದಾಟಿದ ಪ್ರತಿಯೊಬ್ಬ ಮಹಿಳೆಯಲ್ಲೂ ಇದು ನಡೆಯುವುದು. ಋತುಬಂಧದ ವೇಳೆ ಹಲವಾರು ರೀತಿಯ ಹಾರ್ಮೋನು ಬದಲಾವಣೆಗಳು ಕಂಡುಬರುವುದು. ಹಾರ್ಮೋನು ಬದಲಾವಣೆಯಿಂದಾಗಿ ದೇಹದಲ್ಲಿ ನೈಸರ್ಗಿಕ ಎಣ್ಣೆಯ ಉತ್ಪತ್ತಿ ಕಡಿಮೆಯಾಗುವುದು. ಇದರಿಂದ

ಚರ್ಮವು ಒಣಗುವುದು ಮತ್ತು ತುರಿಕೆ ಕಂಡುಬರುವುದು. ಹಾರ್ಮೋನು ಥೆರಪಿಯಿಂದ ಇದನ್ನು ಸರಿಪಡಿಸಬಹುದು.

English summary

Deadly Diseases Your Itchy Skin Is Trying To Warn You About!

When people are suffering from long-term skin itching, life could be rather difficult for them, as the itching comes in the way of their daily activities and never allows them to be in peace! Always itching your skin can be tiresome as well as embarrassing and can also make a person feel extremely tired.So, here are a few things that skin itching can tell about your health
X
Desktop Bottom Promotion