For Quick Alerts
ALLOW NOTIFICATIONS  
For Daily Alerts

ಪಾನಿಪೂರಿ ತಿಂದರೆ, ದೇಹದ ತೂಕ ಇಳಿಸಿಕೊಳ್ಳಬಹುದಂತೆ! ಹೌದೇ?

|

ಪಾನಿಪೂರಿಯೆಂದರೆ ಹೆಚ್ಚಿನವರು ಇಷ್ಟಪಡುವಂತಹ ತಿಂಡಿ. ಅದರಲ್ಲೂ ಇದರೊಂದಿಗೆ ನೀಡುವಂತಹ ಸಿಹಿ ಹಾಗೂ ಖಾರ ಮಿಶ್ರಿತ ನೀರು ತುಂಬಾ ಒಳ್ಳೆಯದು ಎನ್ನಲಾಗುತ್ತದೆ. ಭಾರತದೆಲ್ಲೆಡೆ ಪಾನಿಪೂರಿಯನ್ನು ಗೋಲ್ ಗಪ್ಪೆ, ಪುಕ್ಚಾ, ಗಪ್ ಚುಪ್ ಇತ್ಯಾದಿ ಹೆಸರುಗಳಿಂದ ಕರೆಲಾಗುತ್ತದೆ. ಸಂಜೆಯಾಗುತ್ತಲೇ ರಸ್ತೆಬದಿಯ ಗಾಡಿಯಲ್ಲಿ ಸಿಗುವಂತಹ ಪಾನಿಪೂರಿ ಸೇವಿಸಲು ಹಲವಾರು ಮಂದಿ ಸಾಲು ನಿಲ್ಲುವರು. ಕೆಲವರು ಇದು ಆರೋಗ್ಯಕ್ಕೆ ಹಾನಿಕಾರಕವೆಂದು ಹೇಳಿದರೆ, ಇನ್ನು ಕೆಲವರು ಇದು ಆರೋಗ್ಯಕಾರಿ ಎನ್ನುವರು. ಪಾನಿಪೂರಿಯಲ್ಲಿ ಪೋಷಕಾಂಶಗಳು ಇದೆಯಾ? ಪೂರಿಯನ್ನು ರವೆ ಮತ್ತು ಹಿಟ್ಟಿನಿಂದ ಮಾಡಲಾಗುವುದು. ಇದರಲ್ಲಿ ರವೆಯು ಪ್ರಮುಖವಾಗಿರುವುದು. ಇದರಲ್ಲಿ ನಾರಿನಾಂಶ, ವಿಟಮಿನ್ ಬಿ ಸಂಕೀರ್ಣ, ವಿಟಮಿನ್ ಇ, ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂ ಇದೆ.

ಭಾರತದ ಪ್ರತಿ ಮೂಲೆಗೆ ಹೋದರು ನೀವು ಪಾನಿ ಪೂರಿಯ ವಿವಿಧ ಆವೃತ್ತಿಗಳನ್ನು ರುಚಿ ನೋಡುವ ಭಾಗ್ಯವನ್ನು ಪಡೆಯಬಹುದು. ನಮ್ಮ ಕರ್ನಾಟಕದಲ್ಲಿಯು ಬಂಗಾರಪೇಟೆ ಪಾನಿಪೂರಿ ಎಂಬ ಬಗೆಯು ಸಹ ಪ್ರಸಿದ್ಧಿಯನ್ನು ಪಡೆದಿದೆ. ದೆಹಲಿಯಲ್ಲಿ ಇದನ್ನು "ಗೋಲ್‍ಗೊಪ್ಪ" ಎಂದು ಕರೆಯುತ್ತಾರೆ. ಕೊಲ್ಕತ್ತಾದಲ್ಲಿ ಇದನ್ನು "ಫುಚ್ಕಾ" ಎಂದು ಕರೆಯುತ್ತಾರೆ. ಮುಂಬೈನಲ್ಲಿ ಇದನ್ನು "ಪಾನಿಪೂರಿ" ಎಂದು ಕರೆಯುತ್ತಾರೆ. ಇದು ಒಂದು ಬಗೆಯ ಪೂರಿಯಾಗಿದ್ದು, ಹುಣಸೆಹಣ್ಣಿನ ನೀರಿನಲ್ಲಿ ಅದ್ದಿ ತಿನ್ನಲು ನೀಡುತ್ತಾರೆ.

ಇನ್ನು ಉತ್ತರ ಭಾರತ, ಮಹಾರಾಷ್ಟ್ರಗಳಲ್ಲಿ ಗೋಲ್ ಗಪ್ಪಾ ಎಂದೂ ಕರೆಯಲ್ಪಡುವ ಈ ಪಾನಿಪೂರಿಯ ರುಚಿ ಎಲ್ಲರಿಗೂ ಅಪ್ಯಾಯಮಾನವಾಗಿದೆ. ಪೂರ್ತಿಯಾಗಿ ಉಬ್ಬಿದ್ದ ಪುಟ್ಟ ಪೂರಿಯನ್ನು ಮಸಾಲೆ ಮತ್ತು ಪಾನಿಯೊಡನೆ ಇಡಿಯಾಗಿ ಬಾಯಿಯೊಳಗಿಟ್ಟು ಜಗಿದಾಗ ಕುರುಕು ಸ್ವರದಲ್ಲಿ ಪುಡಿಯಾಗುವ ಪೂರಿ, ಅದರೊಂದಿಗೆ ಒಸರುವ ರಸ ಒಂದು ಧಾರೆಯಾಗಿ ನಿಮ್ಮ ನಾಲಿಗೆಯ ಅಷ್ಟೂ ರುಚಿಸಂವೇದಕಗಳನ್ನು ಆವರಿಸಿ ಬಿಡುತ್ತದೆ. ಇದು ಎಲ್ಲರಿಗೂ ಇಷ್ಟವಾಗುವ ರುಚಿಯಾಗಿದೆ. ಹೆಚ್ಚು ಖಾರ ಬೇಕೇ, ಬೇಡವೇ ಕೊಂಚ ಸಿಹಿಯಾಗಿದ್ದರೆ ಒಳಿತೇ, ಹುಳಿ ಹೆಚ್ಚು ಬೇಕೇ, ಬೇಡವೇ ಪಾನಿಪೂರಿ ತುಂಬಿಸುವ ಮುನ್ನ ಅಂಗಡಿಯಾತನಿಗೆ ಹೇಳಿದರೆ ಸಾಕು, ಅದೇ ಕ್ಷಣದಲ್ಲಿ ನಿಮಗೆ ಸೂಕ್ತವಾದ ಖಾರ ಅಥವಾ ಸಿಹಿಯ ಪ್ರಮಾಣವನ್ನು ಬದಲಿಸಲು ಸಾಧ್ಯ. ಎಲ್ಲರ ಮೆಚ್ಚುಗೆಗೆ ಪಾತ್ರನಾಗಲು ಪಾನಿಪೂರಿಯ ಈ ವೈಶಿಷ್ಟ್ಯವೇ ಕಾರಣ.

ಅದರಲ್ಲೂ ಪೂರಿಯ ಒಳಗಡೆ ಆಲೂಗಡ್ಡೆ ಮತ್ತು ಕಡಲೆ ಹಾಕಲಾಗುತ್ತದೆ. ಹುಳಿಯಾಗಿರುವಂತಹ ನೀರಿನಲ್ಲಿ ಹುಣಸೆಹುಳಿ ಮತ್ತು ಪುದೀನಾ ಎಲೆಗಳು ಇರುವುದು. ಕಡಲೆಯಲ್ಲಿ ಉನ್ನತ ಮಟ್ಟದ ನಾರಿನಾಂಶ, ಪ್ರೋಟೀನ್ ಮತ್ತು ಹಲವಾರು ರೀತಿಯ ವಿಟಮಿನ್ ಗಳು ಮತ್ತು ಖನಿಜಾಂಶಗಳು ಇವೆ. ಬಟಾಟೆಯಲ್ಲಿ ವಿಟಮಿನ್ ಬಿ6, ವಿಟಮಿನ್ ಸಿ, ಮ್ಯಾಂಗನೀಸ್, ಫೋಸ್ಪರಸ್, ನಿಯಾಸಿನ್ ಮತ್ತು ಪಾಂಟೊಥೆನಿಕ್ ಆಮ್ಲವಿದೆ. ರಸ್ತೆ ಬದಿಯಲ್ಲಿ ಸಿಗುವಂತಹ ಪಾನಿಪೂರಿಯನ್ನು ಅನಾರೋಗ್ಯಕರ ರೀತಿಯಲ್ಲಿ ತಯಾರಿಸಿರಬಹುದು. ಆದರೆ ಇದಕ್ಕೆ ಬಳಸಲಾಗುವಂತಹ ಸಾಮಗ್ರಿಗಳು ಆರೋಗ್ಯಕರ. ರವೆಯಿಂದ ಮಾಡಲಾಗುವಂತಹ ಪೂರಿಯು ಕರಿದು ಕುರುಕಲಾಗಿರುವುದು. ಇದಕ್ಕೆ ಹುಣಸೆ ಹುಳಿ ಚಟ್ನಿ, ಮೆಣಸು, ಚಾಟ್ ಮಸಾಲ, ಜೀರಿಗೆ ಹುಡಿ, ಬಟಾಟೆ, ಈರುಳ್ಳಿ ಅಥವಾ ಕಡಲೆ ಹಾಕಲಾಗುತ್ತದೆ.

ಪಾನಿಪೂರಿಯು ಆರೋಗ್ಯಕ್ಕೆ ಒಳ್ಳೆಯದೇ?

ಪಾನಿಪೂರಿಯು ಆರೋಗ್ಯಕ್ಕೆ ಒಳ್ಳೆಯದೇ?

*6 ಪಾನಿಪೂರಿಯಲ್ಲಿ ಸುಮಾರು 36 ಕ್ಯಾಲರಿ ಇದೆ. ಮನೆಯಲ್ಲೇ ಪಾನಿಪೂರಿ ತಯಾರಿಸುವಿರಾದರೆ ನೀವು ಬಟಾಟೆಯನ್ನು ಬಿಟ್ಟು, ಅದಕ್ಕೆ ಮೊಳಕೆ ಬರಿಸಿದ ಹೆಸರುಕಾಳುಗಳನ್ನು ಹಾಕಬಹುದು. *70.8 ಗ್ರಾಂ ಪಾನಿಪೂರಿಯಲ್ಲಿ 4 ಗ್ರಾಂ ಕೊಬ್ಬು ಇದೆ. ಪೂರಿಯನ್ನು ಕರಿಯುವ ವೇಳೆ ಇದು ಬರುವುದು.

ಇದನ್ನು ಹೊರತುಪಡಿಸಿ 2 ಗ್ರಾಂನಷ್ಟು ಪರಿಷ್ಕರಿಸಿದ ಕೊಬ್ಬು ಇದೆ.

*ಇಷ್ಟೇ ಪ್ರಮಾಣದ ಪಾನಿಪೂರಿಯಲ್ಲಿ 2 ಗ್ರಾಂನಷ್ಟು ಪ್ರೋಟೀನ್ ಇದೆ. ನೀವು ಕಪ್ಪು ಕಡಲೆ ಬಳಸಿ ಇದನ್ನು ಹೆಚ್ಚಿಸಬಹುದು. ಇದರಲ್ಲಿ ಒಂದು ಗ್ರಾಂ ಕಬ್ಬಿನಾಂಶ ಮತ್ತು ಇತರ ವಿಟಮಿನ್ ಗಳು ಮತ್ತು ಖನಿಜಾಂಶಗಳಾಗಿರುವ ಪೊಟಾಶಿಯಂ, ಮೆಗ್ನಿಶಿಯಂ, ವಿಟಮಿನ್ ಎ, ವಿಟಮಿನ್ ಬಿ6, ವಿಟಮಿನ್ ಬಿ12, ವಿಟಮಿನ್ ಸಿ ಮತ್ತು ವಿಟಮಿನ್ ಡಿ ಇದೆ.

*ಪೂರಿಯಲ್ಲಿ 40 ಮಿ.ಗ್ರಾಂ.ನಷ್ಟು ಸೋಡಿಯಂ ಇದೆ. ನೀವು ಪೂರಿ ಕಡಿಮೆ ಸೇವನೆ ಮಾಡಿ ಇದನ್ನು ತಗ್ಗಿಸಬಹುದು.

ತೂಕ ಕಳೆದುಕೊಳ್ಳಲು ಬಯಸುವಾಗ ಪಾನಿಪೂರಿ ಸೇವಿಸಬಹುದೇ?

ತೂಕ ಕಳೆದುಕೊಳ್ಳಲು ಬಯಸುವಾಗ ಪಾನಿಪೂರಿ ಸೇವಿಸಬಹುದೇ?

*ಪಾನಿಪೂರಿಯನ್ನು ತಯಾರಿಸುವ ವಿಧಾನವು ತುಂಬಾ ಅನಾರೋಗ್ಯಕಾರಿಯಾಗಿರ ಬಹುದು. ಅದಾಗ್ಯೂ, ತೂಕ ತಗ್ಗಿಸಲು ಬಯಸಿದ್ದರೆ ಆಗ ನೀವು ಪಾನಿಪೂರಿಯನ್ನು ಅಪರೂಪಕ್ಕೆ ಒಮ್ಮೆ ಸೇವಿಸಬಹುದು.

*ಸಿಹಿ/ಹುಳಿ ನೀರು ಇಲ್ಲದೆ ಮತ್ತು ಬಟಾಟೆ ಇಲ್ಲದೆಯೂ ನೀವು ಇದನ್ನು ಸೇವಿಸಬಹುದು.

*ಸಿಹಿ ಮತ್ತು ಹುಳಿ ನೀರಿನಲ್ಲಿ ಅಧಿಕಮಟ್ಟದ ಉಪ್ಪು ಇರುವುದು. ಇದರಿಂದ ನೀರು ನಿಲ್ಲಬಹುದು ಅಥವಾ ಹೊಟ್ಟೆ ಉಬ್ಬರ ಉಂಟಾಗಬಹುದು. ಸಂಜೆ ವೇಳೆ ಇದನ್ನು ನೀವು ಸೇವಿಸದೆ ಇದ್ದರೆ ಒಳ್ಳೆಯದು.

*ಸಂಜೆ ವೇಳೆ ಸೇವಿಸುವ ಬದಲು ಮಧ್ಯಾಹ್ನ ವೇಳೆ ನೀವು ಪಾನಿಪೂರಿಯನ್ನು ಸೇವಿಸಬಹುದು. ಮಧ್ಯಾಹ್ನ ಊಟದ ಬಳಿಕ ಮತ್ತು ರಾತ್ರಿ ವೇಳೆ ಉಪ್ಪು ಕಡಿಮೆ ಇರುವಂತಹ ಆಹಾರ ಸೇವಿಸಿ. *ಪಾನಿಪೂರಿಯಲ್ಲಿರುವಂತಹ ಉಪ್ಪನ್ನು ಕಡಿಮೆ ಮಾಡಲು ನೀವು ಸಂಜೆ ವೇಳೆ ಪಪ್ಪಾಯಿ ಅಥವಾ ಸೇಬನ್ನು ಸೇವಿಸಬಹುದು.

 ಪಾನಿಪೂರಿ ಸೇವಿಸಲು ಒಳ್ಳೆಯ ಸಮಯ

ಪಾನಿಪೂರಿ ಸೇವಿಸಲು ಒಳ್ಳೆಯ ಸಮಯ

*ನೀವು ಆರೋಗ್ಯಕರವಾಗಿರುವಂತಹ ಪಾನಿಪೂರಿ ಸೇವಿಸುವ ಬದಲು ನೀವು ಇದನ್ನು ಯಾವ ಸಮಯದಲ್ಲಿ ಸೇವಿಸಬೇಕು ಎಂದು ತಿಳಿದಿರಬೇಕು. ನಿಮಗೆ ಪಾನಿಪೂರಿಯು ಬೇಕೆಂಬ ಆಸೆಯಾಗಿದ್ದರೆ ನೀವು ಮಧ್ಯಾಹ್ನ ವೇಳೆ ಇದನ್ನು ಸೇವಿಸಿ.

ಪಾನಿಪೂರಿಯಲ್ಲಿರುವ ಹೆಚ್ಚಿನ ಮಟ್ಟದ ಉಪ್ಪು ದೇಹದಲ್ಲಿ ನೀರಿನಾಂಶ ಶೇಖರಣೆಯಾಗುವಂತೆ ಮಾಡಬಹುದು.

*ಸಂಜೆ ವೇಳೆ ಪಾನಿಪೂರಿ ಸೇವನೆ ಮಾಡಿದರೆ ಅದರಿಂದ ತೂಕ ಹೆಚ್ಚಳವಾಗಬಹುದು. ವ್ಯಾಯಮಕ್ಕೆ ಮೊದಲು ಅಥವಾ ಅದರ ನಂತರ ಇದರ ಸೇವನೆ ಮಾಡಬೇಡಿ.

ಆರೋಗ್ಯಕರ ಪಾನಿಪೂರಿ ಸೇವಿಸಲು ಕೆಲವು ಉತ್ತಮ ವಿಧಾನಗಳು

ಆರೋಗ್ಯಕರ ಪಾನಿಪೂರಿ ಸೇವಿಸಲು ಕೆಲವು ಉತ್ತಮ ವಿಧಾನಗಳು

*ಗೋಧಿ ಪೂರಿ ಕೇಳಿ ಮತ್ತು ಅದರಲ್ಲೂ ತುಂಬಾ ಸಣ್ಣ ದಾಗಿರುವುದನ್ನು ತಗೊಳ್ಳಿ. ರವೆಯನ್ನು ಕಡೆಗಣಿಸಿ. ಪಾನಿಪೂರಿಗೆ ಯಾವುದೇ ಆಲೂಗಡ್ಡೆ ಅಥವಾ ಸಿಹಿ ಚಟ್ನಿ ಹಾಕಬೇಡಿ.

*ಇದರಿಂದ ಕ್ಯಾಲರಿ ಕಡಿಮೆ ಮಾಡಿಕೊಳ್ಳಬಹುದು. ನೀವು ಕಪ್ಪು ಕಡಲೆ ಬಳಸಬಹುದು.

*ಮೊಳಕೆ ಬರಿಸಿದ ಹೆಸರುಕಾಳು ಅಥವಾ ಕಡಲೆ ಹಾಕುವಂತಹ ಪಾನಿಪೂರಿಯವರಿಂದ ಪಾನಿಪೂರಿ ಸೇವಿಸಿ. ನೀವು ಹಣಕೊಡುವಾಗ ಅದು ಆರೋಗ್ಯಕರವಾಗಿರಲಿ.

ತೂಕ ಕಳೆದುಕೊಳ್ಳ ಬಯಸುವವರು ಎಷ್ಟು ಪಾನಿಪೂರಿ ಸೇವಿಸಬಹುದು

ತೂಕ ಕಳೆದುಕೊಳ್ಳ ಬಯಸುವವರು ಎಷ್ಟು ಪಾನಿಪೂರಿ ಸೇವಿಸಬಹುದು

*ಊಟದ ವೇಳೆ ನೀವು ಆರು ಸಣ್ಣ ಪಾನಿ ಪೂರಿಗಳನ್ನು ಸೇವಿಸಬಹುದು. ನಿಮ್ಮ ಪಾನಿಪೂರಿಯಿಂದ ತೃಪ್ತಿ ಸಿಕ್ಕಿದ ಬಳಿಕ ರಾತ್ರಿ ವೇಳೆ ಉಪ್ಪು ರಹಿತ ಆಹಾರ ಸೇವಿಸಿ.

* ಸಂಜೆ ವೇಳೆ ಪಪ್ಪಾಯಿ, ಸೇಬಿನೊಂದಿಗೆ ಕಡಿಮೆ ಕೊಬ್ಬು ಇರುವಂತಹ ಹಾಲನ್ನು ಸೇವಿಸಿ.

* ನೀವು ಈ ಚಾಟ್ ನ್ನು ಸೇವಿಸುವ ಮೊದಲು ನಿಮ್ಮ ಡಯಾಟಿಶಿಯನ್ ನ್ನು ಭೇಟಿಯಾಗಿ.

ಗುಲೆಟಿನ್ ಸೂಕ್ಷ್ಮವಾಗಿದ್ದರೆ ಅಥವಾ ಗುಲೆಟಿನ್ ಮುಕ್ತ ಆಹಾರ ಸೇವನೆ ಮಾಡುತ್ತಲಿದ್ದರೆ ನೀವು ಆಗ ಪಾನಿಪೂರಿ ಸೇವನೆ ಮಾಡಲೇಬಾರದು.

ಮನೆಯಲ್ಲೇ ಮಾಡಬಹುದು ಶುಚಿರುಚಿ ಪಾನಿಪುರಿ

English summary

Can You Eat Pani Puri When You Are Trying To Lose Weight?

Can You Eat Pani Puri When You Are Trying To Lose Weight? Pani puri is called by various names across India such as gol gappe, phukcha, gup chup, etc. Though millions of Indians gorge on this street food, it is tagged as an unhealthy food, while some say that it's healthy too, because of the ingredients used. What Is The Nutritional Value Of Pani Puri? The crispy puri is made with semolina and flour. Semolina, the main ingredient, is rich in important nutrients like fibre, vitamin B complex, vitamin E, calcium and magnesium.
Story first published: Thursday, August 30, 2018, 17:28 [IST]
X
Desktop Bottom Promotion