For Quick Alerts
ALLOW NOTIFICATIONS  
For Daily Alerts

ಆರೋಗ್ಯಕಾರಿ ಲೈಂಗಿಕ ಜೀವನಕ್ಕಾಗಿ 7 ಅತ್ಯುತ್ತಮ ಆಹಾರ ಸಲಹೆಗಳು

By Sushma Charhra
|

ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದಾಗಿ ಶೇಕಡಾ 50 ರಷ್ಟು ಹಾರ್ಟ್ ಅಟ್ಯಾಕ್ ಆಗುವುದನ್ನು ತಡೆಯಬಹುದು ಎಂಬ ವಿಚಾರ ನಿಮಗೆ ತಿಳಿದಿದೆಯಾ? ಹೌದು, ಒಂದು ಅಧ್ಯಯನ ಮತ್ತು ಅಂಕಿಅಂಶಗಳ ಪ್ರಕಾರ, ಸಂಗಾತಿಗಳಲ್ಲಿ ಲೈಂಗಿಕ ಕ್ರಿಯೆಯು ನಿಯಿಮಿತವಾಗಿರುವುದರಿಂದಾಗಿ ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಹೊಂದಲು ಸಾಧ್ಯವಿದೆ.

ಹಾಗಾಗಿ, ಲೈಂಗಿಕ ಕ್ರಿಯೆಯು ಸಾಕಷ್ಟು ಖುಷಿಯಿಂದ ಯಾವಾಗ ನಡೆಯುತ್ತದೆಯೋ ಮತ್ತು ಇಷ್ಟೊಂದು ಆರೋಗ್ಯ ಲಾಭಗಳು ಇದ್ದಾಗ್ಯೂ ಯಾಕೆ ಇಂದಿನ ಜನರಲ್ಲಿ ಹಲವರಿಗೆ ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಉದ್ಭವವಾಗುತ್ತದೆ...? ಆದರೆ, ಈ ಸಮಸ್ಯೆಗೆ ಹಲವಾರು ರೀತಿಯ ಕಾರಣಗಳನ್ನು ನಾವು ಹೇಳಬಹುದು..

ನಂಬಿಕೆಗೆ ಲೈಂಗಿಕ ಪಾಲುದಾರರ ಕೊರತೆ, ಸೆಕ್ಸ್ ಡ್ರೈವ್ ಅನ್ನು ಕಡಿಮೆಗೊಳಿಸಬಹುದಾದ ಖಿನ್ನತೆಯಂತಹ ಕೆಲವು ಮಾನಸಿಕ ಕಾಯಿಲೆಗಳು, ಕೆಲವು ಔಷಧಗಳ ಅಡ್ಡ ಪರಿಣಾಮಗಳು, ಲೈಂಗಿಕ ಡ್ರೈವ್ ನಲ್ಲಿ ಸಮಸ್ಯೆ, ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ಸಮಯದ ಕೊರತೆ, ಒತ್ತಡ, ಖಿನ್ನತೆ, ಇತ್ಯಾದಿಗಳನ್ನು ಕಡಿಮೆಗೊಳಿಸುತ್ತದೆ.ಬಹಳ ಮುಖ್ಯವಾಗಿ ವಯಸ್ಸಿಗೆ ಬಂದ ಹುಡುಗ ಹುಡುಗಿಯು ಅಥವಾ ಭಾರತದ ಮಟ್ಟಿಗಾದರೆ ಹೊಸದಾಗಿ ಮದುವೆಯಾದ ಪತಿ-ಪತ್ನಿಯು ನಿಯಮಿತವಾದ ಲೈಂಗಿಕತೆಯನ್ನು ಹೊಂದಲು ಸಾಧ್ಯವಾಗದಿದ್ದರೆ, ಇದು ಅವನ/ಅವಳ ಮಾನಸಿಕ ಸ್ಥಿತಿಯ ಮೇಲೆ ದೀರ್ಘಾವಧಿಯಲ್ಲಿ ನಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರಬಹುದು.

Sex Life

ಸಾಮಾನ್ಯ ಆರೋಗ್ಯಕ್ಕೆ ಬಂದಾಗ ಆಹಾರವು ಹೇಗೆ ಮುಖ್ಯವಾದ ಪಾತ್ರ ವಹಿಸುತ್ತದೆಯೋ ಹಾಗೆಯೇ ಲೈಂಗಿಕ ಆರೋಗ್ಯಕ್ಕೆ ಬಂದಾಗಲೂ ಸಹ, ಲೈಂಗಿಕ ಡ್ರೈವನ್ನು ಸುಧಾರಿಸಲು ಸಹಾಯ ಮಾಡುವ ಕೆಲವು ಆಹಾರ ಸಲಹೆಗಳು ಇವೆ. ಲೈಂಗಿಕ ಕ್ರಿಯೆಯನ್ನು ವೃದ್ಧಿಗೆ ತರುವ ಆ ಆಹಾರಗಳು ಯಾವುವು ಮತ್ತು ಅವು ಹೇಗೆ ನಿಮ್ಮ ಲೈಂಗಿಕ ಜೀವನವನ್ನು ಸರಿಪಡಿಸಬಲ್ಲವು ಎಂಬ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ಸಂಪೂರ್ಣ ವಿವರವನ್ನು ನೀಡಲಿದ್ದೇವೆ, ಹಾಗಾಗಿ ಈ ಲೇಖನ ಓದಲು ಮುಜುಗರ ಬೇಡ. ಇದು ನಿಮ್ಮ ಅಥವಾ ನಿಮ್ಮವರ ಸಹಾಯಕ್ಕೆ ಖಂಡಿತ ಬರಲಿದೆ.. ಮುಂದೆ ಓದಿ..

1. ಸಮತೋಲಿತ ಆಹಾರ
2. ಎಂಡೋರ್ಫಿನ್ ನ್ನು ಉತ್ತೇಜಿಸುವ ಆಹಾರಗಳು
3. ಸತುವು ಅಧಿಕವಾಗಿರುವ ಆಹಾರ
4. ಅಲ್ಕೋಹಾಲ್ ಸೇವನೆ ಬೇಡ
5. ಸ್ಯಾಚುರೇಟೆಡ್ ಕೊಬ್ಬಿನಾಂಶದ ಆಹಾರ ಸೇವನೆ ನಿಲ್ಲಲಿ
6. ಧೂಮಪಾನ ಬಿಟ್ಟುಬಿಡಿ
7. ವಿಟಮಿನ್ ಇ

1.ಸಮತೋಲಿತ ಆಹಾರ

ನಮಗೆಲ್ಲ ತಿಳಿದಿರುವಂತೆ, ಆರೋಗ್ಯವಾದ ಮತ್ತು ಸಮತೋಲಿತ ಆಹಾರವು ನಮ್ಮ ದೇಹದ ಆರೋಗ್ಯ ಮತ್ತು ಕಾಯಿಲೆಗಳಿಂದ ಮುಕ್ತವಾದ ದೀರ್ಘಾಯುಷ್ಯವನ್ನು ಕಾಪಾಡಿಕೊಳ್ಳಲು ಬಹಳ ಮುಖ್ಯವಾಗಿ ಬೇಕು. ಅದೆಷ್ಟೋ ಕಾಯಿಲೆಗಳನ್ನು ಗುಣಪಡಿಸಬೇಕಾದರೆ ಸರಿಯಾದ ಪರಿಕ್ರಮದ ಆಹಾರ ಸೇವನೆ ಅಗತ್ಯವಾಗಿ ಬೇಕಾಗುತ್ತದೆ. ಅದೇ ರೀತಿ, ಲೈಂಗಿಕ ಜೀವನಕ್ಕೂ ಸಹ, ಲೈಂಗಿಕ ಕ್ರಿಯೆಯ ಅಭಿವೃದ್ಧಿಗೆ, ಆರೋಗ್ಯಕಾರಿಯಾದ ಮತ್ತು ಪೋಷಕಾಂಶ ಭರಿತವಾಗ ಆಹಾರ ಸೇವನೆಯ ಅಗತ್ಯವಿದೆ. ಅನಾರೋಗ್ಯಕಾರಿಯಾದ ಆಹಾರ ಸೇವನೆಯಿಂದಾಗಿ ಹಲವು ರೀತಿಯ ಹಾರ್ಮೋನುಗಳು ನಿಮ್ಮ ದೇಹದಲ್ಲಿ ಬದಲಾಗುತ್ತದೆ ಮತ್ತು ಈ ಹಾರ್ಮೋನುಗಳು ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ.ಹಾಗಾಗಿ ಸಮತೋಲಿತವಾದ ಆಹಾರ ಸೇವನೆಯ ಕ್ರಮವನ್ನು ರೂಢಿಸಿಕೊಂಡು ಹಾರ್ಮೋನುಗಳಲ್ಲಿ ವ್ಯತ್ಯಯವಾಗದಂತೆ ನೋಡಿಕೊಂಡರೆ, ನಿಮ್ಮ ಸೆಕ್ಸ್ ಡ್ರೈವ್ ಗಳು ಸುಧಾರಣೆಗೊಂಡು ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.

2. ಎಂಡೋರ್ಫಿನ್ ಅನ್ನು ಉತ್ತೇಜಿಸುವ ಆಹಾರಗಳು

ಯಾವಾಗ ಒಬ್ಬ ವ್ಯಕ್ತಿಯು ಒತ್ತಡದಲ್ಲಿರುತ್ತಾನೋ ಅಥವಾ ನೋವು ಮತ್ತು ಖಿನ್ನತೆಗೆ ಒಳಗಾಗಿರುತ್ತಾನೋ, ಲೈಂಗಿಕ ಕ್ರಿಯೆ ಅನ್ನುವುದು ಆತನ ಮನಸ್ಸಿನಲ್ಲಿರುವ ಕೊನೆಯ ಅಂಶವಾಗಿರುತ್ತದೆ ಮತ್ತು ಇದು ಅವರ ಸೆಕ್ಸ್ ಡ್ರೈವ್ ನ್ನು ಕಡಿಮೆಗೊಳಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಎಂಡೋರ್ಫಿನ್ ಗಳು ಎಂದು ಕರೆಯಲ್ಪಡುವ ಹಾರ್ಮೋನುಗಳ ವೃದ್ಧಿಗೆ ಎಲ್ಲರೂ ಪ್ರಯತ್ನಿಸಬೇಕಾಗುತ್ತದೆ. ಈ ಹಾರ್ಮೋನುಗಳು ಅಧಿಕವಾಗಿದ್ದಾಗ, ನಿಮ್ಮ ಸೆಕ್ಸ್ ಡ್ರೈವ್ ಕೂಡ ಸುಧಾರಿಸುತ್ತದೆ . ಆಹಾರಗಳಾದ ಮೀನು, ಹಸಿರು ಎಲೆ ತರಕಾರಿಗಳು, ಒಣ ಹಣ್ಣುಗಳು, ಚಿಪ್ಪು ಮೀನು, ಕಾಳುಗಳು, ಧಾನ್ಯಗಳು ಇತ್ಯಾದಿಗಳು ಈ ಎಂಡೋರ್ಫಿನ್ ನ್ನು ದೇಹದಲ್ಲಿ ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದೆ .

3. ಸತುವು ಅಧಿಕವಾಗಿರುವ ಆಹಾರ

ಸಮತೋಲಿತ ಆಹಾರವೆಂದರೆ ಅದರಲ್ಲಿ ಕಾರ್ಬೋಹೈಡ್ರೇಟ್ಸ್, ಕೊಬ್ಬಿನಾಂಶ, ಪ್ರೊಟೀನ್, ವಿಟಮಿನ್, ಮಿನರಲ್ ಗಳು ಇತ್ಯಾದಿಗಳು ಅಗತ್ಯ ಪ್ರಮಾಣದಲ್ಲಿ ಲಭ್ಯವಿರಬೇಕು. ಮಿನರಲ್ ಗಳು ನೀವು ಆರೋಗ್ಯವಾಗಿರಲು ಬಹಳ ಮುಖ್ಯವಾಗಿ ಬೇಕಾಗುತ್ತದೆ. ಅದರಲ್ಲೂ ಪ್ರಮುಖ ಮಿನರಲ್ ಗಳು ಎಂದರೆ ಪೊಟಾಷಿಯಂ, ಸತು, ಕಬ್ಬಿಣ, ಕ್ಯಾಲ್ಸಿಯಂ ಇತ್ಯಾದಿಗಳು. ಅಧ್ಯಯನಗಳು ತಿಳಿಸುವಂತೆ, ಸತುವು ಅಧಿಕವಾಗಿರುವ ಆಹಾರಗಳು ಗಮನಾರ್ಹವಾಗಿ ನಿಮ್ಮ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯಕರವಾದ ಲೈಂಗಿಕ ಜೀವನವನ್ನು ಪಡೆಯಲು ನೆರವಿಗೆ ಬರುತ್ತದೆ. ಆಹಾರಗಳಾದ ಸಮುದ್ರ ಆಹಾರಗಳು, ಪೌಲ್ಟ್ರಿ ಆಹಾರಗಳು, ಮಾಂಸ, ಮೊಟ್ಟೆ, ಹಾಲು, ಬೀನ್ಸ್ ಇತ್ಯಾದಿಗಳಲ್ಲಿ ಸತುವಿನ ಅಂಶ ಅಧಿಕವಾಗಿರುತ್ತದೆ.

4. ಮಧ್ಯಪಾನವನ್ನು ಬಿಟ್ಟು ಬಿಡಿ

ಅದೆಷ್ಟೋ ಜನ ಅಂದುಕೊಂಡಿರುತ್ತಾರೆ, ಅಲ್ಕೋಹಾಲ್ ಸೇವನೆಯು ಲೈಂಗಿಕ ಕ್ರಿಯೆ ನಡೆಸಲು ಪ್ರಚೋದಿಸುತ್ತದೆ ಎಂದು, ಯಾಕೆಂದರೆ ಅದು ಅವರ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು. ಆದರೆ ನಿಜ ಸಂಗತಿ ಏನೆಂದರೆ, ಆಲ್ಕೋಹಾಲ್ ಸೇವನೆಯನ್ನು ಯಾವಾಗಲೂ ಮಾಡುತ್ತಿರುವುದರಿಂದಾಗಿ ನಿಮ್ಮ ಲೈಂಗಿಕ ಕ್ರಿಯೆಯ ಮೇಲೆ ಋಣಾತ್ಮಕ ಪರಿಣಾಮವಾಗುತ್ತದೆ. ಅದರಲ್ಲೂ ಪುರುಷರಲ್ಲಿ ಇದರ ಪರಿಣಾಮ ಅಧಿಕವಾಗಿರುತ್ತದೆ. ಅಲ್ಕೋಹಾಲ್ ಸೇವನೆಯು ಪುರುಷರಲ್ಲಿ ಈಸ್ಟ್ರೋಜನ್ ಹಾರ್ಮೋನುಗಳ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದು ಅವರ ಆಸಕ್ತಿಯನ್ನುಕುಗ್ಗಿಸುತ್ತದೆ ಮತ್ತು ಅಪಸಾಮಾನ್ಯ ಕ್ರಿಯೆಗೆ ಕಾರಣವಾಗಬಹುದು. ಹಾಗಾಗಿ ಅಲ್ಕೋಹಾಲ್ ಸೇವನೆಯನ್ನುಬಿಟ್ಟು ಬಿಡುವುದು ಒಳ್ಳೆಯದು .. ಹಾಗಾಗದೇ ಇದ್ದಲ್ಲಿ ತೀರಾ ಅಪರೂಪಕ್ಕೊಮ್ಮೆ ಅಲ್ಪ ಪ್ರಮಾಣದಲ್ಲಿ ಸೇವಿಸಿ.

5. ಸ್ಯಾಚುರೇಟೆಡ್ ಕೊಬ್ಬಿನಾಂಶದ ಆಹಾರ ಸೇವನೆ ನಿಲ್ಲಲಿ

ಯಾವ ವ್ಯಕ್ತಿಗಳು ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೋ ಅಥವಾ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುತ್ತಾರೋ ಅಂತಹ ವ್ಯಕ್ತಿಗಳು ಆದಷ್ಟು ಅನಾರೋಗ್ಯಕಾರಿಯಾದ ಸ್ಯಾಚುರೇಟೆಡ್ ಕೊಬ್ಬಿನಾಂಶದ ಆಹಾರ ಸೇವನೆಯ ಬಗ್ಗೆ ಜಾಗೃತಿ ವಹಿಸುತ್ತಾರೆ. ಆದರೆ, ಯಾವ ವ್ಯಕ್ತಿಗಳಿಗೆ ಮಲಗುವ ಕೋಣೆಯಲ್ಲಿ ಸಮಸ್ಯೆ ಇರುತ್ತದೆಯೋ ಅಂತ ವ್ಯಕ್ತಿಗಳು ಕೂಡ ಸ್ಯಾಚುರೇಟೆಡ್ ಆಹಾರಗಳಾದ ಫೀಝಾ, ಕರಿದ ಆಹಾರ ಪದಾರ್ಥಗಳು,ಸಂಸ್ಕರಿಸಿದ ಆಹಾರಗಳು, ಸಿಹಿತಿನಿಸುಗಳು ಇತ್ಯಾದಿಗಳನ್ನು ತಪ್ಪಿಸಬೇಕಾಗುತ್ತದೆ. ಸ್ಯಾಚುರೇಟೆಡ್ ಕೊಬ್ಬುಗಳು ರಕ್ತನಾಳಗಳಲ್ಲಿ ಪ್ಲೇಕ್ ನ್ನು ರೂಪಿಸುತ್ತವೆ ಮತ್ತು ಲೈಂಗಿಕ ಕ್ರಿಯೆಯ ಸಂದರ್ಬದಲ್ಲಿ ಜನನಾಂಗಗಳಿಗೆ ಆರೋಗ್ಯಕರವಾದ ರಕ್ತದ ಹರಿವನ್ನು ತಡೆಗಟ್ಟುತ್ತದೆ, ಹೀಗಾಗಿ ಒಟ್ಟಾರೆ ನಿಮ್ಮ ಲೈಂಗಿಕ ಕ್ರಿಯೆಯ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ.

6. ಧೂಮಪಾನ ಬಿಟ್ಟುಬಿಡಿ

ನೀವು ಧೂಮಪಾನ ಬಿಟ್ಟುಬಿಡಲು ಮತ್ತಷ್ಟು ಕಾರಣಗಳನ್ನು ಹುಡುಕುತ್ತಿದ್ದೀರಾದರೆ ಇಲ್ಲಿದೆ ನೋಡಿ ಮತ್ತೊಂದು ಕಾರಣ - ಧೂಮಪಾನವು ನಿಮ್ಮ ಲೈಂಗಿಕ ಜೀವನವನ್ನು ಸರ್ವನಾಶ ಮಾಡಿ ಬಿಡಬಹುದು..! ಹೌದು, ಗಂಭೀರ ಆರೋಗ್ಯ ಸಮಸ್ಯೆಗಳನ್ನು ಮಾಡುವುದು ಮಾತ್ರವಲ್ಲ, ಮಾನಸಿಕವಾದ ವ್ಯಸನವನ್ನು ಉಂಟುಮಾಡಿ, ಧಮನಿಗಳಲ್ಲಿ ರಕ್ತ ಸಂಚಾರವನ್ನು ಹಿಡಿತದಲ್ಲಿಟ್ಟು, ಲೈಂಗಿಕ ಕ್ರಿಯೆಯ ಸಂದರ್ಬದಲ್ಲಿ ಜನನಾಂಗಗಳಿಗೆ ರಕ್ತ ಸಂಚಾರವಾಗದಂತೆ ತಡೆಯುತ್ತದೆ. ಹಾಗಾಗಿ ನಿಮ್ಮ ಕಾಮದ ಉತ್ತೇಜನವು ಕುಗ್ಗುತ್ತದೆ ಮತ್ತು ಅಪಸಾಮಾನ್ಯ ಕ್ರಿಯೆ ಉಂಟಾಗುತ್ತದೆ.

7. ವಿಟಮಿನ್ ಇ

ಲೈಂಗಿಕ ಕ್ರಿಯೆಯನ್ನು ವೃದ್ಧಿಸಿ ನಿಮ್ಮ ಲೈಂಗಿಕ ಜೀವನ ಸುಖಕರವಾಗಿರುವಂತೆ ನೋಡಿಕೊಳ್ಳುವ ಮತ್ತೊಂದು ಪೌಷ್ಠಿಕಾಂಶ ಎಂದರೆ ಅದು ವಿಟಮಿನ್ ಇ..ವಿಟಮನ್ ಇ ಒಂದು ಶಕ್ತಿಶಾಲಿ ಪೋಷಕಾಂಶವಾಗಿದ್ದು, ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ನೀಡುವಲ್ಲಿ ಇದರ ಪಾತ್ರ ಬಹಳ ಮಹತ್ವವಾದದ್ದಾಗಿದೆ.. ವಿಟಮಿನ್ ಇ ಅಂಶವು ಶ್ರೋಣಿಯ ಪ್ರದೇಶ ಮತ್ತು ಜನನಾಂಗಗಳಿಗೆ ಆರೋಗ್ಯಕರವಾಗಿ ರಕ್ತವನ್ನು ಸಂಚರಿಸುವಂತೆ ಮಾಡುತ್ತದೆ. ಮೀನುಗಳು, ಡೈರಿಯ ಆಹಾರಗಳು, ಧಾನ್ಯಗಳು, ಬೀಜಗಳು, ಆಲಿವ್ ಆಯಿಲ್, ತರಕಾರಿಗಳಲ್ಲಿ ವಿಟಮಿನ್ ಇ ಅಂಶವು ಅಧಿಕವಾಗಿರುತ್ತದೆ.ಇವೆಲ್ಲ ಅಂಶವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆರೋಗ್ಯಕರವಾದ ಆಹಾರ ಸೇವನೆ ಮಾಡಿ ಮತ್ತು ಉತ್ತಮ ಲೈಂಗಿಕ ಕ್ರಿಯೆಯಿಂದಾಗಿ ನಿಮ್ಮ ಭಾಂಧವ್ಯವನ್ನು ಮತ್ತು ಆಯುಷ್ಯವನ್ನು ಹೆಚ್ಚಿಸಿಕೊಳ್ಳಿ. ಈ ಲೇಖನ ಇಷ್ಟವಾದರೆ ನಿಮ್ಮವರೊಂದಿಗೆ ಹಚ್ಚಿಕೊಳ್ಳಲು ಮರೆಯಬೇಡಿ.

English summary

Best Nutrition Tips To Have A Healthy Sex Life!

if an adult is not able to have regular sex, it could affect his/her mental state in a negative way in the long run. Just like how diet plays an important role when it comes to general health, even when it comes to sexual health, there are certain diet tips which can help improve sex drive. So, have a look at some of the nutrition tips which help improve sex drive and make way for a healthy sex life.
X
Desktop Bottom Promotion