For Quick Alerts
ALLOW NOTIFICATIONS  
For Daily Alerts

ನಿಮ್ಮ ಆರೋಗ್ಯವನ್ನು ಸುಧಾರಿಸುವ ಮೀನೆಣ್ಣೆಯ 8 ಅಚ್ಚರಿದಾಯಕ ವಿಧಗಳು!

By Vanishri Sp
|

ನಿಮ್ಮಲ್ಲಿ ಕೆಲವರು ಆಗ್ನೇಯ ಏಷ್ಯಾ ದೇಶಗಳಾದ ಥೈಲ್ಯಾಂಡ್, ಇಂಡೋನೇಷ್ಯಾ ಇತ್ಯಾದಿ ದೇಶಗಳಿಗೆ ಪ್ರಯಾಣ ಮಾಡಿರಬಹುದು, ಅಲ್ಲಿ ಹೆಚ್ಚಿನ ಆಹಾರಗಳಿಗೆ ಸ್ಥಳೀಯರು ಮೀನಿನ ಎಣ್ಣೆ ಸೇರಿಸುವ ಸಂಪ್ರದಾಯವನ್ನು ನೋಡಿರಬಹುದು, ಅಲ್ಲವೇ?

ನಿಜ, ಹೆಚ್ಚಿನ ಆಹಾರಗಳಿಗೆ ಮೀನಿನ ಎಣ್ಣೆ ಸೇರಿಸುವುದು ಅಲ್ಲಿನ ಸಂಪ್ರದಾಯವಾಗಿದ್ದು, ಅವರು ಮೀನಿನ ಕೊಬ್ಬಿನ ಕೋಶಗಳಿಂದ ತೆಗೆದ ಮೀನೆಣ್ಣೆ, ಕೇವಲ ಮೀನಿನ ಮಾಂಸ ಸೇವಿಸುವುದಕ್ಕಿಂತ ಹೆಚ್ಚು ಪೌಷ್ಟಿಕಾಂಶ ಹೊಂದಿರುತ್ತದೆ ಎಂದು ರುಜುವಾತು ಪಡಿಸಿದ್ದಾರೆ.

benefits of fish oil

ಇಲ್ಲಿ ನಿಮಗಾಗಿ ನೀವು ತಿಳಿಯಲೇಬೇಕಾದ ಮೀನೆಣ್ಣೆಯ ಕೆಲವು ನಂಬಲಾರದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತಿದ್ದೇವೆ

1. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

1. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಮತ್ತೊಮ್ಮೆ, ನಾವು ಶರೀರದಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಮಟ್ಟ ನಿಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಮತ್ತು ಶರೀರದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಾವೆಲ್ಲಾ ಕೇಳಿದ್ದೇವೆ. ಮೀನೆಣ್ಣೆಯಲ್ಲಿ ಒಮೆಗಾ-3 ಫ್ಯಾಟಿ ಆಮ್ಲ ಸಮೃದ್ಧವಾಗಿದ್ದು, ಇದು ಶರೀರದಲ್ಲಿ "ಕೆಟ್ಟ" ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿ, ಆರೋಗ್ಯಕ್ಕೆ ಅಗತ್ಯವಾದ, ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ವಾರಕ್ಕೆ 2-3 ಬಾರಿ ಮೀನೆಣ್ಣೆ ಸೇವಿಸುವುದು ಅಥವಾ ಮೀನೆಣ್ಣೆಯ ಕ್ಯಾಪ್ಸೂಲ್ ಅನ್ನು ಸೇವಿಸುವುದು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ನೆರವಾಗುತ್ತದೆ.

2. ಮೂಳೆಯ ಆರೋಗ್ಯ ಸುಧಾರಿಸುತ್ತದೆ

2. ಮೂಳೆಯ ಆರೋಗ್ಯ ಸುಧಾರಿಸುತ್ತದೆ

ಮಾನವನ ಮೂಳೆಯ ವ್ಯವಸ್ಥೆ ಸಂಕೀರ್ಣ ರಚನೆಯಾಗಿದ್ದು, ಸ್ನಾಯು ಮತ್ತು ಅಂಗಾಂಶಗಳಿಗೆ ಆಧಾರ ನೀಡುವ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸಲು, ಉತ್ತಮ ಪೋಷಕಾಂಶದ ಅಗತ್ಯವಿದ್ದು, ಇದು ಶರೀರಕ್ಕೆ ರಚನೆಯನ್ನು ನೀಡುತ್ತದೆ. ಮೀನೆಣ್ಣೆಯನ್ನು ನಿಯಮಿತವಾಗಿ ಸೇವಿಸುವುದರಿಂದ, ಮೀನೆಣ್ಣೆ ವಿಟಮಿನ್ ಬಿ12 ಸಮೃದ್ಧವಾಗಿ ಹೊಂದಿರುವುದರಿಂದ ನಿಮ್ಮ ಮೂಳೆಗಳು ದೃಢವಾಗಿ ಮೂಳೆಸವೆತದಂತಹ ನಿರ್ದಿಷ್ಟವಾದ ಮೂಳೆಗೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟುತ್ತದೆ.

3. ಋತುಚಕ್ರದ ಅವಧಿಯ ನೋವನ್ನು ಕಡಿಮೆ ಮಾಡುತ್ತದೆ

3. ಋತುಚಕ್ರದ ಅವಧಿಯ ನೋವನ್ನು ಕಡಿಮೆ ಮಾಡುತ್ತದೆ

50% ಗಿಂತ ಅಧಿಕ ಮಹಿಳೆಯರು ಪ್ರತೀ ತಿಂಗಳು ಋತುಸ್ರಾವದ ಅವಧಿಯಲ್ಲಿ ಹೊಟ್ಟೆಯ ನುಲಿತಕ್ಕೆ ಒಳಗಾಗುತ್ತಾರೆಂದು ಸಂಶೋಧನಾ ಅಧ್ಯಯನಗಳು ತಿಳಿಸಿವೆ. ಋತುಚಕ್ರದ ಅವಧಿಯಲ್ಲಿ ಗರ್ಭಾಶಯದ ಗೋಡೆಯ ಉರಿಯೂತದಿಂದ ಈ ನೋವು ಉಂಟಾಗುತ್ತದೆ. ಇದು ಕೆಲವು ಮಹಿಳೆಯರಲ್ಲಿ ತೀವ್ರವಾಗಿದ್ದು, ಅವರು ನೋವುನಿವಾರಕಗಳನ್ನು ತೆಗೆದುಕೊಳ್ಳುತ್ತಾರೆ. ಮೀನೆಣ್ಣೆಯಲ್ಲಿರುವ ವಿಟಮಿನ್ ಬಿ12 ಅನ್ನು ಮಹಿಳೆಯರು ಸೇವಿಸಿದಾಗ ಅಚ್ಚರಿದಾಯಕ ಎನಿಸುವಂತೆ 70% ಮಹಿಳೆಯರಲ್ಲಿ ಋತುಸ್ರಾವದ ಅವಧಿಯ ನುಲಿತ ಕಡಿಮೆಯಾಗಿದೆ!

4. ಖಿನ್ನತೆಗೆ ಚಿಕಿತ್ಸೆ

4. ಖಿನ್ನತೆಗೆ ಚಿಕಿತ್ಸೆ

ಇತ್ತೀಚೆಗೆ, ಕೆಲಸದ ಒತ್ತಡ, ಅನಾರೋಗ್ಯಕರವಾದ ಆಹಾರ ಸೇವನೆ, ವ್ಯಾಯಾಮ ಮತ್ತು ವಿಶ್ರಾಂತಿಯ ಕೊರತೆ, ಹಣಕಾಸಿನ ಚಿಂತೆ ಇತ್ಯಾದಿ ಒತ್ತಡಯುಕ್ತ ಜೀವನಶೈಲಿಯಿಂದಾಗಿ ಹೆಚ್ಚಿನ ಪ್ರಮಾಣದ ಜನ, ವಿಶೇಷವಾಗಿ ಯುವಜನತೆ ಮತ್ತು ಹಿರಿಯ ವಯಸ್ಕರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಮೀನೆಣ್ಣೆ ಮತ್ತು ಮೀನಿನೆಣ್ಣೆಯ ಕ್ಯಾಪ್ಸೂಲ್ ಗಳು ಒಮೆಗಾ-3 ಫ್ಯಾಟಿ ಆಮ್ಲ ಹೊಂದಿರುವುದರಿಂದ, ಅವು ಖಿನ್ನತೆಯನ್ನು ಸ್ವಾಭಾವಿಕವಾಗಿ ಗುಣಪಡಿಸಲು ಅಗತ್ಯವಾದ, ಮೆದುಳಿನಲ್ಲಿರ್ವ ಸೆರೊಟೋನಿನ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ.

5. ಮಧುಮೇಹ ನಿಯಂತ್ರಣ

5. ಮಧುಮೇಹ ನಿಯಂತ್ರಣ

ನಾವೆಲ್ಲಾ ಈಗಾಗಲೇ ತಿಳಿದಿರುವಂತೆ, ಮಧುಮೇಹ ಅಸಂಖ್ಯಾತ ಜನರನ್ನು, ವಿಶೇಷವಾಗಿ 40 ರ ವಯಸ್ಸು ಮೀರಿದ ವ್ಯಕ್ತಿಗಳನ್ನು ಬಾಧಿಸುತ್ತಿರುವ ಗಂಭೀರವಾದ ಚಯಾಪಚಯ ಸಂಬಂಧಿತ ರೋಗವಾಗಿದೆ. ಇನ್ಸುಲಿನ್ ಹಾರ್ಮೋನ್ ವ್ಯತ್ಯಯದಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾದಾಗ, ಮಧುಮೇಹ ಉಂಟಾಗುತ್ತದೆ. ಮೀನೆಣ್ಣೆ ರಕ್ತದಲ್ಲಿರುವ ಅಡಿಪೊನೆಕ್ಟಿನ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದ್ದು, ಇದು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಿ ಮಧುಮೇಹದ ಲಕ್ಷಣಗಳನ್ನು ನಿಯಂತ್ರಿಸುತ್ತದೆ ಎಂದು ಅಧ್ಯಯನಗಳು ರುಜುವಾತು ಪಡಿಸಿವೆ.

6. ಸಂಧಿವಾತಕ್ಕೆ (ಆರ್ಥ್ರೈಟಿಸ್) ಚಿಕಿತ್ಸೆ

6. ಸಂಧಿವಾತಕ್ಕೆ (ಆರ್ಥ್ರೈಟಿಸ್) ಚಿಕಿತ್ಸೆ

ಸಂಧಿವಾತ ಎನ್ನುವುದು 55 ವರ್ಷ ಮೇಲ್ಪಟ್ಟ ವಯಸ್ಸಾದ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ವಯಂರೋಗನಿರೋಧಕ ರೋಗವಾಗಿದೆ. ಈ ಸ್ತಿತಿ ಮೂಳೆಯ ಕೀಲುಗಳನ್ನು ಬಿಗಿಗೊಳಿಸಿ ಕೀಳುಗಳಲ್ಲಿ ಉರಿಯೂತ, ನೋವು ಮತ್ತು ಬಿಗಿತವನ್ನು ಉಂಟುಮಾಡುತ್ತದೆ. ಮೀನೆಣ್ಣೆ ಅಥವಾ ಮೀನಿನ ಎಣ್ಣೆಯ ಕ್ಯಾಪ್ಸೂಲ್ ಗಳನ್ನು ನಿಯಮಿತವಾಗಿ ಸೇವಿಸುವುದರಿಂದ, ಕೀಲುಗಳಿಗೆ ಲೂಬ್ರಿಕೇಟ್ ಲಭ್ಯವಾಗುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ, ಈ ಮೂಲಕ ಸ್ವಾಭಾವಿಕವಾಗಿ, ಸಂಧಿವಾತಕ್ಕೆ ಚಿಕಿತ್ಸೆ ನೀಡುತ್ತದೆ.

7. ಕಣ್ಣಿನ ಆರೋಗ್ಯ ಸುಧಾರಿಸುತ್ತದೆ

7. ಕಣ್ಣಿನ ಆರೋಗ್ಯ ಸುಧಾರಿಸುತ್ತದೆ

ನೀವು ದಿನವಿಡೀ ಕಂಪ್ಯೂಟರ್ ಮುಂದೆಯೇ ಕುಳಿತು ಕೆಲಸ ಮಾಡುವಂತಹ ಡೆಸ್ಕ್ ಗೆ ಬದ್ಧರಾದ ಕೆಲಸದಲ್ಲಿದ್ದರೆ, ಅಥವಾ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುತ್ತಿದ್ದರೆ, ಒಣಕಣ್ಣು, ಕಣ್ಣುಗಳಲ್ಲಿ ಅಸಹನೀಯತೆ, ದೂರದೃಷ್ಟಿದೋಷ, ಇತ್ಯಾದಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೀನೆಣ್ಣೆಯನ್ನು ಪ್ರತಿದಿನ ಸೇವಿಸುತ್ತಿದ್ದರೆ, ಅದರಲ್ಲಿ ಕಣ್ಣುಗಳ ಕೋಶಗಳನ್ನು ಪುನಶ್ಚೇತನಗೊಳಿಸುವ ಒಮೆಗಾ-3 ಫ್ಯಾಟಿ ಆಮ್ಲವಿರುವುದರಿಂದ,

ನಿಮ್ಮ ಕಣ್ಣುಗಳಿಗೆ ಆರೋಗ್ಯಕರ ಲೂಬ್ರಿಕೇಟ್ ಲಭಿಸುತ್ತದೆ.

8. ಅಸ್ತಮಾಗೆ ಚಿಕಿತ್ಸೆ

8. ಅಸ್ತಮಾಗೆ ಚಿಕಿತ್ಸೆ

ಅಸ್ತಮಾ ಎನ್ನುವುದು ಶ್ವಾಸಕೋಶದ ಉರಿಯೂತಕ್ಕೆ ಕಾರಣವಾಗುವ ಶ್ವಾಸಕೋಶ ಅಸಹಜತೆಯ ಸಾಮಾನ್ಯ ಖಾಯಿಲೆಯಾಗಿದ್ದು, ಇದು ಉಸಿರಾಟ ನಿಧಾನವಾಗುವುದು, ಉಸಿರಾಡಲು ಕಷ್ಟವಾಗುವುದು, ಕೆಮ್ಮು ಇತ್ಯಾದಿಗಳನ್ನು ಉಂಟುಮಾಡುತ್ತದೆ. ಈ ಸ್ಥಿತಿಯನ್ನು ಗುಣಪಡಿಸಲು ಸಾಧ್ಯವಾಗದಿದ್ದರೂ, ಔಷಧಿಗಳಿಂದ ಚಿಕಿತ್ಸೆ ನೀಡಬಹುದು ಅಥವಾ ನಿರ್ದಿಷ್ಟ ಸ್ವಾಭಾವಿಕ ನಿವಾರಣೋಪಾಯ ನೀಡಬಹುದು. ಮೀನೆಣ್ಣೆಯಲ್ಲಿರುವ ಒಮೆಗಾ-3 ಫ್ಯಾಟಿ ಆಮ್ಲ ಶ್ವಾಸಕೋಶದ ಉರಿಯೂತವನ್ನು ಕಡಿಮೆ ಮಾಡಿ ಅಸ್ತಮಾಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿದೆ.

Read more about: fish
English summary

awesome-health-benefits-of-fish-oil

Fish oil is obtained from the tissues of oily fish, especially cold-water fatty fish such as salmon, herring, white fish, sardines and anchovies. The health benefits of fish oil include maintaining a good heart health, promoting weight loss, improving eye health, reducing inflammation, treating mental disorders, etc.
X
Desktop Bottom Promotion