For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಯೋಗದಿಂದ ಖಿನ್ನತೆ ನಿವಾರಣೆ

By Suhani
|

ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಯೋಗ ಉತ್ತಮ ಉಪಾಯ. ಯೋಗ ಮಾಡುವುದರಿಂದ ನಿಮ್ಮ ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಯೋಗವು ತೂಕವನ್ನು ಕಡಿಮೆಮಾಡುವುದಲ್ಲದೆ ಮಾತ್ರವಲ್ಲ, ಯೋಗದ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿಲ್ಲದಿರಬಹುದು. ಯೋಗವು ಈಗ ಎಲ್ಲಾ ವಯಸ್ಸಿನ ಜನರು ಮಾಡುವುದಲ್ಲದೆ ವಿಶ್ವದಾದ್ಯಂತ ಹರಡಿದೆ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ.

ಸಾಂಪ್ರದಾಯಿಕ ಚಿಕಿತ್ಸೆಗಳೊಂದಿಗೆ ಹೋಲಿಕೆ ಮಾಡಿದರೆ ಖಿನ್ನತೆಯ ರೋಗಲಕ್ಷಣಗಳು ಮತ್ತು ಇತರ ಮಾನಸಿಕ ಅಸ್ವಸ್ಥತೆಗಳನ್ನು ಶಮನಗೊಳಿಸಲು ಯೋಗವು ಸಹಾಯ ಮಾಡುತ್ತದೆ ಎಂದು ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ. ಇತ್ತೀಚೆಗೆ ವಾಷಿಂಗ್ಟನ್ DC ಯ ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್‌ನ 125 ನೇ ವಾರ್ಷಿಕ ಸಮಾವೇಶದಲ್ಲಿ ಈ ಅಧ್ಯಾಯವನ್ನು ಪ್ರಸ್ತುತಪಡಿಸಲಾಯಿತು.

ಸಂಶೋಧಕರು ಮಾನಸಿಕ ಅಸ್ವಸ್ಥವುಳ‍್ಳ ಸ್ತ್ರೀ ಮತ್ತು ಪುರುಷರ ಮಾನಸಿಕ ಖಿನ್ನತೆಯ ಲಕ್ಷಣಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಯೋಗದಿಂದ ಸಾಧ್ಯ ಎಂಬ ಗಮನಾರ್ಹ ಅಂಶವನ್ನು ಅಧ್ಯಯನದಿಂದ ಪರಿಗಣಿಸಿದ್ದಾರೆ. ಹಠ ಯೋಗ ಮತ್ತು ಬಿಕ್ರಮ್ ಯೋಗವು ಅಧ್ಯಯನಕ್ಕೆ ತೆಗೆದುಕೊಳ್ಳಲ್ಪಟ್ಟ ಎರಡು ಪ್ರಮುಖ ಯೋಗಗಳಾಗಿವೆ.

Yoga

23 ಪುರುಷರು ವಾರದಲ್ಲಿ ಎರಡು ದಿನಗಳಂತೆ ಎಂಟು ವಾರಗಳ ಕಾಲ ಹಠ ಯೋಗ ತರಗತಿಗಳನ್ನು ಕೈಗೆತ್ತಿಕೊಂಡರು ಮತ್ತು 52 ಮಹಿಳೆಯರು ಎಂಟು ವಾರಗಳ ಕಾಲ ಬಿಕ್ರಮ್ ಯೋಗವನ್ನು ಕೈಗೊಂಡರು. ಅವರಲ್ಲಿ ಖಿನ್ನತೆಯ ರೋಗಲಕ್ಷಣಗಳು ಗಮನಾರ್ಹವಾಗಿ ಇಳಿಕೆ ಕಂಡುಬಂದಿದೆ.

ಇದಲ್ಲದೆ, ಭಾಗವಹಿಸಿದವರಲ್ಲಿ ಸುಧಾರಿತ ಜೀವನಮಟ್ಟ ಕೂಡ ಕಂಡುಬಂದಿದೆ. ಈ ಸಂದರ್ಭದಲ್ಲಿ ಮಂಡಿಸಿದ ಎರಡು ಅಧ್ಯಯನಗಳು, ದೀರ್ಘಕಾಲದ ಖಿನ್ನತೆ ಮತ್ತು ಒತ್ತಡಕ್ಕೆ ಯೋಗ ಹೇಗೆ ಸಹಕಾರಿಯಾಗಬಹುದು ಎಂಬುದನ್ನು ತೋರಿಸಿದೆ. ಮೊದಲ ಅಧ್ಯಯನವು ಸುಮಾರು 11 ವರ್ಷಗಳಿಂದ ಖಿನ್ನತೆಗೆ ಒಳಗಾದ 12 ರೋಗಿಗಳನ್ನು ಒಳಗೊಂಡಿದ್ದು, ಸುಮಾರು ದಿನಕ್ಕೆ ಎರಡುವರೆ ಗಂಟೆಗಳ ಕಾಲ ಒಂಬತ್ತು ವಾರ ಯೋಗಕ್ಕೆ ಗುರಿ ಪಡಿಸಿ ಅವರ ಅಧ್ಯಯನ ನಡೆಸಲಾಯಿತು.

ಎರಡನೆಯ ಅಧ್ಯಯನದಲ್ಲಿ 74 ಜನರು ಸ್ವಲ್ಪಮಟ್ಟಿಗೆ ಖಿನ್ನತೆಗೆ ಒಳಗಾದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಒಳಗೊಂಡಿತ್ತು ಮತ್ತು ಅವರಿಗೆ ವಿಶ್ರಾಂತಿ ತಂತ್ರದೊಂದಿಗೆ ಯೋಗವನ್ನು ಹೋಲಿಸಿದರು. ಇದರ ಹೋಲಿಕೆ ಫಲಿತಾಂಶದ ಪ್ರಕಾರ ಯೋಗವು ಖಿನ್ನತೆ, ಆತಂಕ ಮತ್ತು ಒತ್ತಡ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ತೋರಿಸಿದೆ.

English summary

Yoga Helps To Get Rid Of Depression - Study

A recent study has found that yoga if practiced along with traditional therapies helps ease the symptoms of depression and other mental disorders. The study was presented at the 125th Annual Convention of the American Psychological Association in Washington DC recently. The researchers has taken into consideration both males and female for the study where in they showed significant efficacy of yoga in reducing depression symptoms.
Story first published: Wednesday, August 16, 2017, 20:24 [IST]
X
Desktop Bottom Promotion