For Quick Alerts
ALLOW NOTIFICATIONS  
For Daily Alerts

ದಿನಕ್ಕೊಂದು ಹಸಿ ಈರುಳ್ಳಿ ತಿಂದರೆ, ಆರೋಗ್ಯಕ್ಕೆ ಹತ್ತಾರು ಲಾಭ!

By Jaya subramanya
|

ಹಸಿ ತರಕಾರಿಗಳ ಸೇವನೆಯಿಂದ ನಿಮ್ಮ ದೇಹಕ್ಕೆ ಬೇಕಾದ ಆರೋಗ್ಯ ಶಕ್ತಿ ದೊರೆಯುತ್ತದೆ ಎಂಬುದು ವೈದ್ಯಲೋಕ ತಿಳಿಸಿರುವ ಮಾಹಿತಿಯಾಗಿದೆ. ತರಕಾರಿಗಳನ್ನು ಬೇಯಿಸಿದಾಗ ಅದಲ್ಲಿರುವ ಪೋಷಕಾಂಶಗಳು ನಷ್ಟವಾಗುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದ್ದು ಆದಷ್ಟು ತರಕಾರಿಗಳನ್ನು ಹಸಿಹಸಿಯಾಗಿಯೇ ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಬಳಸುವುದರಿಂದ ಲಾಭ ನಿಮಗೇ ಉಂಟಾಗಲಿದೆ.

ಇಂದಿನ ಲೇಖನದಲ್ಲಿ ದಿನಕ್ಕೊಂದು ಹಸಿ ಈರುಳ್ಳಿಯನ್ನು ನಿತ್ಯ ಸೇವಿಸುವುದರಿಂದ ಉಂಟಾಗುವ ಪ್ರಯೋಜನಗಳನ್ನು ಅರಿತುಕೊಳ್ಳಲಿದ್ದೇವೆ. ಈರುಳ್ಳಿಯಲ್ಲಿ ಹೆಚ್ಚು ಪ್ರಮಾಣದ ಸಲ್ಫರ್ ಅಂಶಗಳಿದ್ದು ಇದರಿಂದಲೇ ಇದರ ವಾಸನೆ ಮತ್ತು ನಿಗ್ರಹಿಸುವ ಗುಣಗಳಲ್ಲಿದೆ. ವಿಟಮಿನ್ ಸಿ, ವಿಟಮಿನ್ ಬಿ6, ಬಯೋಟಿನ್, ಫೋಲಿಕ್ ಆಸಿಡ್, ಕ್ರೋಮಿಯಂ, ಕ್ಯಾಲ್ಶಿಯಂ ಮತ್ತು ಫೈಬರ್ ಅನ್ನು ಇದು ಒಳಗೊಂಡಿದೆ. ಆದ್ದರಿಂದಲೇ ಈರುಳ್ಳಿಯನ್ನು ಹಸಿಯಾಗಿ ಸೇವಿಸಲು ವೈದ್ಯರ ಸಲಹೆ ನೀಡುತ್ತಿದ್ದು ಇದರಿಂದ ಕೂಡ ಹೆಚ್ಚುವರಿ ಆರೋಗ್ಯ ಪ್ರಯೋಜನಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ....

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ

ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲಿರುವ ಈರುಳ್ಳಿ ಅದರಲ್ಲಿರುವ ಸಲ್ಫರ್ ಅಂಶಗಳಿಂದ ನೈಸರ್ಗಿಕ ರಕ್ತ ತೆಳುಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರಿಂದ ಹೃದಯಾಘಾತದಂತಹ ಅಪಘಾತಗಳು ಉಂಟಾಗುವುದಿಲ್ಲ. ಪ್ಲೇಟ್ಲೇಟ್ ಸಮೂಹವನ್ನು ಇದು ತಡೆಗಟ್ಟುವುದರಿಂದ ಅಪಧಮನಿಗಳು ಗಟ್ಟಿಯಾಗುವುದನ್ನು ಇವುಗಳು ನಿರ್ಬಂಧಿಸುತ್ತವೆ.

ಉಸಿರಾಟದ ತೊಂದರೆಗಳನ್ನು ಪರಿಹರಿಸುತ್ತದೆ

ಉಸಿರಾಟದ ತೊಂದರೆಗಳನ್ನು ಪರಿಹರಿಸುತ್ತದೆ

ಈರುಳ್ಳಿಯಲ್ಲಿರುವ ಉರಿಯೂತದ ಕ್ರಿಯೆಯು ಶ್ವಾಸನಾಳ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಅಸ್ತಮಾ ಹಾಗೂ ಬ್ರಾಂಕೈಟಿಸ್ ಅನ್ನು ಬಿಡುಗಡೆ ಮಾಡುತ್ತದೆ. ಕೆಮ್ಮು, ಶೀತ, ಜ್ವರ, ಸೀನುವಿಕೆ, ಮೂಗು ಕಟ್ಟುವಿಕೆಯನ್ನು ತಡೆಯುತ್ತದೆ.

ಮಲಬದ್ಧತೆಗೆ ಉತ್ತಮ ಔಷಧ

ಮಲಬದ್ಧತೆಗೆ ಉತ್ತಮ ಔಷಧ

ಇದು ಪಚನಗೊಳ್ಳುವಂತಹ ನಾರಿನಂಶವನ್ನು ಒಳಗೊಂಡಿರುವುದರಿಂದ ನಿಮ್ಮ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಬೆಳೆಸುತ್ತದೆ. ಹಸಿ ಈರುಳ್ಳಿಯನ್ನು ದಿನಕ್ಕೊಂದರಂತೆ ಸೇವಿಸುವುದರಿಂದ ಮಲಬದ್ಧತೆ ದೂರಾಗುತ್ತದೆ. ಆದ್ದರಿಂದ ಪ್ರತಿನಿತ್ಯ ಈರುಳ್ಳಿ ಸೇವನೆಯಿಂದ ಉಂಟಾಗುವ ಪ್ರಯೋಜನಗಳಲ್ಲಿ ಇದೂ ಒಂದಾಗಿದೆ.

ಕ್ಷಯಕ್ಕೆ ಉತ್ತಮ ಔಷಧ

ಕ್ಷಯಕ್ಕೆ ಉತ್ತಮ ಔಷಧ

ಇದು ನಂಜುನಿರೋಧಕ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಕ್ಷಯರೋಗಕ್ಕೆ ಕಾರಣವಾಗಿರುವ ಮೈಕೊಬ್ಯಾಕ್ಟೀರಿಯಾವನ್ನು ಇದು ನಿಷ್ಕ್ರಿಯಗೊಳಿಸುತ್ತದೆ ಮತ್ತು ನಿರೋಧಕ ಪರಿಣಾಮವನ್ನು ಬೀರುತ್ತದೆ. ಹಸಿ ಈರುಳ್ಳಿಯನ್ನು ನಿತ್ಯವೂ ಸೇವಿಸುವುದು ಒಳ್ಳೆಯದು.

ಸ್ತನದಲ್ಲಿ ಹಾಲನ್ನು ವೃದ್ಧಿಸುತ್ತದೆ

ಸ್ತನದಲ್ಲಿ ಹಾಲನ್ನು ವೃದ್ಧಿಸುತ್ತದೆ

ಹಾಲುಣಿಸುತ್ತಿರುವ ತಾಯಂದಿರ ಸ್ತನದಲ್ಲಿ ಹಾಲಿನ ಉತ್ಪತ್ತಿಯನ್ನು ಹಸಿ ಈರುಳ್ಳಿ ಹೆಚ್ಚಿಸಲಿದೆ. ಊಟದಲ್ಲಿ ಸಲಾಡ್ ಅಥವಾ ಸ್ಯಾಂಡ್‌ವಿಚ್ ರೂಪದಲ್ಲಿ ಕೂಡ ಹಸಿ ಈರುಳ್ಳಿಯನ್ನು ನಿಮಗೆ ಸೇವಿಸಬಹುದಾಗಿದೆ.

ರಕ್ತದೊತ್ತಡವನ್ನು ನಿರ್ವಹಿಸುತ್ತದೆ

ರಕ್ತದೊತ್ತಡವನ್ನು ನಿರ್ವಹಿಸುತ್ತದೆ

ಕ್ಯಾಲೋರಿ ಪ್ರಮಾಣವು ಈರುಳ್ಳಿಯಲ್ಲಿ ಕಡಿಮೆ ಇರುವುದರಿಂದ ಕೊಬ್ಬು ಇಲ್ಲ. ಅಧಿಕ ರಕ್ತದೊತ್ತಡವನ್ನು ಇದು ನಿರ್ವಹಿಸುತ್ತದೆ. ಪ್ರತಿ ನಿತ್ಯವೂ ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರಲಿದೆ.

ನಿರ್ವಿಶೀಕರಣ

ನಿರ್ವಿಶೀಕರಣ

ವಿಷಕಾರಿ ಅಂಶಗಳಿಂದ ನಿಮ್ಮ ದೇಹವನ್ನು ಸಂರಕ್ಷಿಸುವ ಕೆಲಸವನ್ನು ಹಸಿ ಈರುಳ್ಳಿ ಮಾಡಲಿದೆ. ನಿಮ್ಮ ರಕ್ತವನ್ನು ಶುದ್ಧೀಕರಿಸಿ ನಿಮ್ಮನ್ನು ಆರೋಗ್ಯಕಾರಿಯಾಗಿ ಇದು ಇರಿಸುತ್ತದೆ. ಹಸಿಯಾಗಿ ಈರುಳ್ಳಿಯನ್ನು ಸೇವಿಸುವುದರಿಂದ ಇನ್ನಷ್ಟು ಪ್ರಯೋಜನಗಳು ನಿಮಗೆ ದೊರೆಯಲಿದೆ.

ಕ್ಯಾನ್ಸರ್ ವಿರೋಧಿ ಗುಣಗಳು

ಕ್ಯಾನ್ಸರ್ ವಿರೋಧಿ ಗುಣಗಳು

ಈರುಳ್ಳಿಯಲ್ಲಿರುವ ಫೈಟೊಕೆಮಿಕಲ್ಸ್ ಡಿಲ್ಫೈಡ್ಸ್, ಟ್ರೈಸುಲ್ಫೈಡ್ಸ್, ಸೆಪೇನ್ ಮತ್ತು ಕ್ವೆರ್ಸಟಿನ್ ನಿಮ್ಮ ರಕ್ತದ ತೆಳುಗೊಳಿಸುವಿಕೆಗೆ ಸಹಾಯ ಮಾಡುತ್ತದೆ. ಇದರಿಂದ ಉರಿಯೂತ ಕಡಿಮೆಯಾಗಿ ಇದು ಕ್ಯಾನ್ಸರ್ ತಡೆಗಟ್ಟುವ ದಿವ್ಯೌಷಧಿಯಾಗಿ ಸಹಾಯ ಮಾಡಲಿದೆ.

ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಿಸುತ್ತದೆ

ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಿಸುತ್ತದೆ

ಹಸಿ ಈರುಳ್ಳಿಯನ್ನು ಸೇವಿಸುವುದು ಹೊಟ್ಟೆಗೆ ಸಂಬಂಧಿತವಾಗಿರುವ ಸರ್ವ ರೋಗವನ್ನು ಪರಿಹರಿಸುತ್ತದೆ. ಗಾಳಿ ಗುಳ್ಳೆಯ ಅಸ್ವಸ್ಥತೆ, ಜೀರ್ಣಕಾರಿ ಸಮಸ್ಯೆಗಳನ್ನು ಇದು ದೂರಮಾಡುತ್ತದೆ.

ಅನೀಮಿಯಾವನ್ನು ಉಪಚರಿಸುತ್ತದೆ

ಅನೀಮಿಯಾವನ್ನು ಉಪಚರಿಸುತ್ತದೆ

ಈರುಳ್ಳಿಯಲ್ಲಿರುವ ಹೆಚ್ಚು ಪ್ರಮಾಣದ ಕಬ್ಬಿಣದ ಅಂಶವು ಅನೀಮಿಯಾವನ್ನು ಉಪಚರಿಸುತ್ತದೆ. ಮಧ್ಯಮ ಗಾತ್ರದ ಈರುಳ್ಳಿಯನ್ನು ಸೇವಿಸುವುದು ಉತ್ತಮವಾಗಿದೆ.

ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ

ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ

ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಈರುಳ್ಳಿ ಸಹಕಾರಿ ಎಂದೆನಿಸಲಿದೆ. ನಿಮ್ಮ ಸಕ್ಕರೆ ಸೇವನೆಯನ್ನು ಮಿತದಲ್ಲಿಟ್ಟುಕೊಳ್ಳುವುದರ ಜೊತೆಗೆ ಈರುಳ್ಳಿ ಸೇವಿಸುವುದರಿಂದ ಸಕ್ಕರೆಯ ದುಷ್ಪರಿಣಾಮವನ್ನು ಇದು ನಿವಾರಿಸಲಿದೆ.

English summary

What Happens When You Eat Raw Onions Every Day

Onions are healthy whether they are raw or cooked, and raw onions are rich sources of organic sulphur-containing compounds. Now, let us see what happens when you eat a raw onion every day.
Story first published: Monday, May 22, 2017, 20:34 [IST]
X
Desktop Bottom Promotion