ಕಿಡ್ನಿ ಕಲ್ಲಿನ ಸಮಸ್ಯೆಯನ್ನು ಶಾಶ್ವತವಾಗಿ ಗುಣಪಡಿಸುವ ಮನೆಮದ್ದುಗಳು

By: manu
Subscribe to Boldsky

ಕಿಡ್ನಿ ಕಲ್ಲೆಂದರೆ ಅತಿಯಾದ ನೋವಿನ ಪದವೆಂದೇ ಪರಿಗಣಿತ. ಕಿಡ್ನಿ ಕಲ್ಲುಗಳನ್ನು ಹೊಂದಿರುವ ವ್ಯಕ್ತಿ ತನ್ನ ಆಹಾರ ಪದ್ಧತಿಯಲ್ಲಿ ತುಂಬಾ ಜಾಗರೂಕರಾಗಿರಬೇಕು. ಮೂತ್ರದಲ್ಲಿ ಹೊರಹೋಗುವ ಈ ಕಲ್ಲುಗಳ ನೋವು ಯಮಯಾತನೆಗೆ ಸಮಯನಾಗಿರುತ್ತದೆ. ಹಾಗಿದ್ದರೆ ಈ ಯಾತನಾಮಯ ರೋಗವನ್ನು ತಡೆಗಟ್ಟುವುದು ಹೇಗೆ ಎಂಬುದು ನಿಮ್ಮ ಮನದಲ್ಲಿ ಮೂಡಿದ ಭಯವಾಗಿದ್ದರೆ ಮೊಟ್ಟ ಮೊದಲನೆಯದಾಗಿ ನೀವು ತಿನ್ನುವ ಆಹಾರ ಮತ್ತು ಸೇವಿಸುವ ಪಾನೀಯದ ಕಡೆಗೆ ಗಮನ ಕೊಡಿ. ನೀವು ನಿತ್ಯವೂ ಸೇವಿಸುವ ಆಹಾರದಲ್ಲಿ ನೀರಿನಂಶ ಎಷ್ಟಿದೆ ಎಂಬುದನ್ನು ಗಮನಿಸಿಕೊಳ್ಳಿ.

ಕೆಲವೊಂದು ಆಹಾರಗಳಿಂದ ಕೂಡ ಕಿಡ್ನಿ ಕಲ್ಲುಗಳು ಉಂಟಾಗುತ್ತವೆ. ಮುಖ್ಯವಾಗಿ ಸಾಕಷ್ಟು ನೀರು ಕುಡಿಯದಿರುವುದೂ ಕೂಡ ಇದಕ್ಕೆ ಕಾರಣವಾಗಿದೆ. ಮೂಲತಃ ಕಿಡ್ನಿ ಕಲ್ಲುಗಳ ಉತ್ಪಾದನೆಗೆ ಕಾರಣವಾಗಿರುವುದು ಹರಳುಗಳ ತಯಾರಿಕೆಯಲ್ಲಿ ಸಂಯೋಜಿತಗೊಳ್ಳುವ ಎರಡು ರಾಸಾಯನಿಕಗಳಿಂದ. ಇದು ಸರಿಯಾಗಿ ರವಾನೆಯಾಗದಿದ್ದರೆ ಮೂತ್ರದಲ್ಲಿ ತಡೆಯನ್ನುಂಟು ಮಾಡುತ್ತದೆ. ಇದು ಅಸಾಧ್ಯ ನೋವನ್ನು ಉಂಟುಮಾಡುತ್ತದೆ ಒಮ್ಮೊಮ್ಮೆ ರಕ್ತ ಕೂಡ ಕಾಣಿಸಿಕೊಳ್ಳುತ್ತದೆ. 

ಇಂತಹ ಲಕ್ಷಣಗಳು ಕಂಡುಬಂದರೆ 'ಕಿಡ್ನಿ' ಯ ಸಮಸ್ಯೆಯಿದೆ ಎಂದರ್ಥ!

ನಿಮ್ಮ ಕಿಡ್ನಿಯಲ್ಲಿ ಕಿಡ್ನಿ ಕಲ್ಲುಗಳಿದ್ದರೆ ಅಪಾಯವಿಲ್ಲ ಆದರೆ ಅವುಗಳು ಮೂತ್ರಕೋಶಗಳಿಗೆ ಸರಿದರೆ ಮಾತ್ರವೇ ನಿಜವಾದ ಸಮಸ್ಯೆ ಎದುರಾಗುತ್ತದೆ. ಆದರೆ ಆಯುರ್ವೇದದಲ್ಲಿ ಈ ಕಲ್ಲುಗಳನ್ನು ಕರಗಿಸಿ ಸುಲಭವಾಗಿ ಹೊರಹಾಕಲು ಕೆಲವು ವಿಧಾನಗಳಿದ್ದು ನೈಸರ್ಗಿಕವಾಗಿವೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೋಡೋಣ.... 

ಮನೆಯಂಗಳದ ತುಳಸಿ

ಮನೆಯಂಗಳದ ತುಳಸಿ

ಮನೆಯಂಗಳದ ತುಳಸಿಯಲ್ಲಿರುವ ಮೂತ್ರವರ್ಧಕ ಗುಣ ಮತ್ತು ಕಲ್ಮಶ ನಿವಾರಕ ಗುಣ ಮೂತ್ರಪಿಂಡಗಳ ಕಲ್ಲುಗಳನ್ನು ಹೊರಹಾಕಲು ಸಮರ್ಥವಾಗಿವೆ. ತುಳಸಿ ಎಲೆಗಳ ರಸದಲ್ಲಿ ಅಸೆಟಿಕ್ ಆಮ್ಲವಿದ್ದು ಈ ಆಮ್ಲದಲ್ಲಿ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ. ಕಲ್ಲುಗಳು ಕರಗುತ್ತಾ ಹೋದಂತೆ ನೋವು ಸಹಾ ಕಡಿಮೆಯಾಗುತ್ತದೆ. ದಿನನಿತ್ಯ ನಾಲ್ಕಾರು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಕೊಂಚ ಜೇನಿನೊಂದಿಗೆ ಬೆರೆಸಿ ಪ್ರತಿದಿನ ಜಗಿದು ತಿನ್ನುವ ಮೂಲಕ ಕಲ್ಲುಗಳು ನಿಧಾನವಾಗಿ ಕರಗುತ್ತಾ ಹೋಗುತ್ತವೆ.

ಖಾಲಿಹೊಟ್ಟೆಯಲ್ಲಿ ಒಂದು ಎಳನೀರು ಕುಡಿಯಿರಿ

ಖಾಲಿಹೊಟ್ಟೆಯಲ್ಲಿ ಒಂದು ಎಳನೀರು ಕುಡಿಯಿರಿ

ನಮ್ಮ ದೇಹಕ್ಕೆ ಅತ್ಯುತ್ತಮವಾದ ದ್ರವವಾಗಿರುವ ಎಳನೀರು ಮೂತ್ರಪಿಂಡಗಳ ಕಲ್ಲು ನಿವಾರಿಸಲು ಹಾಗೂ ನೋವು ಇಲ್ಲದಂತಾಗಿಸಲೂ ನೆರವಾಗುತ್ತದೆ. ದಿನನಿತ್ಯ ಖಾಲಿಹೊಟ್ಟೆಯಲ್ಲಿ ಒಂದು ಎಳನೀರು ಕುಡಿದ ಬಳಿಕ ದಿನದಲ್ಲಿ ಸುಮಾರು ನಾಲ್ಕರಿಂದ ಐದು ಎಳನೀರನ್ನಾದರೂ ಊಟಕ್ಕೆ ಅರ್ಧ ಗಂಟೆಗೆ ಮುನ್ನ ಕುಡಿಯಬೇಕು. ರಾತ್ರಿ ಮಲಗುವ ಮುನ್ನವೂ ಒಂದು ಎಳನೀರು ಕುಡಿದು ಕೊಂಚಕಾಲ ಅಡ್ಡಾಡಿ ಬಳಿಕ ಮೂತ್ರ ವಿಸರ್ಜಿಸಿ ಮಲಗಿಕೊಳ್ಳಬೇಕು.

ನೀರು ಕುಡಿಯುವುದು

ನೀರು ಕುಡಿಯುವುದು

ಸಾಕಷ್ಟು ನೀರು ಕುಡಿಯುವುದು ಕಿಡ್ನಿ ಕಲ್ಲುಗಳನ್ನು ಸ್ವಾಭಾವಿಕವಾಗಿ ತಡೆಯುತ್ತದೆ. ಕನಿಷ್ಠ ಪಕ್ಷ 8 ಲೋಟಗಳಷ್ಟಾದರೂ ನೀರನ್ನು ಕುಡಿಯುವುದು ಅತ್ಯವಶ್ಯಕವಾಗಿದೆ. ನೀರಲ್ಲದೆ, ಸಿಟ್ರಸ್ ಅಂಶವುಳ್ಳ ಜ್ಯೂಸ್ ಅನ್ನು ಕೂಡ ನೀವು ಸೇವಿಸಬಹುದು. ಈ ಪಾನೀಯಗಳು ಕಲ್ಲಿನ ರಚನೆಯನ್ನು ನಿರ್ಬಂಧಿಸುವಲ್ಲಿ ಸಹಕಾರಿ.

ಕ್ಯಾಲ್ಶಿಯಮ್ ಪ್ರಮಾಣವಿರುವ ಆಹಾರ ಸೇವಿಸಿ

ಕ್ಯಾಲ್ಶಿಯಮ್ ಪ್ರಮಾಣವಿರುವ ಆಹಾರ ಸೇವಿಸಿ

ಕ್ಯಾಲ್ಶಿಯಮ್ ಪ್ರಮಾಣ ಕಡಿಮೆ ಇರುವುದು ಆಕ್ಸಲೇಟ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕಿಡ್ನಿ ಕಲ್ಲುಗಳ ರಚನೆಯನ್ನು ಮಾಡುತ್ತವೆ. ಹೆಚ್ಚು ಪ್ರಮಾಣದ ಕ್ಯಾಲ್ಶಿಯಂ ಸೇವನೆಯನ್ನು ಈ ದಿಸೆಯಲ್ಲಿ ನೀವು ಮಾಡಬೇಕಾಗುತ್ತದೆ. ನಿಮ್ಮ ವಯಸ್ಸಿಗೆ ತಕ್ಕಂತಹ ಕ್ಯಾಲ್ಶಿಯಂ ಅನ್ನು ನೀವು ಸೇವಿಸಬೇಕು. ಕ್ಯಾಲ್ಶಿಯಂ ಅನ್ನು ಪೂರೈಕೆ ಮಾಡುವ ಇತರ ಆಹಾರಗಳೊಂದಿಗೆ ಕ್ಯಾಲ್ಶಿಯಂ ಉಳ್ಳ ಆಹಾರವನ್ನು ಸೇವಿಸುವುದೂ ಕೂಡ ಕಿಡ್ನಿ ಕಲ್ಲಿಗೆ ರಾಮಬಾಣವಾಗಿದೆ.

ಖಾಲಿ ಹೊಟ್ಟೆಗೆ ಲಿಂಬೆ ರಸ ಬೆರೆಸಿದ ನೀರನ್ನು ಕುಡಿಯಿರಿ

ಖಾಲಿ ಹೊಟ್ಟೆಗೆ ಲಿಂಬೆ ರಸ ಬೆರೆಸಿದ ನೀರನ್ನು ಕುಡಿಯಿರಿ

ಒಂದು ಲಿಂಬೆಯನ್ನು ತೆಗೆದುಕೊಂಡು ಅದರ ರಸವನ್ನು ಹಿಂಡಿಕೊಳ್ಳಿ. ಒಂದು ಲೋಟ ನೀರಿಗೆ ಈ ರಸವನ್ನು ಬೆರೆಸಿ ಮತ್ತು ಖಾಲಿ ಹೊಟ್ಟೆಗೆ ಮುಂಜಾನೆ ಇದನ್ನು ಸೇವಿಸಿ. ಲಿಂಬೆಯಲ್ಲಿ ಆಸಿಟಿಕ್ ಆಸಿಡ್ ಇದ್ದು ಕಲ್ಲನ್ನು ಹೊರಹಾಕಲು ನೆರವಾಗಲಿದೆ ಮತ್ತು ಕಿಡ್ನಿಯಲ್ಲಿರುವ ತ್ಯಾಜ್ಯಗಳನ್ನು ನಿವಾರಣೆ ಮಾಡುತ್ತದೆ.

ಲಿಂಬೆ ರಸ ಬೆರೆಸಿದ ನೀರು, ಅದೇನು ಮಾಯೆ, ಅದೇನು ಜಾದೂ!

ಹಸಿಶುಂಠಿ

ಹಸಿಶುಂಠಿ

ಹಸಿಶುಂಠಿ ಮೂತ್ರಪಿಂಡಗಳನ್ನು ಶುದ್ಧೀಕರಿಸಲು ಶುಂಠಿ ಸಹಾ ಉತ್ತಮವಾದ ಮೂಲಿಕೆಯಾಗಿದೆ. ಬರೆಯ ಮೂತ್ರಪಿಂಡಗಳು ಮಾತ್ರವಲ್ಲ, ಜೀರ್ಣಾಂಗ ಮತ್ತು ಕರುಳುಗಳಿಂದಲೂ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ಯಕೃತ್ ಸಹಾ ಇದರಿಂದ ಶುದ್ಧಗೊಳ್ಳುತ್ತದೆ. ಇದಕ್ಕಾಗಿ ಹೆಚ್ಚೇನೂ ಮಾಡಬೇಕಾಗಿಲ್ಲ, ದಿನದಲ್ಲಿ ಕುಡಿಯುವ ಟೀ ಯಲ್ಲಿ ಕೊಂಚ ಶುಂಠಿಯನ್ನು ಸೇರಿಸಿದರೆ ಸಾಕು. ಉತ್ತಮ ಪರಿಣಾಮಕ್ಕಾಗಿ ಶುಂಠಿ ಕುದಿಸಿ ಸೋಸಿ ತಣಿಸಿದ ನೀರನ್ನು ರಾತ್ರಿ ಮಲಗುವ ಮುನ್ನ ಕುಡಿಯಿರಿ.

ಮೆಂತೆ

ಮೆಂತೆ

ಒಂದು ಚಮಚ ಮೆಂತೆಯನ್ನು ಒಂದು ಲೋಟ ನೀರಿನಲ್ಲಿ ನೆನೆ ಹಾಕಿ ಬೆಳ್ಳಗ್ಗೆ ತಿನ್ನಬೇಕು. ಈ ರೀತಿ ಮಾಡಿದರೆ ಕಿಡ್ನಿಯಲ್ಲಿರುವ ಕಲ್ಲು ಮಾತ್ರವಲ್ಲ ದೇಹದಲ್ಲಿರುವ ಕಲ್ಮಶಗಳನ್ನು ತೊಡೆದು ಹಾಕಲು ಸಹಕಾರಿಯಾಗಿದೆ. ಇನ್ನೊಂದು ವಿಧಾನವೆಂದರೆ ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳ ಕಾಲ ಮೆಂತೆ ನೆನೆಸಿದ ನೀರನ್ನು ಕುಡಿಯಿರಿ. ಇದು ಕಿಡ್ನಿಯಲ್ಲಿ ಕಲ್ಲನ್ನು ಹೊರಹಾಕಲು ನೆರವಾಗುವುದು.

ಮೆಂತೆ ಕಾಳು ನೆನೆಸಿದ ನೀರು- ಆಯಸ್ಸು ನೂರು!

ದಿನಕ್ಕೊ೦ದು ಸೇಬನ್ನು ಸೇವಿಸಿ

ದಿನಕ್ಕೊ೦ದು ಸೇಬನ್ನು ಸೇವಿಸಿ

ದಿನಕ್ಕೊ೦ದು ಸೇಬನ್ನು ಸೇವಿಸುವುದರಿ೦ದ ಮೂತ್ರಪಿ೦ಡಗಳಲ್ಲಿನ ಕಲ್ಲುಗಳು ಕರಗಿಹೋಗುತ್ತವೆ. ಸೇಬಿನಲ್ಲಿ ಕೆಲವು ಕಿಣ್ವಗಳಿದ್ದು, ಅವು ಕಾಲಕ್ರಮೇಣವಾಗಿ ಮೂತ್ರಪಿ೦ಡಗಳಲ್ಲಿನ ಹರಳುಗಳನ್ನು ಕರಗಿಸಿ, ಮೂತ್ರದ ಮೂಲಕ ಶರೀರದಿ೦ದ ಆ ಹರಳುಗಳು ಹೊರಹೋಗುವ೦ತೆ ಮಾಡುತ್ತವೆ.

ಸೇಬು ಹಣ್ಣನ್ನು ಸಿಪ್ಪೆ ಸಹಿತ ತಿನ್ನಿ, ವೈದ್ಯರನ್ನು ದೂರವಿರಿಸಿ

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್

ಒ೦ದು ಅಥವಾ ಎರಡು ಟೇಬಲ್ ಚಮಚಗಳಷ್ಟು ಆಪಲ್ ಸೈಡರ್ ವಿನೆಗರ್ ಗೆ ಒ೦ದಿಷ್ಟು ನೀರನ್ನು ಬೆರೆಸಿಕೊಳ್ಳುವುದರ ಮೂಲಕ ಅದನ್ನು ತಿಳಿಯಾಗಿಸಿಕೊ೦ಡು ಅದನ್ನು ದಿನಾಲೂ ಕುಡಿಯಿರಿ. ಆಪಲ್ ಸೈಡರ್ ವಿನಿಗರ್ ಮೂತ್ರಪಿ೦ಡಗಳಲ್ಲಿನ ಹರಳುಗಳನ್ನು ಕರಗಿಸಲು ನೆರವಾಗುವುದರ ಮೂಲಕ ಯಾವುದೇ ಯಾತನೆಯಿಲ್ಲದೇ ಕರಗಿದ ಹರಳುಗಳನ್ನು ಮೂತ್ರದೊಡನೆ ಶರೀರದಿ೦ದ ಹೊರಹಾಕಲು ನೆರವಾಗುತ್ತದೆ.

English summary

Tips to dissolve kidney stone naturally

The main reasons for kidney pain are urinary tract infections, bleeding inside kidney, tumor and stone in kidney, and blocked flow of urine. The main symptoms of kidney pain are pain in lower back and lower abdomen, shivering, fever, chills, fatigue, burning sensation while urination and bleeding while urinating. Today, Boldsky shares with you effective kidney pain home remedies.
Subscribe Newsletter