For Quick Alerts
ALLOW NOTIFICATIONS  
For Daily Alerts

  ಅಪ್ಪಿತಪ್ಪಿಯೂ ಹಲ್ಲುಜ್ಜುವ ಬ್ರಷ್‌‌ನ್ನು ಶೌಚಾಲಯದಲ್ಲಿ ಇಡಬೇಡಿ!

  By Manu
  |

  ಮುಖದಲ್ಲಿ ನಗುವಿದ್ದರೆ ಅದಕ್ಕಿಂತ ಹೆಚ್ಚಿನ ಸೌಂದರ್ಯ ಮತ್ತೊಂದಿಲ್ಲ ಎನ್ನುವ ಮಾತಿದೆ. ನಾವು ನಕ್ಕಾಗ ಮೊದಲು ಕಾಣಿಸುವುದು ಮುತ್ತಿನಂತೆ ಪೋಣಿಸಿರುವ ಹಲ್ಲುಗಳು. ಈ ಹಲ್ಲುಗಳು ಬಿಳಿಯಾಗಿ ಸುಂದರವಾಗಿ ಕಾಣಬೇಕಾದರೆ ಅದರ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಪ್ರತೀ ದಿನ ಎದ್ದ ಕೂಡಲೇ ಹಲ್ಲುಜ್ಜಬೇಕು ಮತ್ತು ಹಲ್ಲಿನ ಸ್ವಚ್ಛತೆ ತುಂಬಾ ಮುಖ್ಯ ಎಂದು ಬಾಲ್ಯದಿಂದಲೇ ನಮಗೆ ಪಾಠ ಕಲಿಸಿಕೊಡಲಾಗುತ್ತದೆ. ಶಾಲೆಯಲ್ಲೂ ಇದರ ಬಗ್ಗೆ ಹೆಚ್ಚಿನ ಜ್ಞಾನ ನೀಡಲಾಗುತ್ತದೆ.

  ಕೆಲವರು ಬೆಳಿಗ್ಗೆ ಮಾತ್ರ ಹಲ್ಲುಜ್ಜಿದರೆ ಇನ್ನು ಕೆಲವರು ರಾತ್ರಿ ಕೂಡ ಹಲ್ಲುಜ್ಜುತ್ತಾರೆ. ಹಲ್ಲಿನ ಬಗ್ಗೆ ಅತಿಯಾದ ಕಾಳಜಿ ಇರುವವರು ಸಿಹಿ ತಿಂದ ಕೂಡಲೇ ಅಥವಾ ಯಾವುದೇ ಆಹಾರ ಸೇವನೆ ಮಾಡಿದ ತಕ್ಷಣ ಹಲ್ಲುಜ್ಜುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಹಲ್ಲುಗಳನ್ನು ಸ್ವಚ್ಛ ವಾಗಿಟ್ಟುಕೊಂಡು ಅದರ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯ. ದಿನದಲ್ಲಿ ಒಂದು ಸಲವಾದರೂ ಹಲ್ಲುಜ್ಜದೆ ಇದ್ದರೆ ಹಲ್ಲುಗಳು ಕೆಡಬಹುದು, ಹಲ್ಲುಗಳ ಮೇಲೆ ಪದರ ಮೂಡಿ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಬಹುದು. 

  ಈತ ಒಂದಲ್ಲ, ಎರಡಲ್ಲ, ಭರ್ತಿ ಹದಿನೆಂಟು ಹಲ್ಲುಜ್ಜುವ ಬ್ರಷ್‌ಗಳನ್ನೇ ತಿಂದಿದ್ದ!

  ಹಿಂದಿನ ಕಾಲದಲ್ಲಿ ಇದ್ದಿಲು ಮತ್ತು ಕಹಿಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಾ ಇದ್ದರು. ಆಗ ಸುಂದರವಾದ ಹಲ್ಲುಗಳು ಕೂಡ ಕಾಣಬಹುದಾಗಿತ್ತು. ಆಧುನಿಕತೆ ಬೆಳೆದಂತೆ ಅದಕ್ಕೆ ಹೊಂದಿಕೊಂಡು ಹಲ್ಲುಗಳ ಪೇಸ್ಟ್ ಮತ್ತು ಬ್ರಷ್ ಬಳಕೆ ಮಾಡುವುದು ನಮಗೆ ಅಭ್ಯಾಸವಾಗಿಬಿಟ್ಟಿದೆ. ಆದರೆ ಈಗ ಕಾಲ ಬದಲಾಗಿದೆ. ಪ್ರತಿಯೊಬ್ಬರೂ ಬ್ರಷ್ ನಿಂದಲೇ ಹಲ್ಲುಜ್ಜುತ್ತಾರೆ. ಆದರೆ ಈ ಬ್ರಷ್‌ಗಳು ಕೂಡ ಅದನ್ನು ಬಳಸುವ ರೀತಿಯಿಂದ ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು! ಅದು ಹೇಗೆ ಎಂದು ಮುಂದೆ ಓದುತ್ತಾ ತಿಳಿಯಿರಿ....

  ರಕ್ತದಿಂದ ಹರಡುವ ಕಾಯಿಲೆಗಳು

  ರಕ್ತದಿಂದ ಹರಡುವ ಕಾಯಿಲೆಗಳು

  ಒಂದು ವೇಳೆ ರಕ್ತದಿಂದ ಹರಡುವ ಕಾಯಿಲೆಗಳಾದ ಹೆಪಟೈಟಿಸ್ ಬಿ ಅಥವಾ ಹೆಪಟೈಟಿಸ್ ಸಿ ಬಾಧಿತ ರೋಗಿ ತನ್ನ ಬ್ರಷ್ ಅನ್ನು ಇತರರ ಬ್ರಷ್ ಗಳೊಂದಿಗಿಟ್ಟರೆ ಈ ರೋಗದ ವೈರಾಣುಗಳೂ ಆ ಬ್ರಷ್ ಗಳಿಗೆ ದಾಟಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಏಕೆಂದರೆ ರೋಗಿಯ ಒಸಡುಗಳಿಂದ ಒಸರುವ ಅತಿ ಕಡಿಮೆ ಪ್ರಮಾಣದ ರಕ್ತದ ಒಂದು ಕಣ ಬ್ರಷ್ ಮೇಲೆ ಉಳಿದರೂ ರೋಗ ಹರಡುವ ಸಾಧ್ಯತೆ ಇದೆ.

  ಒದ್ದೆ ಬ್ರಷ್ ಅಪಾಯಕಾರಿ

  ಒದ್ದೆ ಬ್ರಷ್ ಅಪಾಯಕಾರಿ

  ಕೀಟಾಣುಗಳು ಹೆಚ್ಚಾಗಿ ಒದ್ದೆ ಅಥವಾ ತೇವವಿರುವ ಸ್ಥಳಗಳಲ್ಲಿಯೇ ಹೆಚ್ಚಾಗಿ ಅಂಟಿಕೊಳ್ಳುತ್ತವೆ. ಅದರಲ್ಲೂ ಶಿಲೀಂಧ್ರಗಳು (fungi) ತೇವದ ಮೇಲೆ ಕುಳಿತ ಬಳಿಕ ಅಲ್ಪಕಾಲದಲ್ಲಿಯೇ ಆಗಾಧವಾಗಿ ಬೆಳೆದು ಮುಂದಿನ ಬಾರಿ ಬ್ರಷ್ ಮಾಡುವಾಗ ಒಸಡುಗಳ ಮೂಲಕ ದೇಹ ಪ್ರವೇಶಿಸಿ ಹಲವು ತೊಂದರೆಗಳಿಗೆ ಕಾರಣವಾಗುತ್ತವೆ.

  ಟಾಯ್ಲೆಟ್ ರೂಮ್‌ನಲ್ಲಿ ಬ್ರಷ್ ಇಡಬೇಡಿ

  ಟಾಯ್ಲೆಟ್ ರೂಮ್‌ನಲ್ಲಿ ಬ್ರಷ್ ಇಡಬೇಡಿ

  ಹಲ್ಲುಜ್ಜುತ್ತಾ ಇರುವಾಗ ಟಾಯ್ಲೆಟ್ ಅನ್ನು ಫ್ಲಷ್ ಮಾಡಬೇಡಿ. ಬೆಳಿಗ್ಗೆ ಟಾಯ್ಲೆಟ್ ನಲ್ಲಿ ಕುಳಿತುಕೊಂಡು ಹಲ್ಲುಜ್ಜುವುದು ಹೆಚ್ಚಿನವರಿಗೆ ಅಭ್ಯಾಸವಾಗಿ ಹೋಗಿದೆ. ಫ್ಲಷ್ ಮಾಡುವ ವೇಳೆ ನೀರು ಸುಮಾರು 3 ಮೀಟರ್ ನಷ್ಟು ಮೇಲಕ್ಕೆ ಬರುತ್ತದೆ. ಇದರ ಹತ್ತಿರ ಬ್ರಷ್ ಇದ್ದರೆ ಅದು ಬ್ರಷ್ ಮೂಲಕ ದೇಹದೊಳಗೆ ಸೇರಿಕೊಳ್ಳಬಹುದು.

  ಟಾಯ್ಲೆಟ್ ರೂಮ್‌ನಲ್ಲಿ ಬ್ರಷ್ ಇಡಬೇಡಿ

  ಟಾಯ್ಲೆಟ್ ರೂಮ್‌ನಲ್ಲಿ ಬ್ರಷ್ ಇಡಬೇಡಿ

  ಬ್ರಷ್ ಅನ್ನು ಯಾವುದೇ ಪ್ಲಾಸ್ಟಿಕ್ ಕ್ಯಾಪ್ ಅಥವಾ ಟಿಶ್ಯೂನಿಂಧ ಮುಚ್ಚಬೇಡಿ. ಈ ರೀತಿ ಮಾಡಲು ಹೋದರೆ ಒದ್ದೆಯಾಗಿರುವ ಬ್ರಷ್ ನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯಬಹುದು.

  ಪ್ಲಾಸ್ಟಿಕ್ ಕ್ಯಾಪ್

  ಪ್ಲಾಸ್ಟಿಕ್ ಕ್ಯಾಪ್

  ಬ್ರಷ್ ಅನ್ನು ಯಾವುದೇ ಪ್ಲಾಸ್ಟಿಕ್ ಕ್ಯಾಪ್ ಅಥವಾ ಟಿಶ್ಯೂನಿಂದ ಮುಚ್ಚಬೇಡಿ. ಈ ರೀತಿ ಮಾಡಲು ಹೋದರೆ ಒದ್ದೆಯಾಗಿರುವ ಬ್ರಷ್ ನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯಬಹುದು.

  ಬ್ರಷ್ ಅನ್ನು ಅಡ್ಡಲಾಗಿ ಇಡಬೇಡಿ

  ಬ್ರಷ್ ಅನ್ನು ಅಡ್ಡಲಾಗಿ ಇಡಬೇಡಿ

  ಹಲ್ಲುಜ್ಜಿದ ಬಳಿಕ ಬ್ರಷ್ ಅನ್ನು ಅಡ್ಡಲಾಗಿ ಇಡಬೇಡಿ. ಯಾಕೆಂದರೆ ಇದರಿಂದ ಬ್ರಷ್ ಹೆಚ್ಚು ಕಾಲ ಒದ್ದೆಯಾಗಿ ಇರುವುದರಿಂದ ಬ್ಯಾಕ್ಟೀರಿಯಾ ಬೆಳೆಯಬಹುದು. ಕಪ್ ಅಥವಾ ಹಿಡಿಕೆಯಲ್ಲಿ ಹಾಕಿಟ್ಟರೆ ಒಳ್ಳೆಯದು.

  ಮೂರು ತಿಂಗಳಿಗೊಮ್ಮೆ ನಿಮ್ಮ ಬ್ರಷ್ ಬದಲಾಯಿಸಿ

  ಮೂರು ತಿಂಗಳಿಗೊಮ್ಮೆ ನಿಮ್ಮ ಬ್ರಷ್ ಬದಲಾಯಿಸಿ

  ಪ್ರತಿ ಮೂರು ತಿಂಗಳಿಗೊಮ್ಮೆ ನಿಮ್ಮ ಬ್ರಷ್ ಕಡ್ಡಾಯವಾಗಿ ಬದಲಿಸಲೇ ಬೇಕು. ಮೂರು ತಿಂಗಳಿಗೂ ಮೊದಲೇ ಬ್ರಷ್ ನ ಕೂದಲು ಬಾಗಿರುವುದು ಕಂಡುಬಂದರೆ ಕೂಡಲೇ ಬದಲಿಸುವುದು ಉತ್ತಮ. ಅದರಲ್ಲೂ ಶೀತ, ಕೆಮ್ಮು ಬಾಧಿಸಿ ಗುಣವಾದ ಬಳಿಕ ನಿಮ್ಮ ಬ್ರಷ್, ಸೋಪು, ಮೈಯುಜ್ಜುವ ಬ್ರಷ್ ಮೊದಲಾದವುಗಳನ್ನು ತ್ಯಜಿಸಿ ಹೊಸತನ್ನು ಬಳಸಲು ಪ್ರಾರಂಭಿಸುವ ಮೂಲಕ ಮನೆಯ ಇತರ ಸದಸ್ಯರನ್ನು ಈ ಕೀಟಾಣುಗಳಿಂದ ಕಾಪಾಡಿದಂತಾಗುತ್ತದೆ.

  ಹಲ್ಲುಜ್ಜುವ ಬ್ರಷ್‌ಗಳನ್ನು ಸ್ವಚ್ಛವಾಗಿಡುವುದು ಹೇಗೆ?

  ಹಲ್ಲುಜ್ಜುವ ಬ್ರಷ್‌ಗಳನ್ನು ಸ್ವಚ್ಛವಾಗಿಡುವುದು ಹೇಗೆ?

  ಪ್ರತಿಬಾರಿ ಹಲ್ಲುಜ್ಜಿದ ಬಳಿಕ ಕೂದಲುಗಳನ್ನು ಕೊಂಚ ಬಿಸಿನೀರಿನಿಂದ ತೊಳೆದು ನೀರಿನ ಪಸೆ ಹಾರಿಹೋಗುವಂತೆ ಬೆರಳುಗಳಿಂದ ನಾಲ್ಕಾರು ಬಾರಿ ಮೀಟಬೇಕು. ಬಳಿಕ ತೇವಾಂಶವಿರದ ಸ್ಥಳದಲ್ಲಿ ಇರಿಸಬೇಕು. ಶೌಚಾಲಯದಲ್ಲಿ ಇರಿಸದೇ ಇದ್ದಷ್ಟೂ ಉತ್ತಮ.

  ಟೂತ್ ಬ್ರಷ್ ನ ಬಗ್ಗೆ ತಿಳಿದಿರಲೇಬೇಕಾದ ಅಂಶಗಳು

  English summary

  This Is How Your Toothbrush Can Be Very Dangerous For Your Health!

  What is one of the first things you do when you start your day? Probably do some stretches and then brush your teeth, before taking a bath, right? Well, at least 90% of us follow the habit of brushing our teeth in the morning, because it is an extremely healthy and a necessary habit to follow. Right from a young age, our elders and school teachers tell us that one must brush one's teeth at least twice a day, once in the morning and just before bed. Many people even brush their teeth after a big meal that involves a lot of sweet dishes!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more