For Quick Alerts
ALLOW NOTIFICATIONS  
For Daily Alerts

ಕೆಂಪು ಗಡ್ಡೆ ಬೀಟ್‌ರೂಟ್‌ ನೋಡಿ ಮುಖ ಸಿಂಡರಿಸಬೇಡಿ ಪ್ಲೀಸ್!

|

ಕೇವಲ ತನ್ನ ಬಣ್ಣದ ಕಾರಣ ಹೆಚ್ಚಿನವರ ಅವಗಣನೆಗೆ ಒಳಗಾಗಿರುವ ತರಕಾರಿ ಎಂದರೆ ಬೀಟ್‌ರೂಟ್. ಹೆಚ್ಚಿನವರು ಕೆಂಪು ಬಣ್ಣವನ್ನು ತಮ್ಮ ಊಟದಲ್ಲಿ ಇಷ್ಟಪಡದಿರುವುದೇ ಇದಕ್ಕೆ ಕಾರಣ. ವಾಸ್ತವವಾಗಿ ಜೀವ ಉಳಿಸುವ ಔಷಧಿ ಕಹಿಯಿರುವಂತೆ ಬಣ್ಣದಲ್ಲಿ ಆಕರ್ಷಕವಲ್ಲದಿದ್ದರೂ ಪೋಷಕಾಂಶಗಳ ಆಗರವಾಗಿರುವ ಬೀಟ್‌ರೂಟ್ ಅನ್ನು ನಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸುವ ಮೂಲಕ ಇದರ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಮತ್ತು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು- ಮೊದಲಾದ ರೀತಿಯಲ್ಲಿ ಈ ಕೆಂಪುಕೆಂಪಾದ ಗಡ್ಡೆ ನಮ್ಮ ನೆರವಿಗೆ ಬರುತ್ತದೆ. ಅತ್ಯಂತ ಮುಖ್ಯವಾಗಿ ನಮ್ಮ ರಕ್ತದಲ್ಲಿ ಕೆಂಪು ರಕ್ತಕಣಗಳ ಕೊರತೆಯಿಂದಾಗಿ ಉಂಟಾಗುವ ಅನೀಮಿಯಾ ಸ್ಥಿತಿಗೂ ಬೀಟ್‌ರೂಟ್ ನೀಡುವ ನೆರವು ಯಾವುದೇ ಬೇರೆ ಆಹಾರದಲ್ಲಿಲ್ಲ!

ರಕ್ತಹೀನತೆ ಸಮಸ್ಯೆ ಬೀಟ್ರೂಟ್ ನಿಂದ ದೂರ

ಬೀಟ್‌ರೂಟ್ ಅನ್ನು ಕೇವಲ ತರಕಾರಿಯಾಗಿ ಅಲ್ಲದೇ ಇತರ ರೂಪದಲ್ಲಿಯೂ ಭಾರತದಲ್ಲಿ ಬಳಸಲಾಗುತ್ತಿದೆ. ಹಸಿಯಾಗಿ ಸಾಲಾಡ್ ರೂಪದಲ್ಲಿ, ರಸ ತೆಗೆದು ಜ್ಯೂಸ್ ರೂಪದಲ್ಲಿ, ಹಲ್ವಾ ಮೊದಲಾದ ಸಿಹಿತಿಂಡಿಗಳ ರೂಪದಲ್ಲಿ, ಇತರ ಅಡುಗೆಗಳಿಗೆ ಬಣ್ಣ ನೀಡಲೂ ಬಳಕೆಯಾಗುತ್ತಿದೆ. ಇಂತಹ ಉತ್ತಮ ತರಕಾರಿಯ ಹತ್ತು ಗುಣಗಳ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.

ರಕ್ತದಲ್ಲಿನ ಹೀಮೋಗ್ಲೋಬಿನ್ ಹೆಚ್ಚಿಸುತ್ತದೆ

ರಕ್ತದಲ್ಲಿನ ಹೀಮೋಗ್ಲೋಬಿನ್ ಹೆಚ್ಚಿಸುತ್ತದೆ

ಈ ತರಕಾರಿಯನ್ನು ಹಸಿಯಾಗಿ ಸೇವಿಸಬಹುದಾದರೂ ಬೇಯಿಸಿ ತಿಂದರೆ ಇದರ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು. ಇದರಲ್ಲಿ ಅತಿಹೆಚ್ಚಿರುವ ಕಬ್ಬಿಣದ ಅಂಶದ ಕಾರಣ ರಕ್ತಹೀನತೆ ಹೋಗಲಾಡಿಸಲು ಅತ್ಯಂತ ಸಮರ್ಥವಾದ ಆಹಾರವಾಗಿದ್ದು ಬಾಣಂತಿಯರಿಗೆ ಮತ್ತು ಮಹಿಳೆಯರ ಮಾಸಿಕ ದಿನಗಳಲ್ಲಿ ಸೇವಿಸಲು ಅತ್ಯಂತ ಸೂಕ್ತವಾದ ಆಹಾರವಾಗಿದೆ. ಇದರಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಹೀಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ಸಮರ್ಥವಿರುವ ಕಾರಣ ಕೊಂಚವೇ ಉಪ್ಪು ಸೇರಿಸಿದ ಬೇಯಿಸಿದ ಬೀಟ್ರೂಟ್ ಪಲ್ಯ ಅತ್ಯಂತ ಉತ್ತಮವಾದ ಆಹಾರವಾಗಿದೆ.

ವಿವಿಧ ತರಕಾರಿಗಳ ಮಿಶ್ರಣದೊಂದಿಗೆ

ವಿವಿಧ ತರಕಾರಿಗಳ ಮಿಶ್ರಣದೊಂದಿಗೆ

ಸಾಮಾನ್ಯವಾಗಿ ಭಾರತೀಯ ಅಡುಗೆಗಳಲ್ಲಿ ಎಲ್ಲಾ ತರಕಾರಿಗಳನ್ನು ಕೊಂಚಕೊಂಚವಾಗಿ ಸೇರಿಸಿ ಸಾಂಬಾರ್, ಪಲ್ಯ, ಉಪ್ಪಿನಕಾಯಿ ಮೊದಲಾದವುಗಳನ್ನು ಮಾಡುತ್ತಾರೆ. ಇದರಿಂದ ಪ್ರತಿ ತರಕಾರಿಯ ಉತ್ತಮ ಗುಣಗಳು ಇತರ ತರಕಾರಿಯ ಗುಣಗಳೊಂದಿಗೆ ಸೇರಿ ಒಟ್ಟಾರೆಯಾಗಿ ಒಂದು ಪ್ರಬಲ ಆಹಾರವಾಗಿರುತ್ತದೆ. ಅಂತೆಯೇ ಬೀಟ್ರೂಟ್ ಸಹಾ ಸೇರಿಸಿದ ವಿವಿಧ ತರಕಾರಿಗಳ ಪಲ್ಯ, ಸಾರುಗಳು ಪೋಷಕಾಂಶಗಳ ಆಗರವಾಗಿದ್ದು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ. ಬೀಟ್ರೂಟಿನಲ್ಲಿರುವ ಬೀಟಾಸಯಾನಿನ್ ಎಂಬ ಪೋಷಕಾಂಶದ ಕಾರಣ ಇದಕ್ಕೆ ರಕ್ತದ ಬಣ್ಣ ಬಂದಿದ್ದು ಒಂದು ಪ್ರಬಲ ಆಂಟಿ ಆಕ್ಸಿಡೆಂಟ್ ಆಗಿದೆ. ಇದರ ಮಹತ್ವವೆಂದರೆ ದೇಹದ ನರಗಳ ಒಳಭಾಗದಲ್ಲಿ ಅಂಟಿಕೊಳ್ಳುವ ಜಿಡ್ಡಾದ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಳೆವಣಿಕಳೆತ (oxidation) ಆಗದಂತೆ ತಡೆದು ನರಗಳ ಗೋಡೆಗಳಿಗೆ ಅಂಟಿಕೊಳ್ಳದಂತೆ ತಡೆಯುತ್ತದೆ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಮೂಲಕ ಎದುರಾಗಬಹುದಾಗಿದ್ದ ಕಂಟಕಗಳು ಇಲ್ಲವಾಗುತ್ತವೆ.

ಬೀಟ್ರೂಟ್ ಜ್ಯೂಸ್

ಬೀಟ್ರೂಟ್ ಜ್ಯೂಸ್

ಬೇಯಿಸಿ ತಿಂದಂತೆಯೇ ಹಸಿ ಬೀಟ್ರೂಟ್ ನ ರಸವೂ ಆರೋಗ್ಯವನ್ನು ಹಲವು ರೀತಿಯಿಂದ ರಕ್ಷಿಸುತ್ತದೆ. ನಿಮಿರು ದೌರ್ಬಲ್ಯವಿದ್ದವರ ರಕ್ತದಲ್ಲಿ ನೈಟ್ರೇಟುಗಳ ಪ್ರಮಾಣ ಹೆಚ್ಚಾಗಿದ್ದು ಇದು ವಿಶೇಷವಾಗಿ ಜನನಾಂಗದ ನರಗಳಲ್ಲಿ ರಕ್ತ ತುಂಬಿಕೊಳ್ಳಲು ಅಡ್ಡಿಯಾಗುತ್ತದೆ. ಬೀಟ್ರೂಟ್ ರಸದಲ್ಲಿರುವ ಪೋಷಕಾಂಶಗಳು ಈ ನೈಟ್ರೇಟುಗಳ ಪ್ರಭಾವ ಕಡಿಮೆಗೊಳಿಸುವ ಮೂಲಕ ನಿಮಿರುದೌರ್ಬಲ್ಯ ಕಡಿಮೆಯಾಗಲು ಸಾಧ್ಯವಾಗಿಸುತ್ತದೆ. the Journal of Nursing and Health Science ಎಂಬ ವೈದ್ಯಕೀಯ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಪ್ರತಿದಿನ ಒಂದು ಲೋಟ ಬೀಟ್ರೂಟ್ ಜ್ಯೂಸ್ ಅನ್ನು ಇಪ್ಪತ್ತು ದಿನಗಳವರೆಗೆ ಕುಡಿದವರ ರಕ್ತದಲ್ಲಿ ಹೀಮೋಗ್ಲೋಬಿನ್ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು ರಕ್ತಹೀನತೆಯ ತೊಂದರೆ ಸಾಕಷ್ಟು ಸುಧಾರಿಸಿದೆ. ಪ್ರತಿದಿನ ಅರ್ಧ ಕೇಜಿ ಬೀಟ್ರೂಟಿನಿಂದ ಹಿಂಡಿ ತೆಗೆದ ರಸವನ್ನು ಸತತವಾಗಿ ಎರಡು ವಾರಗಳವರೆಗೆ ಕುಡಿದರೆ ಜ್ಯೂಸ್ ಕುಡಿದ ಆರು ಘಂಟೆಗಳಲ್ಲಿಯೇ ಅಧಿಕ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರುತ್ತದೆ.

ಬೀಟ್ರೂಟ್ ಸಿಪ್ಪೆ ಯಿಂದ ಕೂಡ ಸಾಕಷ್ಟು ಪ್ರಯೋಜನಗಳಿವೆ

ಬೀಟ್ರೂಟ್ ಸಿಪ್ಪೆ ಯಿಂದ ಕೂಡ ಸಾಕಷ್ಟು ಪ್ರಯೋಜನಗಳಿವೆ

ಸಿಪ್ಪೆ ಸುಲಿದ ಬಳಿಕ ಈ ಸಿಪ್ಪೆಗಳನ್ನು ಸಾಮಾನ್ಯವಾಗಿ ನಾವೆಲ್ಲರೂ ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಇದೊಂದು ಉತ್ತಮ ಸೌಂದರ್ಯವರ್ಧಕವಾಗಿದೆ. ಈ ಸಿಪ್ಪೆಗಳನ್ನು ಮಿಕ್ಸಿಯಲ್ಲಿ ಅರೆದು ಈ ಲೇಪನವನ್ನು ತೆಳ್ಳಗೆ ಮುಖಕ್ಕೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಂಡರೆ ನಯವಾದ, ಕಲೆಯಿಲ್ಲದ ಮತ್ತು ಕಾಂತಿಯುಕ್ತ ಚರ್ಮ ಪಡೆಯಲು ಸಾಧ್ಯವಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಚರ್ಮದ ಸೂಕ್ಷ್ಮರಂಧ್ರಗಳಿಂದ ವಿಷಕಾರಿ ವಸ್ತುಗಳನ್ನು ನಿವಾರಿಸಲು ಸಮರ್ಥವಾಗಿದ್ದು ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತವೆ.

ಊಟದ ಸವಿಯನ್ನು ಹೆಚ್ಚಿಸುವ ಬೀಟ್‌ರೂಟ್ ಪಲ್ಯ

ಬೀಟ್‍ರೂಟ್ ಫ್ರೈ

ಬೀಟ್‍ರೂಟ್ ಫ್ರೈ

ಬೀಟ್‍ರೂಟ್ ಅನ್ನು ಸ್ವಲ್ಪ ನೀರಿನಲ್ಲಿ ಬೇಯಿಸಿ, ಆ ನೀರು ಸಂಪೂರ್ಣವಾಗಿ ಆವಿಯಾಗುವವರೆಗೆ ಕಾಯಿಸಿ. ಆಲೂಗಡ್ಡೆ, ಬೆಳ್ಳುಳ್ಳಿ, ಜೀರಿಗೆ ಮತ್ತು ಸ್ವಲ್ಪ ಸೋಯಾ ಸಾಸ್ ತೆಗೆದುಕೊಳ್ಳಿ. ಅದನ್ನು ಬೀಟ್‍ರೂಟ್ ಮತ್ತು ಆಲೀವ್ ಎಣ್ಣೆಯ ಜೊತೆಗೆ ಉರಿದುಕೊಳ್ಳಿ ಮತ್ತು ಮೇಲೆ ಹೇಳಿದ ಉರಿದುಕೊಂಡ ಮಿಶ್ರಣವನ್ನು ಇದಕ್ಕೆ ಬೆರೆಸಿ. ಎಳ್ಳನ್ನು ಇದರ ಮೇಲೆ ಅಲಂಕಾರಕ್ಕೆ ಚಿಮುಕಿಸಿಕೊಂಡು, ಸೇವಿಸಿ

ಬೀಟ್‍ರೂಟ್ ಮಿಲ್ಕ್ ಶೇಖ್

ಬೀಟ್‍ರೂಟ್ ಮಿಲ್ಕ್ ಶೇಖ್

ಬೀಟ್‍ರೂಟ್ ಅನ್ನು ಬಾಳೆಹಣ್ಣು, ಸೇಬು ಜೊತೆಗೆ ಸೇರಿಸಿ ಸಣ್ಣ ಸಣ್ಣ ತುಣುಕುಗಳಾಗಿ ಮಾಡಿಕೊಳ್ಳಿ. ಇವುಗಳನ್ನು ಹಾಲು ಮತ್ತು ಅರ್ಧ ಕಪ್ ಯೋಗರ್ಟ್ ಜೊತೆಗೆ ಬೆರೆಸಿ. ನಂತರ ಇದನ್ನು ಮೃದುವಾದ ಮಿಲ್ಕ್ ಶೇಖ್ ಆಗಿ ತಯಾರಿಸಿಕೊಂಡು, ಪ್ರತಿದಿನ ಕುಡಿದರೆ ಇನ್ನಷ್ಟು ಆರೋಗ್ಯವಾಗಿರುವಿರಿ

ಹೃದಯದ ಅಧಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಹೃದಯದ ಅಧಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಬೀಟ್‌ರೂಟ್‪‌ನ ಪೋಷಕಾಂಶಗಳು ನಮ್ಮ ಜೀರ್ಣಾಂಗಗಳಲ್ಲಿ ಹೀರಲ್ಪಟ್ಟ ಬಳಿಕ ಅದರಲ್ಲಿರುವ ನೈಟ್ರೇಟುಗಳು (nitrates) ನೈಟ್ರೈಟುಗಳಾಗಿ (nitrites) ಮತ್ತು ವಾಯುರೂಪದ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಯಾಗುತ್ತವೆ. ಈ ಎರಡೂ ಪೋಷಕಾಂಶಗಳು ರಕ್ತದಲ್ಲಿ ಸೇರಿದ ಬಳಿಕ ನರಗಳನ್ನು ಒಳಗಿನಿಂದ ಹಿಗ್ಗಿಸುತ್ತಾ ಹೋಗುತ್ತವೆ. ನರಗಳನ್ನು ಒಳಗಿನಿಂದ ಹಿಗ್ಗಿಸುವುದರಿಂದ ರಕ್ತ ಕಡಿಮೆ ಒತ್ತಡದಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ. ಈಗ ಹೃದಯಕ್ಕೆ ರಕ್ತವನ್ನು ದೇಹದ ಎಲ್ಲಾ ಮೂಲೆಗಳಿಗೆ ಕಳುಹಿಸಲು ಕಡಿಮೆ ಅಥವಾ ಆರೋಗ್ಯಕರ ಒತ್ತಡದಲ್ಲಿ ನೂಕಿದರೆ ಸಾಕು. ಪರಿಣಾಮವಾಗಿ ಅಧಿಕ ರಕ್ತದೊತ್ತಡವಿದ್ದರೆ ಸಾಮಾನ್ಯ ಸ್ಥಿತಿಗೆ ಬರಲು ಬೀಟ್ ರೂಟ್ ನೆರವಾಗುತ್ತದೆ. ಈ ಬಗ್ಗೆ ನಡೆದ ಸಂಶೋಧನೆಗಳ ಮೂಲಕ ಅಧಿಕ ರಕ್ತದೊತ್ತಡವಿರುವ ರೋಗಿಗಳು ಸುಮಾರು ಅರ್ಧ ಕೇಜಿಯಷ್ಟು ಬೀಟ್‌ರೂಟ್‌ನಿಂದ ತಯಾರಿಸಿದ ಖಾದ್ಯವನ್ನು ಸೇವಿಸಿದ ಆರು ಘಂಟೆಗಳೊಳಗೆ ಅವರ ರಕ್ತದೊತ್ತಡ ಗಮನಾರ್ಹವಾಗಿ ಕಡಿಮೆಯಾಗಿರುವುದನ್ನು ಖಚಿತಪಡಿಸಿವೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಬೀಟ್‌ರೂಟ್‌‌ನಲ್ಲಿರುವ ಫ್ಲೇವನಾಯ್ಡ್ ಮತ್ತು ಬೀಟಾಸಯಾನಿನ್ ಎಂಬ ಪೋಷಕಾಂಶಗಳು (flavanoids and betacyanin) ನರಗಳ ಒಳಗೆ ಕವಲೊಡೆದಿರುವಲ್ಲಿ ಮತ್ತು ತಿರುವಿರುವ ಒಳಗಣ ಮೂಲೆಯಲ್ಲಿ ಸಂಗ್ರಹವಾಗಿದ್ದ ಕೆಟ್ಟ ಕೊಲೆಸ್ಟ್ರಾಲ್ (LDL-Low Density Lipoproteins) ಸಡಿಲಗೊಂಡು ವಿಸರ್ಜಿಸಲು ನೆರವಾಗುತ್ತದೆ. ವಾಸ್ತವವಾಗಿ ಬೀಟ್‌ರೂಟ್‌‌ಗೆ ಕೆಂಪು ಬಣ್ಣ ಬರಲು ಈ ಬೀಟಾಸಯಾನಿನ್ ಪೋಷಕಾಂಶವೇ ಕಾರಣವಾಗಿದೆ. ಜೊತೆಗೇ ಇದೇ ಸ್ಥಳದಲ್ಲಿ ಮತ್ತೊಮ್ಮೆ ಹೊಸತಾಗಿ ಕೆಟ್ಟ ಕೊಲೆಸ್ಟ್ರಾಲ್ ಬಂದು ಅಂಟಿಕೊಳ್ಳುವುದನ್ನೂ ತಡೆಯುತ್ತದೆ. ಹಾಗೂ ಮುಖ್ಯವಾಗಿ ಅಧಿಕ ಪ್ರಮಾಣದಲ್ಲಿರುವ ಕರಗುವ ನಾರು ಮಲಬದ್ಧತೆಯಾಗುವುದನ್ನು ತಡೆಯುತ್ತದೆ.

ಗರ್ಭಿಣಿಯರಿಗೆ ಮತ್ತು ಗರ್ಭದಲ್ಲಿರುವ ಶಿಶುವಿಗೆ ಉತ್ತಮವಾಗಿದೆ

ಗರ್ಭಿಣಿಯರಿಗೆ ಮತ್ತು ಗರ್ಭದಲ್ಲಿರುವ ಶಿಶುವಿಗೆ ಉತ್ತಮವಾಗಿದೆ

ಬೀಟ್‌ರೂಟ್ ನಲ್ಲಿ ಫೋಲಿಕ್ ಆಮ್ಲ (folic acid) ಉತ್ತಮ ಪ್ರಮಾಣದಲ್ಲಿದ್ದು ಗರ್ಭಿಣಿಯರಿಗೆ ಅತ್ಯಂತ ಅಗತ್ಯವಾದ ಪೋಷಕಾಂಶವಾಗಿದೆ. ಗರ್ಭದಲ್ಲಿರುವ ಮಗುವಿನ ಹೊಕ್ಕಳು ಬಳ್ಳಿ ದೃಢವಾಗಿರಲು ಮತ್ತು ಗರ್ಭಿಣಿಯರ ರಕ್ತದಲ್ಲಿ ಹೆಚ್ಚಿನ ಹೀಮೋಗ್ಲೋಬಿನ್ ನೀಡಲು ನೆರವಾಗುತ್ತದೆ. ಇದರಿಂದ ಹೆರಿಗೆಯ ಸಮಯದಲ್ಲಿ ಗರ್ಭಕೋಶ ಮತ್ತು ಹೆರಿಗೆಗೆ ಸಂಬಂಧಪಟ್ಟ ಸ್ನಾಯುಗಳು ಹೆಚ್ಚು ಶಕ್ತಿಯುತವಾಗಿ ಸಾಮಾನ್ಯ ಹೆರಿಗೆಗೆ ನೆರವಾಗುತ್ತವೆ.

ಮಧುಮೇಹವನ್ನೂ ನಿಯಂತ್ರಣದಲ್ಲಿಡಲು ನೆರವಾಗುತ್ತದೆ

ಮಧುಮೇಹವನ್ನೂ ನಿಯಂತ್ರಣದಲ್ಲಿಡಲು ನೆರವಾಗುತ್ತದೆ

ಯಾವುದೇ ತರಕಾರಿಯಲ್ಲಿರುವ ಸಕ್ಕರೆ ರಕ್ತವನ್ನು ಸೇರುವ ಗತಿಯನ್ನು ಗುರುತಿಸಲು ಗ್ಲೈಸೆಮಿಕ್ ಕೋಷ್ಟಕ ಬಳಸಲಾಗುತ್ತದೆ. (glycaemic index). ಇದರ ಪ್ರಕಾರ ಬೀಟ್‌ರೂಟ್‌ನಲ್ಲಿ ಈ ಅಂಶ ಮಧ್ಯಮದಲ್ಲಿರುವುದರಿಂದ (ಅಂದರೆ ಅತಿ ಶೀಘ್ರವಾಗಿ ಕರಗುವುದೂ ಇಲ್ಲ ತುಂಬಾ ತಡವಾಗಿ ಕರಗುವುದೂ ಇಲ್ಲ) ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಸಕ್ಕರೆಯಾಗಿದೆ. ಇದರಿಂದ ಮಧುಮೇಹಿಗಳು ತಮ್ಮ ಶರೀರಕ್ಕೆ ಅಗತ್ಯವಿರುವ ಸಕ್ಕರೆಯನ್ನು ಅವರ ಶರೀರ ತಡೆದುಕೊಳ್ಳಬಹುದಾದ ಗತಿಯಲ್ಲಿಯೇ ಪಡೆಯಬಹುದು. (ಜೇನು ಅತಿ ಶೀಘ್ರವಾಗಿ ಕರಗುವ ಸಕ್ಕರೆಯಾದುದರಿಂದ ಮಧುಮೇಹಿಗಳಿಗೆ ಸಲ್ಲದು). ಜೊತೆಗೇ ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದರಿಂದ ಮತ್ತು ಕೊಬ್ಬು ರಹಿತವಾದುದರಿಂದ ಮಧುಮೇಹಿಗಳ ಸಕ್ಕರೆಯ ಬಯಕೆಯನ್ನು ಆರೋಗ್ಯ ಕದಡದೇ ಪೂರೈಸಲು ಬೀಟ್ ರೂಟ್ ನೆರವಿಗೆ ಬರುತ್ತದೆ.

ಒತ್ತಡದಿಂದ ಮುಕ್ತಿ ಪಡೆಯಲು ನೆರವಾಗುತ್ತದೆ

ಒತ್ತಡದಿಂದ ಮುಕ್ತಿ ಪಡೆಯಲು ನೆರವಾಗುತ್ತದೆ

ಅಮೇರಿಕಾದ ಒಂದು ಸಂಘಟನೆ American Diabetics association ಆಯೋಜಿಸಿದ ಸಮ್ಮೇಳನವೊಂದರಲ್ಲಿ ಬೀಟ್‌ರೂಟ್‌ ಸೇವನೆಯಿಂದ ದೇಹದಲ್ಲಿ ಹೆಚ್ಚಿನ ಶಕ್ತಿ ಪಡೆಯುತ್ತದೆ. ವಿಶೇಷವಾಗಿ ಮಧುಮೇಹಿಗಳಿಗೆ ಈ ಶಕ್ತಿ ವರದಾನವಾಗಿದೆ ಎಂಬ ವಿಷಯವನ್ನು ಪ್ರಸ್ತುತಪಡಿಸಲಾಗಿತ್ತು. ಬೀಟ್‌ರೂಟ್‌ನಲ್ಲಿರುವ ನೈಟೇಟ್ ಗಳು ರಕ್ತಪರಿಚಲನೆಗೆ ನೆರವಾಗಿ ದೇಹದ ಎಲ್ಲಾ ಜೀವಕೋಶಗಳು ಅಗತ್ಯವಾದ ಪೋಷಕಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಿಂದಾಗಿ ದೈಹಿಕವಾಗಿ ಹೆಚ್ಚಿನ ಸಾಮರ್ಥ ಪಡೆದಂತಾಗುತ್ತದೆ, ಪರೋಕ್ಷವಾಗಿ ಈ ಮೂಲಕ ಉದ್ಭವವಾಗಿದ್ದ ಒತ್ತಡ ಕಡಿಮೆಯಾಗುತ್ತದೆ.

ಲೈಂಗಿಕ ಸಾಮರ್ಥ್ಯ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ

ಲೈಂಗಿಕ ಸಾಮರ್ಥ್ಯ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ

ಎಷ್ಟೋ ಕಡೆ ಬೀಟ್‌ರೂಟ್‌ ಅನ್ನು ನೈಸರ್ಗಿಕ ವಯಾಗ್ರಾ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದರ ಸೇವನೆಯಿಂದ ಲೈಂಗಿಕ ಸಾಮರ್ಥ್ಯ ಹೆಚ್ಚುವುದು ಗಮನಕ್ಕೆ ಬಂದಿದೆ. ಬೀಟ್‌ರೂಟ್‌ ನಲ್ಲಿರುವ ನೈಟೇಟ್ ಗಳು ರಕ್ತಪರಿಚಲನೆಗೆ ನೆರವಾಗುತ್ತವೆ. ಇದೇ ಗುಣ ಜನನಾಂಗಗಳಿಗೂ ಅನ್ವಯಿಸುವುದರಿಂದ ಹೆಚ್ಚಿನ ರಕ್ತ ತುಂಬಿ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ. ವಾಸ್ತವವಾಗಿ ವಯಾಗ್ರಾ ಮಾಡುವ ಕೆಲಸವೂ ಇದೇ. ಬೀಟ್ ರೂಟ್ ನಿಂದ ಈ ಸಾಮರ್ಥ್ಯ ನೈಸರ್ಗಿಕವಾಗಿ ಸಿಗುವುದರಿಂದ ಅಡ್ಡ ಪರಿಣಾಮಗಳ ಭಯವಿಲ್ಲದೇ ಬಳಸಬಹುದಾಗಿದೆ.

ಕ್ಯಾನ್ಸರ್ ಬರುವುದರಿಂದ ತಡೆಯುತ್ತದೆ

ಕ್ಯಾನ್ಸರ್ ಬರುವುದರಿಂದ ತಡೆಯುತ್ತದೆ

ಬೀಟ್‌ರೂಟ್‌ನಲ್ಲಿರುವ ಬೀಟಾಸಯಾನಿನ್ ಪೋಷಕಾಂಶ ರಕ್ತದಲ್ಲಿರುವ ಕ್ಯಾನ್ಸರ್ ಕಾರಕ ಕಣಗಳನ್ನು ಹೊಡೆದೋಡಿಸಲು ನೆರವಾಗುತ್ತದೆ. ಸಾಮಾನ್ಯವಾಗಿ ಪ್ರಾರಂಭಿಕ ಹಂತದಲ್ಲಿರುವ ಕ್ಯಾನ್ಸರ್ ಪೂರ್ಣವಾಗಿ ಗುಣವಾಗಬಲ್ಲದು.(ವಿಕೋಪಕ್ಕೆ ತಿರುಗಿದ ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚಿನ ಸಮಯಾವಕಾಶ ಅಗತ್ಯವಿದೆ). ಕ್ಲುಪ್ತಕಾಲದಲ್ಲಿ ಕ್ಯಾನ್ಸರ್ ಇರುವಿಕೆಯನ್ನು ಗುರುತಿಸಿ ಚಿಕಿತ್ಸೆ ಪಡೆದು ಗುಣಮುಖರಾದವರಿಗೂ ಬೀಟ್‌ರೂಟ್‌ ಅಗತ್ಯವಾಗಿದೆ. ಏಕೆಂದರೆ ಇವರ ದೇಹದಲ್ಲಿ ಮತ್ತೊಮ್ಮೆ ಈ ಕ್ಯಾನ್ಸರ್ ಕಾರಕ ಕಣಗಳು ಉತ್ಪತ್ತಿಯಾಗದಂತೆ ಬೀಟಾಸಯಾನಿನ್ ತಡೆಯುತ್ತದೆ. ಪರಿಣಾಮವಾಗಿ ಉತ್ತಮ ಆರೋಗ್ಯವನ್ನು ಮತ್ತು ಆಯಸ್ಸನ್ನು ಪಡೆಯಬಹುದು.

ದೌರ್ಬಲ್ಯ ನಿವಾರಣೆಗೆ ಸಹಕಾರಿ

ದೌರ್ಬಲ್ಯ ನಿವಾರಣೆಗೆ ಸಹಕಾರಿ

ಅಮೇರಿಕಾದಲ್ಲಿ ನಡೆದ ಡಯಾಬಿಟಿಸ್ ಕಾನ್ಫರೆನ್ಸ್ ನಲ್ಲಿ ಮಂಡಿಸಲಾದ ಸಂಶೋಧನೆಯ ಪರಿಣಾಮದ ಪ್ರಕಾರ ಬೀಟ್‌ರೂಟ್ ಮನುಷ್ಯನ ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಅವರ ಪ್ರಕಾರ ಇದರಲ್ಲಿನ ನೈಟ್ರೇಟ್ ಅಂಶ ನಮ್ಮ ಅಪಧಮನಿಗಳನ್ನು ಹಿಗ್ಗಿಸುತ್ತದೆ ಹಾಗೂ ಇದು ನಮ್ಮ ದೇಹದ ಎಲ್ಲಾ ಭಾಗಗಳಿಗೆ ರಕ್ತವನ್ನು ಸಂಚರಿಸಲು ಉಪಯುಕ್ತವಾಗಿದೆ. ಇದು ನಮ್ಮಲ್ಲಿ ಶಕ್ತಿ ವರ್ಧನೆಗೆ ಸಹಕಾರಿ. ಇನ್ನೊಂದು ವಾದದ ಪ್ರಕಾರ ಇದರಲ್ಲಿ ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ ಹಾಗಾಗಿ ಮನುಷ್ಯನ ಶಕ್ತಿಯನ್ನು ವೃದ್ಧಿಸುತ್ತದೆ ಎಂಬುದಾಗಿದೆ. ಆದರೆ ದಣಿದ ದಿನ ಬೀಟ್ ಸೇವನೆ ಶಕ್ತಿಯನ್ನು ಮರಳಿ ಪಡೆಯಲು ಸಹಕಾರಿಯಾಗುವುದಂತೂ ಸುಳ್ಳಲ್ಲ.

English summary

Start eating beetroot to reap its amazing health benefits

How often do you include beetroot in your diet? Well, if you don’t remember when you ate this purplish-red root the last time, you need to start consuming it due to its multiple health benefits. From keeping your blood sugar levels in control to improving your sexual stamina,
X
Desktop Bottom Promotion