Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಿಡ್ನಿ ನೋವಿಗೆ ಉಪಶಮನವನ್ನು ನೀಡುವ ಸಂಜೀವಿನ ಔಷಧಿಗಳು
ಕಿಡ್ನಿ ಕಲ್ಲೆಂದರೆ ಅತಿಯಾದ ನೋವಿನ ಪದವೆಂದೇ ಪರಿಗಣಿತ. ಕಿಡ್ನಿ ಕಲ್ಲುಗಳನ್ನು ಹೊಂದಿರುವ ವ್ಯಕ್ತಿ ತನ್ನ ಆಹಾರ ಪದ್ಧತಿಯಲ್ಲಿ ತುಂಬಾ ಜಾಗರೂಕರಾಗಿರಬೇಕು. ಹಾಗಿದ್ದರೆ ಇದರ ನಿಯಂತ್ರಣ ಹೇಗೆ? ಚಿಂತಿಸದಿರಿ ಇಲ್ಲಿದೆ ನೋಡಿ ಪರಿಹಾರ....
ಆರೋಗ್ಯವೇ ಭಾಗ್ಯ ಎಂಬುದು ಒಂದು ನಾಣ್ಣುಡಿಯಾಗಿದ್ದರೂ ಇಂದಿನ ಕಾಲದಲ್ಲಿ ಈ ಮಾತೇ ಈ ಅತ್ಯಮೂಲ್ಯ ಆಸ್ತಿ ಎಂದೆನಿಸಿದೆ. ಲಯತಪ್ಪಿದ ಆಹಾರ ಕ್ರಮ ಮತ್ತು ಜೀವನ ಶೈಲಿಯಿಂದ ಇಂದು ಮಾನವ ಹೆಚ್ಚಿನ ರೋಗರುಜಿನಗಳಿಗೆ ದಾಸನಾಗುತ್ತಿದ್ದಾನೆ. 'ಕಿಡ್ನಿ'ಗೆ ತಗಲುವ ಸೋಂಕನ್ನು ಗುಣಪಡಿಸುವ ಮನೆಮದ್ದುಗಳು
ಕೆಲವಕ್ಕೆ ಔಷಧಗಳು ಇದ್ದರೂ ಇನ್ನೂ ಕೆಲವಕ್ಕೆ ಔಷಧಗಳು ಇಲ್ಲದೇ ಇರುವಂತಹ ಪರಿಸ್ಥಿತಿ ಬಂದೊದಗಿದೆ. ಎಷ್ಟೇ ದುಡ್ಡಿದ್ದರೂ ಸುಖ ಶಾಂತಿ ನೆಮ್ಮದಿ ಇಲ್ಲವಾಗಿದೆ. ಅದರಲ್ಲೂ ಸಾಮಾನ್ಯವಾಗಿರುವಂತಹ ಕಾಯಿಲೆಗಳಿಂದ ಕೂಡ ಮನಸ್ಸಿಗೆ ಶಾಂತಿ ಇಲ್ಲದಂತಾಗಿದೆ. ಕಿಡ್ನಿ ಕಲ್ಲುಗಳನ್ನು ದೇಹದಿಂದ ಹೊರಹಾಕುವ ಸೂಪರ್ ಮನೆಮದ್ದುಗಳು
ಎಲ್ಲ ವಯಸ್ಕರನ್ನು ಕಾಡುವ ಕಿಡ್ನಿ ಸಮಸ್ಯೆ ಇಂದು ವೈಪರೀತ್ಯವಾಗಿ ಹರಡಲು ಕಾರಣವಾಗಿರುವುದು ಇದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದಾಗಿದೆ. ಆರೋಗ್ಯವಾಗಿರಿಸಬೇಕಾದ ಒಂದು ಅಂಗವೇ ಇಂದು ನಮ್ಮ ಹೆಚ್ಚಿನ ತೊಂದರೆಗಳಿಗೆ ಕಾರಣವಾಗಿದೆ ಎಂದಾದಲ್ಲಿ ನಾವು ಆರೋಗ್ಯವಾಗಿರುವುದನ್ನು ಸೇವಿಸುತ್ತಿಲ್ಲ ಎಂಬುದು ಇದಕ್ಕೆ ಒಂದು ಕಾರಣವಾಗಿದೆ. ಮನೆ ಔಷಧ: ಕಿಡ್ನಿ ಕಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ
ಸಹಿಸಲು ಅಸಾಧ್ಯವಾಗಿರುವ ಕಿಡ್ನಿ ನೋವಿಗೆ ವೈದ್ಯರ ಉಪಚಾರಕ್ಕಿಂತ ನೈಸರ್ಗಿಕವಾಗಿ ನಾವುಗಳೇ ಪರಿಹಾರಗಳನ್ನು ಅನುಸರಿಸುವುದು ಅತಿಮುಖ್ಯವಾಗಿದೆ. ಹಾಗಿದ್ದರೆ ಆ ಪರಿಹಾರ ಕ್ರಮಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

ಸಾಕಷ್ಟು ನೀರು ಸೇವನೆ
ಸಾಕಷ್ಟು ನೀರು ಸೇವಿಸುವುದು ಕಿಡ್ನಿಯ ಆರೋಗ್ಯವನ್ನು ಕಾಪಾಡುತ್ತದೆ. ಮೂತ್ರನಾಳಗಳಲ್ಲಿ ಕಲ್ಲುಗಳಿದ್ದಲ್ಲಿ ಅದನ್ನು ನೀರು ಮೂತ್ರದ ಮೂಲಕ ಹೊರಹೋಗುವಂತೆ ಮಾಡುತ್ತದೆ. ಇದರಿಂದ ಕೂಡ ಕಿಡ್ನಿ ನೋವು ಸಂಭವಿಸುತ್ತದೆ.

ಕಲ್ಲಂಗಡಿ ಬೀಜಗಳು
ಕಿಡ್ನಿಯಲ್ಲಿರುವ ತ್ಯಾಜ್ಯಗಳನ್ನು ಹೊರಹಾಕಲು ಕಲ್ಲಂಗಡಿ ಬೀಜ ಸಹಕಾರಿಯಾಗಿದೆ. ಕುದಿಯುತ್ತಿರುವ ನೀರಿಗೆ ಒಂದು ಚಮಚದಷ್ಟು ಕಲ್ಲಂಗಡಿ ಬೀಜಗಳನ್ನು ಹಾಕಿ. ಇದನ್ನು ಮುಚ್ಚಿ ಐದು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸೋಸಿಕೊಂಡು ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಿ. ಕಲ್ಲಂಗಡಿ ಹಣ್ಣಿನ ಬೀಜದ ಪ್ರಯೋಜನಗಳನ್ನು ಕೇಳಿದರೆ ಅಚ್ಚರಿ ಪಡುವಿರಿ!

ಲಿಂಬೆ ರಸ
ಒಂದು ಲಿಂಬೆಯನ್ನು ತೆಗೆದುಕೊಂಡು ಅದರ ರಸವನ್ನು ಹಿಂಡಿಕೊಳ್ಳಿ. ಒಂದು ಲೋಟ ನೀರಿಗೆ ಈ ರಸವನ್ನು ಬೆರೆಸಿ ಮತ್ತು ಖಾಲಿ ಹೊಟ್ಟೆಗೆ ಮುಂಜಾನೆ ಇದನ್ನು ಸೇವಿಸಿ. ಲಿಂಬೆಯಲ್ಲಿ ಆಸಿಟಿಕ್ ಆಸಿಡ್ ಇದ್ದು ಕಲ್ಲನ್ನು ಹೊರಹಾಕಲು ನೆರವಾಗಲಿದೆ ಮತ್ತು ಕಿಡ್ನಿಯಲ್ಲಿರುವ ತ್ಯಾಜ್ಯಗಳನ್ನು ನಿವಾರಣೆ ಮಾಡುತ್ತದೆ. ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

ಆಲೀವ್ ಆಯಿಲ್
ಒಂದು ಚಮಚದಷ್ಟು ಆಲೀವ್ ಆಯಿಲ್ ಅನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚದಷ್ಟು ಲಿಂಬೆ ರಸವನ್ನು ಬೆರೆಸಿ. ದಿನಕ್ಕೆ ಒಂದು ಬಾರಿ ಇದನ್ನು ಸೇವಿಸಿ. ಇದರಿಂದ ಕಿಡ್ನಿ ನೋವು ಶಮನವಾಗುತ್ತದೆ.

ಸೆಲರಿ
ಒಂದು ಚಮಚದಷ್ಟು ಸೆಲರಿ ಬೀಜವನ್ನು ತೆಗೆದುಕೊಳ್ಳಿ ಮತ್ತು ಇದಕ್ಕೆ ಒಂದು ಲೋಟದಷ್ಟು ಬಿಸಿ ನೀರನ್ನು ಹಾಕಿ. ಇದನ್ನು ಮುಚ್ಚಿ ನಂತರ ಐದರಿಂದ ಏಳು ನಿಮಿಷ ಹಾಗೆಯೇ ಬಿಡಿ. ಚೆನ್ನಾಗಿ ಇದನ್ನು ಕಲಸಿಕೊಂಡು ದಿನಕ್ಕೆ ಒಂದು ಬಾರಿ ಸೇವಿಸಿ. ಕಿಡ್ನಿಯಲ್ಲಿರುವ ತ್ಯಾಜ್ಯ ವಸ್ತುಗಳನ್ನು ಹೊರಹಾಕಿ ನೋವನ್ನು ಶಮನ ಮಾಡುತ್ತದೆ.

ಸಾಸಿವೆ ಪೇಸ್ಟ್
ಒಂದು ಚಮಚದಷ್ಟು ಸಾಸಿವೆ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಮೂರು ಚಮಚ ಗೋಧಿ ಪುಡಿಯನ್ನು ಸೇರಿಸಿ. ನೀರು ಅಥವಾ ಮೊಟ್ಟೆಯ ಬಿಳಿ ಭಾಗವನ್ನು ಹಾಕಿ ನಂತರ ದಪ್ಪನೆಯ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ತೆಗೆದುಕೊಂಡು ಬಟ್ಟೆಯಿಂದ ಸುತ್ತಿರಿ. ಪೆಟ್ರೋಲಿಯಂ ಜೆಲ್ಲಿಯನ್ನು ನೋವಿರುವ ಭಾಗದಲ್ಲಿ ಹಚ್ಚಿ ನಂತರ ಈ ಬಟ್ಟೆಯನ್ನು ಅದರ ಮೇಲಿರಿಸಿ. ಮೂವ್ವತ್ತು ನಿಮಿಷ ಹಾಗೆಯೇ ಇರಿಸಿಕೊಳ್ಳಿ ನಂತರ ತೆಗೆಯಿರಿ. ನೋವಿರುವ ಭಾಗದಲ್ಲಿ ದಿನಕ್ಕೆ ಒಂದು ಬಾರಿ ಈ ಕ್ರಮವನ್ನು ಅಳವಡಿಸಿ.

ಕ್ಯಾಬೇಜ್ ಎಲೆಗಳು
ಎರಡು ಮೂರು ಕ್ಯಾಬೇಜ್ ಎಲೆಗಳನ್ನು ತೆಗೆದುಕೊಂಡು ಎರಡು ಈರುಳ್ಳಿಯನ್ನು ಇದಕ್ಕೆ ಮಿಶ್ರ ಮಾಡಿಕೊಂಡು ಪ್ಯಾನ್‌ನಲ್ಲಿ ಎರಡು ಲೋಟ ನೀರು ಕಾಯಿಸಿಕೊಂಡು ಚೆನ್ನಾಗಿ ಕುದಿಯಲು ಬಿಡಿ. ಒಂದು ಬಟ್ಟೆಯನ್ನು ತೆಗೆದುಕೊಂಡು ಈ ಸಾಮಾಗ್ರಿಗಳನ್ನು ಅದರಲ್ಲಿ ಸುತ್ತಿರಿ ಮತ್ತು ನೋವಿರುವ ಭಾಗದಲ್ಲಿ ಮೂರರಿಂದ ನಾಲ್ಕು ಗಂಟೆಗಳ ಕಾಲ ಇದನ್ನು ಇರಿಸಿಕೊಳ್ಳಿ.

ತುಳಸಿ
ಕಿಡ್ನಿಯನ್ನು ಬಲಶಾಲಿಯನ್ನಾಗಿಸಿ ತ್ಯಾಜ್ಯಗಳನ್ನು ಹೊರಹಾಕುವಲ್ಲಿ ತುಳಸಿಯು ಮಹತ್ವದ ಕಾರ್ಯವನ್ನು ನಿರ್ವಹಿಸುತ್ತದೆ. ಒಂದು ಚಮಚ ತುಳಸಿ ರಸವನ್ನು ತೆಗೆದುಕೊಂಡು ಇದಕ್ಕೆ ಅಷ್ಟೇ ಪ್ರಮಾಣದಲ್ಲಿ ಜೇನು ಸೇರಿಸಿಕೊಳ್ಳಿ ನಿತ್ಯವೂ ಇದನ್ನು ಸೇವಿಸಿ. ಇದು ಕಿಡ್ನಿ ಕಲ್ಲುಗಳನ್ನು ಹೊರಹಾಕುವಲ್ಲಿ ಸಹಕಾರಿ ಎಂದೆನಿಸಲಿದೆ. ಆರೋಗ್ಯ ರಕ್ಷಕ- ತುಳಸಿ ಎಲೆಯ ವೈಶಿಷ್ಟ್ಯ ಒಂದೇ, ಎರಡೇ?



Click it and Unblock the Notifications
