ಹೊಟ್ಟೆಯ ಬೊಜ್ಜು ಕರಗಿಸಬೇಕೇ? ಅನಾನಸ್ ಹಣ್ಣಿನ ನೆರವು ಪಡೆಯಿರಿ!

By: manu
Subscribe to Boldsky

ಇತ್ತೀಚೆಗೆ ಆನ್‌ಲೈನ್‌ನಲ್ಲಿ ಸುಂದರವಾದ ಉಡುಗೆಯೊಂದು ಕಂಡುಬಂದಿದ್ದು ಇದನ್ನು ಖರೀದಿಸಲು ನಿಮ್ಮ ಹೊಟ್ಟೆಯ ಬೊಜ್ಜು ಅಡ್ಡಿಯಾಯಿತೇ? ಹೊಟ್ಟೆಯ ಬೊಜ್ಜು ನಿಮ್ಮ ಹಲವು ಅಪೇಕ್ಷೆಗಳಿಗೆ ಅಡ್ಡಗಾಲು ಹಾಕುತ್ತಿದೆಯೇ? ಅಷ್ಟೇ ಅಲ್ಲ, ನಿಮ್ಮ ಹೊಟ್ಟೆಯ ಗಾತ್ರಕ್ಕೆ ಹೊಂದುವ ಬಟ್ಟೆಗಳು ದುರ್ಲಭವಾಗಿದೆಯೇ? ಹಾಗಾದರೆ ಈ ಗಾತ್ರವನ್ನು ಕಡಿಮೆಗೊಳಿಸುವುದೇ ಸರಿಯಾದ ಮಾರ್ಗವಗಿದೆ. ಅನಾನಸ್-ಮುಳ್ಳಿನಿಂದ ಕೂಡಿದ್ದರೂ ಆರೋಗ್ಯಕ್ಕೆ ಹಿತಕಾರಿ

ಈ ಇಚ್ಚೆಯನ್ನು ಪೂರೈಸಲು ನಿಮಗೆ ನಿಮ್ಮ ನೆಚ್ಚಿನ ಅನಾನಸ್ ನೆರವಾಗುತ್ತದೆ ಎಂದರೆ ಅಚ್ಚರಿ ಅಲ್ಲವೇ? ಅನಾನಸ್ ಮತ್ತು ಕೆಲವು ಪರಿಕರಗಳನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ ಶೀಘ್ರವೇ ಹೊಟ್ಟೆಯ ಕೊಬ್ಬು ಕರಗಿ ನಿಮ್ಮ ನೆಚ್ಚಿನ ಉಡುಪುಗಳನ್ನು ತೊಡಲು ಸಾಧ್ಯವಾಗುತ್ತದೆ.ಸೊಂಟದ ಕೊಬ್ಬು ಶರೀರದ ಸೌಂದರ್ಯವನ್ನು ಕುಂದಿಸುವುದು ಮಾತ್ರವಲ್ಲ, ಅನಾರೋಗ್ಯಕರವೂ ಹೌದು. ಅಲ್ಲದೇ ಕೆಲವು ಸಂದರ್ಭಗಳಲ್ಲಿ, ಬಿಗಿಯಾದ ಉಡುಗೆಗಳನ್ನು ತೊಟ್ಟಿರುವ ಸಂದರ್ಭದಲ್ಲಿ ಆತ್ಮವಿಶ್ವಾಸವನ್ನೇ ಕುಂದಿಸಬಹುದು. ಎಡೆಬಿಡದೆ ಕಾಡುವ ಕೆಮ್ಮಿನ ನಿಯಂತ್ರಣಕ್ಕೆ-ಅನಾನಸ್ ಸಿರಪ್

ಸ್ಥೂಲಕಾಯ ಹಲವು ಕಾಯಿಲೆಗಳಿಗೆ ಮುಕ್ತ ಆಹ್ವಾನವಾಗಿದೆ. ವಿಶೇಷವಾಗಿ ಸಂಧಿವಾತ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಹೃದಯಸಂಬಂಧಿ ತೊಂದರೆಗಳು ಮೊದಲಾದವು ಇತರರಿಗಿಂತ ಸ್ಥೂಲದೇಹಿಗಳಿಗೆ ಹೆಚ್ಚು ಅವರಿಸುತ್ತವೆ.  ಬರೀ ಒಂದೇ ವಾರದಲ್ಲಿ ಹೊಟ್ಟೆಯ ಕೊಬ್ಬು ಕರಗಿಸಿಕೊಳ್ಳಿ!

ಆದ್ದರಿಂದ ಸ್ಥೂಲಕಾಯದಿಂದ ಹೊರಬರುವುದು ಅತ್ಯಂತ ಅಗತ್ಯವಾಗಿದೆ. ಸ್ಥೂಲಕಾಯವನ್ನು ಕರಗಿಸುವ ಮೂಲಕ ಮೈಕಟ್ಟು ಸಹಾ ಸುಂದರವಾಗಿದ್ದು ಹಲವು ಕಾಯಿಲೆಗಳಿಂದ ರಕ್ಷಣೆಯನ್ನೂ ಪಡೆಯಬಹುದು. ಈ ಕಾರ್ಯಕ್ಕೆ ಗುಳಿಗೆಗಳನ್ನು ಸೇವಿಸುವುದು ಅಪಾಯಕಾರಿಯಾಗಿದ್ದು ಇದಕ್ಕಾಗಿ ಸುರಕ್ಷಿತವಾದ ಮನೆಮದ್ದುಗಳೇ ಉತ್ತಮ ಆಯ್ಕೆಯಾಗಿದೆ. ಈ ನಿಟ್ಟಿನಲ್ಲಿ ಅನಾನಾಸು ಸಮರ್ಥವಾದ ಆಯ್ಕೆಯಾಗಿದ್ದು ಶೀಘ್ರವಾಗಿ ಕೊಬ್ಬು ಕರಗಿಸಲು ನೆರವಾಗುತ್ತದೆ.....  

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಅನಾನಸ್ ಹಣ್ಣಿನ ತಿರುಳು: ಎರಡು ಬಿಲ್ಲೆಗಳು

*ಜೇನು: ಒಂದು ದೊಡ್ಡ ಚಮಚ

ಜೊತೆಗೆ ವ್ಯಾಯಾಮ ಕೂಡ ಅತ್ಯಗತ್ಯ

ಜೊತೆಗೆ ವ್ಯಾಯಾಮ ಕೂಡ ಅತ್ಯಗತ್ಯ

*ನಿಯಮಿತವಾಗಿ ಈ ಪೇಯ ಸೇವಿಸುವ ಮೂಲಕ ಕೊಬ್ಬನ್ನು ಸಮರ್ಥವಾಗಿ ಕರಗಿಸಲು ಸಾಧ್ಯ.

* ಈ ಪೇಯ ಸೇವಿಸುವ ಜೊತೆಜೊತೆಗೇ ದಿನಕ್ಕೆ ಕನಿಷ್ಠ ನಲವತ್ತೈದು ನಿಮಿಷಗಳಾದರೂ ವ್ಯಾಯಾಮ ಮಾಡುವುದು ಅಗತ್ಯ.

ಅನಾನಸ್ ಹಣ್ಣು

ಅನಾನಸ್ ಹಣ್ಣು

ಅನಾನಸ್ ಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದ್ದು ಜೀವರಾಸಾಯನಿಕ ಕ್ರಿಯೆಯನ್ನು ತೀವ್ರಗೊಳಿಸಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಪರಿಣಾಮವಾಗಿ ತೂಕ ಶೀಘ್ರವಾಗಿ ಇಳಿಯುತ್ತದೆ. ವಿಟಮಿನ್ ಸಿ ಆಮ್ಲೀಯವಾಗಿರುವ ಕಾರಣ ಹೊಟ್ಟೆಯ ಕೊಬ್ಬನ್ನು ಸಮರ್ಥವಾಗಿ ಕರಗಿಸುತ್ತದೆ.

ಜೇನು

ಜೇನು

ಜೇನಿನಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಇದು ತೂಕವನ್ನು ಇಳಿಸಲು ನೆರವಾಗುತ್ತದೆ.

ಕೊಬ್ಬು ಕರಗಿಸುವ ಜ್ಯೂಸ್ ತಯಾರಿಸುವ ವಿಧಾನ

ಕೊಬ್ಬು ಕರಗಿಸುವ ಜ್ಯೂಸ್ ತಯಾರಿಸುವ ವಿಧಾನ

* ಮಿಕ್ಸಿಯ ಬ್ಲೆಂಡರ್‪ನಲ್ಲಿ ಈ ಎರಡೂ ಸಾಮಾಗ್ರಿಗಳನ್ನು ಹಾಕಿ ಕೊಂಚ ನೀರಿನೊಂದಿಗೆ ನುಣ್ಣಗೆ ಕಡೆಯಿರಿ.

* ಈ ಮಿಶ್ರಣವನ್ನು ಸೋಸಿ ರಸವನ್ನು ಸಂಗ್ರಹಿಸಿ

ಕೊಬ್ಬು ಕರಗಿಸುವ ಜ್ಯೂಸ್ ತಯಾರಿಸುವ ವಿಧಾನ

ಕೊಬ್ಬು ಕರಗಿಸುವ ಜ್ಯೂಸ್ ತಯಾರಿಸುವ ವಿಧಾನ

* ಈ ರಸವನ್ನು ಎರಡು ಲೋಟವನ್ನಾಗಿಸಿ ದಿನದ ಬೆಳಗ್ಗಿನ ಉಪಾಹಾರವಾಗಿ ಸೇವಿಸಿ. ಬೇರೇನನ್ನೂ ಸೇವಿಸಬೇಡಿ.

* ಮುಂದಿನ ಎರಡು ತಿಂಗಳ ಕಾಲ ಈ ಪೇಯವೇ ನಿಮ್ಮ ಉಪಾಹಾರವಾಗಿರಲಿ.

 
English summary

Pineapple remedy for belly fat loss

Imagine you are trying to shop for clothes online and you notice that you are unable to find clothes in your size, as your belly is a little too big! It can be quite disappointing, right? Well, did you know that there is a rare pineapple remedy that can help you lose pounds, especially belly fat! Here is an exceptional pineapple remedy for belly fat; have a look!
Subscribe Newsletter