For Quick Alerts
ALLOW NOTIFICATIONS  
For Daily Alerts

ಉಸಿರಾಟ ತೊಂದರೆ: ಇದು ಅಸ್ತಮಾವೇ ಅಥವಾ ಬೇರೆ ಏನಾದರೂ ಕಾಯಿಲೆಯೇ?

By Arshad
|

ಉಸಿರಾಟದಲ್ಲಿ ತೊಂದರೆ, ಎದೆ ಬಿಗಿಯಾದಂತೆ ಅನ್ನಿಸುವುದು, ಉಸಿರಾಡುವಾಗ ಸೀಟಿ ಹೊಡೆದಂತಾಗುವುದು ಅಥವಾ ಗೂರುಬ್ಬಸ (wheezing) ಕಂಡುಬರುತ್ತಿದೆಯೇ? ಇವೆಲ್ಲಾ ಅಸ್ತಮಾ ರೋಗದ ಲಕ್ಷಣಗಳು. ಶ್ವಾಸಕೋಶಗಳ ಒಳಗಿನ ನಾಳಗಳಲ್ಲಿ ಸೋಂಕು ಉಂಟಾದಾಗ ಈ ನಾಳಗಳ ಒಳವಿಸ್ತಾರ ಕಿರಿದಾಗಿ ಇದರೊಳಗಿನಿಂದ ವಾಯು ದಾಟಲು ಹೆಚ್ಚು ಕಷ್ಟಪಡಬೇಕಾಗುತ್ತದೆ.

ಕೆಲವೊಮ್ಮೆ ಇಷ್ಟು ಕಿರಿದಾಗುತ್ತವೆಂದರೆ ಇದರ ಮೂಲಕ ಹಾದು ಹೋಗುವ ಗಾಳಿಯಿಂದ ಪಡೆಯುವ ಆಮ್ಲಜನಕ ಸಾಕಾಗದೇ ಸುಸ್ತು ಎದುರಾಗುತ್ತದೆ. ಇದನ್ನೇ ಅಸ್ತಮಾಘಾತ Asthma attack ಎಂದು ಕರೆಯುತ್ತಾರೆ. ಅಷ್ಟಕ್ಕೂ ಶ್ವಾಸನಾಳಗಳು ಕಿರಿದಾಗಲು ಕಾರಣವೇನು? ಇದೊಂದು ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆ. ಗಾಳಿಯ ಮೂಲಕ ಎದುರಾಗುವ ಅತಿಸೂಕ್ಷ್ಮ ಬ್ಯಾಕ್ಟೀರಿಯಾ, ಕಣಗಳು ಹಾಗೂ ಇತರ ಅಲರ್ಜಿಕಾರಕ ಕಣಗಳು ಉರಿಸಿನ ಮೂಲಕ ಶ್ವಾಸಕೋಶವನ್ನು ತಲುಪಿದಾಗ ಶ್ವಾಸನಾಳಗಳ ಒಳಗೆ ಅಂಟಿಕೊಂಡು ಅಲರ್ಜಿಯಿಂದ ನಾಳ ಕಿರಿದಾಗುತ್ತದೆ. ಕೆಲವರಲ್ಲಿ ಇದು ತೀರಾ ಹೆಚ್ಚಾಗಿರುತ್ತದೆ, ಕೆಲವರಲ್ಲಿ ಕಡಿಮೆ. ಅಸ್ತಮಾ ರೋಗವನ್ನು ಸೋಲಿಸುವ ಪವರ್ ಫುಲ್ ಮನೆಮದ್ದುಗಳು

ಇದಕ್ಕೆ ವಾತಾವರಣದಲ್ಲಿರುವ ಸೂಕ್ಷ್ಮ ಕಣಗಳು ಮತ್ತು ಅನುವಂಶಿಕ ಗುಣಗಳು ಸಮಾನವಾಗಿ ಕಾರಣವಾಗಿವೆ. ಇಂದಿನ ಲೇಖನದಲ್ಲಿ ಅಸ್ತಮಾ ಏಕಾಗಿ ಬರುತ್ತದೆ ಎಂಬ ವಿಷಯದ ಮೇಲೆ ಹೆಚ್ಚಿನ ವಿವರಗಳನ್ನು ನೀಡಲಾಗಿದೆ. ಅಸ್ತಮಾ ರೋಗವನ್ನು ಸೋಲಿಸುವ ಯೋಗಾಸನಗಳು

ಕೆಲವು ಸಂದರ್ಭಗಳಲ್ಲಿ ರೋಗಿಗೆ ತನಗೆ ಅಸ್ತಮಾ ಇರುವುದೇ ಗೊತ್ತಿರುವುದಿಲ್ಲ. ಏಕೆಂದರೆ ಇದು ಅಲ್ಪವಾಗಿ ಆವರಿಸಿದ್ದು ಕೇವಲ ಹೆಚ್ಚಿನ ಉಸಿರಾಟದ ಅಗತ್ಯತೆ ಇದ್ದಾಗಲೇ ಇದರ ಇರುವಿನ ಅರಿವಾಗುತ್ತದೆ....

ನಗುವಾಗ ಕಾಡುವ ಕೆಮ್ಮು!

ನಗುವಾಗ ಕಾಡುವ ಕೆಮ್ಮು!

ಒಂದು ವೇಳೆ ನಿಮಗೆ ಅಸ್ತಮಾ ರೋಗ ಈಗಾಗಲೇ ಆವರಿಸಲು ಪ್ರಾರಂಭಿಸಿದ್ದರೆ ನಗುವಾಗ, ರಾತ್ರಿ ಹೊತ್ತು ಕೆಮ್ಮುವಾಗ ಅಥವಾ ವ್ಯಾಯಾಮದ ಅವಧಿಯಲ್ಲಿ ಅಗತ್ಯವೇ ಇಲ್ಲದೇ ಕೆಮ್ಮು ಬಂದರೆ ನಿಮಗೆ ಅಸ್ತಮಾ ಇರಬಹುದು. ಈ ಸ್ಥಿತಿಗೆ coughing fits ಎಂದೂ ಕರೆಯುತ್ತಾರೆ ಹಾಗೂ ಇವು ಸಹಾ ಅಸ್ತಮಾದ ಲಕ್ಷಣಗಳಾಗಿವೆ.

ಉಸಿರಾಡಲು ಕಷ್ಟಪಡಬೇಕಾಗುವುದು

ಉಸಿರಾಡಲು ಕಷ್ಟಪಡಬೇಕಾಗುವುದು

ಗಾಳಿಯಲ್ಲಿರುವ ಹಲವಾರು ಕಣಗಳು ಅಲರ್ಜಿಕಾರಕವಾಗಿ. ಈ ಕಣಗಳಿಗೆ allergens ಎಂದು ಕರೆಯುತ್ತಾರೆ. ಈ ಕಣಗಳು ಅಸ್ತಮಾಘಾತಕ್ಕೆ ಕಾರಣವಾಗಬಹುದು. ಒಂದು ವೇಳೆ ಪ್ರಾಣಿಗಳ ಜೊತೆಗೆ ಸಮಯ ಕಳೆದ ಬಳಿಕ ಉಸಿರಾಡಲು ತೊಂದರೆಯಾದರೆ, ಸತತವಾಗಿ ಗೂರುಬ್ಬಸ ಎದುರಾದರೆ, ಅಥವಾ ಕಣ್ಣುಗಳಲ್ಲಿ ಸತತವಾಗಿ ತುರಿಕೆ ಕಾಣಿಸಿಕೊಂಡರೆ ಇದೂ ಸಹಾ ನಿಮಗೆ ಅಸ್ತಮಾ ಇರಬಹುದು ಎಂದು ಸೂಚಿಸುತ್ತದೆ

ಕೆಲವು ಧೂಳಿನ, ಹೊಗೆಯ ಪ್ರಭಾವ

ಕೆಲವು ಧೂಳಿನ, ಹೊಗೆಯ ಪ್ರಭಾವ

ಒಂದು ವೇಳೆ ಅಗರಬತ್ತಿಯ ಹೊಗೆ, ಸಿಗರೇಟಿನ ಹೊಗೆ, ಗಾಳಿಯಲ್ಲಿನ ಧೂಳು, ಹೂವಿನ ಪರಾಗ, ಕೀಟಾನಾಶಕದ ಗಾಳಿ, ಏಸಿಯ ಶೀತಲ ಗಾಳಿ, ಒಣಹವೆ ಮೊದಲಾದ ಸಂದರ್ಭದಲ್ಲಿ ಉಸಿರಾಟ ಕಷ್ಟಕರವಾಗುತ್ತಿದೆ ಎನ್ನಿಸಿದರೆ ಇದು ಸಹಾ ಅಸ್ತಮಾ ಇರಬಹುದು ಎಂಬುದನ್ನು ತೋರಿಸುತ್ತದೆ. ಕೆಲವೊಮ್ಮೆ ಕೊಂಚ ವೇಗವಾಗಿ ಓಡಿದಾಗ ಅಥವಾ ವ್ಯಾಯಾಮದ ಏದುಸಿರು ಸಹಾ ಉಸಿರಾಟ ಕಷ್ಟಕರವಾಗಿಸಬಹುದು.

ಚಿಕ್ಕಂದಿನಿಂದಲೇ ಅಸ್ತಮಾ ಇದ್ದಿದ್ದರೆ

ಚಿಕ್ಕಂದಿನಿಂದಲೇ ಅಸ್ತಮಾ ಇದ್ದಿದ್ದರೆ

ಒಂದು ವೇಳೆ ಚಿಕ್ಕಂದಿನಲ್ಲಿ ಅಸ್ತಮಾ ತೊಂದರೆ ಇದ್ದಿದ್ದರೆ ಈ ತೊಂದರೆ ಹಿರಿಯರಾದ ಬಳಿಕವೂ ಕಾಡಬಹುದು.

ಅಸ್ತಮಾಘಾತ ಎದುರಾದರೆ ಏನು ಮಾಡಬೇಕು?

ಅಸ್ತಮಾಘಾತ ಎದುರಾದರೆ ಏನು ಮಾಡಬೇಕು?

ಅಸ್ತಮಾಕ್ಕೂ ಶ್ವಾಸಸಂಬಂಧಿ ತೊಂದರೆಗಳಿಗೂ ಸಮಾನವಾದ ಲಕ್ಷಣಗಳಿರುವುದರಿಂದ ಇವರೆಡನ್ನು ಪ್ರತ್ಯೇಕಿಸುವುದು ವೈದ್ಯರಿಗೆ ಸವಾಲಿನ ಕೆಲಸವಾಗಿದೆ. ಎದೆ ಬಿಗಿಯುವುದು ಅಥವಾ ಉಸಿರು ಕಟ್ಟಿಕೊಳ್ಳುವುದು ಹೃದಯಾಘಾತದ ಲಕ್ಷಣವೂ ಆಗಿದೆ. ಈ ಸಮಯದಲ್ಲಿ ರೋಗಿ ತಕ್ಷಣವೇ ಅಂಗಾತವಾಗಿ ಮಲಗಿ ಆದಷ್ಟು ಬೇಗನೇ ವೈದ್ಯರ ನೆರವನ್ನು ಪಡೆಯಬೇಕು. ಯಮಯಾತನೆ ನೀಡುವ ಶ್ವಾಸನಾಳದ ರೋಗಕ್ಕೆ ಪರಿಹಾರವೇನು?

English summary

Is Your Breathing Trouble Asthma Or Something Worse?

Asthma attacks are on the rise, mainly due to our enthusiasm for antibacterials and cleanliness that have oversterilized our environment. This has left our bodies and lungs less resilient to minor irritants. New research has suggested that asthma occurs from a mix of both environmental and genetic factors. So In This article is all about the symptoms of asthma attack that you need to know about.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more