For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಲು, ಒಂದು ಕಟ್ಟು 'ಪುದೀನ ಸೊಪ್ಪು' ಸಾಕು!

By Arshad
|

ಚಟ್ನಿಯಲ್ಲಿ ಹಾಗೂ ಕೆಲವು ಮಸಾಲೆಗಳಲ್ಲಿ ರುಚಿಗಾಗಿ ಬಳಸಲಾಗುವ ಪುದೀನ ಎಲೆಗಳು ಕೇವಲ ರುಚಿ ಪರಿಮಳ ನೀಡುವಲ್ಲಿ ಮಾತ್ರವಲ್ಲ, ಬದಲಿಗೆ ಹಲವಾರು ಔಷಧೀಯ ಗುಣಗಳಿಂದಲೂ ಸಮೃದ್ಧವಾಗಿದೆ. ನಿಯಮಿತವಾದ ಸೇವನೆಯಿಂದ ಆರೋಗ್ಯ ವೃದ್ಧಿಸುವುದು ಹಾಗೂ ಕೆಲವಾರು ರೋಗಗಳಿಗೆ ಸಿದ್ಧೌಷಧಿಯಂತೆಯೂ ಕೆಲಸ ಮಾಡುತ್ತದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಆಯುರ್ವೇದವೂ ಪುದೀನಾವನ್ನು ಹಲವಾರು ಔಷಧಿಗಳಲ್ಲಿ ಪ್ರಮುಖವಾದ ಪರಿಕರವಾಗಿ ಬಳಸುತ್ತಾ ಬಂದಿದೆ.

ಪುದೀನ ಸೊಪ್ಪಿನ ಚಟ್ನಿ ಸೇವಿಸಿದರೆ-ಆರೋಗ್ಯಕ್ಕೆ ದುಪ್ಪಟ್ಟು ಲಾಭ

ಇದರ ಪರಿಮಳ ಆಹ್ಲಾದಕರವಾಗಿದ್ದರೂ ರುಚಿ ಮಾತ್ರ ಕೊಂಚವೇ ಒಗರಾಗಿರುವುದರಿಂದ ಈ ಎಲೆಗಳನ್ನು ನೇರವಾಗಿ ತಿನ್ನಲು ಹೆಚ್ಚಿನವರು ಇಷ್ಟಪಡುವುದಿಲ್ಲ. ಆದರೆ ಕೊಂಚಕೊಂಚವಾಗಿ ತಿನ್ನುತ್ತಾ ಬಂದರೆ ಕ್ರಮೇಣ ಇದು ಇಷ್ಟವಾಗತೊಡಗುತ್ತದೆ. ಈ ಎಲೆಗಳಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿವೆ. ಅಲ್ಲದೇ ಹೆಚ್ಚಿನ ಕರಗದ ನಾರು ಸಹಾ ಇದೆ. ಪುದೀನ ಎಲೆಗಳು ಜೀರ್ಣಕ್ರಿಯೆಯಲ್ಲಿ ಅತಿ ಹೆಚ್ಚು ಸಹಕಾರ ನೀಡುತ್ತದೆ ಹಾಗೂ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ನೆರವಾಗುತ್ತದೆ. ಹೊಟ್ಟೆಯಲ್ಲಿ ಆಮ್ಲೀಯತೆಯಾಗುವುದನ್ನು ತಡೆದು ಅಪಾನವಾಯು, ಮಲಬದ್ಧತೆ, ಹೊಟ್ಟೆಯುರಿ, ಹೊಟ್ಟೆಯುಬ್ಬರಿಕೆ ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ಈ ಗುಣಗಳ ಜೊತೆಗೆ ಇದು ತೂಕವನ್ನು ಇಳಿಸಲೂ ನೆರವಾಗುತ್ತದೆ.

ನಿಮಗೆ ತಿಳಿಯದ ಪುದೀನಾ ಜ್ಯೂಸ್‌ನ 8 ಆರೋಗ್ಯ ಪ್ರಯೋಜನಗಳು!

ಈ ಗುಣಗಳನ್ನು ಕಂಡುಕೊಂಡ ಹಲವು ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಆರೋಗ್ಯಕಾರಿಯಾಗಿಸಲು ಪುದೀನಾವನ್ನು ಬಳಸುತ್ತಿವೆ. ಮೌಥ್ ಫ್ರೆಶನರ್, ಚ್ಯೂಯಿಂಗ್ ಗಮ್, ಕ್ಯಾಂಡಿ, ಹಲ್ಲುಜ್ಜುವ ಪೇಸ್ಟ್ ಮೊದಲಾದ ದಿನಬಳಕೆಯ ವಸ್ತುಗಳಲ್ಲಿ ಪುದೀನಾ ಬಳಕೆಯಾಗುತ್ತಿದೆ. ತೂಕ ಇಳಿಕೆಯ ಹೊರತಾಗಿ ಪುದೀನಾ ಸೇವನೆಯಿಂದ ವಾಕರಿಕೆ, ಶ್ವಾಸಸಂಬಂಧಿ ತೊಂದರೆ, ಖಿನ್ನತೆ, ಸುಸ್ತು, ಬಾಯಿಯ ದುರ್ವಾಸನೆ ಮೊದಲಾದ ತೊಂದರೆಗಳಿಗೂ ಇದು ಉತ್ತಮವಾಗಿದೆ. ಜೀರ್ಣಕ್ರಿಯೆ ಚುರುಕುಗೊಳಿಸುವ ಜೊತೆಗೇ ಕೊಬ್ಬನ್ನು ದಹಿಸಲೂ ಬಳಕೆಯಾಗುವ ಕಾರಣ ಪುದೀನ ತೂಕ ಇಳಿಸುವವರಿಗೂ ಉತ್ತಮ ಆಯ್ಕೆಯಾಗಿದೆ. ಇದನ್ನು ಸರಿಯಾಗಿ ಬಳಸುವ ಬಗೆ ಹೇಗೆ ಎಂದು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ....

ಪುದೀನ ಜ್ಯೂಸ್

ಪುದೀನ ಜ್ಯೂಸ್

*ತಲಾ ಒಂದು ಕಟ್ಟು ಪುದೀನ ಹಾಗೂ ಕೊತ್ತಂಬರಿ ಎಲೆಗಳನ್ನು ದಂಟುಗಳಿಂದ ಬೇರ್ಪಡಿಸಿ ಚೆನ್ನಾಗಿ ತೊಳೆಯಿರಿ.

*ಒಂದು ಲೋಟ ನೀರನ್ನು ಬ್ಲೆಂಡರಿನಲ್ಲಿ ಹಾಕಿ ಈ ಎಲೆಗಳನ್ನು ಬೆರೆಸಿ, ಚಿಟಿಕೆಯಷ್ಟು ಕಲ್ಲುಪ್ಪು ಮತ್ತು ಕಾಳುಮೆಣಸಿನ ಪುಡಿ ಬೆರೆಸಿ ಎಲ್ಲವನ್ನೂ ಚೆನ್ನಾಗಿ ಗೊಟಾಯಿಸಿ. *ಬಳಿಕ ಅರ್ಧ ಲಿಂಬೆಯ ರಸವನ್ನು ಬೆರೆಸಿ ಚೆನ್ನಾಗಿ ಕಲಕಿ.

*ಈ ಪೇಯವನ್ನು ಪ್ರತಿದಿನ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಿ. ಇದು ತೂಕ ಇಳಿಯಲು ನೆರವಾಗುತ್ತದೆ.

ಪುದೀನ ಟೀ

ಪುದೀನ ಟೀ

ಇದಕ್ಕಾಗಿ ಒಣ ಪುದೀನ ಎಲೆಗಳನ್ನೂ ಬಳಬಹುದು ಅಥವಾ ತಾಜಾ ಎಲೆಗಳನ್ನೂ ಬಳಸಬಹುದು. ತಾಜಾ ಎಲೆಗಳ ಟೀ ಮಾಡಲು ಕೆಲವು ಪುದೀನ ಎಲೆಗಳನ್ನು ಕೊಂಚ ಕಿವುಚಿ ಕುದಿಯುತ್ತಿರುವ ನೀರಿಗೆ ಹಾಕಿ ಒಂದು ನಿಮಿಷ ಕುದಿಸಿ. ಬಳಿಕ ಉರಿ ಆರಿಸಿ ಇನ್ನೊಂದು ನಿಮಿಷ ಹಾಗೇ ಇರಿಸಿ. ನಂತರ ಈ ನೀರನ್ನು ಸೋಸಿ ಬಿಸಿಬಿಸಿ ಇದ್ದಂತೆಯೇ ಕುಡಿಯಿರಿ.

ಒಣ ಎಲೆಗಳ ಪುಡಿಯಿಂದ ಟೀ ತಯಾರಿಸುವುದಾದರೆ

ಒಣ ಎಲೆಗಳ ಪುಡಿಯಿಂದ ಟೀ ತಯಾರಿಸುವುದಾದರೆ

ಒಂದು ವೇಳೆ ಒಣ ಎಲೆಗಳ ಪುಡಿಯಿಂದ ಟೀ ತಯಾರಿಸುವುದಾದರೆ ಒಂದು ಚಿಕ್ಕ ಚಮಚದಷ್ಟು ಒಣಪುಡಿಯನ್ನು ಕುದಿಯುತ್ತಿರುವ ನೀರಿಗೆ ಬೆರೆಸಿ ಉರಿ ಆರಿಸಿ. ಸುಮಾರು ಹತ್ತು ನಿಮಿಷಗಳ ಬಳಿಕ ನೀರನ್ನು ಸೋಸಿ ಕುಡಿಯಿರಿ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆ ಸುಮಾರು ಎರಡರಿಂದ ಮೂರು ಕಪ್ ನಷ್ಟು ಕುಡಿಯಿರಿ.

ಪುದೀನಾ ಎಲೆಗಳ ಸೇವನೆ ಆರೋಗ್ಯಕ್ಕೆ ಅತ್ಯುತ್ತಮ ಹೇಗೆ?

ಆಹಾರದಲ್ಲಿ ಪುದೀನ ಸೇರಿಸಿ

ಆಹಾರದಲ್ಲಿ ಪುದೀನ ಸೇರಿಸಿ

ಕೆಲವು ತಾಜಾ ಪುದೀನ ಎಲೆಗಳನ್ನು ನಿಮ್ಮ ನಿತ್ಯದ ಸಾಲಾಡ್ ನೊಂದಿಗೆ ಬೆರೆಸಿ ಹಸಿಯಾಗಿ ಸೇವಿಸಿ. ಇದರಿಂದ ಹೊಟ್ಟೆಯುಬ್ಬರಿಕೆಯಿಂದ ರಕ್ಷಣೆ ದೊರಕುವುದು ಮಾತ್ರವಲ್ಲ, ತೂಕ ಇಳಿಯಲೂ ನೆರವಾಗುತ್ತದೆ. ಪುದೀನ ಸೇವನೆಯ ಜೊತೆಗೇ ಕೊಬ್ಬು ಹೆಚ್ಚಿಸುವ, ಕ್ಯಾಲೋರಿಗಳು ಹೆಚ್ಚಿರುವ ಆಹಾರಗಳನ್ನು ಸೇವಿಸದೇ ಇರುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ನಿತ್ಯವೂ ಅರ್ಧ ಗಂಟೆಯಾದರೂ ನಡೆದಾಡುವುದು ತೂಕ ಇಳಿಯಲು ಅಗತ್ಯವಾಗಿದೆ.

ಪುದೀನ ಸೊಪ್ಪಿನ ಚಟ್ನಿ ಸೇವಿಸಿದರೆ-ಆರೋಗ್ಯಕ್ಕೆ ದುಪ್ಪಟ್ಟು ಲಾಭ

English summary

How To Use Pudina (Mint) Leaves For Weight Loss

Mint leaves or commonly known as pudina is one of the widely used aromatic plants. Pudina is not just used for culinary purposes but it is widely known for its innumerable health benefits and medicinal properties. Pudina is being used as one of the chief ingredients even in ayurveda since time immemorial for the preparation of different ayurvedic medications. It might give you that bitter taste but slowly when you consume it for a long period of time you will tend to like the taste.
X
Desktop Bottom Promotion