ದಿನಾ ಒಂದೆರಡು ಪಿಸ್ತಾ, ಗೋಡಂಬಿ, ಬಾದಾಮಿ ತಿಂದರೆ ನೆನಪಿನ ಶಕ್ತಿ ಹೆಚ್ಚುತ್ತದೆ

Posted By: Deepu
Subscribe to Boldsky

ವಯಸ್ಸಾಗುತ್ತಾ ಹೋದಂತೆ ನೆನಪಿನ ಶಕ್ತಿ ಕೂಡ ಕಡಿಮೆಯಾಗುತ್ತಾ ಹೋಗುವುದು ಎಂದು ಹೇಳಲಾಗುತ್ತದೆ. ಆದರೆ ಕೆಲವರಲ್ಲಿ ನೆನಪಿನ ಶಕ್ತಿಯು ತುಂಬಾ ಕಡಿಮೆ ಇರುತ್ತದೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ನೆನಪಿನ ಶಕ್ತಿ ಕಡಿಮೆಯಾದರೆ ಅಂತಹ ವ್ಯಕ್ತಿಗೆ ಜೀವನ ಕೂಡ ಕಷ್ಟ. ಆದರೆ ನೆನಪಿನ ಶಕ್ತಿ ಹೆಚ್ಚಿಸಲು ಕೆಲವೊಂದು ವಿಧಾನಗಳು ಇವೆ. ಅಧ್ಯಯನಗಳ ಪ್ರಕಾರ ಪ್ರತಿನಿತ್ಯ ಕಡಲೆಬೀಜ ಮತ್ತು ಪಿಸ್ತಾ ಸೇವನೆ ಮಾಡುವುದರಿಂದ ನೆನಪಿನ ಶಕ್ತಿಯು ಹೆಚ್ಚಾಗುವುದಂತೆ. ಕಡಲೆಬೀಜ ಮತ್ತು ಪಿಸ್ತಾವು ಮೆದುಳಿನ ಆವರ್ತನಗಳಿಗೆ ಶಕ್ತಿ ನೀಡಿ ನೆನೆಪಿನ ಶಕ್ತಿ ಹೆಚ್ಚು ಮಾಡುವುದು.

ಬೀಜಗಳಿಂದ ಹಲವಾರು ರೀತಿಯ ಲಾಭಗಳು ಇವೆ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲ ಹೃದಯವನ್ನು ರಕ್ಷಿಸಿ, ಕ್ಯಾನ್ಸರ್ ವಿರುದ್ಧ ಹೋರಾಡಿ, ಉರಿಯೂತ ಕಡಿಮೆ ಮಾಡುವುದು ಮತ್ತು ವಯಸ್ಸಾಗುವ ಲಕ್ಷಣಗಳನ್ನು ನಿಧಾನಗೊಳಿಸುವುದು. ಕ್ಯಾಲಿಫೋರ್ನಿಯಾದ ಲೊಮಾ ಲಿಂಡಾ ಯೂನಿವರ್ಸಿಟಿಯ ಅಧ್ಯಯನ ತಂಡವು ದಿನನಿತ್ಯ ಆರು ವಿಧದ ಬೀಜಗಳಾದ ಬಾದಾಮಿ, ಗೋಡಂಬಿ, ಕಡಲೆಕಾಯಿ, ಪಿಸ್ತಾ, ಪೆಕನ್ ಮತ್ತು ಆಕ್ರೋಟ್ ತಿನ್ನುವದಿಂದ ಮೆದುಳಿನ ಚಟುವಟಿಕೆಗಳು ಉತ್ತಮಗೊಳ್ಳುತ್ತದೆ ಎಂದು ಸಾಬೀತಾಗಿದೆ. ಎಲೆಕ್ಟ್ರೋಎನ್ಸೆಫಾಲೋಗ್ರಾಮ್ ಗಳನ್ನು ಬಳಸಿಕೊಂಡು ಭಾಗವಹಿಸಿದವರ ಮೆದುಳಿನ ತರಂಗಗಳ ಸಂಕೇತವನ್ನು ನೋಡಲಾಯಿತು. ಪಿಸ್ತಾ ತಿನ್ನುವುದರಿಂದ ಅತೀ ಹೆಚ್ಚಿನ ಮೆದುಳಿನ ತರಂಗವು ಹೆಚ್ಚು ಸಕ್ರಿಯವಾಗಿದೆ ಎಂದು ತಿಳಿದುಬಂತು. ಇದು ಅರಿವಿನ ಪ್ರಕ್ರಿಯೆ, ಮಾಹಿತಿ ಉಳಿಸಿಕೊಳ್ಳುವುದು, ಕಲಿಕೆ, ಮಲಗುವ ವೇಳೆ ಕಣ್ಣಿನ ಚಲನೆಗೆ ಮಹತ್ವದ್ದಾಗಿತ್ತು.

ಮೆದುಳು ಸದಾ ಚುರುಕಾಗಿರಲು, ಒಂದಿಷ್ಟು ಸರಳ ಟ್ರಿಕ್ಸ್

ಸಾಮಾನ್ಯವಾಗಿ ದ್ವಿದಳ ಧಾನ್ಯವಾಗಿರುವ ಕಡಲೆಬೀಜವು ಅತ್ಯಧಿಕ ಡೆಲ್ಟಾ ಪ್ರಕ್ರಿಯೆ ನಿರ್ಮಾಣ ಮಾಡಿದೆ. ಇದು ಆರೋಗ್ಯಕರ ಪ್ರತಿರೋಧಕ ಶಕ್ತಿ, ನೈಸರ್ಗಿಕ ಶಮನ ಮತ್ತು ದೀರ್ಘ ನಿದ್ರೆಗೆ ತುಂಬಾ ಒಳ್ಳೆಯದು. ಬೀಜಗಳು ಮೆದುಳಿನ ಶಕ್ತಿಗೆ ಮಾತ್ರವಲ್ಲದೆ ದೇಹದ ಇತರ ಕೆಲವೊಂದು ಭಾಗಗಳಿಗೂ ತುಂಬಾ ಪರಿಣಾಮಕಾರಿ ಎಂದು ಈ ಅಧ್ಯಯನಗಳು ಕಂಡುಕೊಂಡಿವೆ. ಕೊರ್ಟಿಕಲ್ ಕಾರ್ಯಕ್ಕೆ ಸಂಬಂಧಿಸಿದ ನೆತ್ತಿಯ ಸುಮಾರು ಒಂಭತ್ತು ಭಾಗಗಳಲ್ಲಿ ಇಇಜಿ ತರಂಗಗಳ ಕಾರ್ಯಚಟುವಟಿಕೆಯನ್ನು ದಾಖಲಿಸಲಾಯಿತು. ಎಲ್ಲಾ ಬೀಜಗಳನ್ನು ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳಿವೆ. ಇವೆಲ್ಲವುಗಳಲ್ಲಿ ವಾಲ್ ನಟ್ಸ್ ಹೆಚ್ಚಿನ ಆ್ಯಂಟಿಆಕ್ಸಿಡೆಂಟ್ ಗಳನ್ನು ಒಳಗೊಂಡಿದೆ ಎಂದು ಅಧ್ಯಯನದಿಂದ ತಿಳಿಯಲಾಗಿದೆ. ಯೂನಿವರ್ಸಿಟಿಯ ಅಸೋಸಿಯೇಟ್ ಡೀನ್ ಲೀ ಬೆರ್ಕ್ ಈ ಅಧ್ಯಯನವನ್ನು ನಡೆಸಿದ್ದಾರೆ. ಈ ವರದಿಯು ಇತ್ತೀಚೆಗೆ ಫಸೆಬ್ ಜರ್ನಲ್ ನಲ್ಲಿ ಪ್ರಕಟಗೊಂಡಿದೆ. ಪಿಸ್ತಾದಿಂದ ಆಗುವ ಇತರ ಕೆಲವು ಲಾಭಗಳ ಬಗ್ಗೆ ತಿಳಿಯಿರಿ...

ಹೃದಯಕ್ಕೆ ಒಳ್ಳೆಯದು

ಹೃದಯಕ್ಕೆ ಒಳ್ಳೆಯದು

ಪಿಸ್ತಾವು ಹೃದಯಕ್ಕೆ ತುಂಬಾ ಒಳ್ಳೆಯದು. ಪಿಸ್ತಾದಲ್ಲಿ ಆ್ಯಂಟಿಆಕ್ಸಿಡೆಂಟ್, ಫೈಟೊಸ್ಟೆರಾಲ್ಗಳು ಮತ್ತು ಅಪರ್ಯಾಪ್ತ ಕೊಬ್ಬಿನಾಮ್ಲಗಳು (ಪಾಲಿಅನ್ಸಾಚುರೇಟೆಡ್ ಮತ್ತು ಮಾನ್ಆನ್ಸುಟ್ಯೂರೇಶನ್ ಕೊಬ್ಬಿನ ಆಮ್ಲಗಳು) ಸೇರಿವೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯವನ್ನು ಆರೋಗ್ಯಕರವಾಗಿಡುತ್ತದೆ.

ಮಧುಮೇಹ ನಿಯಂತ್ರಣದಲ್ಲಿಡಲು

ಮಧುಮೇಹ ನಿಯಂತ್ರಣದಲ್ಲಿಡಲು

ಪಿಸ್ತಾದಲ್ಲಿ ಉನ್ನತ ಮಟ್ಟ ಆ್ಯಂಟಿಆಕ್ಸಿಡೆಂಟ್ ಗುಣಗಳು ಇವೆ. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗ್ಲೈಕೇಶನ್ ಕ್ರಿಯೆಯನ್ನು ತಗ್ಗಿಸಿ ಮಧುಮೇಹವನ್ನು ನಿಯಂತ್ರಿಸಲು ನೆರವಾಗುವುದು.

ಅಕ್ಷಿಪಟಲದ ಕಾಯಿಲೆ ನಿಯಂತ್ರಣಕ್ಕೆ ನೆರವಾಗುವುದು

ಅಕ್ಷಿಪಟಲದ ಕಾಯಿಲೆ ನಿಯಂತ್ರಣಕ್ಕೆ ನೆರವಾಗುವುದು

ಪಿಸ್ತಾದಲ್ಲಿ ಆ್ಯಂಟಿಆಕ್ಸಿಡೆಂಟ್ ಗಳಾದ ಲುಟೇನ್ ಮತ್ತು ಝೀಕ್ಸಾಂಥಿನ್ ಲಭ್ಯವಿದೆ. ಪಿಸ್ತಾವನ್ನು ದಿನನಿತ್ಯ ಸೇವನೆ ಮಾಡಿದರೆ ವಯಸ್ಸಾಗುತ್ತಾ ಇರುವಂತೆ ಬರುವಂತಹ ಅಕ್ಷಿಪಟಲದ ಸಮಸ್ಯೆಯನ್ನು ನಿವಾರಣೆ ಮಾಡಬಹುದು. ಪಿಸ್ತಾವನ್ನು ತಿಂಡಿಯಾಗಿ ಅಥವಾ ತರಕಾರಿಗಳ ಜತೆಗೆ ಸೇವನೆ ಮಾಡಬಹುದು. ಇನ್ನೂ ಕೆಲವೊಂದು ಆಹಾರಗಳು ಮೆದುಳಿನ ಶಕ್ತಿ ಹೆಚ್ಚಿಸುವಲ್ಲಿ ತುಂಬಾ ಸಹಕಾರಿ ಮುಂದೆ ಓದಿ...

ವಾಲ್ ನಟ್ಸ್

ವಾಲ್ ನಟ್ಸ್

ವಾಲ್ ನಟ್ಸ್ ನಲ್ಲಿರುವ ಪಾಲಿಫೀನಾಲ್ ಗಳು ಮೆದುಳಿನಲ್ಲಿ ನರಕೋಶಗಳ ಮಧ್ಯೆ ಸಂಪರ್ಕವನ್ನು ಸುಧಾರಿಸುತ್ತದೆ. ನೀವು ದಿನದಲ್ಲಿ ಕೆಲವೊಂದು ವಾಲ್ ನಟ್ಸ್ ಗಳನ್ನು ತಿಂದರೆ ನಿಮ್ಮ ಮೆದುಳಿನ ಶಕ್ತಿ ಶೇ.19ರಷ್ಟು ಹೆಚ್ಚಾಗುತ್ತದೆ.

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳು

ಈ ಬೀಜಗಳಲ್ಲಿ ಟ್ರಿಪ್ಟೊಫಾನ್ ಎನ್ನುವ ಅಮಿನೋ ಆ್ಯಸಿಡ್ ಸಮೃದ್ಧವಾಗಿದೆ. ಇದು ನರಪೇಕ್ಷಕವು ಸರಿಯಾದ ರೀತಿಯಲ್ಲಿ ಕೆಲಸ ಮಾಡಿ ಸಾಮಾಜಿಕ ಆತಂಕ ಕಡಿಮೆ ಮಾಡಲು ಅಗತ್ಯವಿದೆ.

ಸಾಧ್ಯವಾದಷ್ಟು ಒಣ ಹಣ್ಣುಗಳನ್ನು ಸೇವಿಸಿ

ಸಾಧ್ಯವಾದಷ್ಟು ಒಣ ಹಣ್ಣುಗಳನ್ನು ಸೇವಿಸಿ

ವಾಲ್‍ನಟ್‍ಗಳು, ಬಾದಾಮಿ ಬೀಜಗಳು ಮತ್ತು ಹಝೆಲ್‍ನಟ್‍ಗಳಂತಹ ಒಣಹಣ್ಣುಗಳು ನಿಮ್ಮ ಸ್ಮರಣೆ ಶಕ್ತಿ ಮತ್ತು ಏಕಾಗ್ರತೆಗಳನ್ನು ಸುಧಾರಿಸಲು ತಮ್ಮದೆ ಆದ ಕೊಡುಗೆಯನ್ನು ನೀಡುತ್ತವೆ. ಇವುಗಳಲ್ಲಿರುವ ಒಮೆಗಾ-3 ಕೊಬ್ಬಿನ ಆಮ್ಲಗಳು ಮತ್ತು ಪ್ರೊಟೀನ್‍ಗಳು ನಿಮ್ಮ ಮೆದುಳಿನ ಕೋಶಗಳನ್ನು ಲವಲವಿಕೆಯಿಂದ ಇರುವಂತೆ ಮಾಡುತ್ತವೆ. ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಒಣ ಹಣ್ಣುಗಳು ಹೇಳಿ ಮಾಡಿಸಿದಂತಹ ಆಹಾರ ಪದಾರ್ಥಗಳಾಗಿವೆ.

ದಿನಕ್ಕೊಂದು ಕಪ್ ಪುದೀನಾ ಚಹಾ ಕುಡಿಯಿರಿ

ದಿನಕ್ಕೊಂದು ಕಪ್ ಪುದೀನಾ ಚಹಾ ಕುಡಿಯಿರಿ

ಪುದೀನಾ ತಾಜಾ ಪುದೀನಾದ ಸುವಾಸನೆಯು ಪ್ರಚೋದಕದಂತೆ ಕೆಲಸ ಮಾಡಿ ಜಾಗೃತಾವಸ್ಥೆ ಮತ್ತು ಮೆದುಳಿನ ಕ್ರಿಯೆಯನ್ನು ಉತ್ತಮ ಪಡಿಸುತ್ತದೆ. ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ದಿನದಲ್ಲಿ ಒಂದು ಕಪ್ ಪುದೀನಾ ಚಹಾ ಕುಡಿಯಿರಿ.

ತಯಾರಿಸುವ ವಿಧಾನ

ಸುಮಾರು ನಾಲ್ಕು ಲೋಟ ಕುದಿಯುವ ನೀರಿಗೆ ಎರಡು ದೊಡ್ಡಚಮಚ ಒಣ ಎಲೆಗಳನ್ನು ಸೇರಿಸಿ ಸುಮಾರು ಇಪ್ಪತ್ತು ನಿಮಿಷಗಳವರೆಗೆ ಹಾಗೇ ಬಿಡಿ (ಮತ್ತೆ ಕುದಿಸಬಾರದು). ಬಳಿಕ ಸೋಸಿ ನೀರನ್ನು ಬಾಟಲಿಯಲ್ಲಿ ಶೇಖರಿಸಿ ಫ್ರಿಜ್‌ನಲ್ಲಿಡಬಹುದು. ಕುಡಿಯುವ ಅಗತ್ಯವಿದ್ದಾಗ ಬಾಟಲಿ ಹೊರತೆಗೆದು ಮತ್ತೊಮ್ಮೆ ಬಿಸಿಮಾಡಿ ಸೇವಿಸಿ. ರುಚಿಗಾಗಿ ಕೆಲವು ತೊಟ್ಟು ಲಿಂಬೆರಸ ಮತ್ತು ಸಕ್ಕರೆ ಅಥವಾ ಕಲ್ಲುಸಕ್ಕರೆಯನ್ನೂ ಸೇರಿಸಬಹುದು.

ಬಸಲೆ ಹಾಗೂ ಪಾಲಕ್ ಸೊಪ್ಪನ್ನು ಹೆಚ್ಚು ಸೇವಿಸಿ

ಬಸಲೆ ಹಾಗೂ ಪಾಲಕ್ ಸೊಪ್ಪನ್ನು ಹೆಚ್ಚು ಸೇವಿಸಿ

ಬಸಲೆ ಹಾಗೂ ಪಾಲಕ್ ಏಕಾಗ್ರತೆಯನ್ನು ಹೆಚ್ಚಿಸುವುದರೊಂದಿಗೆ ಜ್ಞಾಪಕ ಶಕ್ತಿಯನ್ನು ಸುಧಾರಣೆ ಮಾಡುತ್ತದೆ. ಒಮೆಗಾ-3 ಕೊಬ್ಬಿನ ಆಮ್ಲವನ್ನು ಒಳಗೊಂಡಿರುವ ಬಸಲೆಯು ಮೆದುಳಿನ ಕಾರ್ಯಚಟುವಟಿಕೆಯನ್ನು ಉತ್ತಮಪಡಿಸುವಂತಹ ಹಲವಾರು ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ.

ಧಾನ್ಯಗಳು

ಧಾನ್ಯಗಳು

ಧಾನ್ಯಗಳು ಮೆದುಳಿನ ಆರೋಗ್ಯಕ್ಕೆ ಬೇಕಾಗುವ ಅಸಂಖ್ಯಾತ ಪೋಷಕಾಂಶಗಳು ದೊರೆಯುತ್ತವೆ. ಇವು ನಾರಿನಂಶ, ಸಂಕೀರ್ಣವಾದ ಕಾರ್ಬೊಹೈಡ್ರೇಟ್‍ಗಳು ಮತ್ತು ಒಮೆಗಾ-3 ಕೊಬ್ಬಿನ ಆಮ್ಲಗಳನ್ನು ಯಥೇಚ್ಛವಾಗಿ ಹೊಂದಿರುತ್ತವೆ. ಇದರ ಜೊತೆಗೆ ಇವುಗಳಲ್ಲಿ ವಿಟಮಿನ್ ಬಿ ಸಹ ಅಧಿಕ ಪ್ರಮಾಣದಲ್ಲಿರುತ್ತವೆ. ಇವು ಮೆದುಳಿಗೆ ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತವೆ.

ಬಾದಾಮಿ

ಬಾದಾಮಿ

ಬಾದಾಮಿಯಲ್ಲಿರುವಂತಹ ಪ್ರೋಟೀನ್‌ಗಳು ಮೆದುಳಿಗೆ ತುಂಬಾ ಒಳ್ಳೆಯದೆಂದು ಸಾಬೀತಾಗಿದೆ. ಇದು ಮೆದುಳಿಗೆ ಶಕ್ತಿಯನ್ನು ಒದಗಿಸುವುದು ಮಾತ್ರವಲ್ಲದೆ ಮೆದುಳಿಗೆ ಆಗಿರುವಂತಹ ಸಣ್ಣಪುಟ್ಟ ತೊಂದರೆಗಳನ್ನು ಇದು ನಿವಾರಿಸುತ್ತದೆ. ಇದು ಮೆದುಳಿನ ಜ್ಞಾನದ ಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ನಿರ್ಹಹಿಸುತ್ತದೆ. ನೆನಪಿನ ಶಕ್ತಿಯ ಸಾಮರ್ಥ್ಯವನ್ನು ವೃದ್ಧಿಸಲು ಇದು ನೆರವಾಗುವುದು, ಪ್ರತಿ ದಿನ ನೆನೆಸಿಟ್ಟ ಎರೆಡು-ಮೂರು ಬಾದಾಮಿಗಳನ್ನು ಸೇವಿಸಿ

ಚಾಕಲೇಟ್

ಚಾಕಲೇಟ್

ಚಾಕಲೇಟ್ ತಿಂದರೆ ಒಳ್ಳೆಯದಲ್ಲ ಎನ್ನುವ ಮಾತಿದೆ. ಆದರೆ ಗಾಢ ಬಣ್ಣದ ಚಾಕಲೇಟ್ ಅನ್ನು ತಿಂದರೆ ಅದು ಮೆದುಳಿಗೆ ರಕ್ತ ಸಂಚಲನೆಯಾಗುವುದನ್ನು ಹೆಚ್ಚಿಸುತ್ತದೆ. ಇದರಿಂದ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯು ವೃದ್ಧಿಯಾಗುವುದು. ಯಾವಾಗೊಲೊಮ್ಮೆ ಚಾಕಲೇಟ್ ತಿನ್ನುವ ಅಭ್ಯಾಸ ಮಾಡಿಕೊಳ್ಳಿ.

English summary

Have This Daily & Boost Your Memory

They say you tend to lose your memory as you age, but there are a certain group of people whose memory is not too good. Well, this could be due to several reasons. But is there a way out to boost your memory then? Well, yes. A new study had found that daily consumption of nuts such as peanuts and pistachios can strengthen brainwave frequencies associatedwith cognition, healing, learning, memory and other key brain functions. There are plenty of benefits of nuts. Apart from improving your cognition and memory, nuts also help in protecting the heart, fighting cancer, reducing inflammation and slowing the ageing process.