For Quick Alerts
ALLOW NOTIFICATIONS  
For Daily Alerts

ಮನೆಮದ್ದು: ಸಿಕ್ಕಾಪಟ್ಟೆ ಕೆಮ್ಮಿದ್ರೆ, ಈ 'ಮನೆಔಷಧ' ಮಾಡಿ ಕುಡಿಯಿರಿ!

By Manu
|

ಸಾಮಾನ್ಯವಾಗಿ ವಾತಾವರಣದ ಬದಲಾಣೆಯಿಂದಾಗಿ, ಕೆಮ್ಮು, ಶೀತ, ತಲೆನೋವು ಕಾಡುವುದು ಸಹಜ, ಅದರಲ್ಲೂ ಪದೇ ಪದೇ ಬರುತ್ತಿರುವಂತಹ ಕೆಮ್ಮಿನಿಂದ ನೆಮ್ಮದಿ ಹಾಳಾಗುವುದು ಖಚಿತ. ಯಾಕೆಂದರೆ ಯಾರೊಂದಿಗಾದರೂ ಮಾತನಾಡಲು ಆರಂಭಿಸಿದರೆ ಕೆಮ್ಮು ಕಾಣಿಸಿಕೊಳ್ಳುತ್ತದೆ. ಯಾವುದೇ ಕೆಲಸ ಮಾಡುವಾಗ ಕೆಮ್ಮು ಬರುತ್ತದೆ. ಮಲಗಿದರೆ ಸರಿಯಾಗಿ ನಿದ್ರೆ ಕೂಡ ಹಾಳಾದ ಕೆಮ್ಮಿನಿಂದ ಬರುವುದಿಲ್ಲ ಎನ್ನುವ ದೂರುಗಳು ಬರುತ್ತಾ ಇರುತ್ತದೆ.

ಮಧ್ಯರಾತ್ರಿ ಕಾಡುವ ಕೆಮ್ಮು, ಏನು ಮಾಡಬೇಕು?

ಕೆಮ್ಮಿಗೆ ಹಲವಾರು ಮದ್ದುಗಳು ಇವೆ. ಆದರೆ ಇದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಇರುತ್ತದೆ. ಕೆಲವೊಂದು ಸಿರಪ್‌ಗಳನ್ನು ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ಜಡತ್ವ ಮತ್ತು ನಿದ್ರೆಯ ಸಮಸ್ಯೆ ಬರಬಹುದು. ಇದರಿಂದ ಹೆಚ್ಚಿನವರು ಸಿರಪ್‌ ಸೇವನೆಯಿಂದ ದೂರ ಉಳಿಯುತ್ತಾರೆ. ಆದರೆ ಕೆಮ್ಮಿಗೆ ಕೆಲವೊಂದು ಮನೆಮದ್ದುಗಳು ಇವೆ. ಪ್ರತಿಯೊಂದು ಕಡೆಯು ನಿಮಗೆ ಕಿರಿಕಿರಿ ಉಂಟು ಮಾಡುವಂತಹ ಕೆಮ್ಮಿಗೆ ಒಳ್ಳೆಯ ಮನೆಮದ್ದನ್ನು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದು ಯಾವುದೆಂದು ಮುಂದೆ ಓದುತ್ತಾ ತಿಳಿಯಿರಿ....

ಜೇನುತುಪ್ಪ ಮತ್ತು ದಾಲ್ಚಿನ್ನಿಯ ಕಷಾಯ

ಜೇನುತುಪ್ಪ ಮತ್ತು ದಾಲ್ಚಿನ್ನಿಯ ಕಷಾಯ

ಸ್ವಲ್ಪ ಜೇನುತುಪ್ಪ ಮತ್ತು ದಾಲ್ಚಿನ್ನಿಯನ್ನು ಕೆಲವು ನಿಮಿಷಗಳ ಕಾಲ ಬೇಯಿಸಿದ ಬಳಿಕ ಒಲೆಯಿಂದ ಇಳಿಸಿ ಒಂದು ಲೋಟಕ್ಕೆ ಅರ್ಧ ಲಿಂಬೆಹಣ್ಣಿನ ರಸ ಸೇರಿಸಿ ಸಾಧ್ಯವಾದಷ್ಟು ಬಿಸಿಯಾಗಿರುವಾಗಲೇ ಕುಡಿಯುವ ಮೂಲಕ ಕೆಮ್ಮಿಗೆ ಮತ್ತು ಶೀತಕ್ಕೆ ಶೀಘ್ರ ಉಪಶಮನ ದೊರಕುತ್ತದೆ.

ಶೀತ, ಕೆಮ್ಮು ಉಪಟಳ ತಡೆಯುವ ಮನೆಮದ್ದು

ಶು೦ಠಿ, ಬೆಳ್ಳುಳ್ಳಿ, ಹಾಗೂ ಕರಿಮೆಣಸು

ಶು೦ಠಿ, ಬೆಳ್ಳುಳ್ಳಿ, ಹಾಗೂ ಕರಿಮೆಣಸು

ಜಜ್ಜಿದ ಶು೦ಠಿ, ಬೆಳ್ಳುಳ್ಳಿಯ ದಳಗಳು, ಹಾಗೂ ಸ್ವಲ್ಪ ಕರಿಮೆಣಸು ಅಥವಾ ಕಾಳುಮೆಣಸು - ಇವೆಲ್ಲವನ್ನೂ ಒ೦ದು ಲೋಟದಷ್ಟು ಕುದಿಯುತ್ತಿರುವ ನೀರಿನಲ್ಲಿ ಸೇರಿಸಿ ಚೆನ್ನಾಗಿ ಕುದಿಸಿ, ಸುಮಾರು 15 ನಿಮಿಷ ಬಿಟ್ಟು ಕುಡಿಯಿರಿ. ಉತ್ತಮ ಫಲಿತಾಂಶಕ್ಕಾಗಿ ಈ ಸಿರಪ್ ಅನ್ನು ದಿನಕ್ಕೆರಡು ಬಾರಿ ಸೇವಿಸಿರಿ

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ಶೀತ ಮತ್ತು ಕೆಮ್ಮಿನ ಮೂಲಕ ನಮ್ಮ ದೇಹದಿಂದ ಸಾಕಷ್ಟು ನೀರು ಹೊರಹರಿಯುತ್ತದೆ. ಇದಕ್ಕೂ ಮುಖ್ಯವಾಗಿ ವೈರಸ್ಸುಗಳ ವಿರುದ್ಧ ಸೆಣೆಸಲು ನಮ್ಮ ಬಿಳಿರಕ್ತಕಣಗಳಿಗೆ ಹೆಚ್ಚಿನ ನೀರು ಬೇಕು. ಆ ಕಾರಣ ಸಾಧ್ಯವಾದರೆ ಬಿಸಿನೀರು, ಇಲ್ಲದಿದ್ದರೆ ಉಗುರುಬೆಚ್ಚನೆಯ ನೀರನ್ನು ಸ್ವಲ್ಪಸ್ವಲ್ಪವಾಗಿ ಕುಡಿಯುತ್ತಲೇ ಇರುವುದು ಒಳ್ಳೆಯದು. ತಣ್ಣನೆಯ ಅಥವಾ ಐಸ್ ನೀರು ಸರ್ವಥಾ ಸಲ್ಲದು.

ಉಪ್ಪು+ ಬೆಳ್ಳುಳ್ಳಿ

ಉಪ್ಪು+ ಬೆಳ್ಳುಳ್ಳಿ

ಒಂದು ಲೋಟ ನೀರಿಗೆ ಕೆಲವು ಹರಳು ಉಪ್ಪು ಹಾಗೂ ಕೆಲವು ಎಸಳು ಬೆಳ್ಳುಳ್ಳಿಗಳನ್ನು ಜಜ್ಜಿ ಕುದಿಸಬೇಕು. ಸುಮಾರು ಐದು ನಿಮಿಷ ಕುದಿಸಿದ ಬಳಿಕ ಒಂದು ಚಮಚ ಅರಿಶಿನದ ಪುಡಿ ಸೇರಿಸಿ ಸೋಸಿದ ನೀರನ್ನು ಸಾಧ್ಯವಾದಷ್ಟು ಬಿಸಿಯಿರುವಾಗಲೇ ಸೇವಿಸುವ ಮೂಲಕ ಕೆಮ್ಮು ಕಡಿಮೆಯಾಗುತ್ತದೆ.

ತುಳಸಿ+ಕರಿಮೆಣಸಲು

ತುಳಸಿ+ಕರಿಮೆಣಸಲು

ತುಳಸಿ, ಮತ್ತು ಕಾಳುಮೆಣಸನ್ನು ಅಥವಾ ಕರಿಮೆಣಸನ್ನು ಸಮಪ್ರಮಾಣದಲ್ಲಿ ಪುಡಿಮಾಡಿ, ಒಂದು ಇಂಚಿನಷ್ಟು ದೊಡ್ಡ ಶುಂಠಿಯನ್ನು ಜಜ್ಜಿ ಎಲ್ಲವನ್ನೂ ಒಂದು ಲೋಟ ನೀರಿನಲ್ಲಿ ಕುದಿಸಿ ಎಷ್ಟು ಸಾಧ್ಯವೋ ಅಷ್ಟು ಬಿಸಿಯಿರುವಾಗಲೇ ಕುಡಿಯುವ ಮೂಲಕ ಎಷ್ಟೇ ಗಟ್ಟಿಯಾದ ಕಫವಿದ್ದರೂ ಶೀಘ್ರ ಉಪಶಮನ ದೊರಕುತ್ತದೆ.

ಕ೦ದು ಸಕ್ಕರೆ ಹಾಗೂ ಬಿಸಿನೀರು

ಕ೦ದು ಸಕ್ಕರೆ ಹಾಗೂ ಬಿಸಿನೀರು

ಒ೦ದು ಲೋಟದಷ್ಟು ನೀರನ್ನು ಕುದಿಸಿರಿ. ನೀರು ಬಿಸಿಯಾಗಿರುವಾಗ, ಅದಕ್ಕೆ ಎರಡು ಚಮಚದಷ್ಟು ಕ೦ದು ಸಕ್ಕರೆಯನ್ನು ಸೇರಿಸಿರಿ. ಸಕ್ಕರೆಯು ನೀರಿನಲ್ಲಿ ಕರಗಲಿ. ನೀರು ಕೊಠಡಿಯ ಉಷ್ಣತೆಯನ್ನು ತಲುಪಿದಾಗ, ಕ೦ದು ಸಕ್ಕರೆಯುಕ್ತ ಈ ನೀರನ್ನು ನಿಧಾನವಾಗಿ ಕುಡಿಯಿರಿ.

ಜೇನುತುಪ್ಪ, ಈರುಳ್ಳಿ ರಸ, ಹಾಗೂ ಬೆಳ್ಳುಳ್ಳಿ

ಜೇನುತುಪ್ಪ, ಈರುಳ್ಳಿ ರಸ, ಹಾಗೂ ಬೆಳ್ಳುಳ್ಳಿ

ಬಟ್ಟಲೊ೦ದರಲ್ಲಿ ಸ್ವಲ್ಪ ಈರುಳ್ಳಿಯ ರಸವನ್ನು ತೆಗೆದುಕೊ೦ಡು ಬಿಸಿಮಾಡಿರಿ. ಉರಿಯನ್ನು ನ೦ದಿಸಿದ ಬಳಿಕ, ಬೆಳ್ಳುಳ್ಳಿಯ ಒ೦ದು ದಳವನ್ನು ಇದಕ್ಕೆ ಸೇರಿಸಿರಿ. ಈರುಳ್ಳಿಯ ರಸವು ಇನ್ನೂ ಬಿಸಿಯಾಗಿಯೇ ಇರುವ ವೇಳೆ, ಬೆಳ್ಳುಳ್ಳಿಯ ದಳವನ್ನು ಸ್ವಲ್ಪ ಹುರಿಯಿರಿ. ಈ ಮಿಶ್ರಣವನ್ನು ಒ೦ದು ಲೋಟದಷ್ಟು ಬಿಸಿನೀರಿಗೆ ಸೇರಿಸಿರಿ ಹಾಗೂ ಇದಕ್ಕೆ ಒ೦ದು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿರಿ. ಈಗ ಈ ನೈಸರ್ಗಿಕವಾದ ಕೆಮ್ಮಿನ ಸಿರಪ್ ಅನ್ನು ಹನಿಹನಿಯಾಗಿ ಸೇವಿಸಿರಿ.

ಬಾದಾಮಿ

ಬಾದಾಮಿ

ಕೆಮ್ಮು ನಿವಾರಿಸಲು ಬಲು ಪ್ರಾಚೀನವಾದ ವಿಧಾನವೆಂದರೆ ಬಾದಾಮಿ ಅರೆದು ಸೇವಿಸುವುದು. ಸುಮಾರು ಏಳೆಂಟು ಬಾದಾಮಿಗಳನ್ನು ರಾತ್ರಿಯಿಡೀ ತಣ್ಣೀರಿನಲ್ಲಿ ನೆನೆಸಿಡಿ. ಮರುದಿನ ಸಿಪ್ಪೆ ಸುಲಿದು ನುಣ್ಣಗೆ ಅರೆಯಿರಿ. ಇದಕ್ಕೆ ಕೊಂಚ ಬೆಣ್ಣೆ ಮತ್ತು ಸಕ್ಕರೆ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿ.

ಹಸಿಶುಂಠಿ

ಹಸಿಶುಂಠಿ

ಅರ್ಧ ದೊಡ್ಡಚಮಚ ಹಸಿಶುಂಠಿಯನ್ನು ಜಜ್ಜಿ ಕೊಂಚ ಕಾಳುಮೆಣಸಿನ ಪುಡಿ ಹಾಗೂ ಒಂದು ದೊಡ್ಡ ಚಮಚ ಜೇನು ಮತ್ತು ಕೊಂಚ ಶಿರ್ಕಾ ಸೇರಿಸಿ. ಇವೆಲ್ಲವನ್ನೂ ಸುಮಾರು ಎರಡರಿಂದ ಮೂರು ದೊಡ್ಡಚಮಚ ನೀರು ಬೆರೆಸಿ ಈ ಪ್ರಮಾಣವನ್ನು ದಿನದಲ್ಲಿ ಮೂರು ಹೊತ್ತು ಸೇವಿಸಿ ಖಾಲಿ ಮಾಡಬೇಕು. ಇದರ ಬ್ಯಾಕ್ಟೀರಿಯಾ ನಿರೋಧಕ ಗುಣ ಹಲವು ರೀತಿಯ ಸೋಂಕುಗಳಿಂದ ರಕ್ಷಣೆ ಒದಗಿಸುತ್ತದೆ. ಕೆಮ್ಮಿನ ಒಂದು ಅಡ್ಡಪರಿಣಾಮವಾಗಿರುವ ಸೋಂಕನ್ನು ಹಸಿಶುಂಠಿ ನಿವಾರಿಸುವ ಕಾರಣ ಕೆಮ್ಮಿಗೆ ಇದು ಅತ್ಯುತ್ತಮ ಪರಿಹಾರವಾಗಿದೆ.

ವೀಳ್ಯದೆಲೆ

ವೀಳ್ಯದೆಲೆ

ಕೆಲವು ವೀಳ್ಯದೆಲೆಗಳನ್ನು ನುಣ್ಣಗೆ ಅರೆದು ಎದೆಯ ಮೇಲೆ ಹಚ್ಚಿ. ಇದರಿಂದ ನಿಧಾನವಾಗಿ ಕೆಮ್ಮು ಕಡಿಮೆಯಾಗುತ್ತದೆ. ಕೆಮ್ಮು ಎದುರಾದರೆ ರೋಗಿ ಧೂಮಪಾನ, ಮಾಂಸಾಹಾರ, ಸಕ್ಕರೆ, ಟೀ, ಕಾಫಿ ಸಂಸ್ಕರಿತ ಆಹಾರಗಳಿಂದ ದೂರವಿದ್ದಷ್ಟೂ ಒಳ್ಳೆಯದು.

ಈರುಳ್ಳಿ

ಈರುಳ್ಳಿ

ಈರುಳ್ಳಿಯನ್ನು ಹೆಚ್ಚಿ ಜಜ್ಜಿ ಹಿಂಡಿ ರಸವನ್ನು ಸೇವಿಸುವ ಮೂಲಕ ಕೆಮ್ಮು ಕಡಿಮೆಯಾಗುವುದು ಮಾತ್ರವಲ್ಲ ಕಟ್ಟಿಕೊಂಡಿರುವ ಎದೆಯೂ ಸಡಿಲಗೊಳ್ಳುತ್ತದೆ. ಪ್ರತಿ ಆರು ಗಂಟೆಗಳಿಗೊಮ್ಮೆ ಒಂದರಿಂದ ಎರಡು ಚಿಕ್ಕ ಚಮಚ ಈರುಳ್ಳಿ ರಸವನ್ನು ಸಮಪ್ರಮಾಣದ ಜೇನಿನೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿ.

ಜೇನುತುಪ್ಪ ಹಾಗೂ ಗಿಡಮೂಲಿಕೆಯ ಚಹಾ

ಜೇನುತುಪ್ಪ ಹಾಗೂ ಗಿಡಮೂಲಿಕೆಯ ಚಹಾ

ದಿನಕ್ಕೆರಡು ಬಾರಿ ಎರಡು ಕಪ್ ಗಳಷ್ಟು ಜೇನುತುಪ್ಪ ಮಿಶ್ರಿತ ಗಿಡಮೂಲಿಕೆಯ ಚಹಾದ ಸೇವನೆಯು ಕೆಮ್ಮನ್ನು ಹೋಗಲಾಡಿಸಲು ನೆರವಾಗುತ್ತದೆ. ಚಹಾ ಸೇವನೆಯ ಬಳಿಕ ಗ೦ಟಲಲ್ಲು೦ಟಾಗಬಹುದಾದ ತುರಿಕೆಯ ಅನುಭವವನ್ನು ಹೋಗಲಾಡಿಸಿಕೊಳ್ಳಲು ಬಿಸಿನೀರನ್ನು ಕುಡಿಯಿರಿ.

ಉಪ್ಪು-ಬೆಳ್ಳುಳ್ಳಿ ಬೇಯಿಸಿದ ನೀರು ಕುಡಿಯಿರಿ

ಉಪ್ಪು-ಬೆಳ್ಳುಳ್ಳಿ ಬೇಯಿಸಿದ ನೀರು ಕುಡಿಯಿರಿ

ಒಂದು ಲೋಟ ನೀರಿಗೆ ಕೆಲವು ಹರಳು ಉಪ್ಪು ಹಾಗೂ ಕೆಲವು ಎಸಳು ಬೆಳ್ಳುಳ್ಳಿಗಳನ್ನು ಜಜ್ಜಿ ಕುದಿಸಬೇಕು. ಸುಮಾರು ಐದು ನಿಮಿಷ ಕುದಿಸಿದ ಬಳಿಕ ಒಂದು ಚಮಚ ಅರಿಶಿನದ ಪುಡಿ ಸೇರಿಸಿ ಸೋಸಿದ ನೀರನ್ನು ಸಾಧ್ಯವಾದಷ್ಟು ಬಿಸಿಯಿರುವಾಗಲೇ ಸೇವಿಸುವ ಮೂಲಕ ಕೆಮ್ಮು ಕಡಿಮೆಯಾಗುತ್ತದೆ.

ನೈಸರ್ಗಿಕ ಸಿರಪ್ ತಯಾರಿಸಿಕೊಳ್ಳಿ

ನೈಸರ್ಗಿಕ ಸಿರಪ್ ತಯಾರಿಸಿಕೊಳ್ಳಿ

ಒಂದ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿಕೊಂಡು ಅದಕ್ಕೆ ಅರಿಶಿನ ಹುಡಿ, ದಾಲ್ಚಿನ್ನಿ ಮತ್ತು ಕರಿಮೆಣಸನ್ನು ಹಾಕಿಕೊಳ್ಳಿ ಮತ್ತು ಇದನ್ನು ಕುದಿಯಲು ಬಿಡಿ. ಸರಿಯಾಗಿ ಕುದಿಸಿದ ಬಳಿಕ ಇದನ್ನು ಸೋಸಿಕೊಳ್ಳಿ. ಇದನ್ನು ಸೇವಿಸುವ ಮೊದಲು ಜೇನುತುಪ್ಪ ಸೇರಿಸಿ. ಇದು ಕೆಮ್ಮು ನಿವಾರಣೆಗೆ ಅತ್ಯುತ್ತಮ ಔಷಧಿ

 ಉಗುರು ಬೆಚ್ಚಗಿನ ನೀರು ಸರಿಯಾಗಿ ಕುಡಿಯಿರಿ

ಉಗುರು ಬೆಚ್ಚಗಿನ ನೀರು ಸರಿಯಾಗಿ ಕುಡಿಯಿರಿ

ನೀರನ್ನು ಕುಡಿಯಿರಿ ದೇಹವನ್ನು ತೇವಾಂಶದಿಂದ ಇಡಲು ನೀರು ಕುಡಿಯುವುದು ಅಗತ್ಯ. ಬಿಸಿಯಾದ ಪಾನೀಯಗಳು ಲೋಳೆಯ ಸ್ರವಿಸುವಿಕೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಬಹುದು. ಅಲ್ಲದೆ ಕೆಮ್ಮು ಇರುವಂತಹ ಸಮಯದಲ್ಲಿ ನೀವು ತಂಪಾದ ಆಹಾರವನ್ನು ತ್ಯಜಿಸಬೇಕು. ಇದು ಶ್ವಾಸಕೋಶದ ದಾರಿಯನ್ನು ಒಣಗಿಸುವುದು ಮತ್ತು ಇನ್ನಷ್ಟು ಸೋಂಕನ್ನು ಉಂಟು ಮಾಡುವುದು.

English summary

Best Home Remedies for Cough to Give You Instant Relief

Here are some home remedies that seem to be effective at reducing or eliminating coughing. Choose the method that works best for you depending on the type of a cough you have.
Story first published: Saturday, October 14, 2017, 23:40 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more