For Quick Alerts
ALLOW NOTIFICATIONS  
For Daily Alerts

ಕಬ್ಬಿನ ಹಾಲು ಸೇವನೆಯಿಂದ ಆರೋಗ್ಯಕ್ಕೆ ಹತ್ತಾರು ಲಾಭ...

By Arshad
|

ಮಧುಮೇಹಿಗಳು ಅಥವಾ ವೈದ್ಯರ ಅನುಮತಿ ಇಲ್ಲದವರ ಹೊರತು ಕಬ್ಬಿನ ಹಾಲನ್ನು ಮೆಚ್ಚದ ಜನರೇ ಇಲ್ಲ. ಸಕ್ಕರೆ ಹಾಗೂ ಬೆಲ್ಲವನ್ನು ತಯಾರಿಸಲೆಂದು ಭಾರತದಲ್ಲಿ ಹೆಚ್ಚಾಗಿ ಬೆಳೆಯುವ ಕಾರಣ ಇಂದು ಭಾರತ ಜಗತ್ತಿನ ಅತಿಹೆಚ್ಚು ಕಬ್ಬು ಬೆಳೆಯುವ ದೇಶವಾಗಿದೆ. ನಮ್ಮ ದೇಶದ ಪ್ರತಿ ಊರಿನಲ್ಲಿಯೂ ಕಬ್ಬಿನ ಜಲ್ಲೆಯನ್ನು ಹಿಂಡಿ ಹಾಲನ್ನು ಮಾರುವ ಅಂಗಡಿ ಇದ್ದೇ ಇರುತ್ತದೆ. ಒಂದು ಲೋಟ ಕಬ್ಬಿನ ಹಾಲು ಕುಡಿಯುವುದು ಚೇತೋಹಾರಿಯಾಗಿದೆ. ಹಿಂದಿಯಲ್ಲಿ ಗನ್ನೇ ಕಾ ರಸ್ ಎಂದೂ, ಕನ್ನಡದಲ್ಲಿ ಕಬ್ಬಿನ ಹಾಲು ಎಂದು ಕರೆಯುವ ಈ ರಸ ಸೇವಿಸಲು ಆರೋಗ್ಯಕರವಾದ ರಸವಾಗಿದೆ.

ಕಬ್ಬಿನ ಹಾಲಿನ ಫೇಸ್ ಪ್ಯಾಕ್- ಇನ್ನು ಚಿಂತಿಸುವ ಅಗತ್ಯವೇ ಇಲ್ಲ!

ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟುಗಳು, ಪ್ರೋಟೀನ್, ಗಂಧಕ, ಕ್ಯಾಲ್ಸಿಯಂ, ಕಬ್ಬಿಣ, ಸತು ಮತ್ತು ಪೊಟ್ಯಾಶಿಯಂ ನಂತಹ ಖನಿಜಗಳ ಸಹಿತ ಹಲವಾರು ಅವಶ್ಯಕ ಪೋಷಕಾಂಶಗಳಿವೆ. ಸಕ್ಕರೆ ಬೆರೆಸಿದ ಹಣ್ಣಿನ ರಸಗಳಿಗಿಂತಲೂ ಕಬ್ಬಿನ ಹಾಲನ್ನು ಸೇವಿಸುವುದೇ ಹೆಚ್ಚು ಆರೋಗ್ಯಕರವಾಗಿದೆ. ಸಾಮಾನ್ಯವಾಗಿ ಕಬ್ಬಿನ ಹಾಲಿಗೆ ಸಕ್ಕರೆ ಬೆರೆಸುವುದಿಲ್ಲ. ಇದರಲ್ಲಿರುವ ನೈಸರ್ಗಿಕ ಸಕ್ಕರೆಯೇ ಸಿಹಿಯಾಗಿದ್ದು ಇದನ್ನು ಎಲ್ಲರೂ ಮೆಚ್ಚುವ ಕಾರಣವಾಗಿದೆ. ಒಂದು ಲೋಟ ಕಬ್ಬಿನ ಹಾಲಿನಲ್ಲಿರುವ ಸಕ್ಕರೆಯನ್ನು ಪ್ರತ್ಯೇಕಿಸಿದರೆ ಕೇವಲ ಹದಿನೈದು ಕ್ಯಾಲೋರಿಗಳಿವೆ.

ಆದ್ದರಿಂದ ತೂಕ ಇಳಿಸುವ ಪ್ರಯತ್ನದಲ್ಲಿರುವವರು ಸಕ್ಕರೆ ಬೆರೆಸಿದ ಹಣ್ಣಿನ ರಸಕ್ಕಿಂತಲೂ ಸಕ್ಕರೆ ಬೆರೆಸದ ಕಬ್ಬಿನ ಹಾಲನ್ನು ಕುಡಿಯುವುದು ಹೆಚ್ಚು ಆರೋಗ್ಯಕರ. ಇದರಲ್ಲಿ ಸುಕ್ರೋಸ್ ಮತ್ತು ಫ್ರುಕ್ಟೋಸ್ ಎಂಬ ಸಕ್ಕರೆಗಳಿದ್ದು ಹದಿಮೂರು ಗ್ರಾಂ ನಷ್ಟು ಕರಗದ ನಾರು ಸಹಾ ಇದೆ. ಇವು ದೇಹದ ಹಲವಾರು ಕ್ರಿಯೆಗಳಿಗೆ ನೆರವಾಗುತ್ತದೆ. ಬನ್ನಿ, ಕಬ್ಬಿನ ಹಾಲಿನ ಸೇವನೆಯಿಂದ ಪಡೆಯ ಬಹುದಾದ ಪ್ರಯೋಜನಗಳ ಬಗ್ಗೆ ಅರಿಯೋಣ...

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ

ಕಬ್ಬಿನ ಹಾಲಿನ ಸೇವನೆಯಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಥವಾ LDL ಪ್ರಮಾಣ ಕಡಿಮೆಯಾಗುತ್ತದೆ. ಇದರ ಜೊತೆಗೇ ಹೃದಯದ ಆರೋಗ್ಯವನ್ನು ಕಾಪಾಡುವ ಟ್ರೈಗ್ಲಿಸರೈಡ್ ಗಳ ಪ್ರಮಾಣವನ್ನು ಸಂತುಲಿತ ಮಟ್ಟದಲ್ಲಿರಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

Black Coffee: 10 Health Benefit | ब्लैक कॉफी पीने के 10 फायदे | Boldsky
ಹಲ್ಲು ಮತ್ತು ಮೂಳೆಗಳನ್ನು ದೃಢಗೊಳಿಸುತ್ತದೆ

ಹಲ್ಲು ಮತ್ತು ಮೂಳೆಗಳನ್ನು ದೃಢಗೊಳಿಸುತ್ತದೆ

ಕಬ್ಬಿನ ಹಾಲನ್ನು ಕುಡಿಯುವುದಕ್ಕಿಂತ ಕಬ್ಬಿನ ಜಲ್ಲೆಯನ್ನು ಜಗಿದು ರಸ ಹೀರುವ ಮೂಲಕ ಹಲ್ಲು ಮತ್ತು ಒಸಡುಗಳು ಗಟ್ಟಿಗೊಳ್ಳುತ್ತವೆ. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳನ್ನು ದೃಢಗೊಳಿಸಲು ನೆರವಾಗುತ್ತದೆ.

ಮೊಡವೆಗಳನ್ನು ಮಾಯವಾಗಿಸಲು ನೆರವಾಗುತ್ತದೆ

ಮೊಡವೆಗಳನ್ನು ಮಾಯವಾಗಿಸಲು ನೆರವಾಗುತ್ತದೆ

ಈ ಮಾಹಿತಿ ನಂಬಲಿಕ್ಕೆ ಕೊಂಚ ಕಷ್ಟವಾಗಬಹುದು. ಆದರೆ ನಿಜಕ್ಕೂ ಕಬ್ಬಿನ ರಸದ ಸೇವನೆಯಿಂದ ಮೊಡವೆಗಳು ಮಾಯವಾಗುತ್ತವೆ. ಇದರಲ್ಲಿರುವ ಆಲ್ಫಾ-ಹೈಡ್ರಾಕ್ಸಿ-ಆಮ್ಲ (alpha-hydroxy acids (AHAs) ಗಳು ದೇಹದಲ್ಲಿ ಬಿಳಿರಕ್ತಕಣಗಳ ಸಂಖ್ಯೆ ಹೆಚ್ಚುತ್ತದೆ. ನಿಯಮಿತವಾಗಿ ಸೇವಿಸುವ ಮೂಲಕ ಈ ಬಿಳಿರಕ್ತಕಣಗಳು ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ ಹಾಗೂ ತನ್ಮೂಲಕ ಚರ್ಮದಡಿಯಲ್ಲಿ ಸಂಗ್ರಹಗೊಂಡಿದ್ದ ಸೋಂಕುಗಳನ್ನು ನಿವಾರಿಸಿ ಮೊಡವೆಗಳನ್ನು ಇಲ್ಲವಾಗಿಸುತ್ತದೆ.

ಬಾಯಿಯ ದುರ್ವಾಸನೆ ನಿವಾರಿಸುತ್ತದೆ

ಬಾಯಿಯ ದುರ್ವಾಸನೆ ನಿವಾರಿಸುತ್ತದೆ

ನಿಮಗೆ ಬಾಯಿಯಲ್ಲಿ ದುರ್ವಾಸನೆಯ ತೊಂದರೆ ಇದೆಯೇ? ಹಾಗಾದರೆ ಇಂದಿನಿಂದಲೇ ಕಬ್ಬಿನ ಹಾಲನ್ನು ಕುಡಿಯಲು ಪ್ರಾರಂಭಿಸಿ. ಇದರಲ್ಲಿರುವ ಖನಿಜಗಳು ಒಸಡು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ ಹಾಗೂ ಈ ಮೂಲಕ ಆಹಾರಕಣಗಳು ಸಂಗ್ರಹಗೊಳ್ಳದೇ ಬಾಯಿಯ ದುರ್ವಾಸನೆ ಇಲ್ಲವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಈ ರಸದಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದ ಹಲವಾರು ಸೋಂಕುಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ ಹಾಗೂ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ವಿಶೇಷವಾಗಿ ಯಕೃತ್ ಗೆ ಕಾಮಾಲೆ ರೋಗ ಆವರಿಸುವುದರಿಂದ ಅತ್ಯುತ್ತಮ ರಕ್ಷಣೆ ಒದಗಿಸುತ್ತದೆ. ಕಬ್ಬಿನ ಹಾಲಿನ ಸೇವನೆಯಿಂದ ದೇಹದ ಪೋಷಕಾಂಶಗಳ ಕೊರತೆ ನೀಗುತ್ತದೆ ಹಾಗೂ ಇದರಲ್ಲಿರುವ ಪ್ರೋಟೀನುಗಳು ಘಾಸಿಗೊಂಡಿದ್ದ ಜೀವಕೋಶಗಳನ್ನು ಪುನರ್ಜೀವಗೊಳಿಸಲು ನೆರವಾಗುತ್ತದೆ.

ತಕ್ಷಣವೇ ಶಕ್ತಿಯನ್ನು ನೀಡುತ್ತದೆ

ತಕ್ಷಣವೇ ಶಕ್ತಿಯನ್ನು ನೀಡುತ್ತದೆ

ವಿಶೇಷವಾಗಿ ಬೇಸಿಗೆಯಲ್ಲಿ ದೇಹ ಕಳೆದುಕೊಂಡಿದ್ದ ಶಕ್ತಿಯನ್ನು ಮತ್ತೆ ಪಡೆಯಲು ಕಬ್ಬಿನ ಹಾಲು ಅತ್ಯುತ್ತಮ ಆಯ್ಕೆಯಾಗಿದೆ. ಈ ರಸವನ್ನು ಕುಡಿದ ಕೊಂಚವೇ ಹೊತ್ತಿನಲ್ಲಿ ಇದರಲ್ಲಿರುವ ಪೋಷಕಾಂಶಗಳು ರಕ್ತಕ್ಕೆ ಲಭಿಸುವ ಮೂಲಕ ತಕ್ಷಣವೇ ಶಕ್ತಿಯನ್ನು ಪಡೆಯಲು ನೆರವಾಗುತ್ತದೆ ಹಾಗೂ ನಿರ್ಜಲೀಕರಣದಿಂದ ರಕ್ಷಣೆ ಒದಗಿಸುತ್ತದೆ.

ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ

ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ

ಹೌದು, ನೀವು ಸರಿಯಾಗಿಯೇ ಓದಿದಿರಿ. ಕಬ್ಬಿನ ಹಾಲಿನಲ್ಲಿರುವ ಕ್ಯಾಲ್ಸಿಯಂ, ಮೆಗ್ನೇಶಿಯಂ, ಪೊಟ್ಯಾಶಿಯಮ್, ಕಬ್ಬಿಣ ಹಾಗೂ ಮ್ಯಾಂಗನೀಸ್ ಮೊದಲಾದ ಖನಿಜಗಳಿರುವ ಕಾರಣ ಇದು ಕೊಂಚ ಕ್ಷಾರೀಯವಾಗಿದೆ. ಅಲ್ಲದೇ ಇದರಲ್ಲಿರುವ ಫ್ಲೇವನಾಯ್ಡುಗಳು ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್‍ಯಾಡಿಕಲ್ ಕಣಗಳ ವಿರುದ್ಧ ಹೋರಾಡುವ ಮೂಲಕ ವಿಶೇಷವಾಗಿ ಸ್ತನ ಹಾಗೂ ಪ್ರಾಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್ ವಿರುದ್ಧ ರಕ್ಷಣೆ ಒದಗಿಸುತ್ತದೆ.

ಮಧುಮೇಹ ಗುಣಪಡಿಸಲು ನೆರವಾಗುತ್ತದೆ

ಮಧುಮೇಹ ಗುಣಪಡಿಸಲು ನೆರವಾಗುತ್ತದೆ

ಮಧುಮೇಹಿಗಳಿಗೆ ಸಕ್ಕರೆ ವರ್ಜ್ಯವಾದರೂ ಕಬ್ಬಿನ ರಸವನ್ನು ಮಧುಮೇಹಿಗಳು ಸುರಕ್ಷಿತವಾಗಿ ಸೇವಿಸಬಹುದು. ಇದರ ಗ್ಲೈಸೆಮಿಕ್ ಕೋಷ್ಟಕದಲ್ಲಿ ಕಡಿಮೆ ಗುಣಾಂಗವಿರುವುದು ಹಾಗೂ ಇದರ ನೈಸರ್ಗಿಕ ಸಕ್ಕರೆಗಳು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಥಟ್ಟನೇ ಏರಿಸುವುದರಿಂದ ತಡೆಯುತ್ತವೆ. ಇದು ಮಧುಮೇಹಿಗಳಿಗೆ ವರದಾನವಾಗಿದೆ.

ಮೂತ್ರನಾಳದ ಸೋಂಕು ಹಾಗೂ ಲೈಂಗಿಕ ರೋಗಗಳ ನೋವನ್ನು ಕಡಿಮೆ ಮಾಡುತ್ತದೆ

ಮೂತ್ರನಾಳದ ಸೋಂಕು ಹಾಗೂ ಲೈಂಗಿಕ ರೋಗಗಳ ನೋವನ್ನು ಕಡಿಮೆ ಮಾಡುತ್ತದೆ

ಒಂದು ವೇಳೆ ನೀವು ಸತತವಾಗಿ ಮೂತ್ರನಾಳದ ಸೋಂಕಿನಿಂದ ಅಥವಾ ಮೂತ್ರಪಿಂಡಗಳಲ್ಲಿ ಕಲ್ಲು ಅಥವಾ ಲೈಂಗಿಕ ರೋಗದಿಂದ ಬಳಲುತ್ತಿದ್ದರೆ ಕೊಂಚ ಕಬ್ಬಿನ ರಸವನ್ನು ಲಿಂಬೆ ರಸ ಹಾಗೂ ಎಳನೀರಿನಲ್ಲಿ ಬೆರೆಸಿ ನಿತ್ಯವೂ ಕುಡಿಯುವ ಮೂಲಕ ಈ ಎಲ್ಲಾ ತೊಂದರೆಗಳಿಂದ ಮುಕ್ತಿ ಪಡೆಯಬಹುದು.

ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

ಒಂದು ವೇಳೆ ಅಜೀರ್ಣತೆ ತೊಂದರೆ ಇದ್ದರೆ ಈ ವ್ಯಕ್ತಿಗಳು ನಿತ್ಯವೂ ಕಬ್ಬಿನ ಹಾಲನ್ನು ತಪ್ಪದೇ ಸೇವಿಸಬೇಕು. ಇದರ ವಿರೇಚಕ ಗುಣ ಜೀರ್ಣಾಂಗಗಳಲ್ಲಿ ಉಂಟಾಗಿದ್ದ ಉರಿಯೂತವನ್ನು ನಿವಾರಿಸಿ ಮಲಬದ್ಧತೆಯಾಗದಂತೆ ನೋಡಿಕೊಳ್ಳುತ್ತದೆ. ಅಲ್ಲದೇ ಹೊಟ್ಟೆಯುಬ್ಬರಿಕೆ ಹಾಗೂ ಹೊಟ್ಟೆಯ ಸೆಡೆತಗಳಿಂದಲೂ ರಕ್ಷಣೆ ಒದಗಿಸುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಜಠರದಲ್ಲಿ ಪಿಎಚ್ ಮಟ್ಟವನ್ನು ಸಂತುಲಿತ ಮಟ್ಟದಲ್ಲಿರಿಸಲು ನೆರವಾಗುತ್ತದೆ.

ಕಾಮಲೆಯನ್ನು ಗುಣಪಡಿಸುತ್ತದೆ

ಕಾಮಲೆಯನ್ನು ಗುಣಪಡಿಸುತ್ತದೆ

ಕಬ್ಬಿನ ಕಾಲು ಕಾಮಲೆ ಇರುವವರೆಗೆ ನೈಸರ್ಗಿಕವಾದ ಔಷಧಿಯಾಗಿದೆ. ಲಿವರ್ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೆ ಈ ಕಾಯಿಲೆ ಬರುತ್ತದೆ. ಕಾಮಲೆ ಬಂದವರು ದಿನಕ್ಕೆ ಎರಡು ಗ್ಲಾಸ್ ಕಬ್ಬಿನ ಜ್ಯೂಸ್ ಕುಡಿದರೆ ಬೇಗನೆ ಗುಣಮುಖವಾಗುವಿರಿ.

ಕಿಡ್ನಿಯಲ್ಲಿ ಕಲ್ಲನ್ನು ಹೋಗಲಾಡಿಸುತ್ತದೆ

ಕಿಡ್ನಿಯಲ್ಲಿ ಕಲ್ಲನ್ನು ಹೋಗಲಾಡಿಸುತ್ತದೆ

ಕಬ್ಬಿನ ಹಾಲಿನ ಅತ್ಯಂತ ಪ್ರಯೋಜನಕಾರಿಯಾದ ಗುಣವೆಂದರೆ ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸುತ್ತದೆ. ಕಿಡ್ನಿಯಲ್ಲಿ ಕಲ್ಲಿದ್ದವರು ಇದನ್ನು ಪ್ರತಿದಿನ ಕುಡಿದರೆ ಆ ಸಮಸ್ಯೆಯಿಂದ ಗುಣಮುಖವಾಗಲು ಸಹಕಾರಿಯಾಗುತ್ತದೆ.

English summary

Amazing Benefits Of Sugarcane Juice

Drinking sugarcane juice rather than gorging on sugar is more healthy. Sugarcane juice is a natural drink with no added sugar. It's natural sweetness is enough to keep you going. Sugar extracted from sugarcane juice consists of 15 calories, so it is very good for those who are keeping their weight in check. Sugarcane juice consists of sucrose, fructose and many other varieties of glucose with a total of 13 grams of dietary fibre, which is essential to carry out a lot of bodily functions. Read on to find out about the benefits of sugarcane juice that will improve your health in numerous ways.
X
Desktop Bottom Promotion