ಕೊತ್ತಂಬರಿ ಸೊಪ್ಪಿನ ಜ್ಯೂಸ್‌ನಲ್ಲಿದೆ ಕಂಡರಿಯದಷ್ಟು ಪ್ರಯೋಜನಗಳು!

By: Divya
Subscribe to Boldsky

ಆಹಾರ ಪದಾರ್ಥಗಳಿಗೆ ಹಾಗೂ ಔಷಧ ತಯಾರಿಸಲು ಅನುಕೂಲ ಕಲ್ಪಿಸಿಕೊಡುವ ಸಸ್ಯಗಳಲ್ಲಿ ಕೊತ್ತಂಬರಿ(ಧನಿಯಾ)ಯ ಪಾತ್ರ ಮಹತ್ವದ್ದು. ವರ್ಷ ಪೂರ್ತಿ ಬೆಳೆಯಬಹುದಾದ ಈ ಗಿಡ ಹೆಚ್ಚು ಔಷಧೀಯ ಗುಣಗಳನ್ನು ಒಳಗೊಂಡಿದೆ. ಇದನ್ನು ಸೌಂದರ್ಯ ವರ್ಧಕ ಉತ್ಪನ್ನಗಳಿಗೆ, ಸಾಬೂನುಗಳ ತಯಾರಿಕೆ, ಟೂತ್ ಪೇಸ್ಟ್‍ಗಳ ಉತ್ಪಾದನೆ ಸೇರಿದಂತೆ ಅನೇಕ ಉತ್ಪನ್ನಗಳ ಉತ್ಪಾದನೆಯಲ್ಲಿ ಉಪಯೋಗಿಸುತ್ತಾರೆ. ಕೊತ್ತಂಬರಿ ಸೊಪ್ಪಿನಲ್ಲಿರುವ 10 ಔಷಧೀಯ ಗುಣಗಳು

ಮನೆಯ ಹಿತ್ತಲಲ್ಲೇ ಬೆಳೆಯಬಹುದಾದ ಈ ಸಸ್ಯಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಕೋರಿಯಂಡರ್ ಅಥವಾ ಸಿಲಾಂಟ್ರೋ ಎಂದು ಕರೆಯುತ್ತಾರೆ. ಹಿಂದಿ ಹಾಗೂ ಇನ್ನಿತರ ಭಾಷೆಯಲ್ಲಿ ಧನಿಯಾ ಎಂದು ಕರೆಯುತ್ತಾರೆ. ಈ ಸಸ್ಯದಲ್ಲಿ ಶೇ. 8ರಷ್ಟು ನಾರು ಹಾಗೂ ಶೇ.2.9ರಷ್ಟು ಕ್ಯಾಲ್ಸಿಯಂ ಇದೆ. ಹಾಗಾಗಿ ಇದು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮವಾದ್ದು ಎಂದು ಹೇಳಲಾಗುತ್ತದೆ. ಸಸ್ಯ ಶಾಸ್ತ್ರದ ಪ್ರಕಾರ ಇದು ಎಪಿಯಾಸಿಯಸ್ ವರ್ಗದ ಸಸ್ಯ ಹಾಗೂ ಕ್ಯಾರೆಟ್ ಕುಟುಂಬ ವರ್ಗಕ್ಕೆ ಸೇರಿದ್ದು ಎನ್ನಲಾಗುತ್ತದೆ. ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್   

ರೋಗ ನಿವಾರಕ ಶಕ್ತಿಯಿರುವ ಇದರಲ್ಲಿ ಆಂಟಿ ಬಯೋಟಿಕ್ ಅಂಶ ಹೇರಳವಾಗಿದೆ. ಇದು ಸುಮಾರು 1 ರಿಂದ 2 ಅಡಿ ಎತ್ತರದಲ್ಲಿ ಬೆಳೆಯುತ್ತದೆ. ಹಚ್ಚ ಹಸಿರು ಬಣ್ಣದಿಂದ ಕೂಡಿರುವ ಈ ಸಸ್ಯದ ಎಲೆ ಹಾಗೂ ಕಾಂಡಗಳು ಬಹಳ ಮೃದುವಾಗಿರುತ್ತವೆ. ಈ ಸಸ್ಯದ ಪರಿಮಳವು ಹೆಚ್ಚು ಸುಗಂಧ ಭರಿತವಾಗಿರುತ್ತದೆ. ಇದರ ಎಲ್ಲಾ ಭಾಗಗಳನ್ನು ನಮ್ಮ ಅನುಕೂಲಕ್ಕೆ ಬೇಕಾದ ರೀತಿಯಲ್ಲಿ ಬಳಸಬಹುದು. ಬಹಳ ಕಡಿಮೆ ಬೆಲೆಗೆ ಧಾರಾಳವಾಗಿ ದೊರೆಯುವಂತದ್ದು.

ವಿಟಮಿನ್ ಸಿ ಅಂಶವನ್ನು ಒಳಗೊಂಡಿರುವ ಇದನ್ನು ತ್ವಚೆಯ ಆರೋಗ್ಯ ಕಾಪಾಡಲು ಹಾಗೂ ಬೊಜ್ಜು ಕರಗಿಸಲು ಉಪಯೋಗಿಸುತ್ತಾರೆ. ಕೊತ್ತಂಬರಿ ಸೊಪ್ಪನ್ನು ಮೊದಲು ಸ್ವಚ್ಛವಾಗಿ ತೊಳೆದು ನಂತರ ರುಬ್ಬಬೇಕು. ಬಳಿಕ ಅದರ ರಸವನ್ನು ಬೇರ್ಪಡಿಸಿ, ಸ್ವಲ್ಪ ನೀರನ್ನು ಬೆರೆಸಿ ಕುಡಿಯಬೇಕು. ಪ್ರತಿದಿನ ಈ ಹವ್ಯಾಸವನ್ನು ರೂಢಿಸಿಕೊಂಡರೆ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಹಾಗೂ ಬೊಜ್ಜು ನಿವಾರಣೆಗೆ ಸಹಾಯವಾಗುತ್ತದೆ. ಮನೆಯಲ್ಲಿ ನಾವೇ ಬೆಳೆಯಬಹುದಾದ ಈ ಸಸ್ಯದ ಜ್ಯೂಸ್‍ನ್ನು ಪ್ರತಿದಿನ ಸೇವಿಸುತ್ತಾ ಬಂದರೆ ಹಲವು ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಅದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ... 

ಚರ್ಮರೋಗಕ್ಕೆ ರಾಮಬಾಣ

ಚರ್ಮರೋಗಕ್ಕೆ ರಾಮಬಾಣ

ಚರ್ಮರೋಗಗಳನ್ನು ನಿವಾರಿಸುವಲ್ಲಿ ಸಿಲಾಂಟ್ರೋ/ ಕೊತ್ತಂಬರಿ ಸಸ್ಯದ ಜ್ಯೂಸ್ ಮಹತ್ವದ ಪಾತ್ರವಹಿಸುತ್ತದೆ. ಪ್ರತಿದಿನ ಇದನ್ನು ಸೇವಿಸುತ್ತಾ ಬಂದರೆ ಚರ್ಮರೋಗಗಳಾದ ಎಸ್ಜಿಮಾ, ಶುಷ್ಕತೆ, ಫಂಗಸ್ ಇನ್‍ಫೆಕ್ಸನ್(ಶಿಲೀಂಧ್ರ ಸೋಂಕು) ಹಾಗೂ ಉರಿಯೂತಗಳು ಗುಣಮುಖವಾಗುತ್ತವೆ. ಇದರೊಟ್ಟಿಗೆ ತ್ವಚೆಯ ಮೇಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಿ ಹೆಚ್ಚು ಕಾಂತಿಯುತವಾಗಿರುವಂತೆ ಮಾಡುತ್ತದೆ.

ರಕ್ತನಾಳಗಳ ರಕ್ಷಣೆ

ರಕ್ತನಾಳಗಳ ರಕ್ಷಣೆ

ಈ ಸಸ್ಯದಲ್ಲಿ ಹೇರಳವಾಗಿ ಸಾರಭೂತ ತೈಲಾಂಶವನ್ನು ಹೊಂದಿರುತ್ತದೆ. ಈ ತೈಲಗಳು ದೇಹದಲ್ಲಿರುವ ಕೆಟ್ಟ (ಎಲ್‍ಡಿಎಲ್)ಕೊಲೆಸ್ಟ್ರಾಲ್‍ಗಳನ್ನು ಕಡಿಮೆಮಾಡಿ ಆರೋಗ್ಯಕರ ಕೊಲೆಸ್ಟ್ರಾಲ್‍ಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಹೀಗೆ ಮಾಡುವುದರಿಂದ ರಕ್ತನಾಳಗಳಲ್ಲಿ ರಕ್ತದ ಚಲನವಲನಗಳು ಸರಾಗವಾಗುತ್ತವೆ. ಹೃದಯದ ಕಾರ್ಯಚಟುವಟಿಕೆ ಹಾಗೂ ರಕ್ತನಾಳದ ಕಾರ್ಯ ವ್ಯವಸ್ಥೆಯೂ ಆರೋಗ್ಯಕರವಾಗಿರುತ್ತವೆ.

ರಕ್ತಹೀನತೆ

ರಕ್ತಹೀನತೆ

ಕೊತ್ತಂಬರಿ ಸಸ್ಯದಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ರಕ್ತದಲ್ಲಿ ಹಿಮಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಹಿಮಗ್ಲೋಬಿನ್ ಅಂಶ ಹೆಚ್ಚಾದ ಹಾಗೆ ರಕ್ತಹೀನತೆಯ ಸಮಸ್ಯೆಯು ಕಡಿಮೆಯಾಗುತ್ತದೆ. ಇದರಲ್ಲಿರುವ ಸಂಯುಕ್ತವು ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ಸರಾಗಗೊಳಿಸುತ್ತದೆ. ಜೊತೆಗೆ ರಕ್ತಸಂಚಾರ ಸುಗಮವಾಗಿ ರಕ್ತಹೀನತೆ ದೂರವಾಗುತ್ತದೆ.

ರಕ್ತದೊತ್ತಡದ ನಿವಾರಣೆ

ರಕ್ತದೊತ್ತಡದ ನಿವಾರಣೆ

ಸಿಲಾಂಟ್ರೋದಲ್ಲಿ ಮೆಗ್ನೀಸಿಯಮ್, ಕ್ಯಾಲ್ಸಿಯಮ್ ಹಾಗೂ ಪೊಟ್ಯಾಸಿಯಮ್‍ಗಳಂತಹ ಖನಿಜಗಳನ್ನು ಒಳಗೊಂಡಿದೆ. ಇದರಲ್ಲಿ ಸೋಡಿಯಂ ಪ್ರಮಾಣ ಕಡಿಮೆಯಿರುವುದರಿಂದ ಹೆಚ್ಚಿನ ಪೊಟ್ಯಾಸಿಯಮ್ ಅಂಶವು ದೇಹದ ರಕ್ತದೊತ್ತಡವನ್ನು ಕಡಿಮೆಮಾಡಲು ಪೂರಕವಾಗಿದೆ. ಹಾಗಾಗಿಯೇ ರಕ್ತದೊತ್ತಡವನ್ನು ಎದುರಿಸಲು ಈ ಸಸ್ಯ ಸಹಾಯಮಾಡುತ್ತದೆ.

ಉತ್ಕರ್ಷಣ ನಿರೋಧಕ

ಉತ್ಕರ್ಷಣ ನಿರೋಧಕ

ಕೊತ್ತಂಬರಿ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳ ಶಕ್ತಿಯು ಸಮೃದ್ಧವಾಗಿವೆ. ಇವು ಇತರ ಕಣಗಳನ್ನು ಆಕ್ಸಿಡೀಕರಿಸುವಲ್ಲಿ ಸಹಾಯಮಾಡುತ್ತದೆ. ಇದರಿಂದ ಅನೇಕ ಚಿಕ್ಕ ಪುಟ್ಟ ರೋಗಗಳು ಬರದಂತೆ ತಡೆಯುತ್ತದೆ. ಆಲ್ಝೈಮರ್ನ ನಂತಹ ರೋಗಗಳನ್ನು ತಡೆಯಲು ಆಂಟಿ ಆಕ್ಸಿಡೆಂಟ್‍ಳು(ಉತ್ಕರ್ಷಣ) ಸಹಾಯವಾಗುತ್ತವೆ ಎನ್ನಲಾಗುತ್ತದೆ.

ಜೀರ್ಣಾಂಗದ ಸಮಸ್ಯೆ

ಜೀರ್ಣಾಂಗದ ಸಮಸ್ಯೆ

ಗಣನೀಯವಾಗಿ ಕೊತ್ತಂಬರಿ ಸೊಪ್ಪಿನ ರಸವನ್ನು ಸೇವಿಸುತ್ತಾ ಬಂದರೆ ಜೀರ್ಣಾಂಗವ್ಯೂಹದ ಅನೇಕ ಸಮಸ್ಯೆಗಳು ಗುಣಮುಖವಾಗುತ್ತವೆ. ಇದರ ರಸವು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಜೀರ್ಣಕ್ರಿಯೆಯು ಸುಧಾರಣೆಗೊಳ್ಳುತ್ತದೆ. ಇದು ಅಜೀರ್ಣ ಹಾಗೂ ಉರಿಯೂತದಂತಹ ರೋಗಗಳನ್ನು ತಡೆಯುತ್ತದೆ ಎನ್ನಬಹುದು.

ಮೂಳೆಗಳ ಸಮಸ್ಯೆ

ಮೂಳೆಗಳ ಸಮಸ್ಯೆ

ಈ ಸಸ್ಯದಲ್ಲಿ ಕ್ಯಾಲ್ಸಿಯಂ ಮತ್ತು ಖನಿಜಾಂಶ ಹೆಚ್ಚಾಗಿರುವುದರಿಂದ ಮೂಳೆ ಬೆಳವಣಿಗೆ ಹಾಗೂ ಶಕ್ತಿಯನ್ನು ಹೆಚ್ಚಸಲು ಸಹಾಯಕವಾಗಿದೆ. ಮೂಳೆ ರೋಗವಾದ ಆಸ್ಟಿಯೊಪೊರೋಸಿಸ್ ನಂತಹ ರೋಗವನ್ನು ತಡೆಗಟ್ಟಲು ಸಹಕಾರಿಯಾಗಿದೆ.

ಬಾಯಿಯ ಆರೋಗ್ಯ

ಬಾಯಿಯ ಆರೋಗ್ಯ

ಇದರಲ್ಲಿರುವ ತೈಲದಂಶವು ಬಾಯಿ ಹುಣ್ಣುಗಳ ಉಪಶಮನಕ್ಕೆ ಸಹಾಯ ಮಾಡುತ್ತದೆ. ಕೊತ್ತಂಬರಿ ಸೂಕ್ಷ್ಮ ಜೀವಿಯ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಬಾಯಿಯನ್ನು ಸ್ವಚ್ಛವಾಗಿರುವಂತೆ ಮಾಡುತ್ತದೆ. ಜೊತೆಗೆ ಬಾಯಿಂದ ಹೊರಸೂಸುವ ದುರ್ವಾಸನೆಯನ್ನು ತಡೆಗಟ್ಟುತ್ತದೆ. ಹಾಗಗಿ ಇದನ್ನು ಬಾಯಿಯ ಫ್ರೆಶ್ನರ್ ಎಂದು ಕರೆಯಬಹುದು.

ಬೊಜ್ಜು ಕರಗಿಸಿ

ಬೊಜ್ಜು ಕರಗಿಸಿ

ಬೆಳಗ್ಗೆ ಆಹಾರ ಸೇವಿಸುವ ಮುನ್ನ ಕೊತ್ತಂಬರಿ ರಸವನ್ನು ಗಣನೀಯವಾಗಿ ಸೇವಿಸುತ್ತಾ ಬಂದರೆ ಚಯಾಪಚಯ ಕ್ರಿಯೆಗೆ ಅನುಕೂಲವಾಗುತ್ತದೆ. ಇದರಿಂದ ದೇಹಕ್ಕೆ ಬೇಡದ ಬೊಜ್ಜಿನಾಂಶ ಕರಗಿಸಿ ದೇಹದ ತೂಕ ಕಡಿಮೆಮಾಡುತ್ತದೆ.

ಹಾರ್ಮೋನ್‍ಗಳ ಸಮತೋಲನ

ಹಾರ್ಮೋನ್‍ಗಳ ಸಮತೋಲನ

ಕೊತ್ತಂಬರಿ ರಸವನ್ನು ಪ್ರತಿದಿನ ಸೇವಿಸಿದರೆ ಋತುಚಕ್ರದ ಸಮಸ್ಯೆಯು ದೂರವಾಗುತ್ತದೆ. ಜೊತೆಗೆ ಇದರಲ್ಲಿರುವ ಆರೋಗ್ಯಕರ ತೈಲಾಂಶವು ಹಾರ್ಮೋನ್‍ಗಳ ಸಮತೋಲನವನ್ನು ಕಾಪಾಡಲು ಸಹಾಯಮಾಡುತ್ತದೆ.

  

English summary

Add A Glass of Coriander Juice To Your Daily Diet & See What Happens

Although coriander or cilantro leaves are used globally and locally as a food ingredient, adding an extra glass of juice to your daily diet can do wonders to your general health. All you need to do is take a bunch of coriander or cilantro leaves. Wash them clean. Mince them into small pieces. Put them in a pot and pour clean drinking water.
Subscribe Newsletter