ಈ 'ಹಣ್ಣುಗಳು' ಕಿಡ್ನಿ ಕಲ್ಲಿನ ಸಮಸ್ಯೆಗೆ ರಾಮಬಾಣ-ತಪ್ಪದೇ ಸೇವಿಸಿ

By: Jaya Subramanya
Subscribe to Boldsky

ಇಂದಿನ ಆಧುನಿಕ ಯುಗದಲ್ಲಿ ಸಕಲ ಸಮಸ್ಯೆಗಳಿಗೂ ಔಷಧವಿದೆ ಮತ್ತು ವಿಜ್ಞಾನ ಲೋಕದಿಂದಲೇ ಇದು ಸಾಧ್ಯ ಎಂಬುದು ಪ್ರಚಲಿತದಲ್ಲಿರುವ ಮಾತಾಗಿದೆ. ಆದರೆ ಕೆಲವೊಂದು ರೋಗಗಳಿಗೆ ನಮ್ಮ ಆಹಾರ ಪದ್ಧತಿ ನಾವು ಅನುಸರಿಸುವ ಜೀವನ ಕ್ರಮಗಳೇ ಉತ್ತಮ ಔಷಧಗಳು ಎಂಬುದನ್ನು ನೀವು ಅರಿತಿದ್ದೀರಾ? ಬರಿಯ ಮಾತ್ರೆ ಟಾನಿಕ್‌ಗಳಿಂದ ನೆರವೇರದ ಎಷ್ಟೋ ಕಾರ್ಯಗಳು ತರಕಾರಿ ಹಣ್ಣುಗಳ ಸೇವನೆ, ವ್ಯಾಯಾಮ ಅನುಸರಿಸುವಿಕೆ, ದೈಹಿಕ ಚಟುವಟಿಕೆಗಳಿಂದ ಸಾಧ್ಯವಾಗಿವೆ ಎಂಬುದು ನಮಗೆಲ್ಲಾ ತಿಳಿದೇ ಇರುವ ಸಂಗತಿ.  ನೀವು ತಿಳಿದಿರಬೇಕಾದ ಕಿಡ್ನಿ ರೋಗಗಳ 12 ಲಕ್ಷಣಗಳು

ಹಿಂದಿನವರು ಕಾಯಿಲೆ ಬಂದರೆ ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಅದಲ್ಲದೆ ಅವರಿಗೆ ಇಂದಿನ ಕಾಯಿಲೆಗಳು ಗಾಳಿಯನ್ನು ಸೋಕಿರಲಾರವು. ಹಳ್ಳಿಮದ್ದುಗಳ, ಸೊಪ್ಪು, ತರಕಾರಿ ಹಣ್ಣುಗಳ ಸೇವನೆಯಿಂದಲೇ ಅವರು ಇದನ್ನು ದೂರಮಾಡಿಬಿಡುತ್ತಾರೆ. ಆದರೆ ಇಂದು ನಾವು ಅನುಭವಿಸುತ್ತಿರುವ ರೋಗಗಳ ಸರಮಾಲೆಗೆ ನಾವೇ ಕಾರಣರಾಗಿದ್ದೇವೆ. ಸಿಕ್ಕಿದ್ದನ್ನೆಲ್ಲಾ ತಿನ್ನುವ ಪದ್ಧತಿಯಿಂದ ಆಸಿಡಿಟಿ ತಲೆದೋರಿದೆ. ಬೆಳಗ್ಗೆ ಗಡಿಬಿಡಿಯಿಂದ ಉಪಹಾರವನ್ನು, ತ್ಯಜಿಸಿ, ಮಧ್ಯಾಹ್ನ ಯಥೇಚ್ಛವಾಗಿ ಸೇವಿಸುವುದು, ರಾತ್ರಿ ಹೊಟ್ಟೆ ತುಂಬಾ ಊಟಮಾಡುವುದು ಹೀಗೆ ನಮ್ಮ ದೇಹ ತಡೆದುಕೊಳ್ಳುವುದಕ್ಕಿಂತ ಹೆಚ್ಚಿನ ಭಾರವನ್ನು ಅದಕ್ಕೆ ನೀಡುತ್ತಿದ್ದೇವೆ. ಕಿಡ್ನಿ ಕಲ್ಲುಗಳನ್ನು ಹೊರಹಾಕುವ ಹಳ್ಳಿಗಾಡಿನ ಮನೆಮದ್ದು!

ಕೆಲಸದ ಒತ್ತಡದಿಂದ ನಾವು ನೀರು ಸರಿಯಾಗಿ ಸೇವಿಸುತ್ತಿಲ್ಲ ಅಂತೆಯೇ ಮೂತ್ರಶಂಕೆಯನ್ನು ತಪ್ಪಿಸಿಕೊಳ್ಳುತ್ತಿದ್ದೇವೆ. ಇದೆಲ್ಲದರ ಫಲಿತಾಂಶ ಕಿಡ್ನಿ ಕಲ್ಲು ಎಂಬ ಮಾರಕ ಕಾಯಿಲೆ. ದೇಹದಲ್ಲಿ ನೀರು ಸರಿಯಾಗಿ ಪೂರೈಕೆ ಆಗದೇ ಇದ್ದಾಗ ಮತ್ತು ಪಚನ ಕ್ರಿಯೆಯಲ್ಲಿ ತೊಡಕುಂಟಾಗಿ ಗ್ಯಾಸ್ ಉದ್ಭವಿಸುತ್ತದೆ ಮತ್ತು ಇದುವೇ ಕಿಡ್ನಿ ಕಲ್ಲು ಆಗಿ ರೂಪುಗೊಳ್ಳುತ್ತದೆ. ಕಿಡ್ನಿ ಕಲ್ಲು ಕರಗಿಸುವ, ಹಿತ್ತಲ ಗಿಡದ ಮದ್ದು

ಈ ಸಮಯದಲ್ಲಿ ಸಾಕಷ್ಟು ದ್ರವಾಹಾರಗಳನ್ನು ಸೇವಿಸಿ ಇದನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಕಿಡ್ನಿಸ್ಟೋನ್ ಅಥವಾ ಕಿಡ್ನಿ ಕಲ್ಲಿನ ಸಮಸ್ಯೆ ಉಳ್ಳವರು ಸೇವಿಸಬೇಕಾದ ಹಣ್ಣು ಮತ್ತು ತರಕಾರಿಗಳ ಮಾಹಿತಿಯನ್ನು ನಾವು ಇಂದಿಲ್ಲಿ ನೀಡುತ್ತಿದ್ದೇವೆ.... 

ಸೇಬು

ಸೇಬು

ದಿನಕ್ಕೊ೦ದು ಸೇಬನ್ನು ಸೇವಿಸುವುದರಿ೦ದ ಮೂತ್ರಪಿ೦ಡಗಳಲ್ಲಿನ ಹರಳುಗಳು ಕರಗಿಹೋಗುತ್ತವೆ. ಸೇಬಿನಲ್ಲಿ ಕೆಲವು ಕಿಣ್ವಗಳಿದ್ದು, ಅವು ಕಾಲಕ್ರಮೇಣವಾಗಿ ಮೂತ್ರಪಿ೦ಡಗಳಲ್ಲಿನ ಕಲ್ಲುಗಳನ್ನು ಕರಗಿಸಿ, ಮೂತ್ರದ ಮೂಲಕ ಶರೀರದಿ೦ದ ಆ ಹರಳುಗಳು ಹೊರಹೋಗುವ೦ತೆ ಮಾಡುತ್ತವೆ.

ಕಲ್ಲಂಗಡಿ

ಕಲ್ಲಂಗಡಿ

ಕಿಡ್ನಿಯ ಕಲ್ಲಿನ ನಿವಾರಣೆಗೆ ಕಲ್ಲ೦ಗಡಿ ಹಣ್ಣು ಅತ್ಯುತ್ತಮವಾದ ಪರಿಹಾರೋಪಾಯವಾಗಿದೆ. ಕಲ್ಲ೦ಗಡಿ ಹಣ್ಣು ಜಲಾ೦ಶದಿ೦ದ ಸಮೃದ್ಧವಾಗಿದ್ದು, ಮೂತ್ರಪಿ೦ಡಗಳಲ್ಲಿನ ಹರಳುಗಳನ್ನು ಪರಿಣಾಮಕಾರಿಯಾಗಿ ಹೊರಗೆಡಹಲು ನೆರವಾಗುತ್ತದೆ. ಮೂತ್ರಪಿ೦ಡಗಳಲ್ಲಿನ ಕಲ್ಲುಗಳನ್ನು ಹೊರಹಾಕುವುದಕ್ಕಾಗಿ ಪ್ರಾಚೀನ ಕಾಲದಲ್ಲಿ ಯಾವುದೇ ಔಷಧವು ಅಲಭ್ಯವಾಗಿದ್ದಾಗ, ಆ ಹರಳುಗಳನ್ನು ರೋಗಿಯ ಶರೀರದಿ೦ದ ಹೊರಹಾಕಲು ವೈದ್ಯರು ರೋಗಿಗೆ ಕಲ್ಲ೦ಗಡಿ ಹಣ್ಣನ್ನು ಸೇವಿಸುವ೦ತೆ ಶಿಫಾರಸು ಮಾಡುತ್ತಿದ್ದರು.

ದ್ರಾಕ್ಷಿಯ ಹಣ್ಣು

ದ್ರಾಕ್ಷಿಯ ಹಣ್ಣು

ಜಲಾ೦ಶ ಹಾಗೂ ಪೊಟ್ಯಾಶಿಯ೦ ನಿ೦ದ ದ್ರಾಕ್ಷಿಯ ಹಣ್ಣುಗಳು ಸಮೃದ್ಧವಾಗಿವೆ. ಇವು ಮೂತ್ರಪಿ೦ಡದಲ್ಲಿನ ಹರಳುಗಳನ್ನು ಕರಗಿಸಿ ಮೂತ್ರದ ಮೂಲಕ ಹೊರಗೆಡಹಲು ನೆರವಾಗುತ್ತವೆ. ಜೊತೆಗೆ, ಮೂತ್ರಪಿ೦ಡಗಳಲ್ಲಿ ಹರಳುಗಳು ಉ೦ಟಾಗುವುದಕ್ಕೆ ಪೂರಕ ವಾತಾವರಣವನ್ನು ಕಲ್ಪಿಸುವ ಸೋಡಿಯ೦ ಹಾಗೂ ಕ್ಲೋರೈಡ್ ಗಳನ್ನು ದ್ರಾಕ್ಷಿಯು ಕಡಿಮೆ ಪ್ರಮಾಣದಲ್ಲಿ ಹೊ೦ದಿದೆ. ಹೀಗಾಗಿ, ಮೂತ್ರಪಿ೦ಡಗಳಲ್ಲಿರಬಹುದಾದ ಹರಳುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ದ್ರಾಕ್ಷಿಯು ಒ೦ದು ಅತ್ಯುತ್ತಮ ಪರಿಹಾರೋಪಾಯವಾಗಿದೆ.

ಬಾಳೆಹಣ್ಣು

ಬಾಳೆಹಣ್ಣು

ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿರಿಸುವಲ್ಲಿ ಬಾಳೆಹಣ್ಣು ನೆರವನ್ನೀಯುತ್ತದೆ. ಇದರಲ್ಲಿ ಹೆಚ್ಚು ಪ್ರಮಾಣದ ಪೊಟಾಶಿಯಂ ಇದ್ದು ಇತರ ನ್ಯೂಟ್ರೀನ್‌ಗಳನ್ನು ಇದು ಒಳಗೊಂಡಿದೆ.

ಅವೊಕಾಡೊ ಅಥವಾ ಬೆಣ್ಣೆ ಹಣ್ಣು

ಅವೊಕಾಡೊ ಅಥವಾ ಬೆಣ್ಣೆ ಹಣ್ಣು

ಕಿಡ್ನಿಯಲ್ಲಿ ಕಲ್ಲುಗಳು ರಚನೆಯಾಗುವುದನ್ನು ಇದು ತಡೆಯುತ್ತದೆ. ಇದರಲ್ಲಿ ಹೆಚ್ಚು ಪ್ರಮಾಣದ ಪೊಟಾಶಿಯಂ ಇದ್ದು ಇದು ಹೆಚ್ಚು ಪ್ರಮಾಣದ ಕ್ಯಾಲ್ಶಿಯಂ ವಿಸರ್ಜನೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಪಪ್ಪಾಯ

ಪಪ್ಪಾಯ

ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿರಿಸುವಲ್ಲಿ ಪಪ್ಪಾಯ ಸಹಾಯವನ್ನು ಮಾಡಲಿದೆ. ಇದನ್ನು ಹಾಗೆಯೇ ಇಲ್ಲವೇ ಸಲಾಡ್ ರೂಪದಲ್ಲಿ ಸೇವಿಸಿಕೊಂಡು ಪ್ರಯೋಜನವನ್ನು ಪಡೆದುಕೊಳ್ಳಿ.

ಕಿತ್ತಳೆ

ಕಿತ್ತಳೆ

ಮೂತ್ರದ ಆಸಿಡಿಟಿಯನ್ನು ಕಡಿಮೆ ಮಾಡುವಲ್ಲಿ ಕಿತ್ತಳೆ ಹಣ್ಣು ಸಹಾಯಕ ಎಂದೆನಿಸಲಿದೆ. ಇದರಲ್ಲಿರುವ ಸಿಟ್ರಸ್ ಈ ಕಮಾಲನ್ನು ಮಾಡುತ್ತದೆ. ಇದು ಕಿಡ್ನಿ ಸ್ಟೋನ್‌ಗಳನ್ನು ಬುಡದಲ್ಲಿಯೇ ಕಿತ್ತೊಗೆಯುತ್ತದೆ.

ಕೆಂಪು ದ್ರಾಕ್ಷಿ

ಕೆಂಪು ದ್ರಾಕ್ಷಿ

ಇತರ ಆಹಾರಗಳು ಮಾಡದೇ ಇರುವ ಕಮಾಲನ್ನು ದ್ರಾಕ್ಷಿ ಕಿಡ್ನಿ ಕಲ್ಲಿನ ವಿರುದ್ಧವಾಗಿ ಮಾಡಲಿದೆ ಎಂಬುದಾಗಿ ಇತ್ತೀಚಿನ ಅಧ್ಯಯನಗಳು ತಿಳಿಸಿವೆ. ನಿಮ್ಮ ಕಿಡ್ನಿಯ ಆರೋಗ್ಯಕ್ಕಾಗಿ ದ್ರಾಕ್ಷಿಯನ್ನು ನಿಯಮಿತವಾಗಿ ನೀವು ಸೇವಿಸಬೇಕು.

ಕ್ರೇನ್‌ಬೆರ್ರೀಸ್

ಕ್ರೇನ್‌ಬೆರ್ರೀಸ್

ಜೂಸ್, ಸಾಸ್ ಅಥವಾ ಹಣ್ಣಿನ ರೂಪದಲ್ಲಿ ಕ್ರೇನ್‌ಬೆರ್ರೀಸ್ ನಿಮಗೆ ಸೇವಿಸಬಹುದಾಗಿದೆ. ಕಿಡ್ನಿಯ ರೋಗವನ್ನು ಹೋಗಲಾಡಿಸುವಲ್ಲಿ ಇದು ಮಹತ್ವಪೂರ್ಣವಾಗಿ ಸಹಾಯ ಮಾಡಲಿದೆ. ಮೂತ್ರನಾಳದ ಸೋಂಕನ್ನು ನಿವಾರಣೆ ಮಾಡುವ ಸಾಮರ್ಥ್ಯವನ್ನು ಈ ಹಣ್ಣು ಹೊಂದಿದ್ದು ಸ್ಟೋನ್ ರಚನೆಯಾಗುವಲ್ಲಿ ಕಾರಣವಾಗಿರುವ ಯುಟಿಐ ಅನ್ನು ನಿವಾರಿಸಲಿದೆ.

ಸ್ಟ್ರಾಬೆರ್ರಿ

ಸ್ಟ್ರಾಬೆರ್ರಿ

ಹೆಚ್ಚು ಪ್ರಮಾಣದ ಉತ್ಕರ್ಷಣ ನಿರೋಧಿ ಅಂತೊಸಿನನಿಯಸ್ ಮತ್ತು ಎಲಾಗಿತನೀಸ್ ಇದರಲ್ಲಿದ್ದು ಇದು ನಿಮ್ಮ ಕಿಡ್ನಿಯನ್ನು ಸಂರಕ್ಷಿಸುತ್ತದೆ. ಇದು ಫ್ರೀ ರಾಡಿಕಲ್‌ಗಳನ್ನು ದೂರಮಾಡುತ್ತದೆ

 
English summary

10 Fruits You Need To Eat To Fight Kidney Diseases

Kidney filters and removes all unwanted impurities from the body. When the quantity of these substances increase, kidney will have to do extra work. The harmful substances that are present in these foods can cause permanent damage to the kidneys.So, now that you are clear about the importance of taking healthy vegetables and fruits, we will discuss more about some of the fruits you need to eat to keep the kidneys healthy.
Story first published: Saturday, April 8, 2017, 8:02 [IST]
Subscribe Newsletter