For Quick Alerts
ALLOW NOTIFICATIONS  
For Daily Alerts

ಆರೋಗ್ಯದ ದೃಷ್ಟಿಯಿಂದ, ದಿನನಿತ್ಯ ಬಿಸಿ ನೀರು ಸೇವಿಸಿ

By Manu
|

ನಮ್ಮ ದೇಹದಲ್ಲಿ ಶೇಕಡಾ 75ರಷ್ಟು ನೀರಿನಾಂಶವಿದ್ದರೂ ನಾವು ಕುಡಿಯುವ ನೀರು ಮಾತ್ರ ತುಂಬಾ ಕಡಿಮೆ ಎನ್ನಬಹುದು. ಇನ್ನು ಕೆಲವರು ತಂಪಾದ ನೀರನ್ನು ಇಷ್ಟಪಟ್ಟರೆ, ಮತ್ತೆ ಕೆಲವರು ಬಿಸಿ ನೀರನ್ನು ಇಷ್ಟಪಡುತ್ತಾರೆ. ಬಾಯಾರಿಕೆಯಾದರೆ ನಾವು ಪ್ರಿಡ್ಜ್ ಬಾಗಿಲು ತೆಗೆದು ತಂಪಾದ ನೀರನ್ನೇ ಕುಡಿಯುತ್ತೇವೆ. ಬಾಯಾರಿಕೆ ನೀಗಿಸಲು ಮತ್ತು ದೇಹಕ್ಕೆ ಉಲ್ಲಾಸ ಬರಲು ನಾವು ತಂಪಾದ ನೀರನ್ನೇ ಕುಡಿಯುತ್ತೇವೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ಆದರೆ ತಂಪಾದ ನೀರು ನಿಮ್ಮ ಆರೋಗ್ಯಕ್ಕೆ ಒಳ್ಳೆಯದೇ ಎಂದು ಯಾವತ್ತಾದರೂ ಯೋಚಿಸಿದ್ದೀರಾ? ತಂಪಾದ ನೀರು ಜೀರ್ಣ ಕ್ರಿಯೆಯನ್ನು ನಿಧಾನಗೊಳಿಸಿ ನಿಮ್ಮ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬಿಸಿ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಮ್ಮಲ್ಲಿ ಕೆಲವರು ಊಟ ಮಾಡುವಾಗ ತಂಪಾದ ನೀರನ್ನು ಕುಡಿಯುತ್ತಾರೆ. ಆದರೆ ಇದು ಆರೋಗ್ಯವನ್ನು ಕೆಡಿಸುತ್ತದೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರಕುವ ನೀರು ಸುರಕ್ಷಿತವೇ?

ತಂಪಾದ ನೀರನ್ನು ಕುಡಿದರೆ ಆಗ ನಿಮ್ಮ ದೇಹವು ಅದನ್ನು ಕರಗಿಸಿಕೊಳ್ಳಲು ತನ್ನ ಉಷ್ಣತೆಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ನೀರನ್ನು ಮತ್ತೆ ಬಿಸಿ ಮಾಡಲು ತುಂಬಾ ಶಕ್ತಿ ವೆಚ್ಚವಾಗುತ್ತದೆ. ಬಿಸಿನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಜೀರ್ಣಕ್ರಿಯೆಯು ಉತ್ತಮವಾಗಿ ಅದರಿಂದ ಆರೋಗ್ಯವು ಒಳ್ಳೆಯದಾಗುತ್ತದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ...

ವಾಸ್ತವಾಂಶ #1

ವಾಸ್ತವಾಂಶ #1

ನೀವು ಏನಾದರೂ ತಂಪಾಗಿರುವುದನ್ನು ಕುಡಿದರೆ ಆಗ ದೇಹವು ಉಷ್ಣಾಂಶವನ್ನು ಸಮತೂಗಿಸಬೇಕಾಗುತ್ತದೆ. ಇದರಿಂದ ಪೋಷಕಾಂಶವನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ.

ವಾಸ್ತವಾಂಶ #2

ವಾಸ್ತವಾಂಶ #2

ಆಹಾರದೊಂದಿಗೆ ನೀವು ತಂಪಾದ ನೀರನ್ನು ಕುಡಿದರೆ ಆಗ ಆಹಾರದಲ್ಲಿರುವ ಕೊಬ್ಬು ಘನವಾಗಿ ಕರಗಲು ತುಂಬಾ ಸಮಯ ಬೇಕಾಗಬಹುದು.

ವಾಸ್ತವಾಂಶ #3

ವಾಸ್ತವಾಂಶ #3

ಪ್ರತಿಯೊಂದು ತಂಪಾದ ವಸ್ತುವು ರಕ್ತನಾಳಗಳನ್ನು ಸಂಕುಚಿಗೊಳಿಸುವ ಸ್ವಭಾವವನ್ನು ಹೊಂದಿದೆ. ನಿಮ್ಮ ಜೀರ್ಣಕ್ರಿಯೆಯು ತುಂಬಾ ನಿಧಾನವಾಗಿ ದೇಹಕ್ಕೆ ಬೇಕಾದ ನೀರಿನಾಂಶವು ಸಿಗುವುದಿಲ್ಲ.

ವಾಸ್ತವಾಂಶ #4

ವಾಸ್ತವಾಂಶ #4

ತಂಪಾದ ನೀರು ಕುಡಿದ ತಕ್ಷಣ ನಿಮಗೆ ಶೀತ ಉಂಟಾಗುತ್ತಿದೆಯಾ? ತಂಪಾದ ನೀರು ನಿಮ್ಮ ದೇಹದ ರೋಗ ಪ್ರತಿರಕ್ಷಣಾ ಶಕ್ತಿಯನ್ನು ಕುಂದಿಸುತ್ತದೆ. ಊಟದ ಬಳಿಕ ತಂಪಾದ ನೀರು ಕುಡಿಯುವುದರಿಂದ ದೇಹದಲ್ಲಿ ಹೆಚ್ಚುವರಿ ಲೋಳೆ ಉತ್ಪತ್ತಿಯಾಗಿ ಪ್ರತಿರಕ್ಷಣಾ ವ್ಯವಸ್ಥೆಗೆ ತೊಂದರೆಯುಂಟು ಮಾಡುತ್ತದೆ.

ವಾಸ್ತವಾಂಶ #5

ವಾಸ್ತವಾಂಶ #5

ಬಿಸಿ ನೀರನ್ನು ಕುಡಿದಾಗ ನಿಮ್ಮ ಜೀರ್ಣಕ್ರಿಯೆಯು ಉತ್ತಮಗೊಳ್ಳುವುದು ಮತ್ತು ಕೆಲವೊಂದು ಕಿಣ್ವಗಳು ಉತ್ತೇಜನಗೊಳ್ಳುತ್ತದೆ.

ವಾಸ್ತವಾಂಶ #6

ವಾಸ್ತವಾಂಶ #6

ಬಿಸಿನೀರನ್ನು ಕುಡಿದಾಗ ದೇಹವು ತನ್ನಿಂದ ತಾನೇ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಇದು ನಿಮ್ಮ ಕಿಡ್ನಿ, ರಕ್ತ ಮತ್ತು ಚರ್ಮಕ್ಕೆ ಒಳ್ಳೆಯದು.

ವಾಸ್ತವಾಂಶ #7

ವಾಸ್ತವಾಂಶ #7

ಊಟದ ಬಳಿಕ ಬಿಸಿ ನೀರು ಕುಡಿದಾಗ ಆಹಾರವು ಸುಲಭವಾಗಿ ಜೀರ್ಣಗೊಳ್ಳುವುದು. ಇದರಿಂದ ದೇಹವು ಸುಲಭವಾಗಿ ತೇವಾಂಶವನ್ನು ಪಡೆಯುವುದು.

ವಾಸ್ತವಾಂಶ #8

ವಾಸ್ತವಾಂಶ #8

ಬಿಸಿ ನೀರಿನಿಂದ ನಿಮ್ಮ ಕರುಳಿನ ಚಲನೆಗಳು ಉತ್ತಮಗೊಳ್ಳುತ್ತದೆ. ಬೆಳಗ್ಗೆ ಬಿಸಿಯಾದ ನಿಂಬೆರಸ ಕುಡಿಯುತ್ತಲಿದ್ದರೆ ಇದರ ಬಗ್ಗೆ ನಿಮಗೆ ಸರಿಯಾಗಿ ತಿಳಿಯಲಿದೆ.

English summary

Why Warm Water Is Good For Health

When you feel very thirsty, you crave for cold water. You tend to drink lots of cold water in the hope to feel refreshed. But is cold water good for health? In fact, cold water slows down your digestive system and is also not good for your overall health. Drinking warm water is healthy. Some of us also have the habit of eating a meal along with a cold drink. Read on to know more.
Story first published: Saturday, April 16, 2016, 17:14 [IST]
X
Desktop Bottom Promotion