Latest Updates
-
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ! -
IMD ಮಳೆ ಅಲರ್ಟ್: ಸಿಡಿಲು-ಮಳೆಯಿಂದ ಪಾರಾಗಲು ಈ ನಿಯಮ ಪಾಲಿಸಿ, ಮನೆಯಲ್ಲೇ ಫಿಟ್ ಆಗಿರಿ
ಆಹಾ ಎಮ್ಮೆ ಹಾಲು, ನಿನಗೆ ಸರಿಸಾಟಿ ಯಾರು..?
ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ಹೈನು ಉತ್ಪನ್ನಗಳನ್ನು ಉತ್ಪಾದನೆ ಮಾಡುವ ದೇಶಗಳಲ್ಲಿ ಒಂದಾಗಿದೆ. ನಮ್ಮಲ್ಲಿ ಬಹುತೇಕರ ದಿನವು ಬೆಳಗ್ಗೆ ಎದ್ದು ಕಾಫಿ/ಟೀ ಕುಡಿಯುದರಿಂದ ಆರಂಭವಾಗಿ ರಾತ್ರಿ ಹಾಲು ಕುಡಿದು ಮಲಗುವವರೆಗೆ ಮುಂದುವರಿಯುತ್ತದೆ. ನಮ್ಮಲ್ಲಿ ಎಲ್ಲರೂ ಹಸುವಿನ ಹಾಲನ್ನು ಮಾತ್ರವೇ ಸೇವಿಸುವುದಿಲ್ಲ. ಹಲವರು ಎಮ್ಮೆಯ ಹಾಲನ್ನು ಸಹ ಸೇವಿಸುತ್ತಾರೆ.
ಎಮ್ಮೆಯ ಹಾಲು ತುಂಬಾ ಗಟ್ಟಿಯಾಗಿರುತ್ತದೆ ಮತ್ತು ಕೆನೆಯು ಅಧಿಕ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಇದು ಮೊಸರು, ತುಪ್ಪ, ಮನೆಯಲ್ಲಿಯೇ ತಯಾರಿಸಲಾಗುವ ಚೀಸ್ ಅಥವಾ ಪನ್ನೀರ್ ಇತ್ಯಾದಿಗಳಿಗೆ ಬಳಸಲ್ಪಡುತ್ತದೆ. ಈ ಹಾಲಿನ ಮತ್ತೊಂದು ವೈಶಿಷ್ಟ್ಯ ಎಂದರೆ, ಇದನ್ನು ತುಂಬಾ ಸಮಯ ಸಂಗ್ರಹಿಸಿಡಬಹುದು.
ಇದರಲ್ಲಿರುವ ಪೆರಾಕ್ಸೈಡೈಸಿಂಗ್ ಚಟುವಟಿಕೆಯ ಕಾರಣದಿಂದಾಗಿ ಇದನ್ನು ಸಂಗ್ರಹಿಸಿಟ್ಟರೆ ಏನೂ ಆಗುವುದಿಲ್ಲ. ಇದು ರುಚಿಯಷ್ಟೇ ಅಲ್ಲದೆ ಆರೋಗ್ಯಕರವು ಸಹ ಹೌದು. ಹಾಗಾಗಿ ಇದನ್ನು ಎಲ್ಲಾ ವಯಸ್ಸಿನವರು ಸಹ ಸೇವಿಸಬಹುದು. ಬನ್ನಿ ಯಾವ ಎಲ್ಲಾ ಅಂಶಗಳು ಸೇರಿ, ಎಮ್ಮೆ ಹಾಲನ್ನು ಆರೋಗ್ಯಕರ ಮಾಡಿವೆ ಎಂದು ತಿಳಿದುಕೊಂಡು ಬರೋಣ....

ಸಮೃದ್ಧ ಪ್ರೋಟಿನ್
ಎಮ್ಮೆ ಹಾಲಿನಲ್ಲಿ ಅಧಿಕ ಪ್ರಮಾಣದ ಪ್ರೋಟಿನ್‌ಗಳು ಇರುತ್ತವೆ. ಇದರಲ್ಲಿ ಎಲ್ಲ 9 ಬಗೆಯ ಅಮೈನೊ ಆಮ್ಲಗಳು ಇರುತ್ತವೆ. ಒಂದು ಕಪ್ ಎಮ್ಮೆ ಹಾಲು 8.5 ಗ್ರಾಂ ಪ್ರೋಟಿನ್ ಇರುತ್ತದೆ ಮತ್ತು ಒಂದು ದಿನಕ್ಕೆ ನೀವು ಎರಡು ಲೋಟ ಹಾಲನ್ನು ಸೇವಿಸಿದಲ್ಲಿ, ನಿಮಗೆ 19 ಗ್ರಾಂ ಪ್ರೋಟಿನ್ ದೊರೆಯುತ್ತದೆ. ಈ ಹಾಲನ್ನು ವಿಶೇಷವಾಗಿ ವಯಸ್ಕರಿಗೆ ಸೇವಿಸಲು ತಿಳಿಸಲಾಗುತ್ತದೆ. ಏಕೆಂದರೆ ಇದರಲ್ಲಿರುವ ಪ್ರೋಟಿನ್‌ಗಳು ಮೂಳೆಗಳ ಹಾನಿಯನ್ನು ತಪ್ಪಿಸುತ್ತದೆ.

ಅಧಿಕ ಖನಿಜಾಂಶಗಳು
ಎಮ್ಮೆ ಹಾಲಿನಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ. ಇದು ನಿಮ್ಮ ಮೂಳೆಗಳು ಮತ್ತು ಹಲ್ಲುಗಳಿಗೆ ಅಗತ್ಯ ಆರೋಗ್ಯವನ್ನು ನೀಡುತ್ತದೆ. ಆಸ್ಟಿಯೊಪೊರೊಸಿಸ್‌ನಿಂದ ಮುಕ್ರರಾಗಲು ಪ್ರತಿದಿನ ಎಮ್ಮೆ ಹಾಲನ್ನು ಸೇವಿಸಿ. ಇದರಲ್ಲಿ ಮೆಗ್ನಿಷಿಯಂ, ಪೊಟಾಶಿಯಂ ಮತ್ತು ರಂಜಕಗಳಂತಹ ಉತ್ತಮ ರೀತಿಯ ಖನಿಜಾಂಶಗಳು ಇರುತ್ತವೆ. ಜೊತೆಗೆ ಇದರಲ್ಲಿ ಸಮೃದ್ಧ ಕಬ್ಬಿಣಾಂಶ ಸಹ ಇರುತ್ತದೆ.

ಅಧಿಕ ಖನಿಜಾಂಶಗಳು
ಈ ಕಬ್ಬಿಣಾಂಶವು ನಮ್ಮ ರಕ್ತದಲ್ಲಿರುವ ಕೆಂಪು ರಕ್ತ ಕಣಗಳು ದೇಹದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಪೂರೈಸಲು ನೆರವಾಗುತ್ತದೆ. ಕಬ್ಬಿಣಾಂಶವು ನಮ್ಮ ದೇಹದಲ್ಲಿನ ಸ್ನಾಯುಗಳು ಮತ್ತು ಹೃದಯದ ಸ್ನಾಯುಗಳು ಸರಿಯಾಗಿ ಕೆಲಸ ಮಾಡಲು ನೆರವು ನೀಡುತ್ತದೆ.

ಸಮೃದ್ಧ ವಿಟಮಿನ್‌ಗಳು
ಈ ಕೆನೆಭರಿತ ಹಾಲಿನಲ್ಲಿ ಅಧಿಕ ಪ್ರಮಾಣದ ರೈಬೊಫ್ಲಾವಿನ್ ಮತ್ತು ವಿಟಮಿನ್ ಬಿ 12 ಇರುತ್ತದೆ. ಜರ್ನಲ್ ಆಫ್ ಅಗ್ರಿಕಲ್ಚರಲ್ ಅಂಡ್ ಫುಡ್ ಕೆಮಿಸ್ಟ್ರಿ ನಡೆಸಿದ ಅಧ್ಯಯನದ ಪ್ರಕಾರ ವಿಟಮ್ನ್ ಬಿ 12 ಅನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದಾಗಿ ನಿಮಗೆ ಹೃದಯಾಘಾತ ಮತ್ತು ಪಾರ್ಶ್ವವಾಯು ಬರುವ ಸಾಧ್ಯತೆ ಕಡಿಮೆಯಾಗುತ್ತದೆಯಂತೆ. ವಿಟಮಿನ್ ಎ, ವಿಟಮಿನ್ ಸಿ ಮತ್ತು ಥೈಯಾಮಿನ್ ಸಹ ಈ ಹಾಲಿನಲ್ಲಿ ದೊರೆಯುತ್ತದೆ ಇವುಗಳಲ್ಲಿ ಸಣ್ಣ ಪ್ರಮಾಣದಲ್ಲಿ ಫೋಲೆಟ್, ವಿಟಮಿನ್ ಬಿ ಮತ್ತು ನಿಯಾಸಿನ್ ಇರುತ್ತದೆ. ಇವುಗಳು ಸಹ ನಿಮ್ಮ ದೇಹಕ್ಕೆ ಒಳ್ಳೆಯದು.

ಕೊಲೆಸ್ಟ್ರಾಲ್ ಕಡಿಮೆ ಇರುತ್ತದೆ
ಇಂದಿನ ದಿನಗಳಲ್ಲಿ ಬಹುತೇಕ ಜನ ಕೊಲೆಸ್ಟ್ರಾಲ್‌ನಿಂದ ಸಂಭವಿಸುವ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಎಮ್ಮೆ ಹಾಲಿನಲ್ಲಿ ಕೊಲೆಸ್ಟ್ರಾಲ್ ಕಡಿಮೆ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

ಕೊಲೆಸ್ಟ್ರಾಲ್ ಕಡಿಮೆ ಇರುತ್ತದೆ
ಅದರಲ್ಲೂ ಮಧುಮೇಹಿಗಳು ಮತ್ತು ಹೃದ್ರೋಗಿಗಳಿಗೆ ಈ ಹಾಲು ಹೇಳಿ ಮಾಡಿಸಿದಂತಹ ಪದಾರ್ಥವಾಗಿರುತ್ತದೆ. ಈ ಹಾಲು ನಿಮ್ಮ ಎಲ್‌ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.

ಆರೋಗ್ಯಕಾರಿ ಕೊಬ್ಬು
ಎಮ್ಮೆ ಹಾಲಿನಲ್ಲಿ ಅಧಿಕ ಪ್ರಮಾಣದ ಕೊಬ್ಬು ಇರುತ್ತದೆ. ನೀವು ತೂಕ ಕಡಿಮೆ ಇದ್ದು, ತೂಕ ಹೆಚ್ಚಿಸಿಕೊಳ್ಳಲು ನೋಡುತ್ತಿದ್ದಲ್ಲಿ, ಎಮ್ಮೆ ಹಾಲನ್ನು ತಪ್ಪದೆ ಸೇವಿಸಿ. ಇದು ಹಸುವಿನ ಹಾಲಿಗಿಂತ ಉತ್ತಮ ಪ್ರಮಾಣದ ಕೊಬ್ಬನ್ನು ಹೊಂದಿರುತ್ತದೆ ಮತ್ತು ನಿಮ್ಮ ತೂಕವನ್ನು ಆರೋಗ್ಯಕರವಾಗಿ ಹೆಚ್ಚಿಸುತ್ತದೆ.

ಆರೋಗ್ಯಕಾರಿ ಕೊಬ್ಬು
ಈ ಕೊಬ್ಬುಗಳು ನಿಮಗೆ ಸ್ನಾಯುಗಳನ್ನು ಸಂಪಾದಿಸಲು ನೆರವು ನೀಡುತ್ತವೆ. ಇದರಿಂದ ನಿಮ್ಮ ಮೂಳೆಗಳಿಗೆ ಒಂದು ಬಗೆಯ ಚರ್ಮದ ಹೊದಿಕೆ ದೊರೆಯುತ್ತದೆ. ಆದರೂ ಈ ಹಾಲನ್ನು ಮಿತವಾಗಿ ಮಾತ್ರ ಸೇವಿಸಿ. ಇದರಲ್ಲಿರುವ ಅಧಿಕ ಸ್ಯಾಚುರೇಟೇಡ್ ಕೊಬ್ಬು ನಿಮ್ಮ ಹೃದಯದ ನಾಳಗಳನ್ನು ನಿರ್ಬಂಧಿಸಬಹುದು.



Click it and Unblock the Notifications
