For Quick Alerts
ALLOW NOTIFICATIONS  
For Daily Alerts

ನಿಮ್ಮಿಂದ ಧೂಮಪಾನ ಬಿಡಿಸುವ ಪವರ್ ಈ ಆಹಾರಗಳಲ್ಲಿದೆ!

By Super
|

ಕೇವಲ ಕುತೂಹಲದಿಂದ ಪ್ರಾರಂಭವಾಗಿ ಬಿಡಲು ಸಾಧ್ಯವೇ ಇಲ್ಲವೆನಿಸುವಷ್ಟು ಕ್ಲಿಷ್ಟವಾಗಿ ಕಾಡುವ ದುರಭ್ಯಾಸ ಎಂದರೆ ಧೂಮಪಾನ. ಧೂಮಪಾನಿಗಳು ತಮ್ಮ ವ್ಯಸನವನ್ನು ಸಮರ್ಥಿಸಿಕೊಳ್ಳಲು ಇದರ ಏಜೆಂಟ ಅಥವಾ ವಕೀಲನಂತೆಯೇ ವರ್ತಿಸುವ ಕಾರಣ ಸುಲಭಮಾತುಗಳಿಗಾಗಲೀ ಹಿತೈಷಿಗಳ ಮನವಿಗಾಗಲೀ, ಪತ್ನಿ, ಮಕ್ಕಳ ಕೋರಿಕೆಗಾಗಲೀ ಧೂಮಪಾನಿಗಳು ಬಗ್ಗುವುದಿಲ್ಲ. ಬದಲಿದೆ ಇನ್ನಷ್ಟು ಈ ವ್ಯಸನವನ್ನು ಹೆಚ್ಚುಗೊಳಿಸುತ್ತಾರೆ. ಇದನ್ನು ಎಲ್ಲಿಯವರೆಗೆ ಬಿಡಲೇಬೇಕು ಎಂದು ಸ್ವ ಇಚ್ಛೆಯಿಂದ ಮನಸ್ಸನ್ನು ಗಟ್ಟಿಗೊಳಿಸುವುದಿಲ್ಲವೋ ಅಲ್ಲಿಯವರೆಗೆ ಬಿಡುವುದು ಅಸಾಧ್ಯ.

ಇದರ ಹೊರತಾಗಿ ಕೇವಲ ಎರಡು ಕಾರಣಗಳು ಧೂಮಪಾನ ಬಿಡಲು ಸಾಧ್ಯವಾಗಬಹುದು, ಒಂದು ಇನ್ನೊಂದು ಸಿಗರೇಟು ಸೇದಿದರೂ ನೀನು ಸತ್ತು ಹೋಗುವೆ ಎಂಬ ವೈದ್ಯರ ಎಚ್ಚರಿಕೆ, ಇನ್ನೊಂದು ದೇವರ ಭಯ. ಇನ್ನುಳಿದಂತೆ ದೃಢಸಂಕಲ್ಪ ಒಂದೇ ಯಾವುದೇ ನಿಮ್ಮ ದುರಭ್ಯಾಸವನ್ನು ಬಿಡಲು ಸಾಧ್ಯವಾಗಿಸುತ್ತದೆ. ಇನ್ನುಳಿದಂತೆ ನಿಮ್ಮ ವೈದ್ಯರು ನೀಡುವ ಸಲಹೆಗಳು ನಿಮ್ಮ ಸಂಕಲ್ಪವನ್ನು ಪೂರ್ಣಗೊಳಿಸಲು ನೆರವಾಗುತ್ತವೆ. ಒಂದು ವೇಳೆ ನಿಮ್ಮ ಧೂಮಪಾನದ ದುರಭ್ಯಾಸವನ್ನು ದೂರಗೊಳಿಸಲು ನೀವು ದೃಢಸಂಕಲ್ಪ ಮಾಡಿಕೊಂಡಿದ್ದೇ ಆಗಿದ್ದಲ್ಲಿ ಕೆಲವು ಆಹಾರಗಳು ನಿಮ್ಮ ನೆರವಿಗೆ ಬರಲಿವೆ...

 ಸೆಲೆರಿ, ಸೌತೆ ಮತ್ತು ಕ್ಯಾರೆಟ್

ಸೆಲೆರಿ, ಸೌತೆ ಮತ್ತು ಕ್ಯಾರೆಟ್

ಹಸಿಯಾಗಿ ಸೇವಿಸಬಹುದಾದ ತರಕಾರಿಗಳಾದ ಸೆಲೆರಿ ಎಲೆಗಳು, ಎಳೆಸೌತೆ, ಕ್ಯಾರೆಟ್ ಮೊದಲಾದವುಗಳನ್ನು ಸೇವಿಸಿ ಆ ಬಳಿಕ ಸಿಗರೇಟು ಸೇದಿದರೆ ಅತಿ ಕಹಿಯಾದ ರುಚಿ ಇರುವಂತೆ ಮಾಡುತ್ತವೆ. ನಿಧಾನವಾಗಿ ಈ ಅಭ್ಯಾಸ ಕಹಿಯಾದ ಸಿಗರೇಟಿಗಿಂತ ರುಚಿಯಾದ ಇತರ ವಸ್ತುಗಳೇ ಮೇಲು ಎಂದು ನಮ್ಮ ಮೆದುಳು ಅಚ್ಚೊತ್ತಿಕೊಳ್ಳುತ್ತದೆ.

ವಿಟಮಿನ್ ಸಿ ಹೆಚ್ಚಾಗಿರುವ ಆಹಾರಗಳು

ವಿಟಮಿನ್ ಸಿ ಹೆಚ್ಚಾಗಿರುವ ಆಹಾರಗಳು

ಸಿಗರೇಟಿನ ಹೊಗೆಯ ಮೂಲಕ ರಕ್ತಕ್ಕೆ ಧಾವಿಸಿದ ನಿಕೋಟಿನ್ ಅನ್ನು ನಿಭಾಯಿಸಲು ದೇಹಕ್ಕೆ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಅಗತ್ಯವಿದೆ. ಇದು ಲಭ್ಯವಿರುವ ವಿಟಮಿನ್ ಸಿ ಪ್ರಮಾಣವನ್ನೆಲ್ಲಾ ಕಬಳಿಸಿ ಬಿಡುತ್ತದೆ. ಇದೇ ಕಾರಣದ ವ್ಯತಿರಿಕ್ತ ಪರಿಣಾಮವಾಗಿ ದೇಹದಲ್ಲಿ ವಿಟಮಿನ್ ಸಿ ಕೊರತೆಯಾದಾಗಲೆಲ್ಲಾ ಸಿಗರೇಟು ಸೇದುವಂತೆ ಮೆದುಳಿಗೆ ಸೂಚನೆ ಹೋಗುತ್ತದೆ ಎಂಬ ವಿಷಯವನ್ನು American Journal of Public Health ಎಂಬ ಪತ್ರಿಕೆಯಲ್ಲಿ ವರದಿ ಮಾಡಲಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿಟಮಿನ್ ಸಿ ಹೆಚ್ಚಾಗಿರುವ ಆಹಾರಗಳು

ವಿಟಮಿನ್ ಸಿ ಹೆಚ್ಚಾಗಿರುವ ಆಹಾರಗಳು

ಆದ್ದರಿಂದ ನಿತ್ಯವೂ ಸಾಕಷ್ಟು ವಿಟಮಿನ್ ಸಿ ಹೆಚ್ಚಿರುವ ಆಹಾರಗಳನ್ನು ತಿನ್ನುವ ಮೂಲಕ ನಿಕೋಟಿನ್ ಮೇಲಿನ ನಿರ್ಭರತೆಯನ್ನು ಮೆದುಳು ಕಳೆದುಕೊಳ್ಳುವಂತೆ ಮಾಡಬಹುದು. ಕಿತ್ತಳೆ, ಪೇರಳೆಹಣ್ಣು, ವಿವಿಧ ಬೆರ್ರಿ ಹಣ್ಣುಗಳನ್ನು ಸೇವಿಸಿ.

ಕ್ಯಾಮೋಮೈಲ್ ಟೀ

ಕ್ಯಾಮೋಮೈಲ್ ಟೀ

ನಿಕೋಟಿನ್ ಅಗತ್ಯತೆಯ ಬೇಡಿಕೆಯನ್ನು ಕಡಿಮೆಗೊಳಿಸುವ ಮತ್ತು ನರಗಳಿಗೆ ಪ್ರಶಾಂತತೆ ನೀಡುವ ಏಕಮಾತ್ರ ಪದಾರ್ಥವೆಂದರೆ ಕ್ಯಾಮೋಮೈಲ್ ಟೀ, ಹೀಗೆಂದು Molecular Medicine Reports ಎಂದ ವೈದ್ಯಕೀಯ ಪತ್ರಿಕೆ ತಿಳಿಸಿದೆ. ಇದರಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಧೂಮಪಾನದ ಮೂಲಕ ದೇಹದಲ್ಲಿ ಉತ್ಪತ್ತಿಯಾಗಿರುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳ ಪ್ರಭಾವದಿಂದ ದೇಹಕ್ಕೆ ಹಾನಿಯಾಗದಂತೆ ತಡೆಯುತ್ತದೆ. ಪರಿಣಾಮವಾಗಿ ಹೆಚ್ಚುತ್ತಿರುವ ನಿಕೋಟಿನ್ ಬಯಕೆಯನ್ನು ಕಡಿಮೆಗೊಳಿಸುತ್ತದೆ.

ಹಸಿಶುಂಠಿ

ಹಸಿಶುಂಠಿ

ಸಿಗರೇಟು ಸೇದುತ್ತಿರುವವರು ಥಟ್ಟನೇ ಎಂದೂ ಬಿಡಬಾರದು. ಏಕೆಂದರೆ ನಿತ್ಯದ ನಿಕೋಟಿನ್ ಪ್ರಮಾಣಕ್ಕೆ ನಿಮ್ಮ ದೇಹ ಮತ್ತು ಮೆದುಳು ಹೊಂದಿಕೊಂಡಿದ್ದು ಥಟ್ಟನೇ ನಿಕೋಟಿನ್ ನಿಂತು ಹೋದರೆ ಹಲವು ರೀತಿಯಲ್ಲಿ ದೇಹ ಬಳಲುತ್ತದೆ. ವಾಂತಿ, ವಾಕರಿಕೆ, ಸುಸ್ತು, ತುರಿಕೆ, ಚಡಪಡಿಕೆ, ತಲೆ ತಿರುಗುವುದು ಮೊದಲಾದವು ಇದರ ಸೂಚನೆಗಳಾಗಿವೆ. .ಇದಕ್ಕೆ withdrawal syndrome ಎಂದು ಕರೆಯುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಸಿಶುಂಠಿ

ಹಸಿಶುಂಠಿ

ಆದ್ದರಿಂದ ನಿಧಾನವಾಗಿ ಈ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬರಬೇಕು. ಒಂದು ವೇಳೆ ನಿಧಾನವಾಗಿ ಕಡಿಮೆ ಮಾಡಿದರೂ ಈ ಸೂಚನೆಗಳು ಎದುರಾದರೆ ಇದನ್ನು ಸರಿಪಡಿಸಲು ಶುಂಠಿ ನೆರವಾಗುತ್ತದೆ. ನಿತ್ಯವೂ ಕೆಲವಾರು ಬಾರಿ ಶುಂಠಿ ಸೇರಿಸಿದ ಟೀ ಸೇವಿಸಿದರೆ ಈ ತೊಂದರೆಗಳು ದೂರವಾಗುತ್ತವೆ

ಜಿನ್ಸೆಂಗ್

ಜಿನ್ಸೆಂಗ್

ಒಂದು ವರದಿಯ ಪ್ರಕಾರ ಜಿನ್ಸೆಂಗ್ ಎಂಬ ಶುಂಠಿಯಂತಹ ಗಡ್ಡೆಯ ರಸದ ಸೇವನೆಯಿಂದ ಡೋಪಮೈನ್ ಎಂಬ ನರಪ್ರಚೋದಕ ಹಾರ್ಮೋನೊಂದು ಬಿಡುಗಡೆಯಾಗುತ್ತದೆ. ಇದು ಸಿಗರೇಟು ಸೇದಿದಾಗ ಸಿಗುವಂತಹ ಪರಿಣಾಮವನ್ನೇ ನೀಡುವ ಕಾರಣ ಸಿಗರೇಟು ಸೇದುವ ಬಯಕೆಯುಂಟಾಗುವುದಿಲ್ಲ. ಇದು ಧೂಮಪಾನ ತ್ಯಜಿಸುವವರಿಗೆ ವರದಾನವಾಗಿದೆ. ನಿಯಮಿತವಾದ ಸೇವನೆಯಿಂದ ದಿನವೂ ಕೊಂಚಕೊಂಚವಾಗಿ ಸಿಗರೇಟಿನ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬಂದು ಕೊನೆಗೊಂದು ದಿನ ನೀವು ನಿಜವಾಗಿಯೂ ಸಿಗರೇಟಿಲ್ಲದೇ ದಿನವನ್ನು ಯಶಸ್ವಿಯಾಗಿ ಕಳೆಯಲು ಸಿದ್ಧರಿರುತ್ತೀರಿ. ಈ ದಿನ ಶೀಘ್ರವೇ ಬರಲು ಜಿನ್ಸೆಂಗ್ ನೆರವಾಗುತ್ತದೆ.

English summary

Top foods that can help you quit smoking

Smoking can be one of the hardest habits to break. But did you know that certain foods can help when it comes to giving up the nicotine addiction.. have a look
Story first published: Saturday, March 26, 2016, 20:10 [IST]
X
Desktop Bottom Promotion