For Quick Alerts
ALLOW NOTIFICATIONS  
For Daily Alerts

ದುಃಖದ ಸಂಕೇತ ಕಣ್ಣೀರು- ಆರೋಗ್ಯದ ಪಾಲಿಗೆ ಪನ್ನೀರು!

By Super Admin
|

ಭಾವನೆಗಳನ್ನು ತೋರ್ಪಡಿಸಲು ಮನುಷ್ಯರಷ್ಟು ಸಮರ್ಪಕವಾಗಿ ಇನ್ನು ಯಾವ ಪ್ರಾಣಿಗಳಿಗೂ ಸಾಧ್ಯವಿಲ್ಲ. ದುಃಖ ಮತ್ತು ಸಂತೋಷದ ಸಮಯದಲ್ಲಿ ಕಣ್ಣೀರು ಒಸರುವುದು ಮನುಷ್ಯರಲ್ಲಿ ಕಂಡುಬರುವ ಪ್ರಕ್ರಿಯೆಯಾಗಿದೆ. ದುಃಖದ ಸಮಯದಲ್ಲಿ ಈ ಜೀವನವೇ ಬೇಡ ಎಂಬ ನಿರ್ಧಾರಕ್ಕೂ ಬರಲು ಸಾಧ್ಯವಿದೆ.

ಈ ಸಮಯದಲ್ಲಿ ಕಣ್ಣೀರು ಹರಿಯುವ ಜೊತೆಗೇ ನಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳೂ ಆಗುತ್ತವೆ. ಭಾವನಾತ್ಮಕವಾಗಿ ನಮ್ಮ ದೇಹ ಸ್ಪಂದಿಸಿದಾಗ ಎಂಡೋಕ್ರೈನ್ ಗ್ರಂಥಿ ಸ್ರವಿಸುವ ಹಾರ್ಮೋನುಗಳು ಪ್ರಮುಖವಾಗಿ ಕಣ್ಣೀರು ಹೊರಹರಿಯುವಂತೆ ಮಾಡುತ್ತವೆ. ಅಷ್ಟೇ ಅಲ್ಲ, ಇನ್ನೂ ಹಲವಾರು ಬದಲಾವಣೆಗಳಾಗುತ್ತವೆ. ಇವು ಯಾವುದು ಎಂಬುದನ್ನು ಮುಂದೆ ಓದಿ.. ಕಣ್ಣೀರಿನ ಬಗ್ಗೆ ಕೆಲ ಸ್ವಾರಸ್ಯಕರ ಅಂಶಗಳು

Things happen to your body when you cry

ಕಣ್ಣೀರು ನಿಮ್ಮಲ್ಲಿ ಸ್ಪರ್ಧೆಯ ಭಾವನೆಯನ್ನು ಎಚ್ಚರಿಸುತ್ತದೆ
ಭಾವನಾತ್ಮಕವಾಗಿ ಕುಂದಿದ ಸಮಯದಲ್ಲಿ ನಮ್ಮ ಮೆದುಳು ಕಾರ್ಟಿಸೋಲ್ ಎಂಬ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ. ಇದೊಂದು ಮಾನಸಿಕ ಒತ್ತಡಕ್ಕೆ ಸಂಬಂಧಿಸಿದ ಹಾರ್ಮೋನು ಆಗಿದ್ದು ಇದರ ಮೂಲಕ ನಮ್ಮ ಚಿಂತನೆಗಳಲ್ಲಿ ಬದಲಾವಣೆ ಬರುತ್ತದೆ. ಈ ದುಃಖಕ್ಕೆ ಕಾರಣವಾದ ಸಂದರ್ಭವನ್ನು ಎದುರಿಸಲು ಮನಸ್ಸಿಗೆ ಸ್ಪರ್ಧಾತ್ಮಕ ಭಾವನೆಯನ್ನು ಮೂಡಿಸುತ್ತದೆ.

ಹೆಚ್ಚಿನ ಸಂದರ್ಭದಲ್ಲಿ ಈ ಸ್ಪರ್ಧಾತ್ಮಕ ಭಾವನೆ ದ್ವೇಶದ ರೂಪದಲ್ಲಿಯೇ ಇದ್ದು ಆ ಕ್ಷಣ ಕೈಗೊಳ್ಳುವ ಯಾವುದೇ ತೀರ್ಮಾನ ದ್ವೇಶಭರಿತವಾಗಿದ್ದು ಅನಾಹುತವನ್ನಲ್ಲದೇ ಇನ್ನೇನನ್ನೂ ತರಲಾರದು. ಆದ್ದರಿಂದ ದುಃಖದ ವೇಳೆಯಲ್ಲಿ ಮನಸಾರೆ ಅತ್ತು ಹಗುರಾದ ಬಳಿಕವೇ ನಿರುಮ್ಮಳ ಮನಸ್ಸಿನಿಂದ ಈ ಸಂದರ್ಭವನ್ನು ಎದುರಿಸುವ ಬಗೆಯನ್ನು ಸಮಾಲೋಚಿಸಿ ಕೈಗೊಳ್ಳುವುದೇ ಸೂಕ್ತವಾಗಿದೆ.

ನಿಮ್ಮ ಧ್ವನಿ ಭಾರವಾಗುತ್ತದೆ
ದುಃಖದಲ್ಲಿದ್ದಾಗ ಅಥವ ಅಳುತ್ತಿರುವ ಹೊತ್ತಿನಲ್ಲಿ ಮಾತನಾಡಲು ಹೋದರೆ ಧ್ವನಿ ಭಾರವಾದಂತೆ ಅನ್ನಿಸುವುದೇಕೆ ಗೊತ್ತೇ? ಇದಕ್ಕೂ ಒತ್ತಡ ಸಂಬಂಧಿತ ಹಾರ್ಮೋನು ಕಾರ್ಟಿಸೋಲೇ ಕಾರಣ. ಈ ಹಾರ್ಮೋನು ಸ್ರವಿಸುವ ಕಾರಣ ಗಂಟಲಿನ ನರಗಳಲ್ಲಿ ಹೆಚ್ಚಿನ ಸೆಳೆತ ಕಂಡುಬರುತ್ತದೆ, ಇದು ಉಸಿರಾಟವನ್ನು ನಿಧಾನಿಸುತ್ತದೆ. ಇದನ್ನೇ ಗಂಟಲುಬ್ಬುವುದು ಎಂದು ಕರೆಯುತ್ತಾರೆ (globus sensation). ಈ ಒತ್ತಡದಿಂದ ಧ್ವನಿಪೆಟ್ಟಿಗೆಯ ಮೇಲೂ ಕೊಂಚ ಒತ್ತಡವುಂಟಾಗಿ ಧ್ವನಿ ಭಾರವಾದಂತೆ ಅನ್ನಿಸುತ್ತದೆ.

ಅಳುವ ಮೂಲಕ ಬ್ಯಾಕ್ಟೀರಿಯಾಗಳ ನಿವಾರಣೆ
ಹಿರಿಯರಿಗೆ ಹೋಲಿಸಿದರೆ ಮಕ್ಕಳು ಹೆಚ್ಚು ಅಳುತ್ತಾರೆ. ಹುಟ್ಟಿದ ಮಗು ವರ್ಷವಾಗುವ ತನಕ ಅಳುವುದು ಹೆತ್ತವರ ಗಮನ ಸೆಳೆಯಲು ಮತ್ತು ಕೊಂಚ ವ್ಯಾಯಾಮ ಪಡೆಯಲು. ಆದರೆ ವರ್ಷಕಳೆದಂತೆ ಭಾವನೆಗಳನ್ನು ತೋರ್ಪಡಿಸಲು ಅಳುವ ಅಳುವಿನಲ್ಲಿ ಕಣ್ಣೀರು ಹರಿಯುತ್ತದೆ. ಕಣ್ಣೀರಿನಲ್ಲಿ ಲೈಸೋಜೈಮ್ (lysozyme) ಎಂಬ ಕಿಣ್ವವಿದೆ. ಅಳುಮುಂಜಿಯಾದರೂ ಚಿಂತೆಯಿಲ್ಲ, ಅತ್ತುಬಿಡು

ಈ ಕಿಣ್ವ ಹತ್ತೇ ನಿಮಿಷದಲ್ಲಿ ಹಲವು ರೀತಿಯ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲ ಶಕ್ತಿಶಾಲಿ ದ್ರವವಾಗಿದ್ದು ಈ ದ್ರವ ನಮ್ಮ ಜೊಲ್ಲು, ತಾಯಿಹಾಲು, ವೀರ್ಯಾಣುಗಳಲ್ಲೂ ಕಂಡುಬರುತ್ತದೆ. ಆದ್ದರಿಂದ ಮುಂದಿನ ಬಾರಿ ಕಣ್ಣೀರು ಹರಿಸುವ ಸಂದರ್ಭ ಎದುರಾದರೆ ಯಾವುದೇ ಅಳುಕಿಲ್ಲದೇ ಕಣ್ಣೀರು ಹಾಕಿ. ಇದು ಅತ್ಯಂತ ಆರೋಗ್ಯಕರ ವಿಧಾನವಾಗಿದೆ.

ಇತರರಿಗೆ ನಿಮ್ಮ ಬಗ್ಗೆ ಎಚ್ಚರಿಕೆಯ ಸೂಚನೆಯನ್ನು ಕಳುಹಿಸುತ್ತದೆ
ಯಾರಾದರೂ ಅಳುತ್ತಿರುವ ಸದ್ದು ಕೇಳಿದರೆ ಸುತ್ತಮುತ್ತಲಿನವರು ಇತ್ತ ಗಮನ ಹರಿಸಲು ಸಾಧ್ಯವಾಗುತ್ತದೆ. ಅಳುವಿನ ಸದ್ದಿನಿಂದ ಯಾರೋ ಅಪಾಯದಲ್ಲಿ ಅಥವಾ ಕಷ್ಟದಲ್ಲಿದ್ದಾರೆ, ಬನ್ನಿ ಸಹಾಯ ಮಾಡಿ ಎಂಬ ಮೊರೆ ಇರುತ್ತದೆ. ಆದರೆ ಕೆಲವರು ಅಳುವಿನ ಮೂಲಕವೇ ಇತರರ ಸಹಾನುಭೂತಿಯನ್ನು ಗಳಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ಹುನ್ನಾರದಲ್ಲಿರುತ್ತಾರೆ. ಇದಕ್ಕೇ ಕನ್ನಡದಲ್ಲಿ "ಅಳುವ ಗಂಡಸನ್ನೂ, ನಗುವ ಹೆಂಗಸನ್ನೂ ನಂಬಬಾರದು" ಎಂಬ ಗಾದೆ ಇದೆ.

ಅಳುವ ಮೂಲಕ ನಿರಾಳತೆ ಮೂಡುತ್ತದೆ
ಅಳುವಿಗೆ ಕಾರಣವಾಗುವ ಸಂದರ್ಭವನ್ನು ಎದುರಿಸಲು ಕಣ್ಣೀರಿಗಿಂತ ಉತ್ತಮವಾದ ಉಪಶಮನ ಇನ್ನೊಂದಿಲ್ಲ. ಕಣ್ಣೀರು ಹರಿಯುವ ಮೂಲಕ ಮೆದುಳಿನಲ್ಲಿ ನಮ್ಮ ಭಾವನೆಗಳನ್ನು ಬದಲಿಸುವ leucine-enkephalin ಎಂಬ ಎಂಡಾರ್ಫಿನ್ ಬಿಡುಗಡೆಯಾಗುತ್ತದೆ. ಇದು ಭಾವನಾತ್ಮಕವಾಗಿ ಸಂದರ್ಭವನ್ನು ಸ್ವೀಕರಿಸಿ ಮುಂದಿನ ಕ್ರಮವನ್ನು ಕೈಗೊಳ್ಳಲು ನೆರವಾಗುತ್ತದೆ.


ಇದೇ ಕಾರಣದಿಂದ ನಮ್ಮ ತಾಯಿಯಂದಿರು ದುಃಖದ ಸಮಯದಲ್ಲಿ ಅತ್ತುಬಿಡು, ನಿನ್ನ ದುಃಖವೆಲ್ಲಾ ಕಣ್ಣೀರಾಗಿ ಹೋಗಲಿ ಎಂದೇ ಸಲಹೆ ನೀಡುತ್ತಾರೆ. ಅತ್ತು ಹಗುರಾದ ಬಳಿಕ ಮನಸ್ಸು ನಿರಾಳವಾಗುವುದು ಮಾತ್ರವಲ್ಲ, ದೇಹದಿಂದ ವಿಷಕಾರಿ ಕಣಗಳೂ ಹೊರಹೋಗುತ್ತವೆ. ಇದೇ ಕಾರಣಕ್ಕೆ ಕಣ್ಣೀರು ಉಪ್ಪಾಗಿರುತ್ತದೆ. ನಮ್ಮ ಮೂತ್ರ ಮತ್ತು ಬೆವರು ಹೊರಹರಿಸಲಾಗದ ಕೆಲವು ವಿಷವಸ್ತುಗಳನ್ನು ನಿವಾರಿಸಲಾದರೂ ಆಗಾಗ ಅಳುವುದೇ ಉತ್ತಮ.
English summary

Things happen to your body when you cry

When you cry, it feels like the end of the world. But there is more to crying than just the miserable feeling. When something triggers an emotional response, the endocrine system releases hormones to the ocular area which fills your eyes with tears. Here are more things that happen to your body when you cry
Story first published: Monday, June 20, 2016, 17:04 [IST]
X
Desktop Bottom Promotion