For Quick Alerts
ALLOW NOTIFICATIONS  
For Daily Alerts

ದೇಹದ ಲಿವರ್‌ನ ಕಲ್ಮಶಗಳನ್ನು ನಿವಾರಿಸುವ ಅದ್ಭುತ ಆಹಾರಗಳು...

By Manu
|

ಒಂದು ವೇಳೆ ನಿಮಗೆ ಅಜೀರ್ಣ, ಕೆಳಹೊಟ್ಟೆಯಲ್ಲಿ ನೋವು, ಹಸಿವು ಕಡಿಮೆಯಾಗಿರುವುದು ಈ ತೊಂದರೆಗಳು ಏಕಕಾಲದಲ್ಲಿ ಕಂಡುಬಂದರೆ ಈ ಲಕ್ಷಣಗಳನ್ನು ಅವಗಣಿಸಲೇಬಾರದು. ಏಕೆಂದರೆ ಇದು ಯಕೃತ್‌ ಅಥವಾ ಲಿವರ್‌ನ ತೊಂದರೆಯ ಸ್ಪಷ್ಟ ಸೂಚನೆಯಾಗಿದೆ. ಯಕೃತ್ತಿನ ಕಾಯಿಲೆಯನ್ನು ಉಪಚರಿಸುವ ಮನೆಮದ್ದುಗಳು

ಯಕೃತ್‌‪ನ ಕಾರ್ಯಕ್ಷಮತೆ ಹೆಚ್ಚಿಸಲು ಇದರಲ್ಲಿ ಸಂಗ್ರಹವಾಗಿರುವ ಕಲ್ಮಶಗಳನ್ನು ನಿವಾರಿಸುವುದು ಅಗತ್ಯ. ಆದರೆ ಇದನ್ನು ಸ್ವಚ್ಛಗೊಳಿಸುವುದು ಅಷ್ಟು ಸುಲಭವಲ್ಲ. ಆದರೆ ಕೆಲವು ಆಹಾರಗಳು ಈ ಸ್ವಚ್ಛತೆಯನ್ನು ಸುಲಭವಾಗಿಸುತ್ತವೆ. ಇದೇ ಕಾರಣಕ್ಕೆ ಈ ಆಹಾರಗಳನ್ನು ಸುಪರ್ ಆಹಾರಗಳು ಎಂದು ಕರೆಯುತ್ತಾರೆ.

ನಮ್ಮ ದೇಹದಲ್ಲಿ ಅತಿ ದೊಡ್ಡದಾದ ಮತ್ತು ಅತಿ ಮುಖ್ಯವಾದ ಅಂಗವೆಂದರೆ ಯಕೃತ್. ಇದರ ಕೆಲಸವೆಂದರೆ ದೇಹದ ಕಲ್ಮಶಗಳನ್ನು ನಿವಾರಿಸಿ ವಿಸರ್ಜಿಸುವುದು. ಅಲ್ಲದೇ ಕೊಬ್ಬಿನ ಆಮ್ಲಗಳನ್ನು ಒಡೆದು ವಿಸರ್ಜಿಸಲು ನೆರವಾಗುತ್ತದೆ. ಇದರಿಂದ ದೇಹದಲ್ಲಿ ಕೊಬ್ಬು ಸಂಗ್ರಹಗೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ. ಒಣದ್ರಾಕ್ಷಿ ನೆನೆಸಿದ ನೀರು- ದೇಹದ ಲಿವರ್‌‌ನ ಆಯಸ್ಸು ನೂರು!

ಯಕೃತ್‌ನ ಕ್ಷಮತೆ ಕಡಿಮೆಯಾಗುತ್ತಿದ್ದಂತೆಯೇ ಕೊಬ್ಬು ಹೆಚ್ಚುವುದು, ಸ್ಥೂಲಕಾಯ ಹೆಚ್ಚುವುದು ಸಹಾ ಕಂಡುಬರುತ್ತದೆ. ಮದ್ಯಪಾನದಲ್ಲಿ ಹೆಚ್ಚಳ, ಪೋಷಕಾಂಶಗಳ ಕೊರತೆ, ಬ್ಯಾಕ್ಟೀರಿಯಾದ ಸೋಂಕು ಮತ್ತು ಕೆಲವು ಜೀವರಾಸಾಯನಿಕ ಕ್ರಿಯೆಯಲ್ಲಿ ಎದುರಾಗುವ ತೊಡಕುಗಳು ಯಕೃತ್‌ನ ಕ್ಷಮತೆಯನ್ನು ಕುಂದಿಸುತ್ತವೆ. ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!

ಕೆಲವು ರೋಗಿಗಳಲ್ಲಿ ಇದು ಜನ್ಮಜಾತವಾಗಿಯೂ ಬಂದಿರುವ ಸಾಧ್ಯತೆ ಇದೆ. ಕೆಲವು ಔಷಧಿಗಳ ಅಡ್ದಪರಿಣಾಮಗಳೂ ಇದಕ್ಕೆ ಕಾರಣವಾಗಬಹುದು. ಕಾರಣ ಯಾವುದೇ ಆಗಿರಲಿ, ಕೆಲವು ಸುಪರ್ ಆಹಾರಗಳನ್ನು ಸೇವಿಸುವ ಮೂಲಕ ಯಕೃತ್ ಅನ್ನು ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ. ಬನ್ನಿ, ಈ ಸುಪರ್ ಆಹಾರಗಳು ಯಾವುವು ಎಂಬುದನ್ನು ಮುಂದೆ ಓದಿ....

ಕ್ಯಾರೆಟ್

ಕ್ಯಾರೆಟ್

ಕ್ಯಾರೆಟ್‍ನಲ್ಲಿ glutathione ಎಂಬ ಪೋಷಕಾಂಶ ಹೆಚ್ಚಿನ ಪ್ರಮಾಣದಲ್ಲಿದೆ. ಯಕೃತ್‌ನ ಸ್ವಚ್ಛತೆಗೆ ಈ ಪೋಷಕಾಂಶ ಅತ್ಯುತ್ತಮವಾಗಿದೆ. ಅಲ್ಲದೇ ಕ್ಯಾರೆಟ್‌ನಲ್ಲಿರುವ ಬೀಟಾ ಕ್ಯಾರೋಟೀನ್ ಮತ್ತು ಫ್ಲೇವನಾಯ್ಡುಗಳೂ ಯಕೃತ್ತಿಗೆ ಪ್ರಚೋದನೆ ನೀಡಿ ಕಲ್ಮಶವನ್ನು ಹೊರದಬ್ಬಲು ನೆರವಾಗುತ್ತವೆ.

ಟೊಮೇಟೊ

ಟೊಮೇಟೊ

ಇದರಲ್ಲಿಯೂ glutathione ಪೋಷಕಾಂಶ ಉತ್ತಮ ಪ್ರಮಾಣದಲ್ಲಿದೆ. ಅಲ್ಲದೇ ಇದರಲಿರುವ ಆಂಟಿ ಆಕ್ಸಿಡೆಂಟುಗಳು ಯಕೃತ್‌ನ ಸ್ವಚ್ಛತೆಗೆ ನೆರವಾಗುತ್ತದೆ. ಅಲ್ಲದೇ ಟೊಮಾಟೋದಲ್ಲಿರುವ ಕೆಲವು ಕಣಗಳು ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತವೆ.

ಬೀಟ್ರೂಟ್

ಬೀಟ್ರೂಟ್

ಬೀಟ್ರೂಟ್‌ನಲ್ಲಿಯೂ ಉತ್ತಮ ಪ್ರಮಾಣದ ಫ್ಲೇವನಾಯ್ಡು ಮತ್ತು ಬೀಟಾ ಕ್ಯಾರೋಟಿನ್ ಇದ್ದು ಇವು ಯಕೃತ್ ಅನ್ನು ಸ್ವಚ್ಛಗೊಳಿಸಲು ನೆರವಾಗುತ್ತವೆ ಹಾಗೂ ಕುಂದಿದ ಕ್ಷಮತೆ ಮತ್ತೊಮ್ಮೆ ಪಡೆಯಲೂ ಸಾಧ್ಯವಾಗುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಇದರಲ್ಲಿ ನಮ್ಮ ಆರೋಗ್ಯಕ್ಕೆ ಅಗತ್ಯವಾದ ಅತ್ಯುತ್ತಮ ಆಂಟಿ ಆಕ್ಸಿಡೆಂಟುಗಳಿದ್ದು ಯಕೃತ್ ನ ಸ್ವಚ್ಛತೆಗೆ ಅತ್ಯುತ್ತಮವಾಗಿದೆ. ಇದರಲ್ಲಿರುವ ಆಲಿಸಿನ್ ಮತ್ತು ಸೆಲೆನಿಯಂ ಎಂಬ ಪೋಷಕಾಂಶಗಳು ಯಕೃತ್ ನ ಕಲ್ಮಶಗಳನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಗ್ರೀನ್ ಟೀ

ಗ್ರೀನ್ ಟೀ

ಇದು ದೇಹದಲ್ಲಿರುವ ಅಧಿಕ ಕೊಬ್ಬನ್ನು ಕರಗಿಸುವುದು ಮಾತ್ರವಲ್ಲದೆ ಇದರಲ್ಲಿರುವ antioxidants ಲಿವರ್‌ನ ಆರೋಗ್ಯವನ್ನು ಕಾಪಾಡುತ್ತದೆ.

English summary

Superfoods That Help Cleanse The Liver

You have problem with digestion, abdominal pain and loss of appetite, then this needs to be taken seriously. Chances are that it might be a case of severe liver-related diseases. So, in order to ensure a cleaner and healthy liver, there are certain super foods that can help a great deal. Check out the video to learn more about the foods that help to cleanse the liver and the ones that aid in having a healthy liver.
X
Desktop Bottom Promotion