Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಕ್ತದೊತ್ತಡ ಸಮಸ್ಯೆಗೆ ಮೊಜಾರ್ಟ್ ಸಂಗೀತವೇ ದಿವ್ಯೌಷಧ
ಅಧಿಕ ರಕ್ತದೊತ್ತಡ ಸಮಸ್ಯೆಗೆ ಸಂಗೀತವೇ ಔಷಧ ಎಂಬುದು ನಿಮಗೆ ಗೊತ್ತೇ? ಅದರಲ್ಲೂ ಸಂಗೀತ ದಂತಕಥೆ ಮೊಜಾರ್ಟ್ ಅನ್ನು ಆಲಿಸುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಹೃದಯ ತಹಬಂದಿಗೆ ಬರುತ್ತದೆ ಎಂಬುದು ಹೊಸ ಅಧ್ಯಯನದಿಂದ ತಿಳಿದು ಬಂದಿರುವ ಮಾಹಿತಿಯಾಗಿದೆ. ವೋಲ್ಫ್ಗ್ಯಾಂಗ್ ಮೊಜಾರ್ಟ್ ಮತ್ತು ಜಾನ್ ಸ್ಟ್ರಾಸ್ ಸಂಗೀತವನ್ನು 25 ನಿಮಿಷ ಆಲಿಸಿದರೆ ರಕ್ತದಲ್ಲಿನ ಕೊಬ್ಬು ಸಂಗ್ರಹ ಇಳಿಕೆಯಾಗಿ ಹೃದಯ ಬಡಿತ ತಹಬಂದಿಗೆ ಬರುತ್ತದೆ ಎಂಬುದು ಈ ಸಂಶೋಧನೆಗಳಿಂದ ಬಂದಿರುವ ಸುದ್ದಿಯಾಗಿದೆ. ಕಡಿಮೆ ರಕ್ತದೊತ್ತಡ ಸಮಸ್ಯೆಯೇ? ತಪ್ಪದೇ ಈ ಲೇಖನ ಓದಿ...

ಈ ಅಧ್ಯಯನದಲ್ಲಿ 60 ಭಾಗವಹಿಸುವವರು ಪಾಲ್ಗೊಂಡಿದ್ದು 25 ನಿಮಿಷಗಳ ಮೊಜಾರ್ಟ್ ಆಲಿಸಲು ಅವರನ್ನು ಬಿಡಲಾಯಿತು ಸ್ಟಾಕ್ವೋಲ್ಮ್ನಲ್ಲಿ 1972 ರಲ್ಲಿ ರಚನೆಯಾದ ಸ್ವೀಡಿಶ್ ಗುಂಪು ಇದನ್ನು ಆಯೋಜಿಸಿತ್ತು. ಇನ್ನುಳಿದ 60 ಜನರನ್ನು ನಿಯಂತ್ರಿಸಲಾಗಿದ್ದು ಮೌನವಾಗಿರಲು ಅವರಲ್ಲಿ ತಿಳಿಸಲಾಯಿತು. ಬಿಪಿಯನ್ನು ನಿಯಂತ್ರಿಸುವ 'ಆಹಾರ ಪಥ್ಯ', ತಪ್ಪದೇ ಅನುಸರಿಸಿ
ಮೊಜಾರ್ಟ್ ಬಿಪಿಯ (ಅಪ್ಪರ್ ರೀಡಿಂಗ್) ಕಡಿಮೆಗೊಳಿಸಿದ್ದು ಹೃದಯ ಬಡಿತ 4.7 ಎಮ್ಎಮ್ಗೆ ಇಳಿಸಿತ್ತು, ಮೊಜಾರ್ಟ್ ಆಲಿಸುವಿಕೆಯ ಪ್ರಯೋಜನದಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂಬುದು ಇದರಿಂದ ತಿಳಿದು ಬಂದಿತು. ಸಂಗೀತವು ಮಾನವರ ಮೇಲೆ ಅದ್ಭುತ ಪರಿಣಾಮವನ್ನು ಬೀರುತ್ತದೆ. ನಮ್ಮ ಅಧ್ಯಯನದಲ್ಲಿ ಶಾಸ್ತ್ರೀಯ ಸಂಗೀತದ ಆಲಿಸುವಿಕೆಯು ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಕಡಿಮೆ ಮಾಡಿದೆ.ಮೊಜಾರ್ಟ್ ಮತ್ತು ಸ್ಟ್ರಾಸ್ ಸಂಗೀತಗಳಲ್ಲಿ ಈ ಪ್ರಭಾವವು ನಮಗೆ ಸ್ಪಷ್ಟವಾಗಿ ಮನವರಿಕೆಯಾಗಿದೆ ಎಂಬುದು ಜರ್ಮನಿಯ ರಾಹುರ್ ವಿದ್ಯಾಲಯದ ಹಾನ್ಸ್ ಮಾತಾಗಿದೆ. ಅದರಲ್ಲೂ ಮೊಜಾರ್ಟ್ ಆಲಿಸುವಿಕೆಯು ಮಹತ್ವದ ಪರಿಣಾಮವನ್ನು ಬೀರಿದೆ ಎಂಬುದು ಇವರ ಅಭಿಪ್ರಾಯವಾಗಿದೆ. ಕಡಿಮೆ ರಕ್ತದೊತ್ತಡ ಸಮಸ್ಯೆ-ಮಾತ್ರೆ ಬಿಡಿ, ವೃಕ್ಷಾಸನ ಮಾಡಿ
ಇಷ್ಟಲ್ಲದೆ, ಶಾಂತ ಸ್ಥಿತಿಯಲ್ಲಿ ಕುಳಿತುಕೊಳ್ಳುವುದೂ ಕೂಡ ರಕ್ತದೊತ್ತಡವನ್ನು ಕಡಿಮೆ ಮಾಡಲಿದೆ, ಆದರೆ ಸಂಗೀತ ಆಲಿಸುವುದಕ್ಕಿಂತಲೂ ಇವುಗಳ ಪ್ರಭಾವ ಕಡಿಮೆಯಾಗಿದೆ ಎಂಬುದು ಇವರ ಅಭಿಪ್ರಾಯವಾಗಿದೆ.
ಮಹಿಳೆಯರಿಗಿಂತ ಪುರುಷರಲ್ಲಿ ಮೊಜಾರ್ಟ್ ಮತ್ತು ಸ್ಟ್ರಾಸ್ ಆಲಿಸುವಿಕೆಯ ನಂತರ ಕೊಲೆಸ್ಟ್ರಾಲ್ ಮಟ್ಟದಲ್ಲೂ ಇಳಿಕೆ ಕಂಡುಬಂದಿದೆ. ನಿಧಾನಗತಿಯ ಶಾಂತ ಸಂಗೀತ, ದೀರ್ಘ ಅವಿಚ್ಛಿನ್ನ ನುಡಿಗಟ್ಟು, ಬದಲಾಗದ ಚಲನಶಾಸ್ತ್ರ ಮೊದಲಾದವು ಹೃದಯ ಸಂಬಂಧಿ ವ್ಯವಸ್ಥೆಗೆ ಸಹಕಾರಿಯಾಗಿದೆ ಎಂಬುದು Deutsches Arzteblatt International ನಿಯತಕಾಲಿಕೆಯಲ್ಲಿ ಪ್ರಕಟವಾದ ಮಾಹಿತಿಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

