For Quick Alerts
ALLOW NOTIFICATIONS  
For Daily Alerts

ಎಲ್ಲರ ಮನೆಯ ದೋಸೆ ತೂತೇ, ಆದರೆ ಆರೋಗ್ಯಕರ ಗುಣಗಳಲ್ಲ...

By manu
|

ದಕ್ಷಿಣ ಭಾರತದ ಪ್ರತಿ ಮನೆಯಲ್ಲಿ ಅತಿ ಸಾಮಾನ್ಯವಾದ ಎರಡು ತಿಂಡಿಗಳೆಂದರೆ ಇಡ್ಲಿ ಮತ್ತು ದೋಸೆ. ಇವೆರಡೂ ಆರೋಗ್ಯಕರವಾಗಿದ್ದು ರೋಗಿಗಳಿಗೂ ಸೇವಿಸಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. (ಹಾಲು ಅನ್ನ ಅಲ್ಲ). ದೋಸೆಯಲ್ಲಿ ಕೊಂಚವಾದರು ಎಣ್ಣೆಯ ಅಂಶವಿದ್ದರೂ ಇಡ್ಲಿಯಲ್ಲಿ ಇಲ್ಲವೇ ಇಲ್ಲದ ಕಾರಣ ಇವು ಆರೋಗ್ಯವನ್ನು ಹೆಚ್ಚಿಸಲು ನೆರವಾಗುತ್ತವೆ. ದೋಸೆಯಲ್ಲಿ ಹಲವಾರು ವಿಧಗಳಿವೆ. ಸಾಮಾನ್ಯವಾಗಿ ಉದ್ದಿನ ದೋಸೆ ಹೆಚ್ಚು ಜನಪ್ರಿಯ ಇನ್ನುಳಿದಂತೆ ಕಾಯಿ ದೋಸೆ, ನೀರು ದೋಸೆ, ಮೆಂತೆ ದೋಸೆ ಮೊದಲಾದ ಹಲವಾರು ವೈವಿಧ್ಯಗಳಿದ್ದರೂ ಹೆಚ್ಚಿನ ಜನಪ್ರಿಯತೆ ಇರುವುದು ಉದ್ದಿನ ದೋಸೆ ಮತ್ತು ಇದರೊಂದಿಗೆ ಆಲುಗಡ್ಡೆಯ ಮಸಾಲೆಗೆ.

ಅಕ್ಕಿಯನ್ನು ಬಹುಕಾಲ ನೆನೆಸಿಟ್ಟು ಕಡೆಯುವ ಕಾರಣ ಇದರಲ್ಲಿರುವ ಪೋಷಕಾಂಶಗಳು ನಷ್ಟವಾಗದೇ ದೇಹಕ್ಕೆ ಲಭಿಸುವುದೇ ಇದರ ಪೌಷ್ಟಿಕತೆಯ ಗುಟ್ಟು. ವಾಸ್ತವವಾಗಿ ಆರೋಗ್ಯವನ್ನು ಪರಿಗಣಿಸಿದರೆ ಇಂದು ಭಾರತದಲ್ಲಿ ಲಗ್ಗೆ ಹಾಕಿರುವ ಪಿಜ್ಜಾ ಬರ್ಗರುಗಳಿಗಿಂತ ಎಷ್ಟೂ ಪಾಲು ಉತ್ತಮ ಹಾಗೂ ಅಗ್ಗವೂ ಆಗಿವೆ. ಸಿದ್ಧ ಆಹಾರಗಳು ತಿನ್ನಲು ರುಚಿಯಾಗಿದ್ದು ನೋಡಲು ಚೆನ್ನಾಗಿರುತ್ತವೆಯೇ ವಿನಃ ಆರೋಗ್ಯಕರವಲ್ಲ. ಆದರೆ ಇದರ ರುಚಿ ಹೆಚ್ಚಿಸಲು ಸೇರಿಸಲಾಗಿರುವ ಹಲವು ಹಾನಿಕಾರಕ ರಾಸಾಯನಿಕಗಳು ವ್ಯಸನಕಾರಿಯಾಗಿದ್ದು ಒಮ್ಮೆ ಇದರ ರುಚಿ ತಿಳಿದವರು ಮತ್ತೆ ಮತ್ತೆ ಈ ಅನಾರೋಗ್ಯಕರ ಆಕರ್ಷಣೆಯತ್ತ ಜಾರುತ್ತಾರೆ. ಬಗೆ ಬಗೆಯ ದೋಸೆ-ಬಾಯಲ್ಲಿ ನೀರೂರಿಸುತ್ತಿದೆ

ಬದಲಿಗೆ ನಮ್ಮದೇ ಸಾಂಪ್ರಾದಾಯಿಕ ದೋಸೆ ತಿಂದು ಆರೋಗ್ಯ ಹಾಳುಮಾಡಿಕೊಂಡ ಯಾವುದೇ ಉದಾಹರಣೆ ಭಾರತದ ಇತಿಹಾಸಲ್ಲಿಯೇ ಇಲ್ಲ! ದೋಸೆ ತಿಂದ ಬಳಿಕ ಹೊಟ್ಟೆ ತುಂಬಿದಂತಾದರೂ ಇದರಲ್ಲಿ ಕಡಿಮೆ ಕ್ಯಾಲೋರಿಗಳಿರುವ ಕಾರಣ ಇದರಿಂದ ತೂಕ ಏರುವ ಸಂಭವ ಅತಿ ಕಡಿಮೆ. ಆದರೆ ಮಸಾಲೆಯಲ್ಲಿ ಆಲುಗಡ್ಡೆ ಇರುವ ಕಾರಣ ಇದು ಕೊಂಚ ತೂಕ ಹೆಚ್ಚಿಸಲು ನೆರವಾಗಬಹುದು. ಆದ್ದರಿಂದ ಮಸಾಲೆ ದೋಸೆ ಸವಿಯುವ ಬದಲು ಸಾದಾ ದೋಸೆಯನ್ನು ಕಾಯಿಯ ಚಟ್ನಿ, ಉಪ್ಪಿನಕಾಯಿ ಅಥವಾ ಸಾಂಬಾರ್ ಜೊತೆಗೆ ಸವಿದರೆ ರುಚಿಕರವೂ ಹೌದು, ಆರೋಗ್ಯಕರವೂ ಹೌದು. ಆಹಾ, ಬಿಸಿ ಬಿಸಿಯಾದ ಸೆಟ್ ದೋಸೆ ರೆಸಿಪಿ

ದೋಸೆಯ ಗುಣಗಳಲ್ಲಿ ಅತ್ಯುತ್ತಮವೆಂದರೆ ಇದನ್ನು ದಿನದ ಯಾವುದೇ ಹೊತ್ತಿನಲ್ಲಿ ಸೇವಿಸಲು ಸಾಧ್ಯವಾಗುವುದು. ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟಕ್ಕೆ ಬದಲಾಗಿ ದೋಸೆ ತಿನ್ನಬಹುದು. ಇದೇ ಕಾರಣಕ್ಕೆ ಹೆಚ್ಚಿನ ಹೋಟೆಲುಗಳಲ್ಲಿ ದಿನದ ಯಾವುದೇ ಹೊತ್ತಿನಲ್ಲಿ ಬೇರೆ ಯಾವುದೇ ತಿಂಡಿ ಇಲ್ಲದಿದ್ದರೂ ದೋಸೆ ಮಾತ್ರ ತಕ್ಷಣ ತಯಾರಾಗಿ ಬರುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟುಗಳು, ವಿಟಮಿನ್ ಗಳು, ಪ್ರೋಟೀನುಗಳು ಮತ್ತು ವಿವಿಧ ಖನಿಗಳಿಗೆ.

ದೋಸೆಹಿಟ್ಟನ್ನು ನೆನೆಸಿಟ್ಟ ಬಳಿಕ ಬುರುಗು ಬರಲು ಇದರಲ್ಲಿರುವ ಪ್ರೋಬಯೋಟಿಕ್ಸ್ ಎಂಬ ಕಣಗಳು ಕಾರಣ. ಇವು ದೋಸೆಯನ್ನು ಉಬ್ಬಿಸಿ ಗರಿಗರಿಯಾಗಿಸಲು ನೆರವಾಗುವುದಲ್ಲದೇ ಹೊಟ್ಟೆ ಸೇರಿದ ಬಳಿಕ ಸುಲಭವಾಗಿ ಜೀರ್ಣವಾಗಲೂ ನೋಡಿಕೊಳ್ಳುತ್ತದೆ. ಇದರ ಗುಣವನ್ನು ಕಂಡ ಆಹಾರತಜ್ಞರು ಈಗ ಈ ಪ್ರೋಬಯೋಟಿಕ್ಸ್ ಅಂಶವನ್ನು ಮೊಸರಿನಲ್ಲಿ ಸೇರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಕೊಂಚ ದುಬಾರಿಯಾದ ಈ ಮೊಸರನ್ನು ಕೊಳ್ಳುವ ಬದಲು ನಮ್ಮದೇ ಆದ ದೋಸೆಯನ್ನೇಕೆ ನಾವು ತಿನ್ನಬಾರದು? ಬನ್ನಿ, ದೋಸೆಯ ಇನ್ನಷ್ಟು ಉತ್ತಮ ಗುಣಗಳನ್ನು ಈಗ ನೋಡೋಣ..

ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟುಗಳು

ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟುಗಳು

ಒಂದು ಅಥವಾ ಎರಡು ದೋಸೆಗಳನ್ನು ಬೆಳಗ್ಗಿನ ಉಪಾಹಾರವಾಗಿ ಸೇವಿಸಿದರೆ ಸಾಕು, ಮದ್ಯಾಹ್ನದವರೆಗೂ ಬೇರೇನೂ ತಿನ್ನುವ ಅಗತ್ಯವಿಲ್ಲ. ಇದರಲ್ಲಿರುವ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟುಗಳು ನಿಧಾನವಾಗಿ ರಕ್ತಕ್ಕೆ ಬಿಡುಗಡೆಯಾಗುತ್ತಾ ಚಟುವಟಿಕೆಯಿಂದಿರಲು ನೆರವಾಗುತ್ತವೆ. ಒಂದು ವೇಳೆ ಅತಿ ಹೆಚ್ಚಿನ ಚಟುವಟಿಕೆ ಇದ್ದರೆ ಮಾತ್ರ ಮಸಾಲೆ ದೋಸೆ ಸವಿಯುವುದು ಉತ್ತಮ.

ಕಬ್ಬಿಣ ಸಹಿತ ಹಲವು ಖನಿಜಗಳು

ಕಬ್ಬಿಣ ಸಹಿತ ಹಲವು ಖನಿಜಗಳು

ದೋಸೆಯಲ್ಲಿ ಹಲವು ಖನಿಜಗಳಿವೆ, ಆದರೆ ಅತಿ ಕಡಿಮೆ ಪ್ರಮಾಣದಲ್ಲಿವೆ. ಒಂದು ದೋಸೆಯಲ್ಲಿ ಕಡಿಮೆ ಪ್ರಮಾಣದ ಕಬ್ಬಿಣ, ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಇವೆ. ಸಾಂಬಾರ್ ನೊಂದಿಗೆ ದೋಸೆಯನ್ನು ತಿಂದಾಗ ಇತರ ಪ್ರೋಟೀನುಗಳು ಮತ್ತು ಖನಿಜಗಳು ದೊರಕುವ ಕಾರಣ ಈ ಜೋಡಿ ಆರೋಗ್ಯಕರ ಆಹಾರವಾಗಿದೆ.

ಹೃದಯಸ್ನೇಹಿ ಆಹಾರ

ಹೃದಯಸ್ನೇಹಿ ಆಹಾರ

ದೋಸೆಯಲ್ಲಿ ಎಣ್ಣೆ ಇಲ್ಲವೇ ಇಲ್ಲ. ಇರುವುದೇನಿದ್ದರೂ ದೋಸೆ ಕಾವಲಿಗೆ ಹಚ್ಚುವ ಎಣ್ಣೆಯ ಪಸೆಯೇ ಹೊರತು ಬೇರೆ ಎಣ್ಣೆ ಸೇರಿಸುವ ಅಗತ್ಯವಿಲ್ಲ. ಇಂದು ನಾನ್ ಸ್ಟಿಕ್ ಕಾವಲಿಗಳನ್ನು ಬಳಸಿ ಈ ಎಣ್ಣೆಯನ್ನೂ ಬಳಸುವ ಅಗತ್ಯವಿಲ್ಲದೇ ದೋಸೆ ಮಾಡಬಹುದು.

ಹೃದಯಸ್ನೇಹಿ ಆಹಾರ

ಹೃದಯಸ್ನೇಹಿ ಆಹಾರ

ಅಳೆದೂ ಸುರಿದೂ ಲೆಕ್ಕಾಚಾರ ಮಾಡಿದರೆ ಒಂದು ದೋಸೆಯಲ್ಲಿ ಗರಿಷ್ಟ ಎಂದರೆ ಎರಡು ಗ್ರಾಂ ಸಂತುಲಿತ ಕೊಬ್ಬು ಕಂಡುಬರಬಹುದು. ಆದರೆ ಅಸಂತುಲಿತ ಕೊಬ್ಬು ಇಲ್ಲವೇ ಇಲ್ಲದ ಕಾರಣ ಇದರಿಂದ ಹೃದಯಕ್ಕೆ ಹೆಚ್ಚಿನ ಒತ್ತಡ ನೀಡುವ ಅಗತ್ಯವಿಲ್ಲವಾಗುತ್ತದೆ. ಈ ಮೂಲಕ ದೋಸೆ ಹೃದಯಸ್ನೇಹಿಯಾಗಿದೆ.

ಶ್ರಮಸಾಧ್ಯತೆ ಹೆಚ್ಚಿಸುತ್ತದೆ

ಶ್ರಮಸಾಧ್ಯತೆ ಹೆಚ್ಚಿಸುತ್ತದೆ

ಸಾಮಾನ್ಯವಾಗಿ ದೈಹಿಕ ಕೆಲಸ ಮಾಡುವವರಿಗೆ ಹೆಚ್ಚಿನ ಪೌಷ್ಟಿಕ ಆಹಾರದ ಅಗತ್ಯವಿದೆ. ದೋಸೆಯಲ್ಲಿ ಉತ್ತಮ ಪ್ರಮಾಣದ ಪೋಷಕಾಂಶಗಳಿದ್ದರೂ ಹೆಚ್ಚಿನ ಚಟುವಟಿಕೆಗೆ (ಉದಾಹರಣೆಗೆ ಕೃಷಿ ಕೆಲಸ) ಸಾಲದೇ ಹೋಗಬಹುದು.

ಶ್ರಮಸಾಧ್ಯತೆ ಹೆಚ್ಚಿಸುತ್ತದೆ

ಶ್ರಮಸಾಧ್ಯತೆ ಹೆಚ್ಚಿಸುತ್ತದೆ

ಆಗ ದೋಸೆ ಹಿಟ್ಟಿನಲ್ಲಿ ಕೆಲವು ಹಸಿ ತರಕಾರಿಗಳು, ಉದಾಹರಣೆಗೆ ಕ್ಯಾರೆಟ್, ಬೀನ್ಸ್ ಮೊದಲಾದವು ಅಥವಾ ಮಾಂಸಾಹಾರಿಗಳು ದೋಸೆಯ ಮೇಲೆ ಒಂದು ಮೊಟ್ಟೆಯನ್ನು ಹರಡಿ ಹೊಸರುಚಿಯನ್ನು ಸವಿಯಬಹುದು. ಇದರಿಂದ ದೈಹಿಕ ಕೆಲಸ ಸುಲಭ ಮತ್ತು ಹೆಚ್ಚಿನ ಶ್ರಮವಿಲ್ಲದೇ ಸಾಧ್ಯವಾಗುತ್ತದೆ.

ಉತ್ತಮ ಪ್ರೋಟೀನುಗಳಿವೆ

ಉತ್ತಮ ಪ್ರೋಟೀನುಗಳಿವೆ

ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನುಗಳು ಮುಖ್ಯವಾಗಿ ಬೇಕಾಗಿದೆ. ಆದರೆ ಒಮ್ಮೆಲೇ ಅತಿ ಹೆಚ್ಚಿನ ಪ್ರೋಟೀನು ಸಿಕ್ಕರೂ ಅದು ಆರೋಗ್ಯಕ್ಕೆ ಹಾನಿಕರ. ಮಾಂಸಾಹಾರದ ಮೂಲಕ ಪ್ರೋಟೀನುಗಳ ಭಂಡಾರವೇ ಲಭ್ಯವಾಗುತ್ತದೆ.

ಉತ್ತಮ ಪ್ರೋಟೀನುಗಳಿವೆ

ಉತ್ತಮ ಪ್ರೋಟೀನುಗಳಿವೆ

ಆದರೆ ಇದನ್ನು ಬಳಸಿಕೊಳ್ಳಲು ದೇಹ ಸೋಲುತ್ತದೆ. ಬದಲಿಗೆ ದೋಸೆಯಲ್ಲಿ ದಿನಕ್ಕೆ ದೇಹ ಎಷ್ಟು ಪಡೆದುಕೊಳ್ಳಬಹುದೋ ಅಷ್ಟೇ ಪ್ರೋಟೀನುಗಳಿರುವ ಕಾರಣ ಇದು ಸ್ನಾಯುಗಳನ್ನು ಬೆಳೆಸಲು ಪೂರಕವಾಗಿದೆ. ಉತ್ತಮ ಪರಿಣಾಮಕ್ಕಾಗಿ ದೋಸೆಯನ್ನು ಸಾಂಬಾರ್ ಜೊತೆಗೆ ಸೇರಿಸಬಹುದು. ಕ್ರೀಡಾಪಟುಗಳು ಮತ್ತು ಕಾರ್ಮಿಕರು ದೋಸೆಯೊಂದಿಗೆ ಮೊಟ್ಟೆಯನ್ನು ಸೇವಿಸಿದರೆ ಇನ್ನೂ ಹೆಚ್ಚಿನ ಪ್ರೋಟೀನುಗಳು ದೊರಕುತ್ತವೆ.

ತೂಕ ಇಳಿಸಲು ನೆರವು

ತೂಕ ಇಳಿಸಲು ನೆರವು

ಇದರಲ್ಲಿರುವ ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚಿನ ಪ್ರಮಾಣದ ಪಿಷ್ಟ ತೂಕವನ್ನು ಏರಿಸದಿರಲು ನೆರವಾಗುತ್ತವೆ. ಇದೇ ಕಾರಣಕ್ಕೆ ದೋಸೆ ತೂಕ ಇಳಿಸುವವರಿಗೆ ಉತ್ತಮವಾದ ಆಹಾರವಾಗಿದೆ. ಆದರೆ ತಯಾರಿಸುವಾಗ ಇದರಲ್ಲಿ ಎಣ್ಣೆ ಇಲ್ಲದಂತೆ ನೋಡಿಕೊಳ್ಳುವುದು ಮುಖ್ಯ.

ಮಧುಮೇಹಿಗಳಿಗೂ ಉತ್ತಮ

ಮಧುಮೇಹಿಗಳಿಗೂ ಉತ್ತಮ

ಇದರಲ್ಲಿ ಸಕ್ಕರೆ ಅತಿ ಕಡಿಮೆ ಪ್ರಮಾಣದಲ್ಲಿರುವ ಕಾರಣ ಮಧುಮೇಹಿಗಳೂ ದೋಸೆಯನ್ನು ಸವಿಯಬಹುದು. ಆದರೆ ಸಾದಾ ಅಥವಾ ಸೆಟ್ ದೋಸೆಯನ್ನು ಸೇವಿಸಿವುದು ಉತ್ತಮ. ಮಸಾಲೆ ದೋಸೆಯನ್ನು ಮಾತ್ರ ಕಣ್ಣಿನಿಂದ ಸವಿದು ಆನಂದಿಸಿದರೆ ಸಾಕು.

English summary

Health Benefits Of A Dosa

Dosas look like thin paper sheets but they come with lots of health benefits. There are many varieties of dosas. Most of them are made of rice batter and lentils. They are good source of carbs and of course, many other nutrients. in fact, dosas are healthier and tastier than a Pizza or a burger. Now, let us discuss the health benefits of dosa.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X