For Quick Alerts
ALLOW NOTIFICATIONS  
For Daily Alerts

ರಂಜಾನ್ ಉಪವಾಸ: ಪ್ರತಿನಿತ್ಯದ ಆಹಾರ ಕ್ರಮ ಹೀಗಿರಲಿ...

By Hemanth
|

ಒಂದೊಂದು ಧರ್ಮದಲ್ಲಿ ಒಂದೊಂದು ರೀತಿಯ ಆಚರಣೆಗಳು ಇರುತ್ತದೆ. ಅದರಲ್ಲೂ ಮುಸ್ಲಿಮರು ಆಚರಿಸುವಂತಹ ರಂಜಾನ್ ತುಂಬಾ ಪವಿತ್ರವಾದದ್ದು. ರಂಜಾನ್ ತಿಂಗಳಲ್ಲಿ ದಿನವಿಡಿ ಉಪವಾಸವಿರುವ ಕ್ರಮವನ್ನು ತುಂಬಾ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಉಪವಾಸ ಮಾಡಲು ಆರಂಭಿಸಿದ ಬಳಿಕ ಕೆಲವರಲ್ಲಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ರಂಜಾನ್ ಮಾಸದಲ್ಲಿ ಮಧುಮೇಹಿ ರೋಗಿಗಳ ಪಾಡೇನು?

ದೈನಂದಿನ ಆಹಾರ, ಜೀವನಶೈಲಿ ಬದಲಾವಣೆ, ನೀರು ಹಾಗೂ ನೀರಿನಾಂಶವಿರುವ ಆಹಾರಗಳ ಸೇವನೆ ಕಡಿಮೆ ಮಾಡಿಕೊಂಡಿರುವುದು ಮಲಬದ್ಧತೆಗೆ ಪ್ರಮುಖ ಕಾರಣಗಳಾಗಿವೆ. ಮುಸ್ಲಿಮರ ಪ್ರಕಾರ ದೇವರಿಗೆ ಹತ್ತಿರವಾಗಲು ಮತ್ತು ಅದೃಷ್ಟವಿಲ್ಲದೆ ಅನುಭವಿಸುವವರ ಸ್ಥಿತಿಯನ್ನು ಅರಿಯಲು ಉಪವಾಸ ಆಚರಿಸಲಾಗುತ್ತದೆ. ರಂಜಾನ್ ಸಂದರ್ಭದಲ್ಲಿ ಶ್ರೀಮಂತ ಮುಸ್ಲಿಮರು ಬಡವರಿಗೆ ದಾನ ಮಾಡುವುದನ್ನು ನಾವು ನೋಡಿದ್ದೇವೆ. ರಂಜಾನ್ ಸಮಯದಲ್ಲಿ ಮಾಡುವ ಉಪವಾಸದ ಮಹತ್ವ

ಈ ತಿಂಗಳಲ್ಲಿ ಸಂಪೂರ್ಣವಾಗಿ ಪ್ರಾರ್ಥನೆಗೆ ಮೀಸಲಾಗಿರುತ್ತದೆ. ಬೆಳಗ್ಗಿನ ಅವಧಿಯಲ್ಲಿ ಪ್ರಾರ್ಥಿಸಿದ ಬಳಿಕ ಆಹಾರ ಸೇವಿಸಲಾಗುತ್ತದೆ. ಇದನ್ನು ಸುಹೂರ್ ಎನ್ನಲಾಗುತ್ತದೆ. ಇದರ ಬಳಿಕ ದಿನವಿಡಿ ಒಂದು ಹನಿ ನೀರು ಸೇವಿಸುವಂತಿಲ್ಲ. ಇದರ ಬಳಿಕ ಸಂಜೆ ಸೂರ್ಯ ಮುಳುಗಿದ ಬಳಿಕ ತೆಗೆದುಕೊಳ್ಳುವ ಆಹಾರವನ್ನು ಇಫ್ತಾರ್ ಎನ್ನಲಾಗುತ್ತದೆ. ಇದರಲ್ಲಿ ಸಾಕಷ್ಟು ಆಹಾರಗಳಿರುತ್ತದೆ.

ಆಹಾರ ಕ್ರಮದಲ್ಲಿ ಹಠಾತ್ ಆಗಿ ಬದಲಾವಣೆ ಆಗಿರುವುದರಿಂದ ಕೆಲವರಲ್ಲಿ ಮಲಬದ್ಧತೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗಿ ಅದರಿಂದ ಪೈಲ್ಸ್ ಸಮಸ್ಯೆ ಕಾಡಬಹುದು. ರಂಜಾನ್ ತಿಂಗಳಲ್ಲಿ ಇಂತಹ ಸಮಸ್ಯೆಯನ್ನು ನಿವಾರಿಸಲು ಬೋಲ್ಡ್ ಸ್ಕೈ ಯಾವೆಲ್ಲಾ ಆಹಾರಗಳನ್ನು ತಿನ್ನಬಹುದು ಎಂದು ಹೇಳಲಿದೆ. ಸುಹೂರ್ ಮತ್ತು ಇಫ್ತಾರ್‌ನಲ್ಲಿ ಈ ಆಹಾರಗಳನ್ನು ಬಳಸಿ...

ತರಕಾರಿಗಳನ್ನು ಬಳಸಿ

ತರಕಾರಿಗಳನ್ನು ಬಳಸಿ

ತರಕಾರಿಯಲ್ಲಿ ಹಲವಾರು ರೀತಿಯ ನಾರಿನಾಂಶಗಳಿವೆ. ಇದು ತುಂಬಾ ಆರೋಗ್ಯಕಾರಿ. ಬೀನ್ಸ್, ಬೀಜಗಳು ಮತ್ತು ಗಜ್ಜರಿ ರಂಜಾನ್ ಸಮಯದಲ್ಲಿ ನಿಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳಿ. ಇದು ನಿಮ್ಮ ಮಲವನ್ನು ಮೃಧುವಾಗಿಸಿ ಸುಲಭವಾಗಿ ಹೊರಹೋಗಲು ನೆರವಾಗುವುದು.

ಹಣ್ಣುಗಳನ್ನು ಬಳಸಿ

ಹಣ್ಣುಗಳನ್ನು ಬಳಸಿ

ಸೇಬು, ಬಾಳೆಹಣ್ಣು, ಪಪ್ಪಾಯಿ, ಫ್ಯಾಷನ್ ಫ್ರೂಟ್, ಅವಕೋಡ್ ಇತ್ಯಾದಿ ಹಣ್ಣುಗಳನ್ನು ಬಳಸಿ. ಇದರಲ್ಲಿ ನಾರಿನಾಂಶ ಅಧಿಕಾಗಿದೆ. ಇದನ್ನು ಸುಹೂರ್ ವೇಳೆ ತಿನ್ನಿ. ಇದು ದೇಹಕ್ಕೆ ಬೇಕಿರುವ ನೀರಿನಾಂಶವನ್ನು ಒದಗಿಸುತ್ತದೆ.

ಧಾನ್ಯ ಹಾಗೂ ದ್ವಿದಳ ಧಾನ್ಯಗಳನ್ನು ತಿನ್ನಿ

ಧಾನ್ಯ ಹಾಗೂ ದ್ವಿದಳ ಧಾನ್ಯಗಳನ್ನು ತಿನ್ನಿ

ತುಂಬಾ ನಿಧಾನವಾಗಿ ಜೀರ್ಣವಾಗುವಂತಹ ಓಟ್ಸ್, ಪಲ್ಸ್, ಗೋಧಿ, ಫ್ಲೆಕ್ಸ್ ಬೀಜ ಇತ್ಯಾದಿಗಳನ್ನು ಬಳಸಿ. ಇವುಗಳನ್ನು ನೀವು ಆಹಾರದಲ್ಲಿ ಅಳವಡಿಸಿದರೆ ರಂಜಾನ್ ತಿಂಗಳಲ್ಲಿ ಆಗುವಂತಹ ಮಲಬದ್ಧತೆ ನಿವಾರಣೆಯಾಗುವುದು.

ಕೊಬ್ಬು ಕಡಿಮೆಯಿರುವ ಆಹಾರ

ಕೊಬ್ಬು ಕಡಿಮೆಯಿರುವ ಆಹಾರ

ಚರ್ಮ ರಹಿತ ಕೋಳಿ, ಮೀನು ಇತ್ಯಾದಿಗಳಲ್ಲಿ ಕೊಬ್ಬು ತುಂಬಾ ಕಡಿಮೆ ಇರುತ್ತದೆ ಮತ್ತು ಇದೇ ವೇಳೆ ಪ್ರೋಟೀನ್ ಅಧಿಕವಾಗಿರುತ್ತದೆ. ಇದರಿಂದ ರಂಜಾನ್ ಉಪವಾಸದ ವೇಳೆ ನಿಮ್ಮ ಪ್ರತಿರೋಧಕ ಶಕ್ತಿ ಬಲಗೊಳ್ಳುತ್ತದೆ. ಉಪವಾಸದ ವೇಳೆ ಮಲಬದ್ಧತೆಯನ್ನು ದೂರವಿರಿಸಲು ಉಪವಾಸಕ್ಕೆ ಮೊದಲು ಮತ್ತು ಬಳಿಕ ಸಾಕಷ್ಟು ನೀರು ಕುಡಿಯಿರಿ.

ಜೈವಿಕ ಆಹಾರ ಅಳವಡಿಸಿ

ಜೈವಿಕ ಆಹಾರ ಅಳವಡಿಸಿ

ಜೈವಿಕ ಆಹಾರವಾಗಿರುವ ಮೊಸರನ್ನು ಆಹಾರದಲ್ಲಿ ಅಳವಡಿಸಿ. ರಂಜಾನ್ ಉಪವಾಸದ ವೇಳೆ ಕಡಿಮೆ ಕ್ಯಾಲರಿ ಇರುವ ಆಹಾರಗಳನ್ನು ಸೇವಿಸುವುದರಿಂದ ಉಂಟಾಗುವ ಮಲಬದ್ಧತೆಯನ್ನು ನಿವಾರಿಸಲು ಮೊಸರನ್ನು ಅಧಿಕವಾಗಿ ಸೇವಿಸಿ.

ಜ್ಯೂಸ್ ಹಾಗೂ ನೀರು

ಜ್ಯೂಸ್ ಹಾಗೂ ನೀರು

ನೀರನ್ನು ಹೊರತುಪಡಿಸಿ ತಾಜಾ ಹಣ್ಣುಗಳ ಜ್ಯೂಸ್ ನ್ನು ರಂಜಾನ್ ಉಪವಾಸದ ಆಹಾರದಲ್ಲಿ ಅಳವಡಿಸುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗಬಹುದು. ಸೀಯಾಳ, ಕಿತ್ತಳೆ, ಅನಾನಸು ಮತ್ತು ದ್ರಾಕ್ಷಿ ಜ್ಯೂಸ್ ನ್ನು ಕುಡಿಯುವುದರಿಂದ ನಿರ್ಜಲೀಕರಣ ದೂರವಿಡಬಹುದು.

ಖರ್ಜೂರ

ಖರ್ಜೂರ

ರಂಜಾನ್ ಉಪವಾಸದ ಆಹಾರ ಕ್ರಮದಲ್ಲಿ ಖರ್ಜೂರವನ್ನು ಬಳಸಿಕೊಳ್ಳಿ. ಕರ್ಜೂರದಲ್ಲಿ ನಾರಿನಾಂಶ, ಕಾರ್ಬೋಹೈಡ್ರೆಟ್ಸ್, ಪೊಟಾಶಿಯಂ, ಮೆಗ್ನಿಶಿಯಂ ಮತ್ತು ಸಕ್ಕರೆಯಂಶ ಹೆಚ್ಚಿದೆ. ಇದು ಸಕ್ಕರೆ ಮಟ್ಟವನ್ನು ನಿಯಂತ್ರದಲ್ಲಿಟ್ಟು ನಿಶಕ್ತಿಯನ್ನು ದೂರವಿಡುತ್ತದೆ.

ಬಾದಾಮಿ

ಬಾದಾಮಿ

ಇತರ ಎಲ್ಲಾ ಒಣ ಹಣ್ಣುಗಳಿಗಿಂತ ಬಾದಾಮಿಯನ್ನು ರಂಜಾನ್ ಉಪವಾಸದ ವೇಳೆ ಬಳಸಿದರೆ ಅದು ಅತೀ ಹೆಚ್ಚು ಉಪಯೋಗಕಾರಿ. ಬಾದಾಮಿಯಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಮತ್ತು ನಾರಿನಾಂಶವಿದೆ ಮತ್ತು ಇದರಲ್ಲಿ ಕೊಬ್ಬಿನ ಅಂಶ ಕಡಿಮೆಯಿದೆ.

English summary

Have These Healthy Foods To Avoid Constipation During Ramzan

The holy month of Ramzan is here. Fasting all through the month, during the day, has been one of the customs that has been followed since the ancient times by the Muslim community. The change in the routine food and lifestyle with reduced intake of fluids, water and fibres are the chief reasons leading to constipation. So boldsky brings to you a list of foods that should be included, especially for the 'suhoor' and 'iftar'. Have a look:
X
Desktop Bottom Promotion