For Quick Alerts
ALLOW NOTIFICATIONS  
For Daily Alerts

ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಈ ಆಹಾರಗಳನ್ನು ಸೇವಿಸಬೇಡಿ....

By Arshad
|

ಅಜೀರ್ಣ, ಹೊಟ್ಟೆಯುಬ್ಬರ, ಹೊಟ್ಟೆನೋವು, ಅಪಾನವಾಯು, ಹೊಟ್ಟೆಯುರಿ ಮೊದಲಾದವೆಲ್ಲಾ ಗ್ಯಾಸ್ಟ್ರಿಕ್ ಅಥವಾ ವಾಯುಪ್ರಕೋಪದ ಪರಿಣಾಮಗಳಾಗಿವೆ. ಈ ತೊಂದರೆಗಳಿಗೆ ಸೂಕ್ತವಾದ ಔಷಧಿಗಳಿವೆ. ನಿಮ್ಮ ಕುಟುಂಬ ವೈದ್ಯರು ನಿಮ್ಮ ಆರೋಗ್ಯವನ್ನು ಗಮನಿಸಿ ಸೂಕ್ತವಾದ ಔಷಧಿಗಳನ್ನು ನೀಡುತ್ತಾರೆ. ಆದರೆ ಈ ಬಾರಿ ಔಷಧಿ ಸೇವಿಸಿದಾಗ ವಾಯುಪ್ರಕೋಪ ಕಡಿಮೆಯಾಗಬಹುದು. ಆದರೆ ಕೆಲದಿನಗಳ ನಂತರ ಮತ್ತೆ ಕಾಣಿಸಿಕೊಂಡರೆ? ಗ್ಯಾಸ್ಟ್ರಿಕ್ ಸಮಸ್ಯೆ ತಡೆಯಲು ಟಿಪ್ಸ್

ಇದಕ್ಕೆ ಮುಖ್ಯ ಕಾರಣ ನಿಮ್ಮ ವಾಯುಪ್ರಕೋಪ ಪೂರ್ಣವಾಗಿ ಗುಣವಾಗುವ ಮುನ್ನವೇ ನಿಮಗಾಗದ ಯಾವುದೋ ಆಹಾರ ಸೇವಿಸಿದ್ದರ ಪರಿಣಾಮವಾಗಿ ನಿಮ್ಮ ವೈದ್ಯರು ನೀಡಿದ್ದ ಔಷಧಿಯ ಪರಿಣಾಮವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಯಿತು. ಗರ್ಭಿಣಿಯರ ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾತ್ರೆಯ ಹಂಗೇಕೆ?

ಈಗ ಮತ್ತೊಮ್ಮೆ ಹೋದಾಗ ವೈದ್ಯರ ಬಳಿ ಬೈಸಿಕೊಳ್ಳುವುದಂತೂ ಖಚಿತ. ಆದರೆ ಮುಂದಿನ ಬಾರಿ ಬೈಸಿಕೊಳ್ಳಬಾರದು ಎಂದಿದ್ದರೆ ನಿಮಗೆ ಸೂಕ್ತವಲ್ಲದ ಆಹಾರವನ್ನು ಸೇವಿಸದಿದ್ದರೆ ಸರಿ. ಆದರೆ ಈ ಆಹಾರಗಳು ಯಾವುವು? ವೈದ್ಯರ ಬಳಿ ಈಗ ಕೇಳಲಿಕ್ಕೆ ಧೈರ್ಯವಾಗುತ್ತಿಲ್ಲವೇ, ತೊಂದರೆಯಿಲ್ಲ, ಈ ಲೇಖನ ಓದಿ.....

ಎಲೆಕೋಸು

ಎಲೆಕೋಸು

ಈ ಪಟ್ಟಿಯಲ್ಲಿ ಬರುವ ಮೊದಲ ಆಹಾರವೇ ಎಲೆಕೋಸು. ಇದರಲ್ಲಿ ನಾರು ತುಂಬಾ ಹೆಚ್ಚಾಗಿದ್ದು ಪದರ ಪದರವಾಗಿರುವ ಈ ತರಕಾರಿ ಸುಲಭವಾಗಿ ಜೀರ್ಣವಾಗದು. ಇದೇ ಕಾರಣಕ್ಕೆ ಅಜೀರ್ಣತೆಯಿಂದ ವಾಯುಪ್ರಕೋಪ ಕಂಡುಬಂದಿದ್ದರೆ ಎಲೆಕೋಸನ್ನು ಸರ್ವಥಾ ಸೇವಿಸಬಾರದು.

ಎಲೆಕೋಸು

ಎಲೆಕೋಸು

ಏಕೆಂದರೆ ಮೊದಲೇ ಅಜೀರ್ಣದಿಂದ ಬಳಲಿದ್ದ ಕರುಳುಗಳು ಈ ನಾರನ್ನು ಸರ್ವಥಾ ಜೀರ್ಣಿಸಲಾರವು. ಅಪ್ಪಿ ತಪ್ಪಿ ಮದ್ಯಾಹ್ನ ಮರೆತಾದರೂ ಕೊಂಚ ತಿಂದರೆ ಪರವಾಗಿಲ್ಲ, ಆದರೆ ರಾತ್ರಿ ಮಾತ್ರ ತಿನ್ನಲೇಬಾರದು.

ಆಲೂಗಡ್ಡೆ

ಆಲೂಗಡ್ಡೆ

ಅತಿಹೆಚ್ಚಿನ ಸಂಖ್ಯೆಯ ಖಾದ್ಯಗಳಲ್ಲಿ ಸಾಮಾನ್ಯವಾಗಿರುವ ಆಲೂಗಡ್ಡೆಯ ಖ್ಯಾತಿ ಎಷ್ಟೇ ಇದ್ದರೂ ವಾಯುಪ್ರಕೋಪವಿದ್ದಾಗ ಇದು ಸರ್ವಥಾ ಸೇವಿಸಲು ಅಯೋಗ್ಯವಾದ ತರಕಾರಿಯಾಗಿದೆ. ಏಕೆಂದರೆ ಆಲುಗಡ್ಡೆಯಲ್ಲಿರುವ ಪಿಷ್ಟ ಜೀರ್ಣಕ್ರಿಯೆ ಸರಿಯಾಗಿಲ್ಲದ ಸಮಯದಲ್ಲಿ ಸರಿಯಾಗಿ ಜೀರ್ಣವಾಗದೇ ಹೊಟ್ಟೆಯನ್ನು ಕೆಡಿಸುತ್ತದೆ.

ಆಲೂಗಡ್ಡೆ

ಆಲೂಗಡ್ಡೆ

ಅಲ್ಲದೇ ಒಂದು ವೇಳೆ ಯಾವುದಾದರೂ ದ್ವಿದಳ ಧಾನ್ಯಗಳೊಂದಿಗೆ ಸೇವಿಸಿದರಂತೂ ಹೊಟ್ಟೆಯಲ್ಲಿ ಅತಿ ಹೆಚ್ಚಿನ ವಾಯು ತುಂಬಿಕೊಳ್ಳಲು ಪರೋಕ್ಷವಾಗಿ ಕಾರಣವಾಗುತ್ತದೆ.

ಸಿಹಿಲಿಂಬೆ

ಸಿಹಿಲಿಂಬೆ

ಲಿಂಬೆಯಲ್ಲಿ ಕೊಂಚ ದೊಡ್ಡ ಗಾತ್ರದ ಸಿಹಿಲಿಂಬೆ(Citrus limetta) ಯ ಸೇವನೆಯೂ ಅಜೀರ್ಣದ ಸಮಯದಲ್ಲಿ ತರವಲ್ಲ. ಇದರಲ್ಲಿರುವ ವಿಟಮಿನ್ ಸಿ ಹೊಟ್ಟೆಯಲ್ಲಿ ಗಾಳಿ ತುಂಬಿದ್ದ ಸಮಯದಲ್ಲಿ ವ್ಯತಿರಿಕ್ತ ಪರಿಣಾಮವನ್ನುಂಟುಮಾಡುತ್ತದೆ.

ಲಿಂಬೆ

ಲಿಂಬೆ

ಅಲ್ಲದೇ ಹೊಟ್ಟೆಯ ಒಳಗೋಡೆಗಳಲ್ಲಿ ಪ್ರಚೋದನೆಯುಂಟುಮಾಡಿ ಇನ್ನೂ ಹೆಚ್ಚಿನ ಜೀರ್ಣರಸಗಳು ಸ್ರವಿಸುವಂತೆ ಮಾಡುತ್ತದೆ. ಇದು ಇನ್ನಷ್ಟು ಅಜೀರ್ಣ, ಹೊಟ್ಟೆಯುರಿಗೆ ಕಾರಣವಾಗುತ್ತದೆ. ಆದ್ದರಿಂದ ಸಿಹಿಲಿಂಬೆಯ ರಸವನ್ನು ಈ ಸಮಯದಲ್ಲಿ ಸರ್ವಥಾ ಸೇವಿಸಬಾರದು.

ಸೌತೆಕಾಯಿ

ಸೌತೆಕಾಯಿ

ರಾತ್ರಿಯೂಟದ ಸಮಯದಲ್ಲಿ ಸೌತೆಕಾಯಿ ತಿನ್ನುವ ಮೂಲಕ ಬೊಜ್ಜು ಇಳಿಸಬಹುದು ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಆದರೆ ಹೊಟ್ಟೆಯುಬ್ಬರವಿದ್ದ ಸಮಯದಲ್ಲಿ ಸೌತೆಕಾಯಿಯ ಸೇವನೆಯೂ ನಮ್ಮ ಲೆಕ್ಕಾಚಾರವೆನ್ನಲ್ಲಾ ತಲೆಕೆಳಗಾಗಿಸುತ್ತದೆ.

ಸೌತೆಕಾಯಿ

ಸೌತೆಕಾಯಿ

ಸೌತೆಯಲ್ಲಿರುವ ಕರಗುವ ನಾರು ಜೀರ್ಣಕ್ರಿಯೆಯನ್ನು ಇನ್ನಷ್ಟು ನಿಧಾನಗೊಳಿಸುವ ಮೂಲಕ ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳಲು ಕಾರಣವಾಗುತ್ತದೆ. ಇದೇ ಕಾರಣಕ್ಕೆ ರಾತ್ರಿಯೂಟದ ಬಳಿಕ ಸೌತೆಕಾಯಿ ತಿಂದರೆ ಹೊಟ್ಟೆ ವಿಪರೀತವಾಗಿ ಉಬ್ಬಿರುತ್ತದೆ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ನೀರು ಅತಿಹೆಚ್ಚು ಇರುವ ಹಣ್ಣಾದ ಕಲ್ಲಂಗಡಿಯಲ್ಲಿಯೂ ಕರಗದ ನಾರು ಉತ್ತಮ ಪ್ರಮಾಣದಲ್ಲಿದೆ. ಇದೂ ಈಗಾಗಲೇ ವಾಯುಪ್ರಕೋಪದಿಂದ ನರಳುತ್ತಿರುವ ಜೀರ್ಣಾಂಗಗಳ ಕಷ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಅಲ್ಲದೇ ಇದರಲ್ಲಿರುವ ಮ್ಯಾನಿಟ್ಟಾಲ್ ಎಂಬ ಸಕ್ಕರೆ ಜೀರ್ಣರಸಗಳಲ್ಲಿ ಬೆರೆತಾಗ ಹೆಚ್ಚಿನ ಪ್ರಮಾಣದಲ್ಲಿ ವಾಯು ಉತ್ಪತ್ತಿಯಾಗುತ್ತದೆ. ಇದು ವಾಯುಪ್ರಕೋಪವನ್ನು ಬಹಳಷ್ಟು ಹೆಚ್ಚಿಸುತ್ತದೆ.

English summary

Foods to avoid if you have gastric problems

What to do when you suffer from bloating, stomach pain, belching and flatulence – gastric problems? Of course, you should consult your doctor and take pills as advised. But in the meanwhile, here are few foods you must avoid for a few days till the symptoms subside.
X
Desktop Bottom Promotion