For Quick Alerts
ALLOW NOTIFICATIONS  
For Daily Alerts

  ಮಳೆಗಾಲದಲ್ಲಿ ಕಣ್ಣಿನ ರಕ್ಷಣೆ: ಮರೆಯದೇ ಈ ಟಿಪ್ಸ್ ಅನುಸರಿಸಿ

  By Jaya subramanya
  |

  ಮಳೆಗಾಲ ಇಳೆಗೆ ಮೈಮನಸ್ಸಿಗೆ ತಂಪನ್ನು ಎರೆದರೂ ರೋಗ ರುಜಿನಗಳ ಸಾಲನ್ನೇ ಹೊತ್ತು ತರುತ್ತದೆ. ಬಿಸಿಲಿಗೆ ಬಳಲಿ ಬೆಂಡಾಗಿದ್ದ ಭುಮಿಗೆ ತಂಪಿನ ಪನ್ನೀರನ್ನು ಹರಿಸಿದರೂ ಮಳೆಗಾಲ ಸಾಕಷ್ಟು ನಷ್ಟಗಳನ್ನು ಉಂಟುಮಾಡುತ್ತದೆ ಎಂಬ ಮಾತಂತೂ ಸುಳ್ಳಲ್ಲ. ಸಾಕಪ್ಪಾ ಮಳೆ ಎಂಬ ಉದ್ಗಾರ ಕೂಡ ನಮ್ಮ ಬಾಯಲ್ಲಿ ಬರುವುದರಲ್ಲಿ ಆಶ್ಚರ್ಯವಿರುವುದಿಲ್ಲ. ಕಣ್ಣಿನ ದೃಷ್ಟಿ ಸಾಮರ್ಥ್ಯ ಕಾಪಾಡಲು ಆಯುರ್ವೇದ ಟಿಪ್ಸ್ 

  ಆಗ ತಾನೇ ಸಿದ್ಧರಾಗಿ ಕಚೇರಿ ಶಾಲೆಗಳಿಗೆ ಹೋಗುವ ಜನರು ಮುನ್ಸೂಚನೆಯೇ ಇಲ್ಲದೆ ಮಳೆಯಲ್ಲಿ ನೆನೆದು ಹೋಗಿ ಬಟ್ಟೆಯೆಲ್ಲಾ ತೊಯ್ದಲ್ಲಿ ಆ ದಿನವೆಲ್ಲಾ ಮಳೆಗೆ ಹಿಡಿಶಾಪವೇ ಗತಿ. ಆದರೂ ವರ್ಷಧಾರೆ ತನ್ನಷ್ಟಕ್ಕೆ ತಾನು ಸುರಿಯುತ್ತಾ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತದೆ.

  ಮಳೆಗಾಲದಲ್ಲಿ ವೈರಲ್ ಸೋಂಕುಗಳು, ಜ್ವರ ಶೀತ ನೆಗಡಿ ಕೆಮ್ಮು, ಮಲೇರಿಯಾ ಡೆಂಗ್ಯೂ ಜ್ವರಗಳಿಗೆ ನಾವು ತುತ್ತಾಗದೇ ಇರುವುದಿಲ್ಲ. ಇದರ ಜೊತೆಗೆ ಕಣ್ಣಿನ, ಗಂಟಲಿನ ಸೋಂಕುಗಳಿಗೆ ನಾವು ತುತ್ತಾಗುತ್ತೇವೆ. ಮಳೆಗಾದಲ್ಲಿ ಈ ಕಾಯಿಲೆಗಳು ಸಾಮಾನ್ಯವಾಗಿದ್ದರೂ ಇದಕ್ಕಾಗಿ ಸೂಕ್ತ ಕ್ರಮಗಳನ್ನು ನಾವು ಕೈಗೊಳ್ಳುವುದು ಅನಿವಾರ್ಯವಾಗಿರುತ್ತದೆ. ಮೀನು ತಿಂದರೆ ಕಣ್ಣಿನ ದೃಷ್ಟಿ ದೋಷದಿಂದ ದೂರವಿರಬಹುದು! 

  ಮಳೆಗಾಲದಲ್ಲಿ ನಾವು ಸಂಪೂರ್ಣ ಒದ್ದೆಯಾಗುವುದರಿಂದ ದೇಹದ ಸಂಪೂರ್ಣ ಭಾಗಗಳನ್ನು ಸಂರಕ್ಷಿಸುವುದು ಕಷ್ಟವಾಗಿರುತ್ತದೆ. ಕಣ್ಣು ತೀವ್ರವಾಗಿ ಮಳೆಗಾಲದಲ್ಲಿ ಒದ್ದೆಯಾಗಿಬಿಡುತ್ತದೆ. ಆದ್ದರಿಂದ ಕಣ್ಣಿಗೆ ಬೇಕಾದ ಸೂಕ್ತ ಜಾಗರೂಕತಾ ಕ್ರಮಗಳನ್ನು ನಾವು ತೆಗೆದುಕೊಳ್ಳಲೇಬೇಕಾಗುತ್ತದೆ. ಇಂದಿನ ಲೇಖನದಲ್ಲಿ ಕಣ್ಣಿನ ಸಂರಕ್ಷಣೆಯನ್ನು ಮಳೆಗಾಲದಲ್ಲಿ ಮಾಡುವುದು ಹೇಗೆ ಎಂಬುದನ್ನು ಕುರಿತು ನಾವು ತಿಳಿಸಲಿದ್ದೇವೆ, ಮುಂದೆ ಓದಿ....

  ಕಣ್ಣುಗಳನ್ನು ತೊಳೆದುಕೊಳ್ಳಿ

  ಕಣ್ಣುಗಳನ್ನು ತೊಳೆದುಕೊಳ್ಳಿ

  ನಿಮ್ಮ ಕಣ್ಣುಗಳು ಒದ್ದೆಯಾಗಿದ್ದಲ್ಲಿ ಅಥವಾ ರಸ್ತೆ ಬದಿಯ ನೀರು ನಿಮ್ಮ ಮುಖಕ್ಕೆ ರಾಚಿ ಕಣ್ಣಿಗೆ ಅದು ಸಿಂಪಡಣೆಯಾಗಿದ್ದಲ್ಲಿ ಮೊದಲಿಗೆ ನೀವು ಮಾಡಬೇಕಾದ್ದು ಕಣ್ಣುಗಳನ್ನು ತೊಳೆದುಕೊಳ್ಳುವುದಾಗಿದೆ. ನಿಮ್ಮ ಕಣ್ಣಿನಲ್ಲಿರುವ ಕೊಳೆಯನ್ನು ನೀಗಿಸಲು ಈ ತೊಳೆಯುವಿಕೆ ಸಹಾಯ ಮಾಡುತ್ತದೆ.

  ಕಣ್ಣುಗಳನ್ನು ಉಜ್ಜಿಕೊಳ್ಳದಿರಿ

  ಕಣ್ಣುಗಳನ್ನು ಉಜ್ಜಿಕೊಳ್ಳದಿರಿ

  ಕಣ್ಣಿನಲ್ಲಿ ತುರಿಕೆ ಉಂಟಾದಾಗ ನಾವು ಒಮ್ಮೆಲೇ ಕಣ್ಣುಗಳನ್ನು ಉಜ್ಜಿಕೊಳ್ಳುತ್ತೇವೆ. ಕಣ್ಣಿನ ಸೋಂಕನ್ನು ನಿವಾರಿಸಿಕೊಳ್ಳಲು ಉಜ್ಜಿಕೊಳ್ಳುವುದನ್ನು ನಾವು ಬಿಡಬೇಕು.

  ಕರವಸ್ತ್ರ ಮತ್ತು ಟವೆಲ್‎ಗಳನ್ನು ಹಂಚಿಕೊಳ್ಳದಿರಿ

  ಕರವಸ್ತ್ರ ಮತ್ತು ಟವೆಲ್‎ಗಳನ್ನು ಹಂಚಿಕೊಳ್ಳದಿರಿ

  ಬೇರೆ ಬೇರೆ ಕಣ್ಣಿನ ಸೋಂಕುಗಳನ್ನು ಹೊಂದಿರುವವರೊಂದಿಗೆ ನಿಮ್ಮ ಕರವಸ್ತ್ರ ಮತ್ತು ಟವೆಲ್‎ಗಳನ್ನು ಹಂಚಿಕೊಳ್ಳದಿರಿ. ಇದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ.

  ಸ್ವಚ್ಛವಾದ ಕಾಂಟಾಕ್ಟ್ ಲೆನ್ಸ್ ಬಳಸಿ

  ಸ್ವಚ್ಛವಾದ ಕಾಂಟಾಕ್ಟ್ ಲೆನ್ಸ್ ಬಳಸಿ

  ಕಾಂಟಾಕ್ಟ್ ಲೆನ್ಸ್ ಬಳಸುತ್ತಿರುವವರು, ಮೊದಲಿಗೆ ಅದನ್ನು ಸ್ವಚ್ಛಮಾಡಿ ನಂತರ ಬಳಸಿ. ನೀರು ಇರುವ ಪ್ರದೇಶಗಳಲ್ಲಿ ನಿಂತುಕೊಳ್ಳುವುದನ್ನು ಆದಷ್ಟು ಕಡಿಮೆ ಮಾಡಿ, ವಾಹನಗಳು ಈ ನೀರನ್ನು ಚಿಮ್ಮಿಸಿದಾಗ ಇದು ನಿಮ್ಮ ಕಣ್ಣುಗಳಿಗೆ ಸಿಡಿದು ಅಲ್ಲಿ ಕೊಳೆ ನಿಲ್ಲುವ ಸಾಧ್ಯತೆ ಇರುತ್ತದೆ.

  ತಿನ್ನುವ ಆಹಾರದ ಮೇಲೆ ಗಮನವಿರಲಿ

  ತಿನ್ನುವ ಆಹಾರದ ಮೇಲೆ ಗಮನವಿರಲಿ

  ನಿಮ್ಮ ಕಣ್ಣುಗಳ ಆರೈಕೆಯನ್ನು ಹೊರಭಾಗದಲ್ಲಿ ಹೇಗೆ ಮಾಡುತ್ತೀರೋ ಅಂತೆಯೇ ದೈಹಿಕ ಆರೋಗ್ಯಕ್ಕೂ ಗಮನ ಹರಿಸಬೇಕು. ಮಳೆಗಾದಲ್ಲಿ ರಸ್ತೆಬದಿಯ ಆಹಾರ ಪದಾರ್ಥಗಳ ಸೇವನೆಯನ್ನು ಮಾಡಲೇಬೇಡಿ.

  ಸನ್ ಗ್ಲಾಸ್‎ಗಳನ್ನು ಬಳಸಿ

  ಸನ್ ಗ್ಲಾಸ್‎ಗಳನ್ನು ಬಳಸಿ

  ಮಳೆಗಾದಲ್ಲಿ ಹೊರಹೋಗಬೇಕಾದ ಸಂದರ್ಭಗಳಲ್ಲಿ, ನಿಮ್ಮ ಕಣ್ಣುಗಳನ್ನು ಗಾಳಿ ಮತ್ತು ಧೂಳಿನಿಂದ ಸಂರಕ್ಷಿಸಿಕೊಳ್ಳಲು ಸನ್ ಗ್ಲಾಸ್‎ಗಳನ್ನು ಬಳಸಿ. ನಿಮ್ಮ ಕಣ್ರೆಪ್ಪೆಗಳನ್ನು ತಲುಪುವ ಧೂಳಿನ ಕಣಗಳಿಂದ ನಿಮ್ಮನ್ನು ಸನ್ ಗ್ಲಾಸ್‎ ಕಾಪಾಡುತ್ತದೆ.

  ಸ್ವಯಂ ಚಿಕಿತ್ಸೆಯನ್ನು ಮಾಡದಿರಿ

  ಸ್ವಯಂ ಚಿಕಿತ್ಸೆಯನ್ನು ಮಾಡದಿರಿ

  ವೈದ್ಯರನ್ನು ಭೇಟಿಯಾಗದೇ ನಿಮ್ಮಷ್ಟಕ್ಕೆ ಕಣ್ಣಿನ ಚಿಕಿತ್ಸೆಗಳನ್ನು ಮಾಡದಿರಿ. ಇದರಿಂದ ನಿಮ್ಮ ಕಣ್ಣುಗಳಿಗೆ ಸೋಂಕು ಉಂಟಾಗುವ ಸಾಧ್ಯತೆ ಇದ್ದು ಅಪಾಯವನ್ನು ಉಂಟುಮಾಡಬಲ್ಲುದು.

  ಕಣ್ಣು ನೋವಿದ್ದಲ್ಲಿ ಪರೀಕ್ಷಿಸಿಕೊಳ್ಳಿ

  ಕಣ್ಣು ನೋವಿದ್ದಲ್ಲಿ ಪರೀಕ್ಷಿಸಿಕೊಳ್ಳಿ

  ದೀರ್ಘ ಸಮಯದಿಂದ ಕಣ್ಣುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ ಎಂದಾದಲ್ಲಿ, ಕೂಡಲೇ ಕಣ್ಣಿನ ವೈದ್ಯರನ್ನು ಭೇಟಿಯಾಗಿ. ಸ್ಲೈಡರ್‎ಗಳಲ್ಲಿ ತಿಳಿಸಿದ ಕಣ್ಣುಗಳ ಸ್ವಚ್ಛತಾ ವಿಧಾನಗಳನ್ನು ಅನುಸರಿಸಿ ಕೂಡ ನೋವು ಹಾಗೆಯೇ ಇದೆ ಎಂದಾದಲ್ಲಿ ವೈದ್ಯರನ್ನು ನೀವು ಭೇಟಿಯಾಗಲೇಬೇಕು.

   

  English summary

  Easy Tips To Protect Your Eyes During Monsoon

  The scorching heat of summer only makes us think of the rains, and we wait eagerly for the monsoons. The monsoon no doubt brings with it a huge relief, but on the contrary it also brings with it a host of diseases. Dengue, malaria, viral fever, cold and cough, leptospirosis, eye infections, conjunctivitis, etc, are just a few of the common diseases that are witnessed in large numbers during the monsoon season.
  Story first published: Wednesday, July 6, 2016, 13:37 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more