ಬಿಪಿಯನ್ನು ನಿಯಂತ್ರಿಸಲು, ಸೌತೆ-ಬೆಳ್ಳುಳ್ಳಿಯ ಸಲಾಡ್!

By manu
Subscribe to Boldsky

ಅಧಿಕ ರಕ್ತದೊತ್ತಡ ಅಥವಾ ಹೈಬೀಪಿ (ಸಾಮಾನ್ಯವಾಗಿ ಬಿಪಿ) ಆರೋಗ್ಯಕ್ಕೆ ಮಾರಕ. ರಕ್ತನಾಳಗಳಲ್ಲಿ ಹಲವೆಡೆ ಒಳಗಿನಿಂದ ಹಲವೆಡೆ ಕೊಬ್ಬು ತುಂಬಿಕೊಂಡು ದಾರಿ ಕಿರಿದಾಗಿರುವ ಕಾರಣ ಈ ಸ್ಥಳದಿಂದ ರಕ್ತವನ್ನು ನೂಕಲು ಹೃದಯಕ್ಕೆ ಹೆಚ್ಚಿನ ಒತ್ತಡ ನೀಡಬೇಕಾದುದೇ ಹೈಬೀಪಿ. ಇದು ಹೆಚ್ಚಾದಷ್ಟೂ ದೇಹಕ್ಕೆ ಆಪಾಯವೂ ಹೆಚ್ಚುತ್ತಾ ಹೋಗುತ್ತದೆ.

ಒಂದು ಸಮೀಕ್ಷೆಯ ಪ್ರಕಾರ 30%ರಷ್ಟು ಮಧ್ಯವಯಸ್ಸಿನ ವ್ಯಕ್ತಿಗಳಲ್ಲಿ ಅಧಿಕ ರಕ್ತದೊತ್ತಡದ ತೊಂದರೆ ಇದೆ. ಇಂದು ಹಲವು ಹದಿಹರೆಯದವರಲ್ಲಿಯೇ ಅಧಿಕ ರಕ್ತದೊತ್ತಡದ ತೊಂದರೆ ಕಂಡುಬರುತ್ತಿರುವುದು ಮಾತ್ರ ಆತಂಕಕಾರಿ ಬೆಳವಣಿಗೆಯಾಗಿದೆ. ಅಧಿಕ ರಕ್ತದೊತ್ತಡಕ್ಕೆ ಹಲವಾರು ಕಾರಣಗಳಿದ್ದರೂ ಇದರಲ್ಲಿ ಪ್ರಮುಖವಾದುದೆಂದರೆ ರಕ್ತದಲ್ಲಿಲ್ ಕೊಲೆಸ್ಟ್ರಾಲ್ ಮಟ್ಟದಲ್ಲಿ ಹೆಚ್ಚಳ ಮತ್ತು ಬದಲಾದ ಜೀವನಶೈಲಿಯ ಕಾರಣ ಕಡಿಮೆಯಾದ ದೈಹಿಕ ಚಟುವಟಿಕೆ. ಇನ್ನುಳಿದಂತೆ ಕೆಲವು ವಂಶವಾಹಿಕ ಕಾರಣಗಳು, ಕೆಲವು ಔಷಧಿಗಳ ಅಡ್ಡಪರಿಣಾಮ ಮೊದಲಾದ ಕಾರಣಗಳಿರಬಹುದು. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು 6 ಆಹಾರಗಳು

ಇದನ್ನು ಸರಿಪಡಿಸಲು ಕೇವಲ ವೈದ್ಯರ ಸಲಹೆ ಪಾಲಿಸಬೇಕೇ ವಿನಃ ಸ್ವತಃ ಯಾವುದೇ ಕ್ರಮ ಕೈಗೊಳ್ಳುವುದು ಅಪಾಯಕರ. ಇನ್ನುಳಿದಂತೆ ನಮ್ಮ ಸೋಮಾರಿತನದ ಕಾರಣ ಮತ್ತು ಹೆಚ್ಚಿನ ಕೊಲೆಸ್ಟ್ರಾಲ್ ಇರುವ ಅನಾರೋಗ್ಯಕರ ಆಹಾರ ತಿಂದೂ ಬರಿಸಿಕೊಂಡ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುವುದು ನಮ್ಮ ಕೈಯಲ್ಲಿದೆ. ಇದಕ್ಕಾಗಿ ಹೆಚ್ಚು ಕಷ್ಟಪಡಬೇಕಾಗಿಲ್ಲ, ನಿಮ್ಮ ನಿತ್ಯದ ಆಹಾರದಲ್ಲಿ ಸೌತೆ ಮತ್ತು ಬೆಳ್ಳುಳ್ಳಿಯ ಸಾಲಾಡ್ ಇರುವಂತೆ ನೋಡಿಕೊಂಡರೆ ಸಾಕು...

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಒಂದು ಸೌತೆ, ಸುಮಾರು ನಾಲ್ಕು ಬೆಳ್ಳುಳ್ಳಿಯ ಎಸಳುಗಳು, ಒಂದು ಚಿಕ್ಕಚಮಚ ಸೇಬಿನ ಶಿರ್ಕಾ ಮತ್ತು ಕೊಂಚ ನೀರು.

ತಯಾರಿಕಾ ವಿಧಾನ

ತಯಾರಿಕಾ ವಿಧಾನ

ಮೊದಲು ಸೌತೆಯ ಸಿಪ್ಪೆ ಸುಲಿದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಬೆಳ್ಳುಳ್ಳಿಯನ್ನು ಜಜ್ಜಿ ಲೇಪನವಾಗಿಸಿ. ಇವೆರಡನ್ನೂ ಚೆನ್ನಾಗಿ ಒಂದು ಚಿಕ್ಕ ಪಾತ್ರೆಯಲ್ಲಿ ಮಿಶ್ರಣ ಮಾಡಿ ಕೆಲವು ಹನಿ ಸೇಬಿನ ಶಿರ್ಕಾ ಸೇರಿಸಿ. ಇದರ ಮೇಲೆ ಕೊಂಚವೇ ನೀರು ಸಿಂಪಡಿಸಿ. ಸಾಲಾಡ್ ಸಿದ್ಧವಾಗಿದೆ.

ಸೌತೆಕಾಯಿ ಏಕೆ?

ಸೌತೆಕಾಯಿ ಏಕೆ?

ಸೌತೆಕಾಯಿಯಲ್ಲಿ ಮೆಗ್ನೀಶಿಯಂ, ಪೊಟ್ಯಾಶಿಯಂ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಕರಗುವ ನಾರು ಮತ್ತು ಅಪಾರ ಪ್ರಮಾಣದಲ್ಲಿ ನೀರಿದೆ. ಇದರಲ್ಲಿರುವ ಪೊಟ್ಯಾಶಿಯಂ ರಕ್ತದಲ್ಲಿನ ಸೋಡಿಯಂ ಲವಣದ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಅಪಧಮನಿಕಾಠಿಣ್ಯ (atherosclerosis) ಎಂಬ ತೊಂದರೆಯಿಂದ ರಕ್ಷಿಸುತ್ತದೆ. ಅಪಧಮನಿಕಾಠಿಣ್ಯ ಎಂದರೆ ನರಗಳ ಗೋಡೆಗಳು ದೃಢವಾಗುವುದು. ಇವು ಮೃದುವಾಗಿದ್ದಷ್ಟೂ ರಕ್ತದ ಹರಿವು ಸುಲಭ. ದೃಢವಾಗಿದ್ದಷ್ಟೂ ಇದರ ಮೂಲಕ ರಕ್ತ ಪ್ರವಹಿಸಲು ಹೃದಯಕ್ಕೆ ಹೆಚ್ಚಿನ ಒತ್ತಡದ ಅಗತ್ಯವಿದೆ.

ಸೌತೆಯಲ್ಲಿರುವ ನಾರು ಏನು ಮಾಡುತ್ತದೆ?

ಸೌತೆಯಲ್ಲಿರುವ ನಾರು ಏನು ಮಾಡುತ್ತದೆ?

ಇದರಲ್ಲಿರುವ ನಾರು ಮಲಬದ್ಧತೆಯಿಂದ ರಕ್ಷಿಸುವುದರ ಜೊತೆಗೇ ರಕ್ತದ ಒತ್ತಡವನ್ನೂ ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ, ತೂಕ ಕಳೆದುಕೊಳ್ಳಲು ಹಾಗೂ ಟೈಪ್ 2 ಮಧುಮೇಹ ಬರುವ ಸಂಭವವನ್ನೂ ಕಡಿಮೆಗೊಳಿಸುತ್ತದೆ.

ಬೆಳ್ಳುಳ್ಳಿಗೆ ಇಲ್ಲಿ ಏನು ಕೆಲಸ?

ಬೆಳ್ಳುಳ್ಳಿಗೆ ಇಲ್ಲಿ ಏನು ಕೆಲಸ?

ಹಸಿ ಬೆಳ್ಳುಳ್ಳಿಯಲ್ಲಿ ರಕ್ತದ ಒತ್ತಡವನ್ನು ಕಡಿಮೆಗೊಳಿಸುವ ಗುಣವಿದೆ. ಇದರಲ್ಲಿರುವ ಆಲಿಸಿನ್ ಎಂಬ ಪೋಷಕಾಂಶ ರಕ್ತನಾಳದಲ್ಲಿ ಕಟ್ಟಿಕೊಂಡಿದ್ದ ಕೊಲೆಸ್ಟ್ರಾಲ್ ಸಡಿಲಗೊಳಿಸುವ ಮೂಲಕ ರಕ್ತಪರಿಚಲನೆಯನ್ನು ಸುಲಭಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ ಹೊಟ್ಟೆಯ ಉರಿ ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ಒಟ್ಟಾರೆಯಾಗಿ ರಕ್ತಪರಿಚಲನೆಯನ್ನು ಸರಾಗಗೊಳಿಸಲು ನೆರವಾಗುತ್ತದೆ.

ಇದರಲ್ಲಿ ಆಲಿಸಿನ್ ಪಾತ್ರವೇನು?

ಇದರಲ್ಲಿ ಆಲಿಸಿನ್ ಪಾತ್ರವೇನು?

ಕೊಲೆಸ್ಟ್ರಾಲ್‌ಗಳಲ್ಲಿ ಎರಡು ವಿಧಗಳಿವೆ. ಕೆಟ್ಟ (LDL) ಮತ್ತು ಒಳ್ಳೆಯ (HDL)ಕೊಲೆಸ್ಟ್ರಾಲ್‌‌ಗಳು. ಕೆಟ್ಟದ್ದು ಎಂದು ಕರೆದರೂ LDLನ ಪ್ರಮಾಣ ಕಡಿಮೆ ಇರಬೇಕಷ್ಟೇ, ಸಂಪೂರ್ಣವಾಗಿ ಇಲ್ಲದೆಯೂ ಇರಬಾರದು.ಈ ಆಲಿಸಿನ್ ಒಟ್ಟು ಕೊಲೆಸ್ಟ್ರಾಲ್ ಪ್ರಮಾಣವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ.

ಈ ಸಾಲಾಡ್ ಅನ್ನು ಸೇವಿಸುವ ಬಗೆ ಹೇಗೆ?

ಈ ಸಾಲಾಡ್ ಅನ್ನು ಸೇವಿಸುವ ಬಗೆ ಹೇಗೆ?

ಈ ಸಾಲಾಡ್ ಅನ್ನು ಪ್ರತಿದಿನವೂ ತಯಾರಿಸಿ ದಿನಕ್ಕೆ ಎರಡು ಬಾರಿಯಂತೆ ಸತತವಾಗಿ ವಾರಕ್ಕೆ ಐದು ದಿನ ಸೇವಿಸುತ್ತಾ ಬನ್ನಿ. ಎಲ್ಲಿಯವರೆಗೆ ಅಂದರೆ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರುವವರೆ. ಬಳಿಕ ಈ ಪ್ರಮಾಣವನ್ನು ಕಡಿಮೆಗೊಳಿಸಿ. ಆದರೆ ಆಗಾಗ ಸೇವಿಸುತ್ಅಧಿಕ ರಕ್ತದೊತ್ತಡ ಅಥವಾ ಹೈಬೀಪಿ (ಸಾಮಾನ್ಯವಾಗಿ ಬೀಪಿ) ಆರೋಗ್ಯಕ್ಕೆ ಮಾರಕ. ರಕ್ತನಾಳಗಳಲ್ಲಿ ಹಲವೆಡೆ ಒಳಗಿನಿಂದ ಹಲವೆಡೆ ಕೊಬ್ಬು ತುಂಬಿಕೊಂಡು ದಾರಿ ಕಿರಿದಾಗಿರುವ ಕಾರಣ ಈ ಸ್ಥಳದಿಂದ ರಕ್ತವನ್ನು ನೂಕಲು ಹೃದಯಕ್ಕೆ ಹೆಚ್ಚಿನ ಒತ್ತಡ ನೀಡಬೇಕಾದುದೇ ಹೈಬೀಪಿ. ಇದು ಹೆಚ್ಚಾದಷ್ಟೂ ದೇಹಕ್ಕೆ ಆಪಾಯವೂ ಹೆಚ್ಚುತ್ತಾ ಹೋಗುತ್ತದೆ.

 
For Quick Alerts
ALLOW NOTIFICATIONS
For Daily Alerts

    English summary

    Does Cucumber Garlic Salad Curb BP?

    High blood pressure is a bad thing. It could even cause heart problems and other life-threatening situations. When your arteries are narrow and when your heart pumps in more blood that is when your blood pressure increases. Now, let us discuss about a home remedy which is a simple salad that lowers cholesterol and also controls high blood pressure. A salad with cucumber and garlics would do the job.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more