For Quick Alerts
ALLOW NOTIFICATIONS  
For Daily Alerts

ಧೂಮಪಾನ: ಸಂಶೋಧನೆಯ ವರದಿಯಲ್ಲಿ ಬಿಚ್ಚಿಟ್ಟ ಸತ್ಯಾಸತ್ಯತೆ

By Deepak M
|

ಧೂಮಪಾನದ ಕುರಿತಾಗಿ ನಿಮಗೆ ಅರಿವು ಇದೆಯೇ? ಇಲ್ಲ ಎಂದಾದರೆ ನೀವೊಬ್ಬರೆ ಅಲ್ಲ ಬಿಡಿ. ನಮ್ಮ ದೇಶದಲ್ಲಿ ಸೇರಿದಂತೆ, ಅಮೆರಿಕಾದಲ್ಲಿ ಸಹ ತಾವು ಯಾವ ತಂಬಾಕು ಉತ್ಪನ್ನವನ್ನು ಸೇದುತ್ತಿದ್ದೇವೆ, ಅದರಿಂದ ಉಂಟಾಗುವ ಆರೋಗ್ಯದ ದುಷ್ಣರಿಣಾಮಗಳೇನು ಎಂದು ತಿಳಿಯದ ಜನರು ತುಂಬಾ ಇದ್ದಾರೆ. ಬಹುತೇಕ ಮಂದಿ ಅಮೆರಿಕನ್ನರು ತಾವು ಯಾವ ತಂಬಾಕು ಉತ್ಪನ್ನವನ್ನು ಸೇದುತ್ತಿದ್ದೇವೆ ಎಂದು ತಿಳಿದುಕೊಳ್ಳಲು, ಆ ಕುರಿತಾದ ಮಾಹಿತಿ ತಮಗೆ ಸುಲಭವಾಗಿ ಸಿಗುವಂತಿರಬೇಕು ಎಂದು ಬಯಸುತ್ತಾರೆ. ಸಿಗರೇಟ್‌ ಚಟಕ್ಕೆ ಚಟ್ಟ ಕಟ್ಟುವ ಪವರ್ ಫುಲ್ 'ಆಹಾರ ಪಥ್ಯ'...

ಚಾಪೆಲ್ ಹಿಲ್‌ನಲ್ಲಿರುವ ನಾರ್ತ್ ಕ್ಯಾರೋಲಿನಾ ವಿಶ್ವವಿದ್ಯಾನಿಲಯದ ಫಸ್ಟ್‌ಸ್ಟಡಿ ಲೇಖಕರಾದ ಮರ್ಸೆಲ್ಲ ಬಾಂಯ್ಟನ್ ಪ್ರಕಾರ " ಮೊದಲನೆ ಗುಂಪು ಈ ಫಲಿತಾಂಶವನ್ನು ನೋಡಲು ಕಡಿಮೆ ಉತ್ಸಾಹವನ್ನು ತೋರಿಸುತ್ತದೆಯಂತೆ. ಯುವಕರು ಮತ್ತು ಧೂಮಪಾನಿಗಳು ತಾವು ಈಗಾಗಲೇ ಈ ಮಾಹಿತಿಗಾಗಿ ಹುಡುಕಾಡಿದ್ದೇವೆ" ಎಂದು ಹೇಳಿದರಂತೆ.

Do You Know What You're Smoking?

ಇದಕ್ಕಾಗಿ ಯುಎಸ್ ಫೂಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (FDA) ನ ಅಧ್ಯಯನಕಾರರು ಸಂದೇಶ ಸಾರುವ ಚಟುವಟಿಕೆಗಳನ್ನು ವಿಸ್ತರಿಸಬೇಕು, ಆಗ ಆ ಸಂದೇಶವು ಇಡೀ ಅಮೆರಿಕಾದ ಜನರಿಗೆ ತಲುಪುತ್ತದೆ ಎಂದು ಸಲಹೆ ನೀಡಿದ್ದಾರೆ. ಅಮೆರಿಕಾದ ಜನಸಂಖ್ಯೆಯ ಕಾಲುಭಾಗದಷ್ಟು ಜನರು ತಾವು ಸೇದುವ ತಂಬಾಕು ಉತ್ಪನ್ನಗಳಲ್ಲಿರುವ ಹಾನಿಕಾರಕ ಮತ್ತು ಕ್ಯಾನ್ಸರ್‌ಕಾರಕ ಅಥವಾ ವಿಷಕಾರಿ ಉತ್ಪನ್ನಗಳ ಕುರಿತಾಗಿ ಹುಡುಕಾಡಿದ್ದಾರೆ.

ನಿಕೋಟಿನ್ ಹೊರತುಪಡಿಸಿ ಬಹುತೇಕ ಮಂದಿಗೆ ಸಿಗರೇಟಿನ ಹೊಗೆಯಲ್ಲಿರುವ ಹಾನಿಕಾರಕ ಅಂಶಗಳ ಕುರಿತಾಗಿ ಇನ್ನೂ ತಿಳಿದೇ ಇಲ್ಲ. ಈ ಕುರಿತಾಗಿ ಪ್ರತಿಕ್ರಿಯಿಸಿದ ಅರ್ಧದಷ್ಟು ಮಂದಿ (54.8%) ತಾವು ಸಿಗರೇಟ್ ಪ್ಯಾಕಿನ ಮೇಲೆ ಸಂಬಂಧಪಟ್ಟ ಮಾಹಿತಿಗಳು ಇರುವುದನ್ನು ಬಯಸುತ್ತೇವೆ ಎಂದು ಹೇಳಿದರೆ, ಇನ್ನು 28.7% ಜನರು ತಾವು ಆನ್‌ಲೈನ್ ಮೂಲಕ ಆ ಮಾಹಿತಿಯನ್ನು ಪಡೆಯಲು ಬಯಸುತ್ತೇವೆ ಎಂದಿದ್ದಾರೆ. ನೈಸರ್ಗಿಕವಾಗಿ ಧೂಮಪಾನವನ್ನು ತ್ಯಜಿಸುವ ಸರಳ ವಿಧಾನಗಳು

ಬಾಂಯ್ಟನ್‌ರವರು ಜರ್ನಲ್ ಬಿಎಮ್‌ಸಿ ಪಬ್ಲಿಕ್ ಹೆಲ್ತ್‌ನಲ್ಲಿ ಪ್ರಕಟಿಸಲಾದ ಒಂದು ಅಧ್ಯಯನದ ಪ್ರಕಾರ "ತಂಬಾಕು ಉತ್ಪನ್ನಗಳಲ್ಲಿರುವ ರಾಸಾಯನಿಕಗಳನ್ನು ಸಾರ್ವಜನಿಕರಿಗೆ ದೊರಕಿಸುವುದರಿಂದ ಮತ್ತು ತಂಬಾಕು ಉದ್ಯಮದಲ್ಲಿರುವ ಪ್ರಕ್ರಿಯೆಯನ್ನು ಪಾರದರ್ಶಕ ಮಾಡುವುದರಿಂದ ಭವಿಷ್ಯದಲ್ಲಿ ಧೂಮಪಾನ ಮಾಡಲು ಇಚ್ಛಿಸುವವರ ಸಂಖ್ಯೆಯು ಕಡಿಮೆಯಾಗಬಹುದು" ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನು ಕಂಡುಹಿಡಿಯಲು ಈ ತಂಡವು ಒಂದು ರಾಷ್ಟ್ರೀಯ ಸಮೀಕ್ಷೆಯನ್ನು ಕೈಗೊಂಡು, 5014 ಅಮೆರಿಕನ್ನರನ್ನು ಸಮೀಕ್ಷೆ ನಡೆಸಿತು. ಇವರೆಲ್ಲರೂ 18 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಕಾರಾಗಿದ್ದರು. ಇವರಿಗೆ ತಂಬಾಕು ಮತ್ತು ಅದರ ಉತ್ಪನ್ನಗಳ ಅಪಾಯವನ್ನು ಮನವರಿಕೆ ಮಾಡಿಕೊಡಲಾಯಿತು. ಭವಿಷ್ಯದಲ್ಲಿ ಇದೇ ಸಮೀಕ್ಷೆಯನ್ನು ದೊಡ್ಡ ಸಮೂಹಕ್ಕೆ ಮಾಡಿ ತಂಬಾಕಿನ ಅಪಾಯವನ್ನು ತಿಳಿಸಬಹುದು ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

(ಐಎ‍ಎನ್‍ಎಸ್ ಇಂದ)

English summary

Do You Know What You're Smoking?

Are you aware of what you are smoking? If no, then you are not alone. Majority of the people in the US who smoke are not aware of the tobacco product use and its associated health risks, even though they report having looked for relevant information, researchers studied. The majority of the US public wants easy access to information about chemicals in cigarettes and other tobacco products.
X
Desktop Bottom Promotion