For Quick Alerts
ALLOW NOTIFICATIONS  
For Daily Alerts

ದೈನಂದಿನ ಸಮಸ್ಯೆಗಳೇ, ಒತ್ತಡಕ್ಕೆ ಕಾರಣವಾಗಬಹುದು!

By Manu
|

ಆಧುನಿಕ ಬದುಕೇ ಹಾಗೆ. ನಾವು ಅಂದುಕೊಂಡಂತೆ ಯಾವುದೂ ನಡೆಯುವುದೇ ಇಲ್ಲ, ಆಫೀಸ್, ಮಕ್ಕಳ ಶಾಲೆ, ಮನೆ ಹಾಗೂ ಸಂಚರಿಸುವಾಗ ಸಾರ್ವಜನಿಕ ವಾಹನಗಳಲ್ಲಿ ಎಲ್ಲಿ ನೋಡಿದರೂ ಒತ್ತಡವೇ. ನಾವು ಪ್ರತಿಯೊಂದರಲ್ಲೂ ಒತ್ತಡವನ್ನು ಎದುರಿಸಲೇಬೇಕಾದ ಪರಿಸ್ಥಿತಿಯಿದೆ. ಆಫೀಸ್ ಕೆಲಸಗಳನ್ನು ಮುಗಿಸುವ ಒತ್ತಡ, ಮನೆಯಲ್ಲಿ ಜೀವನ ನಿರ್ವಹಣೆಯ ಒತ್ತಡ ಮತ್ತು ಮಕ್ಕಳನ್ನು ಶಾಲೆಗೆ ಸೇರಿಸುವಾಗ ಅವರ ಶುಲ್ಕ ಮತ್ತು ಅಭಿವೃದ್ಧಿ ನೋಡಿಕೊಳ್ಳುವ ಒತ್ತಡ. ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವ ತನಕವೂ ಒತ್ತಡದಲ್ಲೇ ಬದುಕುತ್ತಾ ಇರುತ್ತೇವೆ. ಒತ್ತಡವನ್ನು ಕಡಿಮೆ ಮಾಡುವ ಆಹಾರಗಳು ಇಲ್ಲಿದೆ ನೋಡಿ!

ಹೀಗೆ ಅನೇಕ ರೀತಿಯ ಒತ್ತಡದಿಂದಾಗಿ ನಮ್ಮ ದೇಹದ ಆರೋಗ್ಯವೇ ಕೆಟ್ಟು ಹೋಗಿರುತ್ತದೆ. ಒತ್ತಡದಿಂದಾಗಿ ನಮಗೆ ಹೃದಯಾಘಾತ, ಅಜೀರ್ಣದ ಸಮಸ್ಯೆ ಮತ್ತು ಬಂಜೆತನ ಕಾಡಬಹುದು. ಒತ್ತಡವು ನಮ್ಮನ್ನು ಕೊಲ್ಲುವ ಮೊದಲು ನಾವು ಅದನ್ನು ಕೊಲ್ಲಬೇಕಾಗಿದೆ. ಅದಕ್ಕಾಗಿ ಸ್ವಾಭಾವಿಕ ವಾತಾವರಣದಲ್ಲಿ ಕೆಲಸ ಮಾಡುವುದು ತುಂಬಾ ಮುಖ್ಯ. ಪ್ರತಿಯೊಂದರ ಬಗ್ಗೆಯೂ ನೀವು ಚಿಂತಿಸಬೇಡಿ. ನಿಮ್ಮ ಜೀವನದಲ್ಲಿರುವ ನಕಾರಾತ್ಮಕ ವ್ಯಕ್ತಿಗಳಿಂದ ದೂರವಿರಿ. ನಿಮಗೆ ಮಾನಸಿಕ ಹಾಗೂ ದೈಹಿಕ ಒತ್ತಡವನ್ನು ನೀಡುವ ವಿಷಯಗಳಿಂದ ಆದಷ್ಟು ದೂರವಿರಿ. ಮನಸ್ಸಿನ ಒತ್ತಡವನ್ನು ನಿವಾರಿಸಿಕೊಳ್ಳಲು ಸರಳ ಟಿಪ್ಸ್

ನಿಮ್ಮ ದೇಹವು ಅತ್ಯಧಿಕ ಒತ್ತಡಕ್ಕೆ ಸಿಲುಕಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಹೇಗೆ ಎನ್ನುವ ಕೆಲವೊಂದು ವಿಧಾನಗಳನ್ನು ತಿಳಿಸಿಕೊಡಲಿದ್ದೇವೆ. ಈ ಲಕ್ಷಣಗಳನ್ನು ನೀವು ನೋಡತ್ತಲಿದ್ದರೆ ಹೆಚ್ಚಿನ ಸಮಸ್ಯೆಗೆ ಒಳಗಾಗುವುದು ತಪ್ಪುವುದು. ನಿಮಗೆ ಒತ್ತಡ ತರುವಂತಹ ಕೆಲವೊಂದು ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ...

ಅನಿಯಮಿತ ಮುಟ್ಟು

ಅನಿಯಮಿತ ಮುಟ್ಟು

ನಿಮ್ಮ ದೇಹವು ಅತಿಯಾದ ಒತ್ತಡಕ್ಕೆ ಸಿಲುಕಿದೆ ಎನ್ನುವುದಕ್ಕೆ ಇದು ಒಂದು ಕಾರಣ. ಅನಿಯಮಿತವಾಗಿ ಮುಟ್ಟಾಗುತ್ತಿದ್ದರೆ ಒತ್ತಡದಲ್ಲಿದ್ದೀರಿ ಎಂದರ್ಥ. ಇದರಿಂದ ನಿಮ್ಮ ಮನಸ್ಥಿತಿಯೂ ಬದಲಾಗುತ್ತಿರುತ್ತದೆ.

ಸೌಂದರ್ಯವನ್ನು ಹಾಳುಗೆಡವುತ್ತಿರುವ ಮೊಡವೆಗಳು

ಸೌಂದರ್ಯವನ್ನು ಹಾಳುಗೆಡವುತ್ತಿರುವ ಮೊಡವೆಗಳು

ಈ ಮೊಡವೆಗಳು ಹೆಚ್ಚಿನ ಜನರಿಗೆ ತುಂಬಾ ಕಿರಿಕಿರಿ ಉಂಟು ಮಾಡುತ್ತಿರುತ್ತದೆ. ಹಠಾತ್ ಆಗಿ ನಿಮ್ಮ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಂಡರೆ ಅದು ಅಲರ್ಜಿ ಅಥವಾ ಒತ್ತಡದಿಂದ ಆಗಿರಬಹುದು. ಇದು ನಿಮ್ಮ ತ್ವಚೆಗೆ ಹಾನಿಯುಂಟು ಮಾಡಬಹುದು. ಇದರಿಂದ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.

ಎದೆ ನೋವು ಕಾಣಿಸಿಕೊಳ್ಳುವುದು

ಎದೆ ನೋವು ಕಾಣಿಸಿಕೊಳ್ಳುವುದು

ಎದೆ ನೋವನ್ನು ಯಾವಾಗಲೂ ಕಡೆಗಣಿಸಬಾರದು. ಇತ್ತೀಚಿನ ದಿನಗಳಲ್ಲಿ ನಿಮಗೆ ಆಗಾಗ ಎದೆನೋವು ಕಾಣಿಸಿಕೊಳ್ಳುತ್ತಿದ್ದರೆ ನಿಮ್ಮ ಒತ್ತಡ ಮಟ್ಟವನ್ನು ಪರೀಕ್ಷಿಸಿ ಮತ್ತು ಇದನ್ನು ಕಡಿಮೆಗೊಳಿಸಲು ಪ್ರಯತ್ನಿಸಿ.

ರಕ್ತದೊತ್ತಡ ಕಡಿಮೆ ಮಾಡಿ

ರಕ್ತದೊತ್ತಡ ಕಡಿಮೆ ಮಾಡಿ

ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬೇಕು. ರಕ್ತದೊತ್ತಡವು ಹೆಚ್ಚಾದರೆ ಅದರಿಂದ ಹೃದಯಾಘಾತ ಅಥವಾ ಪಾರ್ಶ್ವವಾಯು ಸಂಭವಿಸಬಹುದು. ನಿಮ್ಮ ರಕ್ತದೊತ್ತಡದ ಕಡೆ ಒಂದು ಕಣ್ಣಿಡಿ ಮತ್ತು ಇದನ್ನು ಆಗಾಗ ಪರೀಕ್ಷಿಸುತ್ತಾ ಇರಿ.

ಏದುಸಿರು ಬಿಡುವುದು

ಏದುಸಿರು ಬಿಡುವುದು

ಏದುಸಿರು ಬಿಡುತ್ತಾ ಎದೆ ನೋವು ಕಾಣಿಸಿಕೊಂಡರೆ ಅದು ದೊಡ್ಡ ಸಮಸ್ಯೆಯಾಗಿ ಕಾಡಬಹುದು. ನಿಮಗೆ ಇತ್ತೀಚೆಗೆ ಉಸಿರಾಡಲು ಕಷ್ಟವಾಗುತ್ತಿದ್ದರೆ ಆಗ ಸ್ವಲ್ಪ ಆರಾಮ ಮಾಡಿಕೊಂಡು ಒತ್ತಡದ ಮಟ್ಟವನ್ನು ಕಡಿಮೆ ಮಾಡಿ.

ಕಣ್ಣ ರೆಪ್ಪೆ ಮುಚ್ಚಲು ಒದ್ದಾಡುವುದು

ಕಣ್ಣ ರೆಪ್ಪೆ ಮುಚ್ಚಲು ಒದ್ದಾಡುವುದು

ಮಗುವಿನಂತೆ ಮಲಗಬೇಕೆಂದು ಪ್ರತಿಯೊಬ್ಬರಿಗೂ ಆಸೆಯಿರುತ್ತದೆ. ಆದರೆ ಕಣ್ಣುಗಳನ್ನು ಮುಚ್ಚಲು ಸಾಧ್ಯವಾಗುವುದಿಲ್ಲ. ದೇಹದಲ್ಲಿರುವ ಒತ್ತಡದಿಂದಾಗಿ ಈ ರೀತಿಯಾಗುತ್ತಿರುತ್ತದೆ.

ತಲೆನೋವು ಕಾಡುತ್ತಲಿದೆಯಾ?

ತಲೆನೋವು ಕಾಡುತ್ತಲಿದೆಯಾ?

ನೀವು ಅತಿಯಾದ ಒತ್ತಡಕ್ಕೆ ಸಿಲುಕಿದ್ದೀರಿ ಎನ್ನುವುದಕ್ಕೆ ತಲೆನೋವು ಒಂದು ಲಕ್ಷಣ. ಧ್ಯಾನ ಮತ್ತು ಮನೆಮದ್ದಿನಿಂದ ಆವಾಗ ಆವಾಗ ಬರುತ್ತಿರುವ ತಲೆನೋವನ್ನು ನಿವಾರಿಸಬೇಕು.

English summary

Commons Signs and Sympotons of High stress

If you are alive, you are under a lot of stress. This is one of the worst killers that can affect your entire being, and getting rid of it at the earliest is the best you can do to ward off other health complications. When one is under a lot of stress, it plays havoc with the internal being. Stress can lead to a heart attack, it can affect your digestive system and it can also make you infertile!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X